ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 8 December 2008

ಮಿಂಚುಹುಳ

ಒಮ್ಮೊಮ್ಮೆ
ಸುತ್ತ ಕತ್ತಲ ನಡುವೆ
ಎಲ್ಲೋ ಹೇಗೋ
ಆ ಹುಳ ಮಿಸುಕಾಡಿ
ಕುಟುಕು ಬೆಳಕು ನೀಡಿ
ಹಾಗೇ ತಣ್ಣಗಾಗುವಾಗ
ಮತ್ತೆ ಕಾರ ಬೆಳದಿಂಗಳ
ನೆನಪು ಕಾಡುತ್ತದೆ

ಒಳ ಹೊರಗನೆಲ್ಲ
ತಣ್ಣನೆಯ ಸೋನೆ ಮಳೆ
ತೋಯಿಸಿದ್ದು
ಹಗಲಲ್ಲಿ ಕಾಣದಾದಾಗ
ಕನಸಲ್ಲೂ ಚಂದ್ರನನು
ರಾಹು ಕಾಡುತ್ತದೆ

(೦೫-ನವೆಂಬರ್-೨೦೦೮)

8 comments:

Santhosh Rao said...

chennagide :)

ಸುಪ್ತದೀಪ್ತಿ suptadeepti said...

ಸ್ವಾಗತ ಮತ್ತು ಧನ್ಯವಾದ ಸಂತೋಷ್, ಹೀಗೇ ಬರುತ್ತಿರಿ, ಬರೆಯುತ್ತಿರಿ.

Anonymous said...

ಸುಪ್ತದೀಪ್ತಿಯವರೇ,
ಮಿಂಚುಹುಳು ತುಂಬಾ ಚೆನ್ನಾಗಿದೆ ಅಕ್ಕ,ಧನ್ಯವಾದಗಳು.
PSP.

ಸುಪ್ತದೀಪ್ತಿ suptadeepti said...

PSP,
ಅಕ್ಕ ಅಂತ ಕರೆದ ಮೇಲೂ 'ಸುಪ್ತದೀಪ್ತಿಯವರೇ' ಅನ್ನುವ ಔಪಚಾರಿಕತೆ ಯಾಕೆ?

ಪ್ರತಿಕ್ರಿಯೆಗೆ ಧನ್ಯವಾದಗಳು.

ನನಗೆ ನೆನಪಿರುವಂತೆ, ನೀನು ಒಮ್ಮೆ ನನಗೊಂದು ಈ-ಮೈಲ್ ಕಳಿಸಿದ್ದೆ. ಅದು ಹೇಗೋ ಆ ಪತ್ರ, ನಿನ್ನ ಮೈಲ್ ಐ.ಡಿ.- ಎರಡೂ ಕಳೆದುಹೋಗಿದೆ. ಇನ್ನೊಂದು ಪತ್ರ ಬರೆಯುತ್ತೀಯಾ? ಪ್ಲೀಸ್.

sunaath said...

Emotions of fleeting depression are
well written. I also hope:
ತಣ್ಣಗಾದ ಮಿಣುಕು ಹುಳು
ಮತ್ತೆ ಮಿಂಚುತ್ತದೆ.
ರಾಹುಮುಕ್ತ ಚಂದ್ರ
ಮತ್ತೆ ನಗುತ್ತಾನೆ!

ಸುಪ್ತದೀಪ್ತಿ suptadeepti said...

ಧನ್ಯವಾದ ಕಾಕಾ. ನಿಮ್ಮ ಹೋಪ್ ಎಲ್ಲರಿಗೂ ಬೇಕಾಗಿರುವಂಥದ್ದು ಈಗ.

ಹಗಲು, ರಾತ್ರಿ; ಬೆಳಕು, ಕತ್ತಲು; ಆಸೆ, ನಿರಾಸೆ; ಉತ್ಸಾಹ, ಬೇಸರ.... ಎಲ್ಲವೂ ಸೈಕ್ಲಿಕಲ್ ಅಲ್ಲವೆ?

Shiv said...

ಸುಪ್ತದೀಪ್ತಿ,

ಹೇಗಿದೀರಾ?
ಮಿಂಚು ಹುಳ, ಬೆಳದಿಂಗಳು, ಸೋನೆ ಮಳೆ, ಚಂದ್ರ..
ಇಷ್ಟವಾಯ್ತು..ಇವೆಲ್ಲವನ್ನೂ ಹೆಣದಿದ್ದು.

ಬೇಗ ಬೆಳದಿಂಗಳಾಗಲಿ

ಸುಪ್ತದೀಪ್ತಿ suptadeepti said...

ನಮಸ್ಕಾರ ಶಿವ್, ಮತ್ತೆ ಸ್ವಾಗತ... ಪ್ರತಿಕ್ರಿಯೆಗೆ ಧನ್ಯವಾದಗಳು. ಎಲ್ಲಿದ್ರಿ ಇಷ್ಟು ದಿನ?

ನಿನ್ನೆಯಷ್ಟೇ (ಡಿಸೆಂಬರ್ ೧೨) ಹುಣ್ಣಿಮೆ ಆಗಿದೆಯಲ್ಲ! ಸಿಗಲಿಲ್ವೇ ಬೆಳದಿಂಗಳು!?