ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 22 May, 2008

ಕಟು-ಕಹಿ

Friday, February 29, 2008

ದೀಪದ ಕೆಳಗೇ ಕತ್ತಲೆ
ಕಸ-ಕಡ್ಡಿ ಜೇಡರ ಬಲೆ
ಧೂಳು ಮುಸುಕಿದ ಪೆನ್ನು
ಹರಿದ ಪುಸ್ತಕದ ಬೆನ್ನು
ಕಾಣುವ ಕಣ್ಣಿಗೆ ಬಣ್ಣದ ಕಟ್ಟು
ಕೆಲಸದ ಸಾರ್ಥಕ್ಯ ಒತ್ತಟ್ಟು
ನೊಂದ ಜೀವಕ್ಕಿಲ್ಲ ಮದ್ದು
ಬಗ್ಗಿದವನಿಗೇ ಗುದ್ದು

ಹಳೇ ಪೇಪರ್ ಸುದ್ದಿ
ಯಾರಿಗೂ ಬೇಕಿಲ್ಲ, ರದ್ದಿ
ಅಜ್ಜ-ಅಜ್ಜಿ ತಾತ ದೊಡ್ಡಮ್ಮ
ಹಿರಿಯರು ತಲೆನೋವು, ನಮ್ಮಲ್ಲಿ ಬೇಡಮ್ಮ
ಇತಿಹಾಸದ ರಗಳೆ ಈಗ ಬೇಡ, ಬೊಗಳೆ
ಕಲಿಯುವುದೇನಿಲ್ಲ, ಎಲ್ಲವೂ ಗೊತ್ತಮ್ಮ
(೨೩-ಫೆಬ್ರವರಿ-೨೦೦೭)
ಅಕ್ಷರ: ಸುಪ್ತದೀಪ್ತಿ suptadeepti ಕಾಲ: 8:30 PM
Labels: , ,

4 ಪತ್ರೋತ್ತರ:
sunaath said...
ಬೇಸರದ ಅಭಿವ್ಯಕ್ತಿ ಚೆನ್ನಾಗಿದೆ. ಆದರೆ ಬೇಸರ ಯಾಕೆ?
Be cheerful; OK?
February 29, 2008 9:41 PM

ಸುಪ್ತದೀಪ್ತಿ suptadeepti said...
ನನಗೇನೂ ಬೇಸರವಿಲ್ಲ. ಆದರೆ ಇಂತಹ ಪರಿಸ್ಥಿತಿಗಳನ್ನು ನೋಡಿದ ಮೇಲೆ ಹುಟ್ಟಿದ ಅಭಿವ್ಯಕ್ತಿ ರೂಪ.
March 1, 2008 8:40 AM

Shiv said...
ಈ ಕಟು-ಕಹಿ ಯಾಕೋ ಗೊತ್ತಾಗಲಿಲ್ಲ ..
ಅಜ್ಜ-ಅಜ್ಜಿ ತಾತ ದೊಡ್ಡಮ್ಮ
ಹಿರಿಯರು ತಲೆನೋವು :((
ಯಾಕ್ರೀ ಸುಪ್ತದೀಪ್ತಿಯವರೇ?
March 1, 2008 10:23 PM

ಸುಪ್ತದೀಪ್ತಿ suptadeepti said...
ಸಂದರ್ಭ ಎಲ್ಲಿಯದೋ ಗೊತ್ತಿಲ್ಲ, ಹಿರಿಯರನ್ನು ಅನಾಥಾಶ್ರಮಕ್ಕೆ ಕರೆದೊಯ್ದು ಬಿಟ್ಟು ಬರುವ ಮಕ್ಕಳ ಬಗ್ಗೆ ತಿಳೀತು. ಹಳೆಯದೆಲ್ಲ ಹೊಲಸು ಅನ್ನುವವರು ಈ ಜನ. ಅದರ ಫಲ... ಅಷ್ಟೇ.
ಸಮಾಧಾನವಾಗಿರಿ, ನನಗೇನೂ ಆಗಿಲ್ಲ.
March 1, 2008 10:30 PM

No comments: