ನತ್ತಿನಾಚೆ ಕೆನ್ನೆಲಿತ್ತು
ಹೊಳೆಹೊಳೆಯುವ ಮುತ್ತು
ಕೊಳ ತುಳುಕಿದ ತಿಳಿ ಕಲಕಿದ
ಅಯೋಮಯದ ಹೊತ್ತು
ನಳನಳಿಸುವ ಎಲೆ-ಕಲರವ
ಹನಿ-ಕಂಪನವಡಗಿ
ದಳವರಳಿದ ಕೆಂದಾವರೆ
ತಲೆ ಬಾಗಿಸಿ ಮಲಗಿ
ಮತ್ತೆಚ್ಚರ, ಮುತ್ತೆದ್ದಿತು
ನತ್ತಂಚಿನ ಹೊರಳು
ಬಿಕ್ಕಾಯಿತು, ಸಿಕ್ಕಾಯಿತು
ಸುಕ್ಕಾಯಿತು ಇರುಳು
ದಿನಗೆದರಿದ ಹಸಿಗೂದಲ
ಸಿಂಚನವತಿ ರಮ್ಯ
ಅಮೃತಫಲ ಕಲಶ ಸುಜಲ
ಪಾನ ಮತ್ತ ಸ್ವಾಮ್ಯ
(೧೫-ಜುಲೈ-೨೦೦೪)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Sunday, 15 March 2009
Subscribe to:
Post Comments (Atom)
8 comments:
ರಮ್ಯವಾಗಿ, ಸೂಚ್ಯವಾಗಿ ಬರೆಯುವ ಈ ಕಲೆಗೆ ಶರಣು!
ಕಾಕಾ,
ನಿಮ್ಮ ಪ್ರೀತಿಗೆ ನಾನು ಯಾವಾಗಲೂ ಶರಣು.
hey! lovely poem:) khushiyaytu odi..
ವಾಹ್ ! ಪದಗಳ ರಂಗಿನಾತವನ್ತೂ ಅತ್ಯದ್ಭುತ. "ದಳವರಳಿದ ಕೆಂದಾವರೆ
ತಲೆ ಬಾಗಿಸಿ ಮಲಗಿ" - ಸ್ಪರ್ಶ-ಸುಖಕ್ಕೆ ಅರಳುವ ಕೆಂದಾವರೆಯನ್ನು ನೆನೆಸಿಕೊಂಡೇ ನಿಶಿಯ ನಿದ್ರೆ ನಶಿಸಿಹೋಯಿತು!!!.
ಮತ್ತೆಚ್ಚರ !?, ಮತ್ತೆ ಎಚ್ಚರ , ಅಥವಾ ಮತ್ತು ಹಾಗೂ ಎಚ್ಚರ?. ಶಬ್ಧಾರ್ಥದ ಗೊಂದಲದಲ್ಲಿ ಕಳೆದುಹೋಗುವ ಧನ್ಯತೆ ಮಾತ್ರ ನನ್ನದು!.
"ಅಮೃತಫಲ ಕಲಶ ಸುಜಲ
ಪಾನ ಮತ್ತ ಸ್ವಾಮ್ಯ" - ಅಮೃತ ಕಲಶ, ಅಥವಾ ಅಮೃತಫಲ ಕಲಶ? . ಕ್ಷೀರ-ಶಿಖರಕೆ ಮನಸೋಲದಿರುವುದುಂತೆ?.
"ಪಾನ ಮತ್ತ ಸ್ವಾಮ್ಯ "ಎನ್ನುವುದರಲ್ಲಿ ನನಗೆ ತಿಳಿದಿದ್ದು - monogomy , ಏಕ-ಸಖೀ ಅಥವಾ ಏಕಪತ್ನಿ ವ್ರತ !, ಏಕೆಂದರೆ ಪಾನ-ಮತ್ತತೆಗೆ ಸ್ವಾಮ್ಯತೆಯನ್ನು ಸಂಪಾದಿಸಬೇಕೆಂದರೆ ಒಂದು ವ್ಯವಸ್ತೀಕೃತ ಸಂಬಂಧದಿಂದ ಮಾತ್ರ ಸಾದ್ಯ.
ದೀಪ್ತಿಯವರೇ, ಇದೀಗ ತಾನೇ ವಸಂತ ಕಾಲಿಡುತ್ತಿದೆ ಇಲ್ಲಿ, ವಸಂತದಲ್ಲಿ ಸಂತನಾಗಬಾರದು - ಎನ್ನುವ ರಸಿಕ ವ್ರತವನ್ನು ಪಾಲಿಸಿಕೊಂಡು ಬಂದವನು ನಾನು. ನಿಮ್ಮೊಳಗಿನ ಕವಿ-ಹೃದಯಕ್ಕೆ ಸೋತು ಹೋದೆ ನಾನು. ಮುಂದೆ ಇಂತಹ ರಸಿಕ-ಪಾರಮ್ಯವನ್ನು ಸಾರುವ ಕವನಗಳು ಸಿಂಚನವಾದರೆ ನನಗೊಮ್ಮೆ ನೆನಪಿಸಿ ದಯವಿಟ್ಟು. -D.M.Sagar
ಸಾಗರ್,
ನಿನ್ನಂಥ ರಸಿಕ ವಿಮರ್ಶಕರಿದ್ದರೆ ಯಾವ ಕವಿತೆಗೂ ಜೀವ ಬಂದೀತೇನೋ. ಪದಗಳ ನಾಡಿ ಮಿಡಿತ ಹಿಡಿಯುವ ಕಲೆ ನಿನ್ನಲ್ಲಿದೆ. ಸಾಧಿಸಿಕೋ ಅದನ್ನು.
ಶ್ರೀನಿಧಿ,
ನೀನು ಮತ್ತು ಇತರ ಕಿರಿಯರೆಲ್ಲ ಬರೆಯುವ ಕವನಗಳನ್ನು ನೋಡುವಾಗ ನನಗೆ ಖುಷಿಯಾಗತ್ತೆ. ಈಗಲೇ ಎಷ್ಟು ಚಂದವಾಗಿ ಬರೆಯುತ್ತೀರಿ. ಬರೆಯುತ್ತಲೇ ಇರಿ.
ಮ-ನೋ-ಹ-ರ
ಸ-ಮಾ-ಗ-ಮ
ವೇಣಿ,
ಏನಮ್ಮ, ಏನು ಪ್ಲಾನ್ ಹಚ್ಚಿದ್ದೀ?
Post a Comment