ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 1 October, 2009

ವಾಯುವಿಹಾರ

ಬರಹೇಳಿದ್ದ ದುಷ್ಯಂತ.
ಮರದ ಕೆಳಗೆ ಕಾದಳು,
ಕಾದೇ ಕಾದಳು ಇವಳು.
ಬೆರಳಲ್ಲಿ ಉಂಗುರ,
ಬಾನಲ್ಲಿ ಚಂದಿರ.

ರಥವಿಲ್ಲದ ಕುದುರೆಯಲ್ಲಿ
ಟಕಟಕಿಸುತ್ತ ಬಂದ ನಲ್ಲ
ಹತ್ತು- ಎಂದ.
ಹಿಂದೆ-ಮುಂದೆ ನೋಡದೆ,
ಕಣ್ವ-ಗೌತಮಿಯರ ನೆನೆಯದೆ,
ಬೆನ್ನಿಗಂಟಿದಳು,
ಕಣ್ಣು ಮುಚ್ಚಿದಳು.

ಗಾಳಿಯ ಸುಗಂಧ ಇವನದೇ.
ಕುದುರೆಯ ವೇಗ ಮನಸಿನದೇ.

ಎಚ್ಚರಾದಾಗ-
ಉಂಗುರ ಮೀನಿನೊಳಗಿತ್ತು.
ಮುದಿಕುದುರೆ ಕುಂಟುತ್ತಿತ್ತು.
ಮರದ ಒಂಟಿ ನೆರಳು
ಕಾದು ಕಾದು... ಕರಟಿತ್ತು.
ಭರತ ನಗುತ್ತಿದ್ದ.
(೧೬-ಸೆಪ್ಟೆಂಬರ್-೨೦೦೬)

6 comments:

Anonymous said...

ಎಚ್ಚರಾದಾಗ-
ಉಂಗುರ ಮೀನಿನೊಳಗಿತ್ತು.
ಮುದಿಕುದುರೆ ಕುಂಟುತ್ತಿತ್ತು.
ಮರದ ಒಂಟಿ ನೆರಳು
ಕಾದು ಕಾದು... ಕರಟಿತ್ತು.
ಭರತ ನಗುತ್ತಿದ್ದ.
beautiful expression...

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಶಮಾ.

ಸೀತಾರಾಮ. ಕೆ. said...

ಅದ್ಭುತ ವರ್ಣನೆ. ಸ್ವಲ್ಪದರಲ್ಲಿ ಎಲ್ಲಾ ಹೇಳುವ ಶಬ್ಧಗಳ ಜಾಲ ಅಮಿತಾನ೦ದ ನೀಡಿತು.

ಸುಪ್ತದೀಪ್ತಿ suptadeepti said...

ಧನ್ಯವಾದಗಳು, ಸೀತಾರಾಮ್. ನಿಮ್ಮ ಪ್ರೋತ್ಸಾಹ ನನಗೆ ಆನಂದ ನೀಡುತ್ತೆ.

ಶಾಂತಲಾ ಭಂಡಿ said...

ಜ್ಯೋತಿ ಅಕ್ಕಾ...
ಶಕುಂತಲೆಯ ಬಗ್ಗೆ ಹೊಸತೇ ರೀತಿಯ ಭಾವಗಳು. ಬಿಚ್ಚಿಟ್ಟ ರೀತಿ ಇಷ್ಟವಾಯ್ತು.

ಸುಪ್ತದೀಪ್ತಿ suptadeepti said...

ಥ್ಯಾಂಕ್ಯೂ ಮರೀ. ನಿನಗಿಷ್ಟವಾಗಿದ್ದು ಮತ್ತಷ್ಟು ಸಂತೋಷ.