ಇನ್ನೊಂದು ಅಕ್ಷರಂಗಳ

"ಸುಪ್ತದೀಪ್ತಿ"ಯ ಕಿಟಕಿ->->->

Sunday 8 June, 2008

ಸಂವಾದ

("ಭಾವಮಾಲಿಕಾ" ಧ್ವನಿಸುರುಳಿಗಾಗಿ, ಮನೋಮೂರ್ತಿಯವರ ಸಂಗೀತಕ್ಕೆ ಹೊಂದಿಸಿ ಬರೆದದ್ದು)

ಮಗು: ಹೊರಗೆ ಆಡ ಹೋಗುವೆನು,
ತಂದೆ: ಪಾಠ ಓದಿ ಆಯ್ತೇನು?
ಮಗು: ನಾಳೆ ನಮಗೆ ರಜೆಯಂತೆ,
ತಂದೆ: ಓದು ಬರಹ ಮೊದಲಂತೆ.

ಮಗು: ಗೆಳತಿಯರೆಲ್ಲರ ಜೊತೆಗೆ ನಾನೂ ಆಡಲೇ ಬೇಕು,
ತಂದೆ: ಇಳಿದಿದೆ ಮಾರ್ಕಿನ ಸಂಖ್ಯೆ, ಆಡಿದ್ದೆಲ್ಲವೂ ಸಾಕು;
ಪಾಠದ ಪುಸ್ತಕ ತೆರೆದು ಪ್ರಶ್ನೆಗೆ ಉತ್ತರ ಬರೆದು
ಕಲಿಯಮ್ಮ ನೀ ಸರಿಯಾಗಿ.... ....ಹೊರಗೆ ಆಡ ಹೋಗುವೆನು....

ಮಗು: ಸುಮ್ಮನೆ ಓದಿದ ವಿಷಯ ನೆನಪೇ ಉಳಿಯುವುದಿಲ್ಲ
ತಂದೆ: ಒಮ್ಮೆಲೇ ಬಾನಿಗೆ ಏಣಿ ಇಡುವುದು ತರವಲ್ಲ;
ಶ್ರವಣ-ಪಠಣ-ಮನನ ಕಲಿಕೆಯ ಹಂತಗಳಮ್ಮ
ನಿಜವಾದ ಸಾಧನೆ ಹಾದಿ.... ....ಹೊರಗೆ ಆಡ ಹೋಗುವೆನು....

ಮಗು: ಪಾಠದ ಹಾಗೇ ಆಟ ಬೆಳವಣಿಗೆಯ ಒಂದಂಶ
ತಂದೆ: ಆಟ ಪಾಠದ ಸಮರಸ ವಿಜಯದ ಸಾರಾಂಶ.
ಇಬ್ಬರೂ: ಒಂದರ ಜೊತೆಗಿನ್ನೊಂದು ಚೆನ್ನಾಗಿ ಹೊಂದಿಸಿಕೊಂಡು
ಗೆಲ್ಲೋದೇ ಬಾಳಿನ ಆಟ....

ಇಬ್ಬರೂ: ತಾಯಿ ತಂದೆ ಪ್ರಥಮ ಗುರು, ಜೀವನವೇ ಪರಮ ಗುರು
ನೋಡಿ ತಿಳಿ ಮಾಡಿ ಕಲಿ, ಅನುಭವ ಸ್ಥಿರ ಬಾಳಲಿ.

2 comments:

sunaath said...

ಜ್ಯೋತಿ,
ತುಂಬಾ ಆಸಕ್ತಿಕರವಾದ 'ಸಂವಾದ'. ಸರಾಗವಾಗಿದೆ;ಸುರಾಗವಗಿದೆ.

ಸುಪ್ತದೀಪ್ತಿ suptadeepti said...

ಧನ್ಯವಾದ ಕಾಕಾ. ಸಂಗೀತಕ್ಕೆ ಹೊಂದಿಸಿ ಬರೆಯುವಾಗಿನ ಹೊಸ ಅನುಭವ ಕೊಟ್ಟ ಗೀತೆಗಳಲ್ಲಿ ಇದೂ ಒಂದು. ಅದರ ಕಸರತ್ತೇ ಬೇರೆ.