ಬೆಳಕಾಗಿ ಬಾರಾ..... ಚೆನ್ನೊಲವೆ-
ಹಸುರಾಗಿ ಬಾರಾ!
ಎಳೆ ಎಳೆಯ ಹೀರುತ್ತ,
ಹೊಳೆದರಳಿ ತೂಗುತ್ತ,
ಇಳೆಗೊಂದು ನೆರಳಾಗಿ ತಳಿರಾಗುವೆ;
ಕಳೆದೆಲ್ಲ ನಿನ್ನೆಗಳ,
ಬೆಳೆದ ಹೊಂಗನಸುಗಳ,
ಮಳೆಬಿಲ್ಲ ಮಾಲೆಯನು ನಾ ತೊಡಿಸುವೆ.
ಎಲರಾಗಿ ಬಾರಾ..... ಚೇತನವೆ-
ಉಸಿರಾಗಿ ಬಾರಾ!
ಎಲೆ ಎಲೆಯ ತೀಡುತ್ತ,
ಮಲರಮದ ತೂರುತ್ತ,
ಕಲರವದ ನೆಲೆಯಾಗಿ ಹಾರಾಡುವೆ;
ಹೊಲದ ತೆನೆ ಹೊನಲುಗಳ,
ಮಲೆಯಿಳಿವ ಮೋಡಗಳ,
ಅಲೆಯಲೆಯ ಚೆಲುವನ್ನು ನಾ ತೋರುವೆ.
ಹನಿಯಾಗಿ ಬಾರಾ..... ಸಂತಸವೆ-
ಕಸುವಾಗಿ ಬಾರಾ!
ಬನ ತಣಿಸಿ ಬಾಗುತ್ತ,
ಮನ ಕುಣಿಸಿ ಹಾರುತ್ತ,
ನಿನದಿಸುವ ನಲಿವಾಗಿ ತುಳುಕಾಡುವೆ;
ಅನುಗಾಲ ಒಲುಮೆಗಳ,
ಜಿನುಗುವತಿ ಚಿಲುಮೆಗಳ,
ಇನಿದೊರೆಗೆ ಸೆಲೆಯಾಗಿ ನಾ ಸೇರುವೆ.
(೧೨-ಆಗಸ್ಟ್-೨೦೦೪ ; ೧೩-ಅಕ್ಟೋಬರ್-೨೦೦೪)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday, 8 October 2009
Subscribe to:
Post Comments (Atom)
6 comments:
nice one
ಜ್ಯೋತಿ,
ಈ ಕವನವನ್ನು ಓದುತ್ತ, ಹೃದಯ ತುಂಬಿ ಬಂದಿತು; ಮನಸ್ಸು ಮುದಗೊಂಡಿತು.
ಸೀತಾರಾಮ್, ಧನ್ಯವಾದಗಳು.
ಸುನಾಥ್ ಕಾಕಾ, ಸಣ್ಣ ವಿಷಯಕ್ಕೂ ಮುದಗೊಳುವ ನಿಮ್ಮ ಮನಸ್ಸು ಹಿಗ್ಗಿ ಹೃದಯವನ್ನು ತುಂಬುತ್ತದೆ. ನಿಮ್ಮ ಈ ಪ್ರೀತಿಗೆ ನಾನು ಋಣಿ.
jyoatakko , no comments :):)
ಕಮೆಂಟ್ಸ್ ಇಲ್ಲ ಅಂದಿದ್ದಕ್ಕೂ ಥ್ಯಾಂಕ್ಸ್ ತಮ್ಮೋ!
haha naa tumbaa sannava ansutte ninge comments kodoke. aadaru kavana khushi kottaga helko beku ansutte. :):)
Post a Comment