ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday, 28 November, 2009

ಪುಟ್ಟ ಹಕ್ಕಿ, ಬಾ...

ಪುಟ್ಟ ಹಕ್ಕಿ, ಪುಟ್ಟ ಹಕ್ಕಿ, ಎತ್ತ ಹಾರುತಿರುವೆ?
ಅತ್ತ ಇತ್ತ ನೋಡಿಕೊಂಡು, ಮತ್ತೆ ಓಡುತಿರುವೆ?

ಗಾಳಿ ಬೀಸಿ, ಧೂಳು ಹಾಸಿ, ಕೆಮ್ಮುತಿರುವೆ, ಬಾ
ಸಿಹಿಯ ನೀರ ಬೊಗಸೆಯಲ್ಲಿ ಹಿಡಿವೆ ನಿನಗೆ, ಬಾ

ಮಳೆಯು ಬಂತು, ಛಳಿಯು ಉಂಟು, ನನ್ನ ಜೊತೆಗೆ ಬಾ
ಅಮ್ಮ ಹೊಲಿದ ಗಾದಿಯೊಳಗೆ ಬೆಚ್ಚಗಿಡುವೆ, ಬಾ

ಕಾಳು ಸಿಗದೆ, ಶಕ್ತಿ ಇರದೆ, ಬಿಕ್ಕುತಿರುವೆ, ಬಾ
ಅಪ್ಪ ತಂದ ತಿಂಡಿಯನ್ನು ಹಂಚಿ ಕೊಡುವೆ, ಬಾ

ಕತ್ತಲಾಯ್ತು, ದೀಪ ಹೋಯ್ತು, ಇಲ್ಲೆ ನಿಲ್ಲು, ಬಾ
ಅಣ್ಣ ಕೊಟ್ಟ ಗರಿಯ ಮರಿಯ ನಿನಗೆ ಮುಡಿವೆ, ಬಾ

ಬೆಳಗು ಬರಲಿ, ರವಿಯು ನಗಲಿ, ಹೊರಗೆ ಲೋಕದಲ್ಲಿ
ಅಲ್ಲಿತನಕ ಜೊತೆಯಲಿರುವ, ನನ್ನ ಕೋಣೆಯಲ್ಲಿ.
(೨೭-ನವೆಂಬರ್-೨೦೦೭)

5 comments:

ಸೀತಾರಾಮ. ಕೆ. said...

putta hakki gondu becchaneya madilu.
chennagide tamma kavana.

ದಿಲೀಪ್ ಹೆಗಡೆ said...

ಪುಟಾಣಿ ಮನಸ್ಸಿಗೆ ಖುಷಿ ಕೊಡುವ ಪುಟ್ಟ ಹಕ್ಕಿಯ ಪದ್ಯ ಚೆಂದವಾಗಿದೆ... :)

ಸುಪ್ತದೀಪ್ತಿ suptadeepti said...

ಸೀತಾರಾಮ್ ಸರ್, ಧನ್ಯವಾದಗಳು.

ದಿಲೀಪ್ ಹೆಗಡೆ, ಸ್ವಾಗತ ಮತ್ತು ವಂದನೆಗಳು. ಹೀಗೇ ಬರುತ್ತಿರಿ.

sunaath said...

ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಚಂದದ ಕವನ ಬೇಕಾದರೆ ಇದು ಇಲ್ಲಿದೆ. ನಮ್ಮ ಪಠ್ಯಪುಸ್ತಕ ಅಧಿಕಾರಿಗಳು ಕಣ್ಣು ತೆರೆದರೆ ಅವರಿಗೆ ಇದು ಕಾಣಿಸೀತು.

ಸುಪ್ತದೀಪ್ತಿ suptadeepti said...

ಕಾಕಾ, ನಿಮ್ಮ ಆಶಯಕ್ಕಾಗಿ ವಂದನೆಗಳು. ಪ್ರಾಥಮಿಕ ಶಾಲಾ ಮಕ್ಕಳು ಮಾತ್ರವೇನು, ನಮ್ಮೆಲ್ಲರೊಳಗಿನ ಪುಟ್ಟ ಪೋರತನಕ್ಕಾಗಿ ಈ ಕವನ ಅಂದುಕೊಳ್ಳಬಹುದಲ್ಲ! ಅಧಿಕಾರಿಗಳ ವಕ್ರದೃಷ್ಟಿ(!?) ಬೇಡ, ಬಿಡಿ.