ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday 18 March 2013

ಹೊಳೆಯೊಳಗೆ...


ತಲ್ಲೀನಳಾಗಿ ಬಟ್ಟೆ ಒಗೆಯುತ್ತಿದ್ದಳವಳು. ಹೊಳೆಯಲೆಗಳ ನಡುವೆ ಎಳೆಯೆಳೆ ಜಾಲಾಡುವಾಗ ಸೋಪಿನ ನೊರೆನೊರೆ ಜಾರುಗುಳ್ಳೆಗಳ ಜೊತೆಗೆ ಸುರುಳಿ ಬಿಚ್ಚಿಕೊಳ್ಳುತ್ತಾ ಹರಡಿಕೊಳ್ಳುತ್ತಾ ನೆನಪಿನಲೆಗಳೂ ಸೇರಿಕೊಂಡದ್ದು ಅವಳಿಗರಿವಾಗಲೇ ಇಲ್ಲ. ಮುಗ್ಧತೆಯ ಪದರದೊಳಗೆ ಎಲ್ಲವೂ ಸುಭದ್ರವೆಂಬ ಭರವಸೆ ಅವಳದು. 
  
ಈಗವನಿಗೆ ಅವಳರಿಯದ ಬೇನೆ; ಡಿಮೆನ್ಶಿಯಾ. 
 
(೧೬-ಡಿಸೆಂಬರ್-೨೦೧೨)

4 comments:

sunaath said...

ಜ್ಯೋತಿ,
ಅರ್ಥವಾಗಲಿಲ್ಲ!

ಸುಪ್ತದೀಪ್ತಿ suptadeepti said...

ಕಾಕಾ, ಡಿಮೆನ್ಷಿಯಾ ಅಂದ್ರೆ ಗೊತ್ತಿರಬಹುದು- ಮರೆವಿನ ಖಾಯಿಲೆ. ಆಧುನಿಕ ಶಕುಂತಲೆಯರ ಬಗ್ಗೆ ಹೆಚ್ಚು ಬರೆಯಬೇಕಾಗಿಲ್ಲವಲ್ಲ.

Badarinath Palavalli said...

ಹಲವು ಭಾವಗಳನ್ನು ಕೆಲ ಪದಗಳಲ್ಲೇ ಕಟ್ಟಿಕೊಟ್ಟಿದ್ದೀರಿ...

ISHWARA BHAT said...

ಓಹ್, ರೋಗವೇ ಅದು?

ಮಾರ್ಮಿಕವಾಗಿದೆ.