ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 14 February 2013

ಒದ್ದೆಗೆನ್ನೆ    ಗಾಳಿಗುದುರೆಯಂಥಾ ಬೈಕ್ ಬೆನ್ನ ಮೇಲೇರಿ ಇವನ ಬೆನ್ನಿಗಂಟಿ ಕೂತು ಸಾಗುತ್ತಿದ್ದೆ. ಹೊರಗೂ ಒಳಗೂ ಮಬ್ಬು ಮಬ್ಬು. ಇದ್ದಕ್ಕಿದ್ದ ಹಾಗೆ ಬಾನು ಬಿರಿದು ಸುರಿಯಿತು. ನನ್ನ ಕೆನ್ನೆಗಳೂ ಒದ್ದೆ. ಹಳೇ ಬಸ್‌ಸ್ಟಾಪ್ ಹತ್ರ ಬೈಕ್ ನಿಲ್ಲಿಸಿದ, ಇಬ್ಬರೂ ಮಾಡಿನಡಿಗೆ ಓಡಿದೆವು. ಅಲ್ಲೊಂದು ಮೂಲೆಯ ಮಬ್ಬಿನಲ್ಲಿ ಮುದ್ದೆಯಾಗಿ ನಡುಗುತ್ತಾ ಒದ್ದೆಗೆನ್ನೆಗಳ ಅವನೂ ನಿಂತಿದ್ದ.

(೨೬-ಆಗಸ್ಟ್-೨೦೧೨)