ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 22 May 2008

ಸಂಕ್ರಾಂತಿಯ ಶುಭಾಶಯಗಳು

Saturday, January 12, 2008

(ಸಂಕ್ರಾಂತಿ ಬದಲಾವಣೆಯ ಸಂಕೇತ.
ನಿಮಗೆಲ್ಲ ಬದಲಾವಣೆ ಎಂದೂ ಒಳ್ಳೆಯದನ್ನೇ ತರಲಿ ಎಂದು ಹಾರೈಸುತ್ತಾ...)
ಸುಂದರಾಂಗೀ.....,

ಸಂಕ್ರಾಂತಿಯ ಸಮಯವಿದು,
ಸಹಬಾಳ್ವೆಗೆ ಸಹನೆಯಿರಲಿ,
ಸಂತಸವು ಸುರಿದು ಬರಲಿ, ಆ
ಸುಖದ ಸೆಲೆಯಲ್ಲಿ, ಈ
ಸಖಿಯ ಮರೆಯದಿರು.

ಸಂತೋಷದಿ ಹಾರೈಸುವೆ-
ಸಂಕ್ರಾಂತಿಗೆ ಸಂದೇಶವಿದನು-
"ಸಂಭ್ರಮವು
ಸಂಗೀತದೊಲು
ಸಂತಸವ ತರಲಿ,
ಸಂತತವು
ಸವಿನೆನಪೇ
ಸುಳಿದಾಡುತಿರಲಿ"
(ಜನವರಿ-೧೯೮೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 5:20 PM
Labels: ,

9 ಪತ್ರೋತ್ತರ:

ಶಾಂತಲಾ ಭಂಡಿ said...
suptadeeptiಯವರೆ
ಧನ್ಯವಾದಗಳು, ನಿಮಗೂ ಸಹ ಸಂಕ್ರಾಂತಿಯ ಶುಭಾಶಯಗಳು.ಕವಿತೆ ಚೆನ್ನಾಗಿದೆ.
January 13, 2008 11:47 AM

suptadeepti said...
ಧನ್ಯವಾದಗಳು, ಶಾಂತಲಾ.
January 13, 2008 3:12 PM

sritri said...
ಜ್ಯೋತಿ, ನಿನಗೂ ಮತ್ತು ’ಹರಿವ ಲಹರಿ’ಯ ಗೆಳೆಯ-ಗೆಳತಿಯರಿಗೆಲ್ಲಾ ಸಂಕ್ರಾಂತಿಯ ಶುಭಾಶಯಗಳು.
January 13, 2008 6:55 PM

suptadeepti said...
ಧನ್ಯವಾದಗಳು, ವೇಣಿ.
January 13, 2008 7:00 PM

ಸುಶ್ರುತ ದೊಡ್ಡೇರಿ said...
ಸಂಕ್ರಾಂತಿ ಶುಭಾಶಯ.. ನಿಮ್ಗೂ.
January 14, 2008 1:19 AM

Nempu.Guru said...
ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು...
January 14, 2008 1:48 AM

suptadeepti said...
ಸುಶ್, ಗುರು, ನಿಮ್ಮಿಬ್ಬರಿಗೂ ಸಹ ಶುಭಾಶಯಗಳ ಧನ್ಯವಾದಗಳು.
January 14, 2008 9:49 AM

ಅಮೆರಿಕಾಧ್ಯಕ್ಷನ ಪಕ್ಕದ್ಮನೆಯವ said...
1. ಸುಂದರಾಂಗೀ ಎಂದು ಕವನ ಆರಂಭವಾಗಿರುವುದು ನೋಡಿದರೆ ಇದು ಯಾರನ್ನು ಕುರಿತಾದದ್ದು ಎಂದು ಅರ್ಥವಾಗುವುದಿಲ್ಲ. ಚಂದವಾಗಿರುವ ಶರ್ಟ್ ಬಗ್ಗೆಯೂ ಇರಬಹುದು.
2. ಅದೆಲ್ಲ ಇರಲಿ, "ಸಹಬಾಳ್ವೆಗೆ ಸಹನೆಯಿರಲಿ..." ಎಂದು ಬರೆದಿದ್ದೀರಲ್ಲ, ಆ ಸಾಲನ್ನು ನನಗೆ ಬರೆದದ್ದು ಎಂದು ಅರ್ಥೈಸಿಕೊಂಡಿದ್ದೇನೆ :-)
3. "ಸುಂ ಸಂ ಸ ಸಂ ಸು ಸ... ಸಂ ಸಂ... ಸಂ ಸಂ ಸಂ ಸಂ ಸ ಸು" - ಈ ಕವನವನ್ನು ಸಂಸೆ ಎಂಬ ಊರಿನಲ್ಲಿ ಸಂಸ ಅವರು ಸುಂಸುಮ್ನೆ ಹಾಡಿದರೆ ಹೇಗಿದ್ದೀತು?
4. ಎಲ್ಲರಿಗೂ ಸಂಕ್ರಾಂತಿಹಬ್ಬದ ಶುಭಾಶಯಗಳು.

"ತಿನ್ನಿ Gingelly-jaggery;
ಮತ್ತೆ ಒಳ್ಳೇ ಮಾತಾಡಿರಿ."
January 14, 2008 11:58 AM

suptadeepti said...
ಅಧ್ಯಕ್ಷರ ಪಕ್ಕದ್ಮನೆಯವರೇ,
೧)ಹಬ್ಬದ ದಿನ ಅಲ್ವಾ? ಎಲ್ಲರೂ ಹೊಸ ಅಂಗಿ/ ಚಂದದ ಅಂಗಿ ಹಾಕಿರ್ತಾರೆ, ಅದಕ್ಕೆ...!
ಜೊತೆಗೆ ಸುಂದರಿಯಾಗಿದ್ದ ಒಬ್ಬಳು ಸ್ನೇಹಿತೆಗಾಗಿ `ಅಂದು' ಬರೆದದ್ದನ್ನು ಇಂದು ಹಾಗೆಯೇ ಹಾಕಿದೆ, ಎಲ್ಲ ಸ್ನೇಹಿತರಿಗಾಗಿ.
೨)"ಸಹಬಾಳ್ವೆಗೆ ಸಹನೆ"ಯಿರೋದು ನಿಮಗೊಬ್ಬರಿಗೇ ಅಲ್ಲ, ಎಷ್ಟೊಂದು ಜನರಿಗೆ ಸಹನೆಯಿರೋಲ್ಲ!?
೩)ಸಂಸೆಯ ಸಂಸ ಸುಂಸುಮ್ನೆ ಹಾಡಿದ್ರೆ ಹೇಗಿರಬಹುದು? ಅದನ್ನು ನೀವೇ ಹೇಳಬೇಕು, ಅವರ ಪರಿಚಯ ನಿಮಗೇ ಇರಬೇಕಲ್ಲ.
೪)"Jaggery-Gingelly"
ಎಲ್ಲರಿಗೂ ಖುಷಿ ತರಲಿ.
ಪ್ರತಿಕ್ರಿಯಿಸಿದ್ದಕ್ಕೆ ಧ.ವಾ.
January 14, 2008 1:07 PM

No comments: