ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 14 February, 2013

ಒದ್ದೆಗೆನ್ನೆ    ಗಾಳಿಗುದುರೆಯಂಥಾ ಬೈಕ್ ಬೆನ್ನ ಮೇಲೇರಿ ಇವನ ಬೆನ್ನಿಗಂಟಿ ಕೂತು ಸಾಗುತ್ತಿದ್ದೆ. ಹೊರಗೂ ಒಳಗೂ ಮಬ್ಬು ಮಬ್ಬು. ಇದ್ದಕ್ಕಿದ್ದ ಹಾಗೆ ಬಾನು ಬಿರಿದು ಸುರಿಯಿತು. ನನ್ನ ಕೆನ್ನೆಗಳೂ ಒದ್ದೆ. ಹಳೇ ಬಸ್‌ಸ್ಟಾಪ್ ಹತ್ರ ಬೈಕ್ ನಿಲ್ಲಿಸಿದ, ಇಬ್ಬರೂ ಮಾಡಿನಡಿಗೆ ಓಡಿದೆವು. ಅಲ್ಲೊಂದು ಮೂಲೆಯ ಮಬ್ಬಿನಲ್ಲಿ ಮುದ್ದೆಯಾಗಿ ನಡುಗುತ್ತಾ ಒದ್ದೆಗೆನ್ನೆಗಳ ಅವನೂ ನಿಂತಿದ್ದ.

(೨೬-ಆಗಸ್ಟ್-೨೦೧೨)

5 comments:

sunaath said...

ವೆಲಂಟೈನ್ ಡೇ ದಿವಸ ಹಳೆಯದೆಲ್ಲಾ ನೆನಪಾಗ್ತಾ ಇದೆಯಾ?
ನಿಮ್ಮ ಬದುಕೆಲ್ಲ ಈ ರೀತಿಯ ರೋಮಾಂಚನದಲ್ಲಿಯೇ ಇರಲಿ!

Badarinath Palavalli said...

ನಾಲ್ಕೇ ಸಾಲಲ್ಲಿ ಗತ ಮತ್ತು ವಾಸ್ತವ ಕಟ್ಟಿಕೊಟ್ಟಿದ್ದೀರಿ. ಇಷ್ಟವಾಯ್ತು.

ಸುಪ್ತದೀಪ್ತಿ suptadeepti said...

ಆಗಸ್ಟ್ ತಿಂಗಳ ಮಳೆದಿನಗಳಲ್ಲಿ ಕಂಡ ದೃಶ್ಯವೊಂದು ಬರೆಸಿಕೊಂಡ ಈ ನಾಲ್ಕು ಸಾಲುಗಳು ಈ ದಿನ ನೆನಪಾಗಿದ್ದು ಕಾಕತಾಳೀಯ, ಕಾಕಾ.
ನಿಮ್ಮ ಹಾರೈಕೆಗೆ ಆಭಾರಿ.

ನಿಮಗಿಷ್ಟವಾಗಿದ್ದು ನನಗೂ ಖುಷಿಕೊಟ್ಟಿತು, ಬದರಿ.

ISHWARA BHAT said...

ಹಸಿ ಹಸಿ ಪ್ರೀತಿ.. :)

ಸುಪ್ತದೀಪ್ತಿ suptadeepti said...

ಹಸಿ ಪ್ರೀತಿಯೇ ಹುಚ್ಚು ಹಿಡಿಸಿ ನಶೆ ಏರಿಸೋದು ಕಣೋ, ಹುಡುಗಾ.