ಬೇಸಿಗೆ ರಜೆಯಲಿ ಬಾಡಿಗೆ ಸೈಕಲು
ಜೊತೆಯಲಿ ನಡೆದರು ಬೀದಿಯ ಮಕ್ಕಳು
ಊರಿನ ತೋಪಲಿ ಹೊಸದೇ ಆಟ
ಅರಿಯದ ಕಿರಿಯಗೆ ಹಿರಿಯನ ಪಾಠ
ಕತ್ತರಿ ಕಾಲು ಹಾಕುತ ಏರು
ಪೆಡಲ್ ತುಳಿದು ಹಿಡಿ ಹ್ಯಾಂಡಲ್ ಬಾರು
ಹಾದಿಯ ಮೇಲೆ ಇರಬೇಕು ಗಮನ
ಕಲಿಕೆಯೇನಲ್ಲ ರಾಕೆಟ್ ವಿಜ್ಞಾನ
ನೀನೂ ಬಾರೇ, ಮುಂದಿನ ಸುತ್ತಿಗೆ
ನಾವಿದ್ದೇವೆ ಭಯಬೇಡ, ಹತ್ತು ಮೆಲ್ಲಗೆ
ಎಲ್ಲರಿಗೂ ಇದೆ ಸಮಯಾವಕಾಶ
ಕಲಿಕೆಗೆ ಕೊಡುವನು ಸೈಕಲಂಗಡಿ ಪಾಷ
(ಚಿತ್ರಕವನ- ಚಿತ್ರ-೧೦೯ - ಮರದ ಕೆಳಗೆ ಮೂವರು ಹುಡುಗರು, ಒಬ್ಬಳು ಹುಡುಗಿ, ದೊಡ್ಡ ಹುಡುಗನ ಕೈಯಲ್ಲಿ ಸೈಕಲ್)
(೦೫-ಜುಲೈ-೨೦೦೯)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Saturday 11 July, 2009
Subscribe to:
Post Comments (Atom)
6 comments:
ಸುಂದರ "ಮಕ್ಕಳ ಪದ್ಯ"ಕ್ಕಾಗಿ ಅಭಿನಂದನೆಗಳು.
ಧನ್ಯವಾದಗಳು ಕಾಕಾ. "ಮಕ್ಕಳ ಪದ್ಯ"ಕ್ಕೆ quotes ಹಾಕಿ ಅದರ ಸ್ವಾರಸ್ಯ enhance ಮಾಡಿದ್ದಕ್ಕೂ Thanks.
ಬಾಡಿಗೆ ಸೈಕಲ್ ತಂದು ಸೈಕಲ್ ಕಲಿತ ದಿನಗಳ ನೆನಪು ಬಂತು.
ಹೌದು, ಆಗೆಲ್ಲ ಬೇಸಗೆಯ ರಜೆಯಲ್ಲಿ ಎರಡೇ ಕೆಲಸ- ಒಂದೋ ಅಜ್ಜಿ/ಅಜ್ಜನ ಮನೆಗೆ ಸವಾರಿ, ಅಥವಾ ಬಾಡಿಗೆ ಸೈಕಲ್ ಸವಾರಿ. ಚಿತ್ರಕವನದಲ್ಲಿ ಆ ಚಿತ್ರ ನೋಡಿದ ತಕ್ಷಣ ನನಗೆ ನೆನಪಾಗಿದ್ದೇ ಅದು.
naanu cycle kalitaddu nenapaayitu...aadinagaLu vow...........~mala
ಹೌದು ಮಾಲಾ, ಆ ದಿನಗಳ ನೆನಪು ಸದಾ ಹಸಿರು, ನೆನಪಿನಂಗಳ ಎಂದೆಂದೂ ತಂಪು. ಪ್ರತಿಕ್ರಿಯೆಗೆ ಧನ್ಯವಾದಗಳು.
Post a Comment