ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 27 December, 2009

ನೀನಿಲ್ಲದಿರುವಾಗ...

ದಿಂಬಿನ ಹತ್ತಿಯ ಎಳೆಯೆಳೆಗಳಿಗೆ
ನಿನ್ನಯ ಕತ್ತಿನ ಕಂಪು
ಹೊದಿಕೆಯ ಮಡಿಕೆಯ ಪದರಗಳೊಳಗೆ
ನಿನ್ನಯ ತೋಳಿನ ತಂಪು
ಹಾಸಿನ ಮೆತ್ತೆಯ ಸುರುಳಿಗಳೊಳಗೆ
ನಿನ್ನಯ ದೇಹದ ಬಿಸುಪು
ಮಂಚದ ಅಂಚಿನ ಚಿತ್ತರಗಳಿಗೆ
ನಿನ್ನಯ ಕೆನ್ನೆಯ ನುಣುಪು

ಹೊರಳುವ ಉರುಳುವ ಉಸಿರಿನ ಸುತ್ತ
ನಿನ್ನಯ ನೆನಪಿನ ಕುಸುರು
ಅರಳುವ ಬೆಳಗಿನ ಕಿರಣದ ಸುತ್ತ
ನಿನ್ನಯ ನೇಹದ ಹೆಸರು
ನಾಳೆಯ ನೆವನದ ಕನಸಿನ ಸುತ್ತ
ನಮ್ಮಯ ಪ್ರೇಮದ ಬಸಿರು
(೨೯-ಮೇ-೨೦೦೮)

4 comments:

ಸೀತಾರಾಮ. ಕೆ. said...

ಅದ್ಭುತ ಕಲ್ಪನೆಯ ಕಾವ್ಯ...
ಮ೦ಚವೊ೦ದರ ಅಲ೦ಕಾರವನ್ನ -ರಸಮಯವಾಗಿ ಚಿತ್ರಿಸಿ ಪ್ರೇಮಿಯ ನೆನೆಹಿನ ಗುರುತನ್ನಾಗಿಸುವ ತಮ್ಮ ಪರಿ ಷ್ಲಾಘನೀಯ. ಶಬ್ದ ಜೋಡಣೆ ತು೦ಬು ಮುದ ನೀಡುತ್ತಿವೆ. ತಮ್ಮ ಬರಹ ಹೀಗೆ ಬರುತ್ತಿರಲಿ.

ಗೌತಮ್ ಹೆಗಡೆ said...

akkayya nice:)

ಸುಪ್ತದೀಪ್ತಿ suptadeepti said...

ನಮಸ್ಕಾರ ಸೀತಾರಾಮ್.
ನನ್ನ ಇತ್ತೀಚಿನ ಬರವಣಿಗೆಯಲ್ಲಿ ರಮ್ಯಕಾವ್ಯ ಸ್ವಲ್ಪ ಹಿಂದೆ ಬಿದ್ದಿತ್ತೆಂದು ಇದನ್ನು ಬರೆದೆ. ಓದುಗರಿಗೆ ಮುದ ಕೊಟ್ಟರೆ ಅದೇ ಸಾರ್ಥಕ್ಯ. ನಿಮಗೆ ಧನ್ಯವಾದಗಳು.

ಸುಪ್ತದೀಪ್ತಿ suptadeepti said...

ಗೌತಮ್, ನಿನ್ನ ಪ್ರೀತಿಗೆ ಅಭಿಮಾನಕ್ಕೆ ಥ್ಯಾಂಕ್ಸ್ ಮರೀ.