ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Saturday, 25 July 2009

ಮನೋಹಯಕೆ ಮೂಗುದಾರ

ಮನಸ್ಸು ಪತಂಗ
ಮನಸ್ಸು ಮರ್ಕಟ
ಮನಸ್ಸು ಕುದುರೆ
.... .... .... ....
ಇನ್ನೂ ಏನೇನೋ ಆಗಿರುವ
ಆಗುತ್ತಿರುವ ಈ ಮನವನ್ನು
ಹಿಡಿದೆಳೆದು
ಕಾಲುಕಟ್ಟಿ, ಅಡ್ಡಹಾಕಿ
ಮೂಗು ಚುಚ್ಚಿ, ದಾರ ಪೋಣಿಸಿ
ಗೊರಸಿಗೆ ಲಾಳ ಹೊಡೆದು
ಬೆನ್ನಿಗೆ ಜೀನು ಬಿಗಿದು
ಕಣ್ಣ ಬದಿಗೆ ಪಟ್ಟಿ ಏರಿಸಿ
ಕಡಿವಾಣ ಹಾಕಿ, ಚಾಟಿ ಹಿಡಿದು
ಸವಾರಿ ಹೊರಟರೆ
ಚೇತನ ಸರದಾರ;
ಇಲ್ಲದಿರೆ ನಿಸ್ಸಾರ.
(೩೧-ಆಗಸ್ಟ್-೨೦೦೬)

2 comments:

Sushrutha Dodderi said...

ಅಕ್ಸ್,

’ಮನೋಹಯ’ -ಶಬ್ದಪ್ರಯೋಗ ಸಖತ್ ಇಷ್ಟ ಆಯ್ತು. ಮತ್ತೆ, ನಮ್ಮನೆ ದನಕ್ಕೆ ಮೂಗುದಾರ ಪೋಣಿಸ್ತಿದ್ದದ್ದು ನೆನಪಾಯ್ತು. ಮನಸ್ಸಿಗೆ ಕಡಿವಾಣ ಹಾಕೋದು ನಾನಿನ್ನು ಯಾವಾಗ ಕಲೀತೀನೋ ಅಂತ ಯೋಚನೇನೂ ಆಯ್ತು.

ಸುಪ್ತದೀಪ್ತಿ suptadeepti said...

ತಮ್ಸ್, ಥ್ಯಾಂಕ್ಸ್.

ನಾನೂ ಇನ್ನೂ ಕಲಿತಿಲ್ಲ ಕಣೋ, ಅದನ್ನೇ ಜ್ಞಾಪಿಸಿಕೊಂಡೇ ಇದನ್ನು ಬರ್ದೆ. ಅಟ್ ಲೀಸ್ಟ್ ಹೇಗ್ಹೇಗೆಲ್ಲ ಬಗ್ಗಿಸಬೇಕು ಮನಸ್ಸನ್ನ ಅನ್ನೋ ಐಡಿಯಾ ಇದೆ. ಅದನ್ನ ಕಾರ್ಯರೂಪಕ್ಕೆ ತರೋದ್ರಲ್ಲೇ ಇರೋದು ತಾಪತ್ರಯ! ಗುಡ್ ಲಕ್ಸ್.