ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday, 20 July 2008

ಹೊಸ ಬಾಳು

(ಮನೋ ಮೂರ್ತಿಯವರ ಸಂಗೀತ ನಿರ್ದೇಶನದ "ಭಾವ ಮಾಲಿಕಾ" ಧ್ವನಿಸುರುಳಿಗಾಗಿ ಪದ ಜೋಡಣೆ.
ಹಾಡಿದವರು: ಕೆ.ಎಸ್. ಸುರೇಖಾ.)

ನಂದನದಂತಿದೆ ಈ ಮನೆ ಸ್ವರ್ಗ ಸುಳ್ಳಲ್ಲ
ಸುಂದರವು ನಿನ್ನಿಂದ ನೋಟ ಎಲ್ಲ
ಬಾನಿಗೆ ಚಂದ್ರನ ಚಂದ್ರಿಕೆ ಬಾಳಿಗೆ ಪ್ರೇಮದ ಮುದ್ರಿಕೆ
ನಲ್ಲ... ಇಂದು ನಿನ್ನಿಂದ ನಾ ಕಂಡೆ ಬಾಳಿಗೆ ಅರ್ಥ.

ಮದುವೆಯ ಬಂಧನ ಪವಿತ್ರ,
ಈ ಜೀವದ ದೇವ ನೀನು
ನಿನ್ನೀ ಪ್ರೇಮದ ಹಂದರ...
ಇದು, ನಿನ್ನನು ಪೂಜಿಪ ಮಂದಿರ
ನಿನ್ನ ನನ್ನ ನಂಟು, ಆ ಬ್ರಹ್ಮನು ಹಾಕಿದ ಗಂಟಿದು...
ಭಾವ ಹೊನಲಾಗಿದೆ, ಒಲವು ಒಸರಾಗುತಿದೆ,
ನನ್ನ ಕವಿತೆ ನಿನ್ನಿಂದಲೇನೇ, ನನ್ನಾಣೆ...
ನಲ್ಲ... ನಿನ್ನಿಂದ ನಾ ಕಂಡೆ ಬಾಳಿಗೆ ಅರ್ಥ.

ಕೇಳಿದೋ ಕೋಗಿಲೆ ಹಾಡನು
ಅದು ಹೇಳಿದೆ ಪ್ರೇಮಿಯ ಮಾತನು
ಚೈತ್ರ ಬಂದ ವೇಳೆ...
ಆ ಚಿಗುರೆಲೆ ಹೊರಳಿದವಾಗಲೇ
ಮೊಗ್ಗು ಹೂವಾಗಿದೆ, ಹೂವು ಹಣ್ಣಾಗುತಿದೆ
ಹಿಗ್ಗಿನಿಂದ ಮುದ್ದಾದ ಕಾವ್ಯ ನಾ ತಂದೆ...
ನಲ್ಲ... ನಿನ್ನಿಂದ ನಾ ಕಂಡೆ ಬಾಳಿಗೆ ಅರ್ಥ.
(ಜುಲೈ-೧೯೯೫)

2 comments:

ಶಾಂತಲಾ ಭಂಡಿ (ಸನ್ನಿಧಿ) said...

ಜ್ಯೋತಿ ಅಕ್ಕಾ...
ಸುಂದರವಾದ ಈ ಹಾಡನ್ನ ಆಲಿಸುವ ಅವಕಾಶವೂ ದೊರೆತಿದ್ದರೆ?
‘ಹೇಳು ಮನಸೆ’ ಹಾಡನ್ನು ಮೊದಲ ಬಾರಿಗೆ ಆಲಿಸಿದ ಸಂದರ್ಭ ನೆನಪಾಯ್ತು.

ಸುಪ್ತದೀಪ್ತಿ suptadeepti said...

ಶಾಂತಲಾ, ಈ ಹಾಡಿನ ಧ್ವನಿ ಮುದ್ರಿಕೆಯನ್ನು ನಾನೂ ಹುಡುಕುತ್ತಿದ್ದೇನೆ. ನಮ್ಮ ಮನೆಯ ಅಟ್ಟದಲ್ಲೇನಾದರೂ ಸಿಕ್ಕರೆ, ಖಂಡಿತಾ ಕೇಳಿಸುತ್ತೇನೆ.