ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 2 October 2008

ಮುಗ್ಧ

ದೀಪಗಳು ನೆರಳುಗಳು ಹಾದಿಯಲ್ಲಿ
ಬಾಳ ಬಣ್ಣದ ಕನಸು ಕಂಗಳಲ್ಲಿ
ನಿನ್ನೆ ನಾಳೆಗಳೆಂಬ ಚಿಂತೆಯಿಲ್ಲ
ಈ ಕ್ಷಣದ ಬೆಳಕಿನಲಿ ಬಾಳಬಲ್ಲ.

ಅರಿವಿರುವುದೆಂದರೆ ಅರಿವು ಅಲ್ಲ
ಕನ್ನಡಿಯ ಬಿಂಬವದು ಅವನದಲ್ಲ
ಅಕ್ಕರೆಯ ತಿಳಿಗೊಳದಿ ನಲಿವನಲ್ಲ
ಕತ್ತಲೆಯ ಪರಿಧಿಯನು ದಾಟಬಲ್ಲ.

ಚಿಣ್ಣನಾಗಿರುವನಕ ಹಗೆಯು ಅಲ್ಲ
ಬೀದಿಬದಿ ಅರಮನೆಯ ಅರಸನಲ್ಲ
ಹಗಲ ಜಗ್ಗಾಟದಲು ನಗಲು ಬಲ್ಲ
ಇರುಳ ಕೊರೆತಗಳನ್ನು ಮರೆಯಬಲ್ಲ
(೨೧-ಮೇ-೨೦೦೭)

2 comments:

Santhosh Rao said...

ವಾಹ್ .. ಎಷ್ಟೊಂದು ಚೆನ್ನಾಗಿ ಬರೆದಿದ್ದೀರ .

ಸುಪ್ತದೀಪ್ತಿ suptadeepti said...

ಪ್ರತಿಕ್ರಿಯೆಗೆ ಧನ್ಯವಾದಗಳು, ಸಂತೋಷ್.