ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday 26 March, 2009

ಯುಗಾದಿ

ಓದುಗರೆಲ್ಲರಿಗೂ ಚಾಂದ್ರ ಯುಗಾದಿಯ ಶುಭ ಹಾರೈಕೆಗಳು.
ಹೊಸ ವರುಷ ಹೊಸತನದ ಹುರುಪಿನೊಡನೆ ಹೊಸ ಚೇತನವನ್ನೂ ತರಲಿ.


ಮತ್ತೊಮ್ಮೆ ಹೊಸ ವರುಷ ಮದನ ಸಖ ಜೊತೆಯಾಗಿ

ಮತ್ತೆ ಹೊಸ ಹೊಸ ಹರುಷ ಬುವಿಯೊಲುಮೆಗೊಲವಾಗಿ

ಚೈತ್ರ ನಡೆ ಚಿತ್ತಾರ ಕಂಡ ಕಂಡೆಡೆಯೆಲ್ಲ

ವಸಂತ ನುಡಿ ಬಿತ್ತರ ಕೇಳಿದಿಂಚರವೆಲ್ಲ

ಮುಗುಳು ಅರಳುಗಳೊಳಗೆ ಮುಗ್ಧ ಮಗುವಿನ ಕೇಕೆ

ಮುಗಿಯದಾರಂಭಕ್ಕೆ ಮುನ್ನುಡಿಯ ಹರಕೆ

ಅರುಣ-ನಿಶೆಯರ ಸರಸ ವರ್ಣ ಮೇಳದ ರಾಗ

ಕಿರಣ-ಕತ್ತಲಿನಾಟ ಜೀವಲೋಕದ ಭಾಗ

ನಗುವು ಅಳುವಿನ ನಂಟ ಬೆಳಕು ಭೀತಿಯ ಬಂಟ

ನಗುವಿನಳುವಿನ ಬಾಳು ತುಂಬು ಸಂಭ್ರಮದೂಟ

ಹರಕೆ ಹಾರೈಕೆಗಳು ನಿಮ್ಮ-ನಮ್ಮೆಲ್ಲರಿಗೆ

ಹಸುರು ಹಸನಾಗಿರಲಿ ಈ ಧರಣಿಯೊಳಗೆ

(೨೬- ಮಾರ್ಚ್-೨೦೦೧)

10 comments:

sunaath said...

ಜ್ಯೋತಿ,
ನಿನ್ನ ಕಾವ್ಯರೂಪದ ಹಾರೈಕೆಗಾಗಿ ಧನ್ಯವಾದಗಳು. ನಿನಗೆ ಹಾಗೂ
ನಿನ್ನ ಮನೆಮಂದಿಗೆಲ್ಲ ನನ್ನ ಹಾರ್ದಿಕ ಶುಭಾಶಯಗಳು. ಯುಗಾದಿಯು ನಿಮಗೆಲ್ಲರಿಗೂ ಒಳಿತನ್ನು ತರಲಿ.

Anonymous said...

ಜ್ಯೋತಿ, ವಿರೋಧಿಯನ್ನು ಸುಂದರ ಕವನದಿಂದ ಸ್ವಾಗತಿಸಿದ್ದೀಯ. ನಿಮ್ಮೆಲ್ಲರಿಗೂ ಯುಗಾದಿಯ ಶುಭಾಶಯಗಳು

ಅರುಣ X ನಿಶೆ
ಕಿರಣ X ಕತ್ತಲು
ನಗು X ಅಳು
ಬೆಳಕು X ಭೀತಿ
ಕವಿತೆಯಲ್ಲೇ ಬೇವು X ಬೆಲ್ಲದ ಹಬ್ಬವಾಗಿದೆ.

Ittigecement said...

ಜ್ಯೋತಿಯವರೆ..

ನಿಮಗೂ ಸಹ "ಯುಗಾದಿಯ" ಶುಭಾಶಯಗಳು...

ವಿರೋಧಿನಾಮ ಸಂವತ್ಸರವು ಸುಖ ಶಾಂತಿ ಸಮ್ರುದ್ಧಿಯನ್ನು ತರಲಿ...

ಸುಂದರ ಕವನಕ್ಕೆ ಅಭಿನಂದನೆಗಳು..

ಸುಪ್ತದೀಪ್ತಿ suptadeepti said...

ಸುನಾಥ್ ಕಾಕಾ, ವೇಣಿ, ಪ್ರಕಾಶಣ್ಣ,
ಎಲ್ಲರಿಗೂ ಧನ್ಯವಾದಗಳು. ಮತ್ತೊಮ್ಮೆ ಶುಭಾಶಯಗಳು.

Anonymous said...

ಜ್ಯೋತಿ ಅಕ್ಕ,
ಚಂದದ ಕವನದಿಂದ ಚಂದದ ಹಾರೈಕೆ, ನಿಮಗೂ ಮತ್ತು ನಿಮ್ಮ ಮನೆಯವರಿಗೆಲ್ಲ ಯುಗಾದಿಯ ಶುಭಾಷಯಗಳು.
ಪಿ ಎಸ್ ಪಿ.

ಸುಪ್ತದೀಪ್ತಿ suptadeepti said...

ಪಿ.ಎಸ್.ಪಿ.,
ನಿನಗೂ ನಿನ್ನ ಮನೆಯವರೆಲ್ಲರಿಗೂ ಹೊಸ ಊರಿನಲ್ಲಿ ಹೊಸ ಪರಿಸರದಲ್ಲಿ ಬಂದಿರುವ ಹೊಸ ವರ್ಷಕ್ಕೆ ಹಾರೈಕೆಗಳು.

ಶಾಂತಲಾ ಭಂಡಿ (ಸನ್ನಿಧಿ) said...

ಜ್ಯೋತಿ ಅಕ್ಕಾ...

ಚೆಂದದ ಕವನ ಕೊಟ್ಟಿದ್ದಲ್ಲದೇ ಚೆಂದದ ಶುಭಾಶಯ ಕೋರಿದ ನಿಮಗೆ ಧನ್ಯವಾದಗಳು, ಮತ್ತು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು.

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಶಾಂತಲಾ. ಮತ್ತೊಮ್ಮೆ ನಿನಗೂ ನಿನ್ನ ಮನೆಯವರೆಲ್ಲರಿಗೂ ಶುಭಾಶಯಗಳು.

Anonymous said...

I can't comment on this, as I am still in the "hang-over" of the previous poem. That was like a kick, still can't come out of it.

D.M.Sagar

ಸುಪ್ತದೀಪ್ತಿ suptadeepti said...

ಸಾಗರ್,
ಈ ರೀತಿಯ hang-over ಒಳ್ಳೇದೇ.

ಲೇಟೆಸ್ಟ್ ಕವನ (ಆ-ಕೃತಿ) ನೋಡಿಲ್ಲವೆ? ಓದಿಲ್ಲವೆ? ಅಥವಾ ಅದು ನಿನ್ನನ್ನು ತಟ್ಟಿಲ್ಲವೆ? ಅದಕ್ಕೆ ನಿನ್ನ ಪ್ರತಿಕ್ರಿಯೆ ನಿರೀಕ್ಷಿಸಿದ್ದೆ, ಇಲ್ಲಿ ಬರೆದಿದ್ದೀಯಲ್ಲ!