ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 15 July, 2010

ಪುನರ್ಜೀವ

ಎಲ್ಲಿ ಏನು ಹೇಳಬೇಕೆ ಕೃಷ್ಣ ರಾಧೆಗೆ
ಬರಿಗಾಲಿನಲ್ಲೆ ಓಡಿ ಬಂದೆ ಯಮುನೆ ತೀರಕೆ

ಸಲುಗೆ ಸ್ನೇಹ ಬೆಳೆದ ಪ್ರೀತಿ
ಬೆಸೆದ ಮನದ ರೀತಿಯು
ನಿನ್ನ ನನ್ನ ಭೇದ ಮರೆತು
ಒಂದೆ ಭಾವ ನೀತಿಯು
ಜೀವ ಮುರಳಿಯೂದಲು ಜಗವೇ ನಲಿವುದು
ನಾನೇ ಗೋಪಿಕೆ... ನೀನೆ ನನ್ನ ಗಿರಿಧರ...

ಬೇರೆ ಮಣ್ಣಿನಲ್ಲಿ ನಮ್ಮ
ಬೇರು ನೆಲೆಸಬೇಕಿದೆ
ದಾರಿ ಯಾವುದೆಂದು ಹುಡುಕಿ
ಮನೆಯ ಸೇರಬೇಕಿದೆ
ಒಲವ ತಂತಿ ಮೀಟಲು ನೆಲವೇ ಮಿಡಿವುದು
ನೀನೇ ವನಮಾಲಿ... ನಾನೇ ನಿನ್ನ ಪ್ರೇಮಿಕೆ...
(೧೦-ಜುಲೈ-೧೯೯೮)

4 comments:

Dr.D.T.K.Murthy. said...

ಕವಿತೆ ಚೆನ್ನಾಗಿದೆ.ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಪ್ರೇಮೋತ್ಕಟತೆಯ ಚೆಂದದ ಸುಮಧುರ ಪ್ರಾಸದ ಕವನ.
ಬೇರೆ ಮಣ್ಣಿನಲ್ಲಿ ಪುನರ್ಜೀವ ಹೊಂದಿ ಮನೆಸೇರಬೇಕೆಂಬ ರಾಧೆಯ ಆಶಯ ಮನಕ್ಕೆ ನೀಡುವ ಸಂದೇಶವೇ ಅದ್ಭುತ!

Thought Leadership said...

Nice poem. Easy to tune

ಸುಪ್ತದೀಪ್ತಿ suptadeepti said...

ಡಾ. ಮೂರ್ತಿ, ಸೀತಾರಾಮ್ ಸರ್, ‘ಯೋಚನಾಯಕ’- ಧನ್ಯವಾದಗಳು.

ಹನ್ನೆರಡು ವರ್ಷಗಳ ಕೆಳಗೆ, ಶ್ರೀ ಮನೋ ಮೂರ್ತಿಯವರ ಸಂಗೀತಕ್ಕೆ ಹೊಂದಿಸಿ ಸರಳ ಪ್ರೇಮಗೀತೆಯಂತೆ ಬರೆದ ಇದು ಮತ್ತೆ ಪ್ರಸ್ತುತವೆನಿಸಿತು, ಅದಕ್ಕಾಗಿ ಇಲ್ಲಿ ಹಾಕಿದೆ.

ಪುನರ್ವಂದನೆಗಳು, ನಿಮಗೆಲ್ಲ.