ಮನದಿ ನೋವ ಹುದುಗಿ ಮೇಲೆ
ತಂದ ಒಂದು ನಗುವಿಗೆ-
ಬರಗಾಲದ ಬಿರುಕಿನಲ್ಲು
ಹೊರಟ ಹಸುರ ಕುಸುರಿಗೆ-
ಒಂದೆ ಗುಕ್ಕ ಎರಡು ಕೊಕ್ಕಿ-
-ಗಿತ್ತು ನಲಿವ ಕರುಳಿಗೆ-
ಚಿಂದಿಯಲ್ಲೆ ಮುದುರಿಕೊಂಡು
ಕಾವಲಿಡುವ ಮಮತೆಗೆ-
ಅಗ್ನಿಹೋತ್ರಿಯಾಗಿ ನಿಂತು
ತಂಪನೆರೆವ ತರುವಿಗೆ-
ಕತ್ತಲಲ್ಲಿ ಬಿಕ್ಕು ಬೆರೆಸಿ
ದಿನದಿ ಬಿರಿವ ಕಂಪಿಗೆ-
ಯಾವ ಬಿರುದು ಹೆಸರು ಇರದೆ
ತುಡಿಯುವೆದೆಗೆ ಅರ್ಪಣ
(೦೪-ಜುಲೈ-೨೦೦೩)
(ಯಾವ್ಯಾವುದೋ ಕಾರಣ-ಒತ್ತಡಗಳಿಗೆ ಸಿಲುಕಿ ಮಕ್ಕಳನ್ನು ಸಾಕಿ ಬೆಳೆಸುವ ಜವಾಬ್ದಾರಿ ಹೊರುವ 'ಒಂಟಿ ಎತ್ತಿನ ಗಾಡಿ'ಗಳಾದ "ಸಿಂಗಲ್ ಪೇರೆಂಟ್ಸ್" ಬಗ್ಗೆ)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Tuesday, 20 January 2009
Subscribe to:
Post Comments (Atom)
6 comments:
ಅಗ್ನಿಹೋತ್ರಿಯಾಗಿ ನಿಂತು
ತಂಪನೆರೆವ ತರುವಿಗೆ ...
ಒಂಟಿ ಪೋಷಕರ ಕಷ್ಟಗಳನ್ನೆಲ್ಲಾ ಇದೊಂದೇ ಸಾಲು ಕಟ್ಟಿಕೊಟ್ಟಿದೆ!
ಪ್ರತಿಕ್ರಿಯೆಗೆ ಧನ್ಯವಾದ ವೇಣಿ.
Once again a beautiful poem.
ಅಭಿನಂದನೆಗಳು, ಜ್ಯೋತಿ.
ಪ್ರೀತಿಗೆ ವಂದನೆಗಳು ಕಾಕಾ.
’ಸಿಂಗಲ್ ಪೇರೆಂಟ್ಸ್’ ಬಗ್ಗೆ ಬರೆದದ್ದು ಚೆನ್ನಾಗಿದೆ.... ಬರೀ ’ಸಿಂಗಲ್ಸ್’ ಬಗ್ಗೆ... ಎನಾದ್ರೂ ಇದೆಯಾ..? :-)
ಅಂಥ ಒಂದು ಕವನವೂ ಇದೆ. ಆದ್ರೆ ನಿನಗಂತೂ ಪ್ರಸ್ತುತ ಇಲ್ಲ ಅದು ಈಗ (ಕವನದ ಸಂದರ್ಭ ಬೇರೆ ಥರ ಇದೆ!).
Post a Comment