ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Wednesday, 16 May 2012
ರಜತ-ಸ್ನೇಹ-ಸಮ್ಮಿಲನ
ಅತ್ತ ಮರೆಯುವ ಮುನ್ನ ಮತ್ತೆ ಬೆರೆಯುವ ಚೆನ್ನ
ಅವಕಾಶ ಹೊಂದಿಸುತ ಕರೆಯುತಿರುವೆ
ಬನ್ನಿ ನೀವುಗಳೆಲ್ಲ ಮನದ ಮೂಲೆಯ ಮೆಲ್ಲ
ತಡವುತ್ತ ನೆನಹುಗಳ ಕರೆದುತೆರೆದು
ಸೇರಿ ಕಲೆಯುತ ನಗುವ ಹರುಷ ಹಂಚುತ ನೆನೆವ
ಕಳೆದ ವರುಷಗಳನ್ನು ಗುಣಿಸಿಗಣಿಸಿ
ಇಂದು ತರತಮವಿಲ್ಲ ಸಂದ ದಿನಗಳನೆಲ್ಲ
ಹೊರಳಿ ಕುಲುಕಿಸಿ ಬೆದಕಿ ತೆಗೆವ, ಬನ್ನಿ
ಮೊದಲ ಹೆಜ್ಜೆಯನಿಟ್ಟು ಬಗಲಿನೊಜ್ಜೆಯ ಬಿಟ್ಟು
ಮರಳಿ ಬೆರೆಯುವ ನಿಲುವ ತಳೆವ, ಬನ್ನಿ
ಕೆಚ್ಚುಗುಚ್ಚುಗಳಿರದ ಬೆಚ್ಚನೆಯ ಮಕರಂದ
ತುಂಬುಹೃದಯದಲೆಂದು ಉಳಿಸೆ ಬನ್ನಿ
ಪಡೆದ ಪದವಿಗೆ ರಜತ ನಡೆದ ಹಾದಿಯ ಸವೆತ
ಎಲ್ಲ ಮೆಲ್ಲುತ ಹುರುಪುಗೊಳುವ ಬನ್ನಿ
(೨೨-ಎಪ್ರಿಲ್-೨೦೧೨)
Subscribe to:
Post Comments (Atom)
2 comments:
ವಾವ್ ಎಲ್ಲಿ ಅಕ್ಕ ಕಾಣೆಯಾದರೂ ಅಂದುಕೊಂಡ್ರೆ, ಸೂಪರ್ ಕವಿತೆಯೊಡನೆ ಇಗೋ ಬಂದೆ ಅಂದ್ರು.
ಸರಳವಾಗಿ ಬರೆಯುವುದು ಬಲು ಕ್ಲಿಷ್ಟ, ಆದರೆ ನಿಮ್ಮ ಈ ಕವನದಲ್ಲಿ ಸುಲಲಿತವಾಗಿ ಬಿಡಿಸಿಕೊಂಡ ಭಾವನೆಗಳ ಸರಮಾಲೆ ಇದೆಯಲ್ಲ...
ಮತ್ತೊಮ್ಮೆ ವಾಹ್!!!!!
ನಮಸ್ತೆ ಬದರಿ. ನಿಮ್ಮ ಪ್ರತಿಕ್ರಿಯೆಗೆ ಮತ್ತು ಪ್ರೀತಿಗೆ ಧನ್ಯವಾದಗಳು.
Post a Comment