ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Friday, 5 September, 2008

ಶಿಕ್ಷಕ

ಭಾಗ ೧:-- ಶಿಕ್ಷಕ ಹೀಗಾದರೆ?

ಶಿಕ್ಷಕ ತಕ್ಷಕನಾದರೆ ಮನುಕುಲಕ್ಕೆ-
ಅಮೃತವುಣಿಸುವವರಾರು?
ಶಿಕ್ಷಕ ಭಕ್ಷಕನಾದರೆ ಬೆಳೆವ-
ಸಿರಿಯ ಮೊಳಕೆಗೆ ರಕ್ಷಕರಾರು?

ಶಿಕ್ಷಕ ವಂಚಕನಾದರೆ ನವಯುಗದ-
ಭವಿತವ್ಯದ ಹಿತಚಿಂತಕರಾರು?
ಶಿಕ್ಷಕ ಅಚೇತನನಾದರೆ ಭಾರತಮಾತೆಯ-
ಕೀರ್ತಿಪತಾಕೆಯ ಚೈತನ್ಯವಾರು?

ಭಾಗ ೨:-- ಶಿಕ್ಷಕ ಹೇಗಿರಬೇಕು?

ತಕ್ಷಕನಾಗಿ ಭಕ್ಷಕರನ್ನು ಎದುರಿಸಿ ನಿಲಬೇಕು,
ರಕ್ಷಕನಾಗಿ ನವಯುವಶಕ್ತಿಗೆ ಧೈರ್ಯವ ಕೊಡಬೇಕು.

ಚೇತನವಾಗಿ ಮುಗ್ಧ ಮನಸಿಗೆ ಜಾಗೃತಿ ತರಬೇಕು,
ಚಿಂತನಶೀಲ ತರುಣಗಣಕ್ಕೆ ಪ್ರಣತಿಯಾಗಬೇಕು.

ಮಮತೆ, ಕರುಣೆ, ವಾತ್ಸಲ್ಯಗಳ ಚಿಲುಮೆಯಾಗಬೇಕು,
ಭಾರತಮಾತೆಯ ಕೀರ್ತಿಪತಾಕೆಗೆ ಭದ್ರ ಬುನಾದಿಯಾಗಬೇಕು.
(ಆಗಸ್ಟ್-೧೯೯೨)

(ಬೆಂಗಳೂರಿನ ವಿಜಯಾ ಶಿಕ್ಷಕರ ತರಬೇತಿ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ನನ್ನ ಸಹಪಾಠಿಗಳ ಧೋರಣೆ, ಸುತ್ತಮುತ್ತಲ ಶಾಲೆಗಳಿಗೆ ಕಲಿಕೆ-ಪಾಠಗಳಿಗೆಂದು ಹೋಗುತ್ತಿದ್ದಾಗ ಅಲ್ಲಿನ ಶಿಕ್ಷಕರ ಧೋರಣೆ ಕಂಡು ಬೇಸರದಿಂದಲೂ ಹತ್ತಿರ ಬರುತ್ತಿದ್ದ ಶಿಕ್ಷಕರ ದಿನಾಚರಣೆಯ ಸಂದರ್ಭವೆಂತಲೂ ಗೀಚಿಕೊಂಡದ್ದು. ಈಗ ಮತ್ತೊಮ್ಮೆ, ಈ ಕವನದ ಮೂಲಕ ನಮ್ಮೆಲ್ಲಾ ಶಿಕ್ಷಕವರ್ಗಕ್ಕೆ ವಂದನೆಗಳು.)

3 comments:

sunaath said...

ಜ್ಯೋತಿಯ ಬೆಳಕನ್ನು ಮತ್ತೆ ನೋಡುತ್ತಿರುವದು ಸಂತಸ ತರುತ್ತಿದೆ.

Anonymous said...

Supthadeepthiyavare,
EshTu dina HogibiTTiri anthayidde, nimma baraha Odi matte santhosha agtha ide.
PSP

ಸುಪ್ತದೀಪ್ತಿ suptadeepti said...

ಸುನಾಥ್ ಕಾಕಾ, ಧನ್ಯವಾದಗಳು.

PSP, ನಿಮ್ಮೆಲ್ಲ ಓದುಗರನ್ನು ಬಿಟ್ಟು ಹೇಗೆ, ಎಲ್ಲಿ ಹೋಗಿರಲಿ? ಪ್ರೀತಿಗೆ ವಂದನೆಗಳು.

ಓದುಗರೇ, ಹೊಸದನ್ನು ಬರೆಯೋಕೆ ಸ್ವಲ್ಪ ಸಮಯದ ಅಡಚಣೆಯಿದೆ. ನಿಧಾನವಾಗಿಯಾದರೂ ಬರೆಯುತ್ತೇನೆ.