ನವಿರುನಿಶೆಯಲಿ ಚಿಮ್ಮಿತ್ತು
ಜೀವ ಚೇತನ ಸ್ಫೂರ್ತಿ
ಯಾವ ಲಾಸ್ಯಕೆ ಒಲಿದಿತ್ತು
ಮೊಗ್ಗಾಗಲಿಹ ಮೂರ್ತಿ
ಹಸಿರು ಹೊದ್ದೇ ಎದ್ದಿದೆ
ಬೆವರು ಮೆದ್ದ ಚಿಗುರು
ಭಾವ ಭಂಗಿಯ ಬಿತ್ತಿದೆ
ಭಿತ್ತಿಯೊಳಗೆ ಉಸಿರು
ಹಿಮಸಿಂಚನ ರೋಮಾಂಚನ
ರಮ್ಯ ರವಿಯ ಸ್ಪರ್ಶ
ಸುರಸುಮವದು ಧರೆಗಿಳಿಯಿತು
ಸೆಳೆದು ಸಕಲಾಕರ್ಷ
ಪಕಳೆಯರಳಿತು ತೆರೆಯಿತು
ಗಂಧ ಚೆಲ್ಲಿ ಮುಗುಳು
ಹಾಸ ಕೋಟಿಯ ಹರಡಿತು
ಬಂಧ ಕಳೆದ ಮರುಳು
(೨೧-ಮೇ-೨೦೦೬)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday, 22 May 2008
Subscribe to:
Post Comments (Atom)
2 comments:
ಭಲೆ ಜ್ಯೋತಿ, ಭಲೆ. ಕಾವ್ಯ ನಿನ್ನ ಹೃದಯದಲ್ಲಿ ನೆಲೆಸಿದೆ. ಸರಾಗವಾಗಿ ಹೊರಬರುತ್ತದೆ.
-ಸುನಾಥ ಕಾಕಾ
ಸುನಾಥ ಕಾಕಾ, ನೀವು ಹೀಗೆ ಹೊಗಳಿದ್ರೆ ಹೇಗೆ? ನನಗೆ ತುಂಬಾ ಸಂಕೋಚವಾಗುತ್ತೆ. ಧನ್ಯವಾದಗಳು ಮೆಚ್ಚಿದ್ದಕ್ಕೆ.
Post a Comment