ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 22 May, 2008

ಮುರಲಿಯ ಕರೆ

Thursday, December 27, 2007

(ಮುರಲಿಯ ಕರೆಯನ್ನು ಮರೆಯಲಾರದೆ, ತೊರೆಯಲಾರದೆ ಕೊರೆದದ್ದು...
ಹೊಸ ವರುಷದ ಹೊಸ್ತಿಲಲ್ಲಿ ನಿಮ್ಮೆಲ್ಲರಿಗೂ "ಮುರಳೀಧರ ಶಂಖಪಾಣಿ"ಯು ಒಳಿತನ್ನುಂಟುಮಾಡಲೆಂದು ಹಾರೈಸುತ್ತಾ....)

ಏನು ಮೋಡಿಯೋ ಎಂಥಾ ಮಾಯೆಯೊ
ಮುರಲಿಯ ಕೊಳಲಿನ ಉಲಿಗೆ
ಬೃಂದಾವನದಲಿ ಬಂಧಿಗಳೆಲ್ಲರು
ಮೋಹನ ರಾಗದ ಕರೆಗೆ

ಯಮುನೆಯ ಮಳಲಲಿ ಹುಣ್ಣಿಮೆ ನೆಳಲಲಿ
ರಂಗನ ರಂಗಿನ ಕೋಡಿ
ಸರಿಸಲು ಬಾರದು ಮೋಹದ ಚಾದರ
ಹರಿಯೇ ಹೊದೆಸಿದ ನೋಡಿ

ಅರುಣನ ಕಿರಣವ ಕೆನ್ನೆಗೆ ತಂದಿತು
ಮುದ್ದಿನ ಮಾನಿನಿ ತಂಡ
ಮರೆತರು ಮನೆಯನು ತೆರೆದರು ಮನವನು
ನಲ್ಲ ಕೃಷ್ಣ ಬಲು ಪುಂಡ

ತುಂಟನ ಕಾಟವ ಸಹಿಸೆವು ಎನ್ನುತ
ಸರಿವರು ಯಮುನಾ ತಟದಿ
ಮಾರನಯ್ಯನ ಮೋರೆಯ ನೋಡದೆ
ಇರುವುದು ಸಾಧ್ಯವೆ ಜಗದಿ?

ಮಥುರೆಗೆ ಹೊರಟಿತು ಗೋಪಿಯ ಜೀವ
ಬೃಂದಾವನ ಮರುಭೂಮಿ
ಕೊಳಲನು ತೊರೆದು ಶಂಖವನೆತ್ತಿದ
ಭುವನಾನಂದನು ಸ್ವಾಮಿ
(೧೫-ಮಾರ್ಚ್-೨೦೦೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 6:29 PM
Labels: ,

7 ಪತ್ರೋತ್ತರ:
Anonymous said...
Very nice poem Deepti!.
It as well reflects our transition from romantic, less-responsible, playful and joyful phase of life to a more tougher part of life, the so-called Maturity!
I don't think anybody has to gain maturity, if it comes fine, otherwise also fine. Maturity is a prerequisite for fulfilling our dreams/ambitions. Otherwise, maturity is a burdain!- like a crown on a sparrow's head!
In my life as well, vrindavana was always fun (though, there were not many gopikas around),now wondering why did I came to this cruel Mathura! here no social life, nobody to talk, and those gopikas here are so strange!! I don't know any of them properly.
Very nice poem, again.
regards
D.M.Sagar
December 27, 2007 7:21 PM

suptadeepti said...
ಧನ್ಯವಾದಗಳು ಸಾಗರ್. ನೀನು ಹೇಳಿದ "maturity" ಎಲ್ಲರಿಗೂ ಬರೋದಿಲ್ಲ. ತಾನಾಗೇ ಬಂದರೆ ಅದು ಗುಬ್ಬಿ ತಲೆ ಮೇಲಿನ ಕಿರೀಟವಾಗೋದಿಲ್ಲ.ಗೋಪಿಕೆಯರೆಲ್ಲ ನಮ್ಮವರಾಗಲೂ ಸಾಧ್ಯವಿಲ್ಲ, ಯಾಕೆಂದರೆ, ನಾನು/ನೀನು ಬೃಂದಾವನದವರಲ್ಲ, ಗೋಪಕುಮಾರನೂ ಅಲ್ಲ.
December 27, 2007 7:28 PM

Anonymous said...
ಜ್ಯೋತಿ,ಪದ್ಯ ತುಂಬಾ ತುಂಬಾ ಇಷ್ಟವಾಯಿತು. ಹಾಡಲೂ ಸೊಗಸಾಗಿದೆ.
-ಪೂರ್ಣಿಮ
December 28, 2007 11:02 AM

ಶಾಂತಲಾ ಭಂಡಿ said...
ಜ್ಯೋತಿ ಅಕ್ಕ...
ಹೊಸವರ್ಷಕ್ಕೆ ನೀವಿತ್ತ ಸ್ವಾಗತ್ತಕ್ಕೆ ಹಾಗೂ ಎಲ್ಲರಿಗೂ ನೀವಾಶಿಸಿದ ಶುಭಕ್ಕೆ ಧನ್ಯವಾದಗಳು. ನಿಮಗೂ ಸಹ ಹೊಸವರ್ಷದ ಶುಭಾಶಯಗಳು.
December 28, 2007 10:55 PM

suptadeepti said...
ಪೂರ್ಣಿಮಾ, ಶಾಂತಲಾ,
ಧನ್ಯವಾದಗಳು. ಮತ್ತೊಮ್ಮೆ ಶುಭ ಹಾರೈಕೆಗಳು.
December 30, 2007 12:33 AM

sritri said...
"ನೀರಿಗೆ ತಪಿಸುವ ಮೀನ್ಗಳು ನಾವು
ಕೃಷ್ಣ ವಿರಹಿಣಿ ಗೋಪಿಯರು"
ಮೋಹನ ಮುರಳಿಯ ಮಾಧುರ್ಯ ಹರಿವ ಲಹರಿಯ ತುಂಬೆಲ್ಲಾ.
ನಿನಗೆ ಬರೆದು ದಣಿವಿಲ್ಲ, ನಮಗೆ ಓದಿ...
December 31, 2007 9:00 AM

suptadeepti said...
ಧನ್ಯವಾದಗಳು ವೇಣಿ. ಓದುವವರ ದಣಿವಿನ ಬಗ್ಗೆ ಅರಿವಿಲ್ಲ. ಬರೆಯುವಾಗ ಮಾತ್ರ ದಣಿವಾಗುವುದೇ ಇಲ್ಲ.
December 31, 2007 10:13 AM

No comments: