ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 1 November, 2010

ಸುಮ್ಮನೆ ನೋಡಿದಾಗ...೦೧

ಬೆಳಗ್ಗೆ ಎದ್ದಾಗಲೇ ಗಂಟೆ ಏಳು. ತಲೆ-ಎದೆ ಭಾರ ಭಾರ. ಶೀತವಾಗುತ್ತದೇನೋ ಅಂದುಕೊಂಡರೆ ಮೂಗು ಗಂಟಲು ಸರಿಯಾಗಿಯೇ ಇವೆ. ಮನಸ್ಸೇಕೋ ಸಹಕರಿಸುತ್ತಿಲ್ಲ. ನಿನ್ನೆ ರಾತ್ರಿಯ ನೆನಪು ಮತ್ತೆ ಮತ್ತೆ ಮೂಡಿ ಕಣ್ಣುಗಳು ಮಂಜಾಗುತ್ತಿವೆ. ಯಾಕೆ ಹಾಗಂದಳು ಅಮ್ಮ? ಅವಳಿಗೆ ನನ್ನ ಮೇಲೆ ಅದೇಕೆ ದ್ವೇಷ? ಕೆಲಸದ ಒತ್ತಡವಿದ್ದಾಗ ತಡರಾತ್ರೆಯವರೆಗೂ ಎದ್ದಿದ್ದರೆ ಅವಳಿಗೇನೋ ಆತಂಕ. ಅದೇ ನೆಪದಲ್ಲಿ ಸದಾ ಸಿಡಿಮಿಡಿ.

ಮೊನ್ನೆಮೊನ್ನೆಯಂತೂ ನಡುರಾತ್ರೆಗೊಮ್ಮೆ ಎದ್ದವಳು ನನ್ನ ಕೋಣೆಯ ದೀಪ ಕಂಡು ಪಡಸಾಲೆಯ ಕಿಟಕಿಯ ಬದಿಯಿಂದಲೇ ಕಿರುಚಾಡಿದಳಲ್ಲ, "ಎಂತದ್ದಾ ನಿನ್ನ ಅವತಾರ. ನಡುರಾತ್ರೆ ಇದೆಂಥ ಕೆಲಸ ನಿಂದು? ಬೇಡಾಂತ ಹೇಳಿದ್ದನ್ನೇ ಮಾಡುವ ನಿಂಗೆ ನಾಚಿಕೆ ಮಾನ ಮರ್ಯಾದೆ ಏನೊಂದೂ ಇಲ್ವಾ? ಏಳು, ಹೋಗಿ ಮಲಕ್ಕೋ. ಈಗಲೇ, ಈ ಕ್ಷಣವೇ. ಹ್ಙೂಂ!"

ಮರುದಿನ ಪಕ್ಕದ ಮನೆಯ ಬೊಂಬಾಯಿ ಆಂಟಿ ಕೇಳೇ ಕೇಳಿದ್ದರು, "ನಿನ್ನೆ ರಾತ್ರೆ ಏನು ಮಾಡ್ತಿದ್ದಿ? ಯಾಕೆ ಅಮ್ಮ ಮಾನ-ಮರ್ಯಾದೆ ಅಂತೆಲ್ಲ ಕೂಗಾಡ್ತಿದ್ದರು? ಅವ್ರು ಗೌರವದಿಂದ ಜೀವನ ಮಾಡಿದವ್ರು, ಆಯ್ತಾ? ಅವ್ರ ಹೆಸರಿಗೆ ಮಸಿ ಬಳೀಬೇಡ ಮಾರಾಯ್ತಿ. ಮೈಮೇಲೆ ಎಚ್ಚರ ಇರ್ಲಿ." ಇದಕ್ಕೆ ಹೇಗೆ ಉತ್ತರಿಸಬೇಕೋ ತಿಳಿಯದೆ ತಬ್ಬಿಬ್ಬಾಗಿ ಕಾಲೇಜಿಗೆ ಸಾಗಿದ್ದೆ.

(ಕಣ್ಣೀರು ತಡೆಯುತ್ತಿದೆ. ಮತ್ತೆ ಬರೀತೇನೆ...)

11 comments:

Dr.D.T.krishna Murthy. said...

ಸುಪ್ತ ದೀಪ್ತಿ;ನಿಮಗೆ ಏನು ಬರೆಯಬೇಕೋ ತಿಳಿಯುತ್ತಿಲ್ಲ,ನಮಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.ಸಮಾಧಾನ ಮಾಡಿಕೊಳ್ಳಿ .ಎಲ್ಲವೂ ಸರಿಹೋಗುತ್ತೆ.ರಾಜ್ಯೋತ್ಸವದ ಶುಭಾಶಯಗಳು.ನನ್ನ ಬ್ಲಾಗಿನ ಬರಹಕ್ಕೆ ಶತಕದ ಸಂಭ್ರಮ.ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.

sunaath said...

ಜ್ಯೋತಿ,
???????????

Badarinath Palavalli said...

ಮನಸೂ ಅಗಾಗ ನೊಂದು ಮುದುಡುತ್ತದೆ. ಸಂತಸದ ಕ್ಷಣಗಳು ನಿಮ್ಮವಾಗಲಿ. all the best :-)

ನಿಮಗೆ ರಾಜ್ಯೋತ್ಸವ ಶುಭಾಶಯಗಳು...

ಅನಂತರಾಜ್ said...

ಹದಿಹರೆಯದವರ ಮನಸಿನ ತುಮುಲವನ್ನು ಚೆನ್ನಾಗಿ ನಿರೂಪಿಸಿದ್ದೀರಿ. ಸ೦ಶಯ, ಅಪನ೦ಬಿಕೆಗಳ ಜಾಗದಲ್ಲಿ ತಾಳ್ಮೆ, ನ೦ಬಿಕೆ, ಪ್ರೀತಿ ಎ೦ಬ ಭಾವಗಳನ್ನು ಅಳವಡಿಸಿಕೊ೦ಡಲ್ಲಿ ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಳ್ಲಲು ಪ್ರಯತ್ನಿಸ ಬಹುದು.

ಅನ೦ತ್

ಸುಪ್ತದೀಪ್ತಿ suptadeepti said...

ಡಾ. ಡಿ.ಟಿ.ಕೆ. ಮೂರ್ತಿ, ಸುನಾಥ್ ಕಾಕಾ, ಬದರಿ, ಅನಂತರಾಜ್: ನಿಮ್ಮೆಲ್ಲರ ಮನತಟ್ಟಿದವಳ ಮನಸ್ಸು ಇನ್ನಷ್ಟು ಅನಾವರಣಗೊಳ್ಳಲಿದೆ. ತುಸು ಸುಧಾರಿಸಿಕೊಂಡು ಬರುತ್ತಾಳೆ, ಕಾಯುತ್ತೀರಲ್ಲ. ಪ್ರೀತಿಗೆ ಧನ್ಯವಾದಗಳು.

ಕನ್ನಡ ರಾಜ್ಯೋತ್ಸವದ ಶುಭಾಶಯಗಳು ನಿಮಗೆಲ್ಲ.

Shiv said...

ಸುಪ್ತದೀಪ್ತಿ,

ಕನ್ನಡ ರಾಜ್ಯೋತ್ಸವದ ಶುಭಾಶಯಗಳು..

ನಿಮ್ಮ ಮುಂದಿನ ಕಂತಿಗೆ ಕಾಯುತ್ತಾ..

ಶಾಂತಲಾ ಭಂಡಿ said...

Jyothi akka...

avaLanna samadhaana maaDOke estu prayatnisidru summanaagtaa illa, avalu niMta jaagavella kanneerinda odde. nela orso batte kotbittu `samadhana maadkondu nidhaanakke baa' anta hELi bandideeni.
ondsala neevE hOgi karkoMdu barOdu vaasi :-)

(DCC lab inda bareetideeni, kannada bartilla, sorry.)

ಸುಪ್ತದೀಪ್ತಿ suptadeepti said...

ಶಿವು,
ಕನ್ನಡೋತ್ಸವದ ಹಾರೈಕೆಗಳು ನಿಮಗೂ ಕೂಡಾ.
ಮುಂದಿನ ಕಂತು ಸದ್ಯದಲ್ಲೇ ಬರಲಿದೆ. ಕಾಯುವಿಕೆ ದೀರ್ಘವಿಲ್ಲ.

ಶಾಂತಲಾ,
ಅವಳ ಕಣ್ಣೀರಿಂದ ಒದ್ದೆಯಾದಲ್ಲಿ ಜಾಸ್ತಿ ಹೊತ್ತು ನಿಲ್ಲಬೇಡವೇ, ಈಗಿನ್ನೂ ಛಳಿ ಇಳಿಯುತ್ತಿರುವ ಊರಲ್ಲಿ ಬೇಗನೇ ಶೀತವಾದೀತು ನಿನಗೆ. ಅವಳನ್ನು ಸಮಾಧಾನಿಸಲು ಪ್ರಯತ್ನಿಸಿದ್ದೀ ಅಂತ ಹೇಳಿಕೊಂಡು ಕಣ್ಣೀರನ್ನು ಒರೆಸಿಕೊಳ್ಳುತ್ತಾ ಓರೆ ನಗೆ ಬೀರಿ ಇಲ್ಲಿ ನಿಂತಿದ್ದಾಳೆ. ನಿರೂಪಣೆಗೆ ಅಣಿಯಾಗಿದ್ದಾಳೆ. ನೀವೆಲ್ಲ ರೆಡೀನಾ?

ತೇಜಸ್ವಿನಿ ಹೆಗಡೆ said...

ಅಕ್ಕಾ,

ಇಲ್ಲೊಬ್ಬಳು ಅವಳ ಜೊತೆ ಕಣ್ಣೀರು ಹರಿಸೋಕೆ ತಯಾರಾಗಿದ್ದಾಳೆ. ಅವಳಲ್ಲೂ ಕಣ್ಣೀರು ಕೋಡಿ ಕಟ್ಟಿದೆ. ಕೆರೆಯ ಕೋಡಿ ಒಡೆಯಲು ಮುಹೂರ್ತವೂ ನಿಗದಿಯಾಗಿದೆ. ಅವಳ ಮನಸೂ ಸಹಕರಿಸುತ್ತಿಲ್ಲ. ಅವಳಿಗೂ ದೇಹದಲ್ಲಿ ಯಾವ ಯಾತನೆಯೂ ಆಗಿಲ್ಲ. ಶೀತವೂ ಆಗಿಲ್ಲ!

ಸುಪ್ತದೀಪ್ತಿ suptadeepti said...

ತೇಜು,
ಈ ಇವಳ ಜೊತೆ ಬೇರೆಯೊಬ್ಬರ ಕಣ್ಣೀರಿಗೂ ದಾರಿಯಾಗುತ್ತಿದೆಯೆಂದರೆ ಅವರೊಳಗೆ ಕಟ್ಕೊಂಡ ಮೋಡ ಬಿಟ್ಕೊಳ್ಳೋಕೆ ಅವಕಾಶವಾಗಿದೆ ಎಂದರ್ಥ. ಬಿಟ್ಕೊಳ್ಳಲಿ. ಹರೀಲಿ ಕೋಡಿ. ಒಳಗಿನ ಒತ್ತಡ ಹಗುರಾದಾಗ ಹೊಸ ಹಾದಿ ತೆರೆದುಕೊಳ್ಳೋದು ಪ್ರಪಂಚಧರ್ಮ ಕಣೇ. ಕಣ್ಣೀರಿಗೂ ಒಂದು ದಾರಿಯಿದೆ, ಗುರಿಯಿದೆ.

ಸೀತಾರಾಮ. ಕೆ. / SITARAM.K said...

sambhadagalu anarthadede saaguva saamaanya pari chennaagi heliddiri sannadaralli.