ಧಾನ್ಯಲಕ್ಷ್ಮಿ ಭೂಮಿತಾಯಿ ಧೈರ್ಯಲಕ್ಷ್ಮಿ ಮೋಹ ಮಾಯೆ
ಜ್ಞಾನದಾತೆ ಪೂಜ್ಯಮಾತೆ ಪಾಪನಾಶಿ ಸುರಭಿಯೆ
ಎನುತ ಹೊಗಳಿ ಹಾಡೊ ಮನುಜ ಹೇಳು ಎಲ್ಲಿದೆ
ಈ ಹಿರಿಮೆ ಹೆಣ್ಣಿಗೆ?
ಬಾಳ ಬೆಳಕು ಮನೆಯ ಥಳಕು ಪ್ರೇಮ ಗಂಗೆ ಎನ್ನುವೆ
ಬಾಳ ಏಣಿಯಲ್ಲಿ ಮೇಲೆ ಏರಗೊಡದೆ ತುಳಿಯುವೆ
ತೊಳೆಯಲೊಲ್ಲೆ "ಅಳುವ ಅಬಲೆ" ಎನುವ ಮಾತನು
ಅಳೆಯಬಲ್ಲೆಯಾ ಜನನಿ ತೋಳನು!
ಚೆಲುವ ಮೂರ್ತಿ ಕಾವ್ಯ ಸ್ಫೂರ್ತಿ ಕರುಣೆ ಕಡಲು ಎನ್ನುವೆ
ಒಲುಮೆ ಬೇಡಿ ತೊಡಿಸಿ ಅವಳ ಸೆರೆಯ ಒಳಗೆ ಇರಿಸುವೆ
ನಲಿವ ಹೂವು ನಲುಗಿ ಬಳಲಿ ಬಾಡಿ ಬಾಗಿತು
ನೆಲವ ಸೇರಿತು, ಅಮರವಾಯಿತು!
(ಜೂನ್-೧೯೯೫)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Sunday, 13 July 2008
Subscribe to:
Post Comments (Atom)
4 comments:
ಹೆಣ್ಣುಮಗಳ ಗತಿ ಇಷ್ಟೇ ಎನ್ನಬಹುದು. ಹೊಗಳಿಕೆಯ ಕಿರೀಟ;
ವ್ಯವಸ್ಥೆಯ ಪಂಜರ;ಕೊನೆಗೊಮ್ಮೆ ಭೂತಾಯಿಯ ಆಸರೆ!
ಸರಿ, ಇದಕ್ಕೆ ಬದಲಿಲ್ಲವೆ?
-ಸುನಾಥ ಕಾಕಾ
SupthadeepthiyavarE
HeNNu. esTu baredaroo saladu alva, yaakO kone 2 saalu IsTEnaa??? heNNina katheye isTu antha bEjaraythu. yaaru sari maDoru? bhoothayi maathra anisutte.
PSP
"ಎಲ್ಲಿ ನಾರಿಯರನ್ನು ಪೂಜಿಸುವರೋ ಅಲ್ಲಿ ದೇವತೆಗಳು ವಾಸಿಸುವರು" ಎಂದಿದ್ದಾರೆ. ಆದರೆ ಈ ವಾಕ್ಯ ಶ್ರವಣಕ್ಕೆ ಮಾತ್ರ ಹಿತವುಂಟುಮಾಡುತ್ತದೆ ವಿನಹ ಕಾರ್ಯರೂಪದಲ್ಲಿ ಬರದೇ ಬರೀ ಸುಭಾಷಿತವಾಗಿ ಹೋಗಿದೆ!!!
ಪ್ರತಿಕ್ರಿಯೆಗೆ ಧನ್ಯವಾದಗಳು.
ಕಾಕಾ, ತೇಜು,
ಇದೇ ಭಾನುವಾರ ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ನಿಮ್ಮನ್ನು ಭೇಟಿಯಾಗುವುದನ್ನು ಎದುರು ನೋಡುತ್ತಿರುವೆ.
Post a Comment