ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Thursday, 1 January, 2009

ಶರದ ಹೇಮಂತ

ಹಾಡು ಕೇಳಿ...

ಸ್ವಾತಿಯ ಮಳೆಯು ಇಳಿದಿದೆ ನೋಡು
ಹಳೆಯೊಲವಿಗೆ ಹೊಸ ಹೆಪ್ಪಿಡಲು,
ಎದೆಗಡಲಲಿ ಹನಿ ಹೊಳೆದಿದೆ ಇಂದು
ಚಿಪ್ಪಲಿ ಮುತ್ತನು ಕಾಪಿಡಲು.

ಅನುರಣನದ ದನಿ ಮೊಳಗಲು ಮನದಲಿ
ನಾದದ ಮೋದವು ರಂಜಿಸಿತು,
ಚಿಮ್ಮಿದ ತುಂತುರು ಭಿತ್ತಿಯ ಸುತ್ತಲು
ರಾಗದ ಪಲುಕೇ ರಾಜಿಸಿತು.

ನಿನ್ನಯ ಒಲವನು ಸಾರಿದ ಶರದ
ಹೇಮಂತನಲಿದೆ ಗೆಲುವೆಂದ,
ಹೊನ್ನಿನ ರಥದಲಿ ಸಾರಥಿಯಾಗುವ
ಅರಮನೆಗೊಯ್ಯುವ ನಲವಿಂದ.

ಮುತ್ತಿನ ಮತ್ತಿಗೆ ಕಡಲಿನ ಹೊತ್ತಗೆ
ಪುಟ ಪುಟ ತೆರೆವುದು ನಳನಳಿಸಿ,
ಸನ್ನಿಧಿ ಸಾರ್ಥವ ಪಡೆಯಲು ಕಾದಿದೆ
ಕಾಲವೆ ಕಂಪಿಸಿ, ಸಂಭ್ರಮಿಸಿ.

2 comments:

sunaath said...

ಭಾವ ಹಾಗೂ ರಾಗದಿಂದ ಸಮೃದ್ಧವಾದ ಸುಂದರ ಗೀತೆ,ನಿನ್ನ ಎಲ್ಲಾ ಗೀತೆಗಳಂತೆ. ಹೊಸ ವರ್ಷದ ಹೊಸ ಬೆಳಗಿನಂತೆ ಮನಕ್ಕೆ ಮುದ ನೀಡುತ್ತದೆ.

ಸುಪ್ತದೀಪ್ತಿ suptadeepti said...

ಪದೇ ಪದೇ ಅದೇ ಪದಗಳನ್ನು ನಾನು ಹಾಡಬೇಕಾಗಿದೆ ಕಾಕಾ,
"ನಿಮಗೆ ಧನ್ಯವಾದಗಳು".