ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Monday, 26 October, 2009

ಜೀವನ್ಮುಕ್ತ

ಬೆಳಕಿದೆ ಹೊರಗೆ, ಕತ್ತಲು ಒಳಗೆ,
ಹಿಡಿಯುವ ಕಿರಣಕೆ ಕನ್ನಡಿ;
ಬೀರಲಿ ಹೊನಲು, ಜಾರಲಿ ಅಮಲು,
ಪಡೆಯುವ ಜಾಗೃತಿ ಮುನ್ನುಡಿ.

ದೀಪದ ಒಳಗೆ, ಬತ್ತಿಯ ಹೊರಗೆ,
ನಡುವಿನ ಗಾಳಿಯ ತೆರದಿ;
ಬೇಯುವ ಜೀವ, ತೇಯುವ ಭಾವ,
ನಡುಗುತ ಉಳಿಯದು ಜಗದಿ.

ನಾನು ಎನ್ನುವ, ನನ್ನದು ಎನ್ನುವ,
ಹಂಬಲ ಮೀರಿದ ಮನುಜ;
ಎಣ್ಣೆಯ, ಬತ್ತಿಯ, ಗಾಳಿಯ ರೀತಿ,
ತುಂಬಿದ ಜ್ಞಾನದ ಕಣಜ.
(೩-ನವೆಂಬರ್-೨೦೦೬)

7 comments:

sunaath said...

"ದೀಪದ ಒಳಗೆ, ಬತ್ತಿಯ ಹೊರಗೆ,
ನಡುವಿನ ಗಾಳಿಯ ತೆರದಿ;"
ಇಂತಹ ಸುಂದರ ರೂಪಕ ನಿನಗೆ ಹೊಳೆದದ್ದಾದರೂ ಹೇಗೆ, ಜ್ಯೋತಿ?

ಜೀವನ್ಮುಕ್ತನಾಗುತ್ತಿರುವ ಸಾಧಕನ ಸ್ಥಿತಿಯನ್ನು ನೀನು ಊಹಿಸಿದ ಪರಿಯನ್ನು ಹಾಗೂ ಅದನ್ನು ಕಾವ್ಯರೂಪಕ್ಕೆ ತಂದ ಬಗೆಯನ್ನು ನೋಡಿ ನಾನು ಬೆರಗಾದೆ.

ಸೀತಾರಾಮ. ಕೆ. said...

tumbaa chennada bhaavaabhivyakthi

ಸುಪ್ತದೀಪ್ತಿ suptadeepti said...

ಕಾಕಾ,
ಈ ಸಾಲು ಹೇಗೆ ಹೊಳೆಯಿತೋ ನನಗಂತೂ ತಿಳಿಯದು. ಅದ್ಯಾವುದೋ ಮಂಪರಿನಲ್ಲಿ ಇದನ್ನು ಬರೆದಂತೆ ಭಾಸವಾಗಿತ್ತು, ಮುಗಿಸಿದಾಗ. ನಿಮ್ಮ ಮೆಚ್ಚುಗೆಗೆ ವಂದನೆಗಳು ಮಾತ್ರ ಎಚ್ಚರದಲ್ಲಿಯೇ ಸಲ್ಲುತ್ತಿವೆ.


ಸೀತಾರಾಮ ಸರ್,
ನಿಮಗಿಷ್ಟವಾಗಿದ್ದರ ಅಭಿವ್ಯಕ್ತಿಗೂ ಧನ್ಯವಾದಗಳು.

ಗೌತಮ್ ಹೆಗಡೆ said...

akkyya:):):):):):)

ಸುಪ್ತದೀಪ್ತಿ suptadeepti said...

ತಮ್ಮಾ,
ಏನೋ ಅದು :):):):):):) ಅಂದ್ರೆ?

ಗೌತಮ್ ಹೆಗಡೆ said...

:):):):):):):) andre sikapatte khushi aaytu kavana oadi anta. en akkayya neenu tammana khushinu artha madkolalla:)

ಸುಪ್ತದೀಪ್ತಿ suptadeepti said...

ನಾನು ಯಾವ್ದೇ code language ಅಥವಾ sign language ಕಲ್ತಿಲ್ಲ ಗೌತಮಯ್ಯ!