ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday 9 January, 2010

ಬದುಕು

ಜೆಟ್ ಸಾಗಿದ ಹಾದಿ
ಬೆಳ್ಳಿ ರೇಖೆ, ರಾಜ ಬೀದಿ
ಸದ್ದು ಗದ್ದಲವಿಲ್ಲ
ಕ್ಷಣಗಳ ಬಿಳಿ ಮೋಡ
ನೆನಪುಗಳ ಚೂರು ಪಾರು
ಪರದೆಯೊಳಗೆ ತೆರೆದ ಬಾನು
ಕಾಣದ ಅರಿಯದ ವಿಶಾಲ
ಗಾಳಿ ತೂರಿ ಹಾರಿದಾಗ
ತಣ್ಣನೆ ಬರೀ ನೀಲ
ನೆಪಗಳ ಚೀಲ

ನಾನು ಸಾಗಿದ ಹಾದಿ
ಕಲ್ಲು, ಮುಳ್ಳು, ಹೂವು, ಹಣ್ಣು
ಸದ್ದಿಗೇ ಬಿಡುವಿಲ್ಲ
ಒಂದೆರಡು ಬೆಳ್ಳಿಗೆರೆ
ಹಿನ್ನೋಟಗಳು, ಕನವರಿಕೆ
ಕಂಡಷ್ಟೇ ಸತ್ಯದ ಅರಿವು
ರೆಕ್ಕೆ ತೆರೆದ ಅಂಗಳದಲ್ಲಿ
ರಚ್ಚೆ ಹಿಡಿದು ಸುರಿದದ್ದು
ಸರಿದಾಗ ಕಂಡದ್ದು
ನೀಲಬಿಂಬ ನಿಚ್ಚಳ
(೦೩-ಎಪ್ರಿಲ್-೨೦೦೭)

9 comments:

ಗೌತಮ್ ಹೆಗಡೆ said...

oorige hogidde.blog kade nodoke aaglilla. tadavaagi happy new year akkayya:)

sunaath said...

ಬದುಕಿನ ಉತ್ತಮ ಕಾಣ್ಕೆ ಈ ಕವನದಲ್ಲಿದೆ.

ಆನಂದ said...

ಬಿಡಿ ಬಿಡಿಯಾಗಿ ಓದಿದರೂ, ಕೂಡಿ ಓದಿದರೂ, ಒಟ್ಟಾರೆ ಚೆನ್ನಾಗಿದೆ. :)

ಸೀತಾರಾಮ. ಕೆ. / SITARAM.K said...

nice poem

ಸುಪ್ತದೀಪ್ತಿ suptadeepti said...

ಗೌತಮ, ಕಾಕಾ, ಆನಂದ್, ಸೀತಾರಾಮ್- ಎಲ್ಲರಿಗೂ ಧನ್ಯವಾದಗಳು.

ಗೌತಮ್, ನಿನಗೂ ತಡವಾಗಿಯಾದರೂ ಹೊಸವರ್ಷದ ಮತ್ತು ಸಂಕ್ರಾಂತಿಯ ಶುಭಾಶಯಗಳು. ಊರಿಂದ ಎಳ್ಳು-ಬೆಲ್ಲ ತಂದ್ಯಾ ಹೇಗೆ?

ಕಾಕಾ, ಕಾಣ್ಕೆಯ ಬಗ್ಗೆ ಗೊತ್ತಿಲ್ಲ ಕಾಕಾ. ನನಗನಿಸಿದ್ದನ್ನು ಗೀಚಿದ್ದೆ, ಇಲ್ಲಿ ಹಾಕಿದೆ. ಮೆಚ್ಚಿಕೊಂಡು ಅದರಲ್ಲಿ ಕಾಣ್ಕೆ ಗುರುತಿಸಿದ್ದು ನಿಮ್ಮ ಪಕ್ವತೆ.

ಆನಂದ, ಸ್ವಾಗತ ಮತ್ತು ವಂದನೆಗಳು. ಹೀಗೇ ಬರುತ್ತಿರಿ, ಬರೆಯುತ್ತಿರಿ.

ಸೀತಾರಾಮ ಸರ್, ವಂದನೆಗಳು.

ಗೌತಮ್ ಹೆಗಡೆ said...

illa akkayya ellu bella tandilla.ondishtu belladantha nenapanna tandiddeeeni, ellina thara naane iddeeni:)saakalwa?:)

ಸುಪ್ತದೀಪ್ತಿ suptadeepti said...

ಗೌತಮ್, ಎಳ್ಳಿನ ಥರ ನೀನಾ? ಸರಿ ಮಾರಾಯ! ಬಹೂಪಯೋಗಿ ಆ ಪುಟ್ಟ ಎಳ್ಳು. ಅದರ ಗುಣಗಳನ್ನ ಪಟ್ಟಿ ಮಾಡಿದ್ರೆ ಇದೊಂದು ಆಯುರ್ವೇದ ಬ್ಲಾಗ್ ಆದೀತು. ಸೋ... ನೀನೂ ಎಳ್ಳಿನ ಥರವೇ ಬಹೂಪಯೋಗಿ ಬಹುಗುಣಿಯಾಗಿ ನೂರ್ಕಾಲ ಇರಪ್ಪ.

Prabhu said...

ಈಗ ವಾರಗಟ್ಟಲೆ ರಚ್ಚೆ ಹಿಡಿದು ಸುರಿದದ್ದು ಬಿಡುವುಕೊಟ್ಟಾಗ ನಮ್ಮನೆಯ ಅಂಗಳದಲ್ಲಿ ತೆಪ್ಪಗೆ ನಿಂತಿರುವ ಒಂದು puddleನಲ್ಲಿ ಕಂಡಿದ್ದು ನಿಚ್ಚಳ ನೀಲಬಿಂಬ! ಮತ್ತೆ ಬಂದು ಈ ಕವನವನ್ನು ಓದಿಕೊಂಡೆ. ಧನ್ಯವಾದಗಳು ಜ್ಯೋತಿಯವರೆ.

‘ನೆಪಗಳ ಚೀಲ’ವನ್ನು ಅರಿವಿಲ್ಲದೆ ‘ನೆನಪುಗಳ ಚೀಲ’ ಅಂತ ಓದಿಕೊಂಡುಬೆಟ್ಟಿದ್ದೆ...ಐದನೆ ಸಾಲಿನ ಸೆಳೆತದಿಂದಲೋ ಎನೋ!

ಪ್ರಭು

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಪ್ರಭು. ನಿಮ್ಮಾಗಮನ ಅಪರೂಪವಾಗಿದೆ.

ರಚ್ಚೆ ಹಿಡಿದು ಸುರಿದದ್ದು ಸರಿದಾಗ ಕೊಚ್ಚೆಯೆಲ್ಲ ಹರಿದು ಹೋಗಿ ಉಳಿವುದು ನಿಚ್ಚಳ ಬಿಂಬವೇ; ಬಾನಂಗಳದಲ್ಲಾಗಲಿ, ಮನದಂಗಳದಲ್ಲಾಗಲಿ! ಅದರ ಪ್ರತಿಫಲನ ಇನ್ನೂ ಸುಂದರ. ಅಲ್ಲವೆ?