ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 29 August, 2013

ದರ್ಪಣ

ಏನೋ ಹುಡುಕುತ ಹೊರಟೆ
ಅವಳು ಎದುರಲಿ ಬಂದು
ತುಂಬು ಕಂಗಳ ತುಂಬ ನಿನದೆ ಬಿಂಬ
ಜಡೆಯೆಳೆದು ಕೈಹಿಡಿದು
ಆಟವಾಡಿದ ನೀನೆ
ಈಗ ಮರೆಯಾಗಿರುವೆ ಏನು ಜಂಭ?

ಸುತ್ತ ಮುತ್ತುವ ಹುಡುಗ
ಬೆನ್ಹಿಂದೆ ಬರುತಿಹನು
ನನ್ನೊಳಗೆ ಅವನಿಗೆ ಸ್ಥಾನವಿಲ್ಲ
ನಿನ್ನ ಧ್ಯಾನವ ಮನದಿ
ತುಂಬಿ ಕಳೆದಂತಿರುವೆ
ನಿನಗೇಕೊ ನನ್ನೆಡೆಗೆ ಗಮನವಿಲ್ಲ

ಅರಸಿ ಬಂದವಳನ್ನು
‘ಅರಸಿ’ ಎನ್ನದೆ ನೀನು
ಅರಗಿಣಿಯ ಅರಸುತ್ತ ಅಲೆಯುತಿರುವೆ
ನಿನ್ನ ಮೋಹನ ಮುರಳಿ
ನನ್ನುಸಿರ ನುಡಿಸಿರಲು
ಸಖ, ನಿನ್ನ ಛಾಯೆಯಲಿ ಬಾಳುತಿರುವೆ.

(೨೬-ಆಗಸ್ಟ್-೨೦೧೩)

3 comments:

ಈಶ್ವರ said...

ಆಹಾ.. ನಮ್ಮ ಹಾಡು-ನಮ್ಮ ಪಾಡೂ :)

ಚೆನ್ನಾಗಿದೆ ಅಕ್ಕಯ್ಯೋ..

ತೇಜಸ್ವಿನಿ ಹೆಗಡೆ said...

too good :)

ಸುಪ್ತದೀಪ್ತಿ suptadeepti said...

ಕಿರಣ, ತೇಜು, ಇಬ್ಬರಿಗೂ ಧನ್ಯವಾದಗಳು.

ನಮ್ಮ ಪಾಡನ್ನು ಹಾಡಾಗಿಸಿದಾಗಲೇ ಅದು ಪಾಡು ಪಟ್ಟವರ ಮನ ಮುಟ್ಟುವುದು, ಅಲ್ವಾ?