ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 8 February, 2010

ವಿನಂತಿ

ನಿನ್ನ ನೆನೆಯದೆ ದಿನಗಳಾಗಿವೆ ಮರೆತೆನೆಂದು ಅರಿಯದಿರು
ಬೆಳಗು ಮಂಜಿನ ಬೈಗು ತಂಪಿನ ಸ್ನಿಗ್ಧತೆಯಲಿ ಕಾಣುವೆ

ನಿನ್ನ ಕರೆಯದೆ ದಿನಗಳಾಗಿವೆ ಮುನಿದೆನೆಂದು ಕೊರಗದಿರು
ಹಕ್ಕಿಗೊರಳಲಿ ಮಗುವ ನಗುವಲಿ ಹೆಸರ ಮಾಟವ ಕೇಳುವೆ

ನಿನ್ನ ಕಾಡದೆ ದಿನಗಳಾಗಿವೆ ವ್ಯಸ್ತನೆಂದು ಮರುಗದಿರು
ಬಿರುಸು ಬಿಸಿಲಲಿ ಬೀಳು ಮಳೆಯಲಿ ಕಾಡುವಾಟಕೆ ಕೊಸರುವೆ

ನಿನ್ನ ಸೇರದೆ ದಿನಗಳಾಗಿವೆ ತೊರೆದೆನೆಂದು ತೊಳಲದಿರು
ಉಸಿರು ಹೊರಳಲು ನಾಡಿ ಮಿಡಿಯಲು ಏಕತೆಯನನುಭವಿಸುವೆ

ನಿನ್ನ ಬೇಡದೆ ದಿನಗಳಾಗಿವೆ ಬೆಳೆದೆನೆಂದು ಬೆಚ್ಚದಿರು
ಇಡುತ ಹೆಜ್ಜೆಯ ಹಳ್ಳ ತಿಟ್ಟಲಿ ಹೆಗಲಿನಾಸರೆ ಪಡೆಯುವೆ
(೦೬/೦೭-ಫೆಬ್ರವರಿ-೨೦೦೮)

7 comments:

ತೇಜಸ್ವಿನಿ ಹೆಗಡೆ- said...

Tumba chennagide kavana akka... ishtavaayitu.

ಸುಪ್ತದೀಪ್ತಿ suptadeepti said...

ಧನ್ಯವಾದಗಳು, ತಂಗ್ಯಮ್ಮ.

Anonymous said...

Very typical....and so real!

Yes, I certainly remembered too.

And on that note, you are the best...nobody here can match the expressions!!!

ಸುಪ್ತದೀಪ್ತಿ suptadeepti said...

ಪ್ರಿಯ DS,
ನಿನ್ನ ಪ್ರೀತಿ ಅಭಿಮಾನ ಪೂರಿತ ಹೊಗಳಿಕೆ ನನಗೆರಡು ಕೊಂಬು ಮೂಡಿಸಿದೆ. ಧನ್ಯವಾದ ಕಣೋ.

ನಿಜ, ಮರೆಯಲಾರದ್ದನ್ನು ಮರೆಯುವುದು ಹೇಗೆ? ಮಮತೆಯಿಂದ ನೆನೆಯುವುದೇ ಸುಲಭ. ಅದಷ್ಟನ್ನೇ ನಾ ಮಾಡಿದ್ದು.

ಸೀತಾರಾಮ. ಕೆ. said...

nice

tentcinema said...

ಮೇಡಂ,

ಶೈಲಿ ಆಪ್ಯಾಯಮಾನವಾಗಿದೆ.

- ಬದರಿನಾಥ ಪಲವಳ್ಳಿ

Pl. visit my Kannada Poems blog:
www.badari-poems.blogspot.com

ಸುಪ್ತದೀಪ್ತಿ suptadeepti said...

Thanks to Seetaram sir and Badarinath sir.