ಕತ್ತು ಉಳುಕಿದ ಹೊತ್ತು
ಕೊಂಕಿಸಿ ನೋಡಿತ್ತು
ಸುಂದರ ಗೊಂಬೆ
`ಆಹ್, ರಂಭೆ'
ಮನ ತೊದಲಿತ್ತು.
ಮನೆ ಮರೆತಿತ್ತು.
ಬಂದವನ ಹಿಂದೆ
ತೂಗಿ ನಿಂತಳು
ಹಾಗೇ ಸಾಗಿ ಮುಂದೆ
ಹೆಜ್ಜೆ ಇಟ್ಟಳು
ಏಳು, ಏಳೇ ಏಳು
ಮುಂದೆಲ್ಲಾ ಮರುಳು
ಕತ್ತ ನೋವು ಸರಿದಿತ್ತು
ಮೆತ್ತೆಯಲ್ಲಿ ಒರಗಿತ್ತು.
(೩೧-ಜನವರಿ-೨೦೦೮)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Saturday, 21 March 2009
Subscribe to:
Post Comments (Atom)
4 comments:
ಕತ್ತು ಉಳಕೋದರಿಂದ ಎಷ್ಟೆಲ್ಲಾ advantages ಇವೆ! ನನ್ನ ಕತ್ತೂ ಉಳಕಬಾರದೆ? ಏನು ಉಳುಕಿದರೇನು, ಇಂತಹ ಸುಂದರವಾದ ಭಾವನೆ, meter ನನ್ನಿಂದ ಹೊರಬರಲು ಸಾಧ್ಯವಿರಲಿಲ್ಲ.
ಅಭಿನಂದನೆಗಳು, ಜ್ಯೋತಿ.
ಕಾಕಾ,
ಸುಂದರ ಗೊಂಬೆಗೆ ಕತ್ತು ಉಳುಕಿದರಷ್ಟೇ advantages. ಎಲ್ಲರಿಗೂ ಅಂಥ ಅವಕಾಶ ಸಿಗಲಾರದು (ಉಳಿದವರೆಲ್ಲ ಕತ್ತು ಉಳುಕಿದೆಯೆಂದು ಕೊಂಕಿಸಿ ನೋಡಿದರೆ 'ಪಾದುಕಾ ಪೂಜೆ' ದೊರೆತೀತೇನೋ!).
ನಿಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ನನ್ನ ವಂದನೆಗಳು ಮಾತ್ರ ಗ್ಯಾರಂಟಿ.
ಜ್ಯೋತಿ ಅಕ್ಕ,
ಕತ್ತು ಉಳುಕಿದಾಗ ಈ ಕವನ ನೆನಪಿಸಿಕೊಳ್ಳುವೆ. ನೋವಿನ ಕಡೆ ಗಮನಹರಿಯುವುದೇ ಇಲ್ಲ ಅನಿಸುತ್ತೆ,ತುಂಬಾ ಥ್ಯಾಂಕ್ಸ್.
ಪಿ ಎಸ್ ಪಿ.
ಪಿ.ಎಸ್.ಪಿ.,
ಒಂದು ಪುಟ್ಟ ಕವಿತೆಗೆ ಆ ಶಕ್ತಿಯಿದ್ದಿದ್ದರೆ ಎಷ್ಟೊಂದು ಫಿಸಿಯೋ ಥೆರಪಿಸ್ಟ್, ಮಸಾಜ್ ಥೆರಪಿಸ್ಟ್, ವೈದ್ಯರು-ಎಲ್ಲ ಗಂಟುಮೂಟೆ ಕಟ್ಟಬೇಕಾಗಿ ಬಂದು ನನ್ನ ಮೇಲೆ ವ್ಯಾಜ್ಯ ಹೂಡಿದರೆ ಏನು ಗತಿ?
ನಿನ್ನ ಥ್ಯಾಂಕ್ಸ್ ಪ್ರೀತಿಯಿಂದಲೇ ಸ್ವೀಕೃತವಾಗಿದೆ ಕಣೇ.
Post a Comment