ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday, 7 November, 2009

ಕವಳ

ಬುದ್ಧಿ ಮಲಗಿದ್ದ ಹೊತ್ತು
ಮನಸಿಗೆಚ್ಚರ
ರಸಪೂರಿ ತೋಟದಲಿ
ಪೂರ್ವಜನ ಅವತಾರ
ಅಲ್ಲಿಂದಿಲ್ಲಿ ಹಾರಿ
ಜಾರಿ, ತೂರಿ
ಎಲ್ಲ ಎಲ್ಲೆಗಳನ್ನು
ಎಗ್ಗಿಲ್ಲದೆ ಮೀರಿ
ಮುನ್ನುಗ್ಗಿ ಜಗ್ಗಿ
ಏರಿಬಂದಿತ್ತು

ಪೂರ್ಣ ತೃಪ್ತಿಯಿಲ್ಲ
ದಣಿವಾದರೂ ತಣಿವಿಲ್ಲ
ತಂಬುಲಕೆ ರಂಗಿಲ್ಲ
ಅದೇ ಮರ ಅದೇ ಹಣ್ಣು

(೦೭-ನವೆಂಬರ್-೨೦೦೮)

2 comments:

sunaath said...

ಜ್ಯೋತಿ,
ಪೂರ್ವಜನ ದರ್ಶನದಿಂದಾಗಿ ಮಧುರವಾದ ಕಾವ್ಯಫಲ ಲಭಿಸಿತು. ಧನ್ಯವಾದಗಳು.

ಸುಪ್ತದೀಪ್ತಿ suptadeepti said...

ಕಾಕಾ, ಪೂರ್ವಜನ ಚಲನ-ವಲನ ಗಮನಿಸಿದರೆ ಎಷ್ಟೊಂದು ಕವನಗಳಿಗೆ ವಸ್ತುವಾದೀತು. ನಮ್ಮ ತೋಟವನ್ನವರು ಹಾಳುಗೆಡವುತ್ತಿಲ್ಲವಾದರೆ ಅವರನ್ನು ನೋಡುವುದೇ ಮೋಜು.

ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.