ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 22 May, 2008

ಬರೆಗಳು-೦೧

Monday, February 25, 2008

ರವಿವರ್ಮನ ಪ್ರಿಯತಮೆ- ಕುಂಚ
-ಸಿಟ್ಟಾಗಿ, ಸಿಡುಕಾಗಿ, ಸಿಡಿದಾಡಿ,
-ಹಾಳೆಯ ಮೇಲೆಲ್ಲ ಎಲ್ಲೆಯಿಲ್ಲದ--
ಬರೆಗಳನು ಎಳೆದಂತಿದೆ-- ಆಗಸ.

ಕವಿವರ್ಯನ ಬಾಳಸಖಿ- ಲೇಖನಿ
-ಮುನಿಸಿ, ಕೊಸರಿ, ಕಿತ್ತಾಡಿ,
-ನೀಲಿಯ ಚೆಲ್ಲಾಡಿ, ಹರಡಿ--
ಬರೆಗಳನು ಎಳೆದಂತಿದೆ-- ಆಗಸ.

ಋಷಿಪುಂಗವನ ಹೆಗ್ಗುರುತು- ರುದ್ರಾಕ್ಷಿ
-ಕೋಪಕ್ಕೆ ಸಿಡಿದು, ಒಡೆದು,
-ಅಂಗಳದಲ್ಲೆಲ್ಲ ಚೂರುಗಳು ಹಾರಾಡಿ--
ಬರೆಗಳನು ಎಳೆದಂತಿದೆ-- ಆಗಸ.

ಭಗೀರಥನ ತಪಕೊಲಿದಾಕೆ- ಪಾವನಿ
-ಜಟಾಧರನ ಜಟೆಗೆ ಹೆದರಿ,
-ಹಿಮಾದ್ರಿಯಲ್ಲೆಲ್ಲ ಹರಿದಾಡಿ--
ಬರೆಗಳನು ಎಳೆದಂತಿದೆ-- ಆಗಸ.

ಪುಟ್ಟಮಕ್ಕಳ ಪ್ರಿಯ ಸಂಗಾತಿ- ನೀರು
-ಎಲ್ಲೆಗಳನೆಲ್ಲ ಮೀರಿ ಹೊರಟಾಗ,
-ತಡೆದ ಪಾದಗಳೆಡೆಯಲ್ಲಿ ನುಸುಳಿ--
ಬರೆಗಳನು ಎಳೆದಂತಿದೆ-- ಆಗಸ.
(೧೮-ಸೆಪ್ಟೆಂಬರ್-೧೯೯೭)
(ಆಗಸದ ತುಂಬಾ ಬರೀ ಬಿಳಿ ಬರೆಗಳ ವಿನ್ಯಾಸ ಕಂಡಾಗ ಹುಟ್ಟಿಕೊಂಡದ್ದು)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 12:01 AM
Labels:

11 ಪತ್ರೋತ್ತರ:
Shiv said...
ಸುಪ್ತದೀಪ್ತಿಯವರೇ,
ಸೊಗಸಾಗಿದೆ ಆಗಸದ ಚಿತ್ತಾರದ ಬಗ್ಗೆ ನಿಮ್ಮ ಸಾಲುಗಳು..
ಆದರೆ ಎಲ್ಲೂ, ಯಾವ ಪ್ಯಾರಗಳ ಮುಂದೆ ಆಗಸ ಅಂತಾ ಹೇಳದೇ ಇದ್ದರೇ.. ಅದರ ಪ್ರಭಾವ ಇನ್ನೂ ಚೆನ್ನಾಗಿ ಇರ್ತಿತ್ತೆನೋ..
February 25, 2008 1:19 AM

ಸುಪ್ತದೀಪ್ತಿ suptadeepti said...
ಇರ್ತಿತ್ತೇನೋ!! ಹೌದು. "ಓದುಗರಿಗೆ ಎಲ್ಲವನ್ನೂ ಸರಿಯಾಗಿ ಹೇಳಿಬಿಡಬೇಕು, ಗೊಂದಲದಲ್ಲಿ ಬಿಡಬಾರದು" ಅನ್ನುವ "mode"ನಲ್ಲಿದ್ದೆ... ಒಂದು ಕಾಲದಲ್ಲಿ; ಆಗ ಬರೆದದ್ದು. ಇದ್ದದ್ದನ್ನು ಇದ್ದ ಹಾಗೇ ಇಲ್ಲಿ ಹಾಕಿದೆ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
February 25, 2008 10:10 AM

ಶಾಂತಲಾ ಭಂಡಿ said...
suptadeeptiಯವರೆ...
ಮೊದಲೆರಡು ಪ್ಯಾರಾಗಳ ಅರ್ಥ ಮತ್ತು ಕಲ್ಪನೆಗಳು ನನ್ನ ಸಾಮರ್ಥ್ಯಕ್ಕೆ ನಿಲುಕಿದವು ಅನಿಸುತ್ತೆ, ತುಂಬ ಇಷ್ಟವಾದ್ವು. ಉಳಿದ ಸಾಲುಗಳೂ ಸಹ ಇಷ್ಟವಾದ್ವು.:)
ಅಂತೂ ಸುಂದರ ಕವನ ಅನ್ನುವುದು ಗೊತ್ತಾಯ್ತು.
February 25, 2008 3:10 PM

decemberstud said...
ಮೊನ್ನೆಯಷ್ಟೆ drive ಮಾಡಿಕೊಂಡು ಹೋಗ್ತಾ ಇದ್ದಾಗ, ಆಗಸದಲ್ಲಿನ ಚಿತ್ತಾರ ಕಂಡು ಬರೆಗಳು - ೨ ನೆನಪಾಯಿತು......
February 25, 2008 5:11 PM

