ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Tuesday 18 October, 2011

ಎರಡು ಹನಿ-ಮಿನಿ

ಬಿಂಬ


ಅಗಾಧ ಕತ್ತಲಿನೊಳಗೆ ಒಬ್ಬಳೇ ಕೂತಿದ್ದೇನೆ.
ಬೆಂಕಿಕಡ್ಡಿ ಗೀರಿದ ಹೊಗೆ ವಾಸನೆ.
‘ಯಾರು?’ ಉತ್ತರವಿಲ್ಲ.
ಪಿಶಾಚಿಗಳು ಬಂದು ಹೋದವು.
ಅನಂತ ಮೌನದೊಳಗೆ ಒಬ್ಬಳೇ ಕೂತಿದ್ದೇನೆ.
ನನ್ನೆಲ್ಲ ನೋವಿನ ಮೊತ್ತ ನನ್ನೊಳಗೆ ಹುತ್ತವಾಗುತ್ತಿದೆ.
ನನ್ನನ್ನೇ ಕಳೆದುಕೊಂಡಿದ್ದೇನೆ, ಹುಡುಕಲಾರದಲ್ಲಿ.

******
(೨೩-ಸೆಪ್ಟೆಂಬರ್-೨೦೧೧)
****** ******

ನಾಳೆ


ಅದೊಂದು ಹುಣ್ಣಿಮೆ ಹಬ್ಬದ ದಿನ. ಹೆತ್ತವರೊಡನೆ ಕಿತ್ತಾಡಿ ಮನೆಯಿಂದ ಹೊರಬಂದಿದ್ದೆ. ಮತ್ತದೆಷ್ಟು ಹುಣ್ಣಿಮೆಗಳೂ ಅಮಾವಾಸ್ಯೆಗಳೂ ಕಾಲನುರುಳಿನೊಳಗೆ ಕಳೆದೇಹೋದವು. ಭೀಮನೂ ಸಿಕ್ಕಿಲ್ಲ, ಸೋಮನೂ ದಕ್ಕಿಲ್ಲ. ಕಾಮನೊಡನೆ ಕಾದಾಟವೇ ಬದುಕಾದವಳಿಗೆ ದಿಕ್ಕಾದರೂ ಇದೆಯೆ? ನಾಳೆ ಯಾಕಾಗುತ್ತೊ?
******
(೧೨-ಅಕ್ಟೋಬರ್-೨೦೧೧)
****** ******

6 comments:

Dr.D.T.Krishna Murthy. said...

ಎರಡೂ ಹನಿಗಳು ಚೆಂದವಿವೆ.ನನ್ನ ಬ್ಲಾಗಿಗೂ ಬನ್ನಿ.ನಮಸ್ಕಾರ.

ಈಶ್ವರ said...

ನಾಳೆ ತುಂಬಾ ಚೆನ್ನಾಗಿದೆ.. ಅರ್ಥವಾಯಿತು !!

ನನ್ನ ಬ್ಲಾಗುಗಳಿಗೂ ಒಮ್ಮೆ ಬನ್ನಿ :)

ಸೀತಾರಾಮ. ಕೆ. / SITARAM.K said...

nice

Badarinath Palavalli said...

ಮೊದಲ ಹನಿಯಲ್ಲಿ ಅಗಾಧ ನೋವಿನ ಛಾಯೆ ಇದೆ! ಯಾಕಿಷ್ಟು ವೇದನೆಯ ಕವನ ಅಕ್ಕಾ?

ಎರಡನೆ ಹನಿಯು ನಾಳೆ ಯಾಕಾಗುತ್ತೋ? ಅನ್ನುವಲ್ಲೇ ಕಳೆದುಕೊಂಡ ಮನಸ್ಸಂತೋಷದ ಕಥನವಿದೆ.

ಒಟ್ಟಾರೆಯಾಗಿ ನಿಮ್ಮ ಕಾವ್ಯವು ನಮ್ಮನ್ನು ಆಪ್ತವಾಗಿಸುತ್ತವೆ.

ಮೌನರಾಗ said...

ವೆರಿ ನೈಸ್.....ಚಂದದ ಹನಿಗಳು...

sunaath said...

ಅಂತರ್ಮುಖಿಯಾದ ಭಾವಜೀವಿಯ ಭಾವನೆಗಳನ್ನು ಹನಿಗಳು ಸರಿಯಾಗಿ ಪ್ರತಿಬಿಂಬಿಸಿವೆ!