ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday 21 June 2009

ಶುಭ ಆಶಯಗಳು, ಶುಭ ಹಾರೈಕೆಗಳು, ಶುಭ ವಂದನೆಗಳು.
ಮೇ ತಿಂಗಳ ಎರಡನೇ ಭಾನುವಾರ ಅಮ್ಮಂದಿರ ದಿನ
ಜೂನ್ ತಿಂಗಳ ಮೂರನೇ ಭಾನುವಾರ ಅಪ್ಪಂದಿರ ದಿನ


ಎಲ್ಲ ಅಪ್ಪಂದಿರಿಗೂ ಈ ನೆವನದಲ್ಲಿ ಒಂದೊಂದು ಕಾರಣಗಳಿಗಾಗಿ ಒಂದೊಂದು ನಮನಗಳು.

ನಿಮ್ಮ ಕಿರುಬೆರಳನ್ನು ಪುಟ್ಟ ಹಿಡಿಯೊಳಗೆ ಇರಿಸುವುಕ್ಕಾಗಿ;
ಹೆಗಲ ಮೇಲೇರಿಸಿಕೊಂಡು ಜಾತ್ರೆಯಲ್ಲಿ ಪಲ್ಲಕ್ಕಿಯ ದೇವರನ್ನು ಕಾಣಿಸುವುದಕ್ಕಾಗಿ;
ತೋಟದ ಕೆರೆಯಲ್ಲಿ ಈಜು ಹೊಡೆವಾಗ ಎಳೆ ಹೊಟ್ಟೆಯ ಕೆಳಗೆ ಕೈಯಿಟ್ಟು ಧೈರ್ಯ ಕೊಡುವುದಕ್ಕಾಗಿ;
ತೊರೆಯ ದಾಟುವಾಗ ಮರದ ಸೇತುವೆಯಲ್ಲಿ ಬೆನ್ನ ಹಿಂದೆಯೇ ಮೆಲ್ಲನೆ ಬರುವುದಕ್ಕಾಗಿ;
ಯಕ್ಷಗಾನದ ರಕ್ಕಸವೇಷ ನೋಡಿ ಬೆದರಿದಾಗ ಸಾಂತ್ವನ ಹೇಳುವುದಕ್ಕಾಗಿ;
ಗೇರು, ಮಾವು, ಹಲಸುಗಳನ್ನು ನಾಜೂಕಾಗಿ ಬಿಡಿಸಿ ತಿನಿಸುವುದಕ್ಕಾಗಿ;
............ .......... .......... ...........

ಮಾತು ಮೌನಗಳಲ್ಲಿ ಹುದುಗಿರುವ ನೂರಾರು ಭಾವಗಳಿಗಾಗಿ....
ನಮನಗಳು ವಂದನೆಗಳು ಪ್ರಣಾಮಗಳು.

4 comments:

ಶಾಂತಲಾ ಭಂಡಿ said...

ಜ್ಯೋತಿ ಅಕ್ಕಾ...
ಅಪ್ಪ-ಮಗು ಅಥವಾ ಅಮ್ಮ ಮಗುವಿನ ಪ್ರತೀಕವಾಗಿ ಈ ಚೆಂದದ ದಿನಕ್ಕೆ ನೀವು ಒಂದು ದೊಡ್ಡ ಮತ್ತು ಒಂದು ಪುಟಾಣಿ ಟೊಮ್ಯಾಟೋ ಕಾಯಿಗಳ ಚಿತ್ರವನ್ನು ಬಳಸಿದ್ದೀರಿರಬೇಕಲ್ಲ!
ಚೆಂದದ ಆಶಯ, ಅಂದದ ನಮನ ಹೊತ್ತ ಸಾಲುಗಳು ಫೋಟೋಸಹಿತ ಇಷ್ಟವಾದವು.

ಅಂದಹಾಗೆ ಇವು ನಿಮ್ಮ ಮನೆಯಂಗಳದಿ ಬೆಳೆದೆರಡು ಟೊಮ್ಯಾಟೋ ಕಾಯಿಗಳೇ?

ಸುಪ್ತದೀಪ್ತಿ suptadeepti said...

ಶಾಂತಲಾ,
ಹೌದು. ಆಶಯಕ್ಕೊಂದು ಚಿತ್ರರೂಪದ ಆಶ್ರಯ ನನ್ನ ಹಿತ್ತಲಲ್ಲೇ ಬೆಳೆದಿದೆ, ಬೆಳೆಯುತ್ತಿದೆ. ಇನ್ನೂ ಕೆಲವು ಕಾಯಿಗಳು ಇವೆಯಾದರೂ ಯಾವುದೂ ಹಣ್ಣಾಗಿಲ್ಲ.

ನಿನಗಿಷ್ಟವಾಗಿದ್ದು ಸಂತೋಷ.

ಭಾರ್ಗವಿ said...

ಜ್ಯೋತಿ ಅಕ್ಕ,
ಚಂದದ ಹಾರೈಕೆಗೆ ಧನ್ಯವಾದಗಳು.
ಒಂದಕ್ಕಿಂತ ಒಂದು ಸಾಲು ಚೆನ್ನ. ತಂದೆ ಮಾಡಿದ್ದೆಲ್ಲ ನೆನಪಿಸಿಕೊಳ್ಳುವಂತೆ ಮಾಡಿದಿರಿ.
ಫೋಟೋ ತುಂಬಾ ಚೆನ್ನಾಗಿದೆ,ನಾನು ಕ್ಯಾಪ್ಸಿಕಂ ಅಂದುಕೊಂಡು ಬಿಟ್ಟೆ.

ಸುಪ್ತದೀಪ್ತಿ suptadeepti said...

ಭಾರ್ಗವಿ, ಧನ್ಯವಾದಗಳು.
ಅಪ್ಪನ ಹಾರೈಕೆಯ ನೆರಳು ನಮ್ಮ ಮೇಲೆ ಸದಾ ಇರುತ್ತದೆ, ಆದರೆ ಅದನ್ನು ನಾವು ನಮ್ಮ ನಮ್ಮ ಗಡಿಬಿಡಿಯ ಬದುಕಿನಲ್ಲಿ ಗುರುತಿಸಿರೋದೇ ಇಲ್ಲ, ಅಲ್ಲವಾ? ಸುಮ್ಮನೆ ನಿಂತ ಒಂದು ನಿಲುವಿನಲ್ಲಿ ಹಿನ್ನೋಟ ಹರಿಸಿದಾಗ ಎದ್ದುಬಂದ ಹಲವು ಚಿತ್ರಗಳಲ್ಲಿ ಕೆಲವು ಮಾತ್ರ. ನೆನಪುಗಳಿಗೆ ಒಂದು ಆನಿಕೆಗೋಲು ಸಾಕಲ್ಲ.
ಹಸಿರು ಹಸಿರು ಕಾಯಿಗಳು ಕ್ಯಾಪ್ಸಿಕಂ ಥರ ಕಂಡವೆ?