ಸುಪ್ತದೀಪ್ತಿ suptadeepti said...
ಧನ್ಯವಾದ ಶಾಂತಲಾ.
ಡಿ.ಎಸ್.-- ನೀನು ಹೇಳಿದ ಕವನ ಕ್ಯೂನಲ್ಲಿ ಕೂತಿದೆ... ಧನ್ಯವಾದ ನೆನಪಿಸಿಕೊಂಡದ್ದಕ್ಕೆ, ಅದನ್ನಿಲ್ಲಿ ಹೇಳಿದ್ದಕ್ಕೆ.
February 25, 2008 6:13 PM

ಶ್ರೀವತ್ಸ ಜೋಶಿ said...
ತ್ರಿವೇಣಿಯವರು ಹಿಂದೊಮ್ಮೆ "ಬೆನ್ನು ತಟ್ಟಬೇಕಾದವರಿಂದ ಬರೆ" ಎಂಬ ಲೇಖನವನ್ನು ’ಬರೆ’ದಿದ್ದರು. ಆ ಬರೆಗಳ ಪ್ರಸ್ತಾಪ ಇಲ್ಲಿ ಬಂದಿಲ್ಲ. ಅವನ್ನು "ಬರೆಗಳು-೦೦" ಎನ್ನೋಣ;
ನೀವು ಬರೆದ ಕವನ "ಬರೆಗಳು-೦೧" ಚೆನ್ನಾಗಿದೆ!
February 25, 2008 6:56 PM

ಸುಪ್ತದೀಪ್ತಿ suptadeepti said...
ವತ್ಸ, ತ್ರಿವೇಣಿ 'ಬರೆ'ದ 'ಬರೆ'ಗಳ ಮೊದಲೇ ನಾನು ಈ 'ಬರೆ'ಗಳನ್ನು 'ಬರೆ'ದದ್ದರಿಂದ ಸಾಲಿನಲ್ಲಿ ಇದೇ ಮೊದಲನೇದ್ದು... ಆದ್ರೆ, ನಾನು ಇದ್ರ ಹೆಸ್ರು ಬದಲಾಯಿಸೋದಿಲ್ಲ.... ಕಮೆಂಟಿಸಿದ್ದಕ್ಕೆ ಕಾಂಪ್ಲಿಮೆಂಟ್ಸ್.
February 25, 2008 10:45 PM

sunaath said...
ಆಗಸದ ಚಿತ್ತಾರದಷ್ಟೇ ಸುಂದರವಾಗಿ ಮೂಡಿದೆ ನಿಮ್ಮ ಮನೋ-ಆಗಸದ ಚಿತ್ತಾರ.
February 26, 2008 8:46 AM

ಸುಪ್ತದೀಪ್ತಿ suptadeepti said...
ಧನ್ಯವಾದಗಳು ಸುನಾಥರೇ.
February 26, 2008 3:04 PM

ಸಿಂಧು Sindhu said...
ಸುಪ್ತದೀಪ್ತಿ,
ಚೆನಾಗಿದೆ, ಬರೆಗಳು ಅಂದ ಕೂಡಲೇ ಬೇಸರ/ನೋವು/ಅನುಮಾನದ ನೆನಪು ನನ್ನಲ್ಲಿ. ಆದ್ರೂ ಈ ಬರೆಗಳನ್ನ ಚಂದದ ಚಿತ್ತಾರಕ್ಕೆ ಆವಾಹಿಸಿ ಬರೆದು ಆಹ್ಲಾದ ತಂದಿದ್ದೀರಿ.
ಎಲ್ಲವೂ ಇಷ್ಟವಾಯಿತು. ಕೊನೆಯ ಪ್ಯಾರಾ ತುಂಬ ಹಿಡಿಸಿತು...
ಪ್ರೀತಿಯಿಂದ
ಸಿಂಧು.
February 26, 2008 7:10 PM
ಸುಪ್ತದೀಪ್ತಿ suptadeepti said...
ಹೌದು ಸಿಂಧು, ಬರೆಗಳು ಅನ್ನುವ ಪದ negetive energy ಹೊತ್ತಿದೆ. ಆದರೂ ಅದನ್ನೇ ಬಳಸಿದ್ದೆ, ಯಾಕಂದ್ರೆ ಕವನದ ಪ್ರತೀ ಚರಣದಲ್ಲೂ ಸಿಟ್ಟು, ಕೊಸರಾಟ, ಹಾರಾಟ, ಭಯ-- ಈ ಭಾವಗಳ ಹರಿವು... ಆದ್ದರಿಂದ ಅದೇ ಹೆಸರು ಇಟ್ಟೆ.ಅಪರೂಪವಾಗಿ ಇತ್ತ ಬಂದದ್ದಕ್ಕೆ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
February 26, 2008 7:55 PM

No comments: