ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday 8 February, 2009

ಯಾತ್ರೆ


ನೆಲವ ಕೊರೆದು, ಮರವ ಕಡಿದು,
ಸೋಗೆ, ಬಿದಿರು ಒಟ್ಟಣೆ,
ಪರಮಯಾತ್ರೆಗಟ್ಟಣೆ.

ಮಂತ್ರ-ತಂತ್ರ, ಎಣ್ಣೆ-ನೀರು,
ಹೂವು, ಹಳದಿ, ಕುಂಕುಮ,
ದರ್ಭೆ, ಎಳ್ಳು ತತ್ಸಮ.

ಬರಿಯಕ್ಷತೆ, ಬುರುಡೆದೀಪ,
ಬಿರಿದ ಎದೆಯ ಕಂಗಳು,
ತಡವರಿಸುವ ಕೈಗಳು.

ಕಾಲವ್ಯಾಲ ದಿಗ್ವಿಜಯದಿ-
ತರ್ಕ, ಜ್ಞಾನ ನಗಣಿತ,
ಬಾಳಬಿಂಬ ಪರಿಮಿತ.

ಅಚ್ಚಳಿಯದು, ಮುಚ್ಚುಳಿಯದು,
ಬಂಧು ನಿನ್ನ ಬಂಧನ,
ಪಂಚ ಭೂತ ಚೇತನ.

(೧೩-ಜುಲೈ-೨೦೦೬)

4 comments:

sunaath said...

The Final Journey!

ಸುಪ್ತದೀಪ್ತಿ suptadeepti said...

ಹೌದು ಕಾಕಾ, ಇದೊಂದು ಅಂತಿಮ ಯಾತ್ರೆ. ನಾವೆಲ್ಲರೂ ತಲುಪಲೇಬೇಕಾದ ನಿಲುದಾಣ, ಆದರೆ ನಾವ್ಯಾರೂ ಕಾಣಲಾಗದ್ದು. ವಿಪರ್ಯಾಸ, ಅಲ್ಲವೆ?

Santhosh Rao said...

simply superb...

ಸುಪ್ತದೀಪ್ತಿ suptadeepti said...

ಪ್ರತಿಕ್ರಿಯೆಗೆ ಧನ್ಯವಾದಗಳು, ಸಂತೋಷ್.