Monday, December 31, 2007
(ಅವನೇನೋ ಮುರಲಿಯನ್ನು ತೊರೆದ, ಬೃಂದಾವನವನ್ನು ಮರೆತ; ತನ್ನ ಹೊಸ ಹಾದಿ ಹಿಡಿದು ನಡೆದ. ಉಳಿದವರ ಪಾಡು...?)
ಏನೇ ರಾಧೇ, ಏನಿದು ಅಳಲು?
ಚೆಲುವ ಚೆನ್ನಿಗನ ವಿರಹದ ಮರುಳು
ತೊರೆದನೆ ನಮ್ಮನು, ಮಥುರೆಗೆ ನಡೆದನೆ,
ಬೃಂದಾವನವನು ತಟ್ಟನೆ ಮರೆತನೆ
ಆಡಿದ ಆಟವ, ಹಾಡಿದ ರಾಗವ
ಗಾಳಿಯ ಸೆಲೆಯಲಿ ತೇಲಿಸಿ ಹೊರಟನೆ.... ಏನೇ ರಾಧೇ
ತುಂಟನ ಮೋಹವು ಎಲ್ಲೆಡೆ ಹರಡಿದೆ,
ಯಮುನೆಯ ಕಲರವ ಕಣ್ಣೀರ್ ಕರೆದಿದೆ
ತಂಬೆಲರಲಿ ಬಿಸಿ ಉಸಿರೇ ಸೇರಿರೆ,
ಕುಣಿಯುವ ಮಣಕವು ಕಂಗಾಲಾಗಿದೆ.... ಏನೇ ರಾಧೇ
`ಹೇಗೇ ಬದುಕಲಿ?' ಎನ್ನದೆ ನೋಡು,
ಕಂದನ ಮರೆಯದ ಎನ್ನಯ ಪಾಡು
`ಗೋಪನ ಮಗನು ಬೆಣ್ಣೆಯ ಬೇಡುತ,
ಬರುವನು' ಎಂದಿದೆ ಕರುಳಿನ ಜಾಡು.... ಏನೇ ರಾಧೇ
(೧೬-ಮಾರ್ಚ್-೨೦೦೬)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 10:20 AM
Labels: ಹೊಚ್ಚಹೊಸದು
8 ಪತ್ರೋತ್ತರ:
December Stud said...
ಒಂದೇ ಕಥೆ...ಕೋಟಿ ಕವಿತೆಗಳು...ಎಲ್ಲವೂ ಹೊಸದು...ಅಲ್ವಾ?
'Krishna' is something unique and divine!
December 31, 2007 4:15 PM
ವಿಕ್ರಮ ಹತ್ವಾರ said...
krishna, raadhe, deepti, magaLu...yaaru yaarO?!
December 31, 2007 7:38 PM
suptadeepti said...
D.S.: ಧನ್ಯವಾದಗಳು. ಕೃಷ್ಣ ಯಾಕೆ ಇಷ್ಟ ಅಂದ್ರೆ ಉತ್ತರ ಇಲ್ಲ. ಆದ್ರೆ, ಆ ತುಂಟ ಪೋರನ ಬಗ್ಗೆ ಒಲವು ಮಾತ್ರ ತೀರದು.
ವಿಕ್ಕಿ: ಇಲ್ಲಿನ ದೀಪ್ತಿ ಬೇರೆಯೇ, ನೀನು ಹೆಸರಿಸ ಹೊರಟ ವಿಚಾರ ಬೇರೆಯೇ. ಅವೆರಡೂ ಇಲ್ಲಿ ಬೆರಕೆಯಾಗಿಲ್ಲ; ಹಾಗೆ ಕಾಣುತ್ತಿದೆ, ಹೌದು.
January 1, 2008 1:51 AM
ಪಯಣಿಗ said...
muraliya baalya mattu hareyada mareyalaagada seLetavannu aakarshakavaagi aksharakkiLisiddira. ondaralli, ananya shaktige sharanaabhaavaviddare, mattondaralli aa shakti kaLedukondaagina hataashe, niraase mattu aashaavaada. nimma kalpaneya adbhuta drishtinotakke sharanu. aa drishti yaavudo choukattinalli bandhiyaagide anta annisitu....adu aprameyavaadaaga aa bhaavada bhaashe hegirabahudu annuva kutoohala E manasige.
Murali
January 1, 2008 4:35 AM
suptadeepti said...
ಧನ್ಯವಾದಗಳು ಮುರಳಿ. ಬಂಧ (ಚೌಕಟ್ಟು) ನಮ್ಮನ್ಯಾರನ್ನೂ ಬಿಟ್ಟಿದ್ದಲ್ಲ. ಅದನ್ನು ಮೀರುವ ಪ್ರಯತ್ನವಂತೂ ಇದ್ದೇ ಇದೆ. ಉತ್ತೇಜನಕ್ಕೆ ವಂದನೆಗಳು.
January 1, 2008 8:56 AM
Mahantesh said...
krishna maye nimmalli shuruyayitu...neevu heLodu nija..krishna artha maaDikoMdashtu eno ondu drishtikona uLide biddutte...krishna yake ista annodakke sariyada uttarane kottidira :)
January 2, 2008 1:53 AM
ನಾವಡ said...
ಸುಪ್ತದೀಪ್ತಿಯವರೇ,
ನಿಮ್ಮ ಹೊಚ್ಚ ಹೊಸದಿನ ಮುರಳೀ ಗಾನ ಓದಿದೆ. ಚೆನ್ನಾಗಿದೆ. ಅದರಲ್ಲೂ "ಸರಿಸಲು ಬಾರದು ಮೋಹವ ಚಾದರ, ಹರಿಯೇ ಹೊದೆಸಿದ ನೋಡಿ’ ಒಳ್ಳೆಯ ಸಾಲು. ಮೋಹಕತೆಯನ್ನು ತುಂಬಿ ಹೋಗಬಲ್ಲವ ಮೋಹನ ಮಾತ್ರ. ಇಂಥ ಭಾವಗೀತೆಗಳು ಮತ್ತಷ್ಟು ಬರಲಿ ಎಂಬ ನಿರೀಕ್ಷೆಯೊಂದಿಗೆ,
ನಾವಡ
January 2, 2008 3:31 AM
suptadeepti said...
ಮಹಾಂತೇಶ್ ಮತ್ತು ನಾವಡರಿಗೆ ಧನ್ಯವಾದಗಳು. ಹೀಗೇ ಬರುತ್ತಾ ಇರಿ.
January 2, 2008 9:59 AM
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday, 22 May 2008
Subscribe to:
Post Comments (Atom)
No comments:
Post a Comment