ಸಹೃದಯ ಓದುಗರಿಗೆ ನಮಸ್ಕಾರಗಳು.
ಮೇ ತಿಂಗಳ ಕೊನೆಯ ಶನಿವಾರ ಭಾನುವಾರ ಅಮೆರಿಕನ್ನಡ ಸಾಹಿತ್ಯಾಸಕ್ತರಿಗೆ ಸಾಹಿತ್ಯ ರಸದೂಟ. ವಾಷಿಂಗ್ಟನ್ ಡಿ.ಸಿ. ಅಮೆರಿಕದ ರಾಜಧಾನಿ. ಅದರ ಪಕ್ಕದ ಮೇರಿಲ್ಯಾಂಡ್ ರಾಜ್ಯದ ರಾಕ್’ವಿಲ್’ನಲ್ಲಿ ಯೂನಿವರ್ಸಿಟಿಯ ಶೇಡೀ ಗ್ರೋವ್ ಸಭಾಂಗಣದಲ್ಲಿ ಎರಡು ದಿನಗಳ ವಸಂತ ಸಾಹಿತ್ಯೋತ್ಸವ. ಅದರ ಬಗ್ಗೆ ವಿವರ, ವರದಿಗಳೆಲ್ಲ ಈಗಾಗಲೇ ಕೆಲವಾರು ಬಂದಿವೆ, ಬರುತ್ತಿವೆ. ಅದನ್ನೇ ಮತ್ತೆ ಪುನರಾವರ್ತಿಸುವುದಿಲ್ಲ ನಾನು.
ಆದರೆ ಅಲ್ಲಿ ಕೇಳಿಬಂದ ಒಂದು ದೊಡ್ಡ ಘೋಷಣೆಯನ್ನು ಹೇಳದಿದ್ದರೆ ತಪ್ಪಾದೀತು. ಮುಂದಿನ ಸಾಹಿತ್ಯೋತ್ಸವ ಮಾಡುವವರೇ, ಗಮನಿಸಿ: ಭಾಗವಹಿಸುವ ಎಲ್ಲ ಉತ್ಸಾಹಿ ಬಳಗದ ಕೋರಿಕೆ -
"ಎರಡು ದಿನವೂ ಊಟ ತಿಂಡಿ ಕೊಡಿ. ನಮಗೆಲ್ಲ ಮನಸಾರೆ ಹರಟೆ ಹೊಡೆಯಲು ಬಿಡಿ"
ಇಲ್ಲಿ, ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ ಕ್ಷಣಗಳನ್ನು ಸೇರಿಸಿಟ್ಟಿದ್ದೇನೆ. ಆ ಚಿತ್ರಲೋಕಕ್ಕೆ ಇಣುಕಿಂಡಿ
ಕೆಲವಾರು ವರದಿಗಳು, ಇನ್ನಷ್ಟು ಚಿತ್ರಗಳು ಸಾಹಿತ್ಯ ರಂಗದ ಜಾಲತಾಣದಲ್ಲಿಯೂ ಇವೆ, ಅಲ್ಲಿಗೊಮ್ಮೆ ಭೇಟಿ ಕೊಡಿ.
http://www.kannadasahityaranga.org/
ಗೆಳತಿ ತ್ರಿವೇಣಿಯೂ ಅವಳ ಅಕ್ಷರಲೋಕದಲ್ಲಿ ಈ ಬಗ್ಗೆ ಬರೆದು, ಚಿತ್ರಗಳ ರಂಗೋಲಿ ಹಾಕಿಟ್ಟಿದ್ದಾಳೆ.
ತಂಗಿ ಶಾಂತಲೆ ಹೇಳಿಕೊಂಡಂತೆ, ನಮ್ಮ ಮನಸ್ಸುಗಳಿನ್ನೂ ಆ ಸಡಗರದಿಂದ ಹೊರಬಂದಿಲ್ಲ.
ಮುಂದಿನ ಮಾತುಗಳೆಲ್ಲ ಆಮೇಲೆಯೇ.
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Subscribe to:
Post Comments (Atom)
4 comments:
ಅಬ್ಬಾ!ಇಷ್ಟೊಂದು ಖುಷಿ ಅನುಭವಿಸಿದ ಮೇಲೆ ಮನಸ್ಸುಗಳಿಗೆ ಹೊರಬರಲು ಹೆಚ್ಚು ಸಮಯ ಖಂಡಿತ ಬೇಕು. ದೂರದಿಂದ ನೋಡಿದ ಮನಸ್ಸೇ ಇನ್ನೂ ಅಲ್ಲೇ ಇದೆ:-).ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಅಕ್ಕ.
ಭಾರ್ಗವಿ.
ಇಲ್ಲಿ ಬಂದು ಅಲ್ಲಿ ನೋಡಿ ಕಮೆಂಟಿಸಿದ್ದಕ್ಕೆ ನಿನಗೂ ಧನ್ಯವಾದ ತಂಗ್ಯಮ್ಮ.
ಜ್ಯೋತಿಯವರೇ,
ಪೋಟೋ ನೋಡಿದೆ..
ತುಂಬಾ ಸಮಮನಸ್ಕರು ಸಿಕ್ಕಿದ್ದರು ಅನಿಸುತ್ತೆ..
ತುಳಸಿಯಮ್ಮ ಸ್ಟೇಜ್ ಮೇಲೆ ಮಿಂಚಿಂಗ್ !
ಹೌದು ಶಿವ್, ಸಮಾನಮನಸ್ಕರ ಜೊತೆಗೆ ಕಳೆದ ಎರಡು ದಿನಗಳು ಅಮೂಲ್ಯ.
ಪ್ರತಿಕ್ರಿಯೆಗೆ ಧನ್ಯವಾದಗಳು.
Post a Comment