"ಅಳುವ ಕಂದನ ತುಟಿಯು ಹವಳಾದ ಕುಡಿ ಹಂಗ"
ಮತ್ತೆ ಅಳುವಿನ ಮಾಟ ಕುಣಿವ ಮಣಕನ ಹಾಂಗ
ಅಳದೆ ಸೊರಗದೆ ಮಲಗಿ ಚಣವೊಂದು ಚಣದಲ್ಲಿ
ನಿದಿರೆ ಜೊತೆ ಬರುವವಳು, ಕನಸ ಕಿನ್ನರಿಯು
ಆಟವಾಡಿದ ಕನಸು, ಮತ್ತೆ ಓಡಿದ ಕನಸು
ಗೆಳೆಯರೆಲ್ಲರ ಕೂಡಿ ಈಜು ಹೊಡೆದಾ ಕನಸು
ಏನೋ ಮಾಯಕದಲ್ಲಿ ಖುಷಿಯ ಮೆರವಣಿಗೆಯಲಿ
ಕಣ್ಣೊಳಗೆ ಇಳಿವವಳು ಕನಸ ಕಿನ್ನರಿಯು
ಚಂದಿರನ ಅಂಗಳದಿ ರಂಗೋಲಿ ಗೆರೆಯೆಳೆದು
ಚುಕ್ಕಿಗಳ ಕೈ ಹಿಡಿದು, ನೀಹಾರಿಕೆಯನೆಳೆದು
ಕಂಬ ಗೋಪುರದಲ್ಲಿ ಬಳ್ಳಿ ಚಪ್ಪರದೊಳಗೆ
ಅರಳುವುದ ಬರೆವವಳು ಕನಸ ಕಿನ್ನರಿಯು
ಗಾಳಿಗಾಲಿಯನೇರಿ, ಕೂದಲನು ತೂರಾಡಿ
ದಿಕ್ಕುದಿಕ್ಕನು ಮೀರಿ ಅನಂತದೊಳು ನೋಡಿ
ಮೈಮರೆವ ಅರಿವಳಿಕೆ ಆವರಿಸಿ ನಗುವವಳು
ಮುತ್ತು ಮುತ್ತನು ಹೊತ್ತ ಕನಸ ಕಿನ್ನರಿಯು
(೨೭-ಜನವರಿ-೨೦೦೯)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday, 28 January 2010
Subscribe to:
Post Comments (Atom)
6 comments:
ಕನಸ ಕಿನ್ನರಿ ಎಲ್ಲ ಮನಗಳ ಒಳಗಿಳಿದು ಎಳೆವ ನೆನಪ ಪರಿ ಚೆ೦ದ. ಭೂತ-ವರ್ತಮಾನಗಳ ಕೆಣಕಿ ಭವಿಷ್ಯಕ್ಕೆ ರ೦ಗೋಲಿ ಇಡುವ ಪರಿ ಸೊಗಸು.
ಇಂತಹ ಅದ್ಭುತ ರಮ್ಯ ಕಲ್ಪನೆಯು ಕನಸ ಕಿನ್ನರಿಗೇ ಸಾಧ್ಯ!
ತುಂಬಾ ಸುಂದರವಾದ ಕವನ.
ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
ಸೀತಾರಾಮ್ ಸರ್, ಕನಸೊಂದು ವರವಂತೆ. ನಮಗೆ ಎಷ್ಟೊಂದು ಸಲ ನಿದ್ರಾಲೋಕದ ಕನಸುಗಳು ನೆನಪೇ ಇಲ್ಲದೇ ಹೋದರೂ, ಆ ಕನಸುಗಳು ನಮ್ಮ ಸುಪ್ತ ಮನಸ್ಸಿನ "ಕಸ ಗುಡಿಸಿ ಚೊಕ್ಕಟಮಾಡುವ" ಕೆಲಸ ಪ್ರತಿರಾತ್ರಿ ಮಾಡುತ್ತಿರುತ್ತವೆ. ಅದಕ್ಕೇ, ಕನಸುಗಳಿಗೊಂದು ವ್ಯಕ್ತಿತ್ವ ಆರೋಪಿಸಿ ಕಿನ್ನರಿಯೆಂದು ಕರೆದೆ.
ಕಾಕಾ, ಕನಸುಗಳೇ ಅದ್ಭುತ. ಅವುಗಳ ಲೋಕವೇ ರಮ್ಯ. ಅಂತಹ ರೋಚಕ ಸಾಮ್ರಾಜ್ಯದ ಒಬ್ಬ ಕಿನ್ನರಿಯನ್ನು ಇಲ್ಲಿ ಹಿಡಿದಿರಿಸುವ ಪ್ರಯತ್ನ ಮಾತ್ರ ನನ್ನದಾಗಿದೆ.
ಆನಂದ್, ಕನಸ ಕಿನ್ನರಿಯನ್ನು ಅಕ್ಷರಲೋಕಕ್ಕಿಳಿಸಿದ ಪರಿ ನಿಮಗಿಷ್ಟವಾಗಿದ್ದು ಸಂತೋಷ. ಆಕೆಗೆ ಮೆಚ್ಚೆನಿಸಿದೆಯೋ ಇಲ್ಲವೋ ಗೊತ್ತಿಲ್ಲ, ಅಷ್ಟೇ!
ಸರ್, ಮತ್ತೆ ಬಾಲ್ಯಕ್ಕೆ ಮರಳಿ ಯಾನವ ಮಾಡಿ ಬಂದಂತೆ ಸಂತೋಷವಾಯ್ತು. ಬಹಳ ಚನ್ನಾಗಿದೆ ಸಾರ್...
- ಬದರಿನಾಥ ಪಲವಳ್ಳಿ
pl. visit my Kannada poems blog:
www.badari-poems.blogspot.com
ನಮಸ್ಕಾರ ಬದರಿನಾಥ್ ಪಲವಳ್ಳಿ,
ಕವನ ನಿಮಗೆ ಮೆಚ್ಚುಗೆಯಾಗಿದ್ದು ಸಂತೋಷ. ಈ ಅಕ್ಷರಲೋಕಕ್ಕೆ ಸ್ವಾಗತ. ಹೀಗೇ ಬರುತ್ತಿರಿ, ಬರೆಯುತ್ತಿರಿ.
ನಿಮ್ಮ ಬ್ಲಾಗಿಗೂ ಭೇಟಿಕೊಡುತ್ತೇನೆ.
Post a Comment