ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Wednesday, 14 January, 2009

ರಾಗ ರಂಗು

ಚದುರಿ ಉಷೆಯ ಕುಂಕುಮ
ನೊಸಲ ತುಂಬ ಸಂಭ್ರಮ
ಹನಿದು ಮುತ್ತು ಹನಿಗಳು
ಬಯಲ ತುಂಬ ಮಣಿಗಳು

ಅರುಣ ಕದವ ತೆರೆಯಲು
ದಿವ್ಯಗಾನ ಹರಿಯಲಿ
ಕಿರಣ ಧಾರೆ ಹೊಳೆಯಲು
ಹೊನ್ನ ಗಾನ ಹೊಳೆಯಲಿ

ತುಂಬಿ ಬೆಳಕ ಬಿಂದಿಗೆ
ಬರಲಿ ಬಳುಕಿ ಮೆಲ್ಲಗೆ
ನೇಸರೇರಿ ನಲಿಯಲಿ
ಕಮಲ ಬಳುಕಿ ಅರಳಲಿ

ಚಿಗುರ ಹಸುರು ಉಸಿರಿಗೆ
ಜಗವು ರವಿಯ ಹೆಸರಿಗೆ
ಉದಯ ಕಾಲ ರಂಗಿಗೆ
ಕಾವ್ಯ ರವಿಯ ಭಂಗಿಗೆ

(೨೦-ಸೆಪ್ಟೆಂಬರ್-೧೯೯೭)

8 comments:

sunaath said...

ಸುಂದರವಾದ ಕವನಗಳ ಮೂಲಕ ನನ್ನ ಮನಸ್ಸಿನಲ್ಲಿ ಯಾವಾಗಲೂ ಸಂತೋಷ ತುಂಬುತ್ತಿರುವ ನಿನಗೆ ಧನ್ಯವಾದಗಳು,
ಜ್ಯೋತಿ!

ಸುಪ್ತದೀಪ್ತಿ suptadeepti said...

ನಿಮ್ಮ ಪ್ರೀತಿಗೆ ವಂದನೆಗಳು, ಕಾಕಾ.

Ultrafast laser said...

I like this poem. I guess "ಕಮಲ ಬಳುಕಿ ಅರಳಲಿ" should be read as kamala baLuki nadeyali!? :-)?
D.M.Sagar

ಸುಪ್ತದೀಪ್ತಿ suptadeepti said...

ಲೇಸರ್-ಸಾಗರ್, ಸ್ವಲ್ಪ ನಿಧಾನಕ್ಕೆ... ಇಲ್ಲಾಂದ್ರೆ "ಕಮಲ" ಬಳುಕೋದು ಬಿಟ್ಟು ನಲುಗೀತು!!

ಶ್ರೀವತ್ಸ ಜೋಶಿ said...

ಕಾವ್ಯರವಿ ಬೆಳಿಗ್ಗೆ ಬೆಳಿಗ್ಗೆ "ಭಂಗಿ" ಸೇವಿಸುತ್ತಾನೊ! ಆಹಾ... ಭಂಗ್ ಕಾ ರಂಗ್ ಜಮಾವೋ ಚಕಾಚಕ್!
:-)

ಸುಪ್ತದೀಪ್ತಿ suptadeepti said...

ವತ್ಸ, "ಭಂಗಿ" ಪದಕ್ಕೆ ಒಂದೇ ಅರ್ಥ ಇರೋದಾ?

ಕೊನೆಯ ಸಾಲನ್ನು "ಕಾವ್ಯರವಿಯ ಭಂಗಿಗೆ" ಅಂತ ಓದುವ ಬದಲು "ಕಾವ್ಯ ರವಿಯ ಭಂಗಿಗೆ" ಅಂತ ಓದಬಹುದಲ್ವ?

ತೇಜಸ್ವಿನಿ ಹೆಗಡೆ- said...

ಅಕ್ಕಾ,

ಉದಯ ರಾಗದ ಮೋಡಿಗೆ ಮನಸು ಮರುಳಾಗಿದೆ. ತುಂಬಾ ಸುಂದರವಾಗಿದೆ. ಮನೋಹರವಾಗಿದೆ ಕವನ.

ಸುಪ್ತದೀಪ್ತಿ suptadeepti said...

ಧನ್ಯವಾದ ತೇಜು