"ಹರಟೆ ಕಟ್ಟೆ"ಯಲ್ಲಿ ಪ್ರಕಟಿತ.
ಸಂದರ್ಭ: "ಎಂಟನೇ ವಿಶ್ವ ಕನ್ನಡ ಸಮ್ಮೇಳನ" - ಅಕ್ಕ-ಕೆ.ಕೆ.ಎನ್.ಸಿ; ಸ್ಯಾನ್ ಹೋಸೆ, ಕ್ಯಾಲಿಫ಼ೋರ್ನಿಯಾ, ಅಮೆರಿಕ.
"ಅಂಗಿ ನಿನಗೆ ಇಷ್ಟವಾ, ಸೀರೆಯಾ? ನನಗೇನೋ ಅಂಗಿಯೇ ಇಷ್ಟ". ಅಂದಳೊಮ್ಮೆ ನನ್ನೊಬ್ಬ ಗೆಳತಿ. "ಸೀರೆ ಅಂದ್ರೆ, ಅದಕ್ಕೆ ಮತ್ತೆಲ್ಲ ಅಕ್ಕಪಕ್ಕದ ಒಳಹೊರಗಿನ ಜೋಡಿಮೇಳಗಳು ಬೇಕು. ಅಂಗಿ ಅಂದ್ರೆ ಅದೇ ಕಂಪ್ಲೀಟ್ ಅನ್ನುವ ಭಾವನೆ ಬರ್ತದೆ." ಅಂತವಳ ಪೂರಕ ತರ್ಕ. ಕಾಲೇಜು ದಿನಗಳಿಂದಲೂ ಅವಳನ್ನು ಬಲ್ಲೆ. ಅವಳ ತರ್ಕಕ್ಕೆ ಯಾರಾದರೂ ಎದುರುತ್ತರ ಕೊಟ್ಟರೆ ಆಮೇಲೆ ಅವಳ ಮಾತಿನ ಧಾಟಿಯೇ ಬದಲಾಗುತ್ತದೆ. ಕುತರ್ಕ, ಮೊಂಡುವಾದ, ಎತ್ತರ ಸ್ವರ ಸೇರಿಕೊಳ್ಳುತ್ತವೆ. ಹಾಗಾಗಿ, ಅಂಗಿ ಇಷ್ಟದವಳ ಮಾತಿಗೆ ನನ್ನ ಅಂಗೀಕಾರವೇ ಅನ್ನಿಸುವಂತೆ ಸುಮ್ನೇ ಹೂಂಗುಟ್ಟಿದೆ. ತಲೆಯೊಳಗೆ ಚಿಂತನಾಹುಳಗಳ ಗುಂಯ್‌ಗುಟ್ಟುವಿಕೆ ಜೋರಾದಾಗ ಏನೋ ಒಂದು ನೆಪ ಕೊಟ್ಟು ಅವಳನ್ನು ಸಾಗಹಾಕಿದೆ. ಅವಳೇನೋ ಅವಳಂಗಿ ಕೊಡಹಿಕೊಂಡು ಸಾಗಿದಳು. ನನ್ನ ತಲೆಯೊಳಗಿನ ಹುಳ ಸುಮ್ಮನಿರಬೇಕಲ್ಲ! ಅಂಗಿಯ ಚುಂಗು ಹಿಡಿದು ಹೊರಟಿತು; ಜೊತೆಗೇ ಓಲಾಡುವ ಸೆರಗಿನಂಚು.
ಈಗ, ‘ಅಂಗಿ’ ಅಂತಂದಾಗ ನಮಗೆ ಸಾಮಾನ್ಯವಾಗಿ ಥಟ್ಟನೆ ನೆನಪಾಗುವುದು ಗಂಡಸರು ತೊಡುವ ಶರಟು. ಆದರೂ, ನೆನಪಿನಂಗಳದ ಮೂಲೆಯಲ್ಲೆಲ್ಲೋ ಕೆದಕಿದರೆ ಸಿಗುವ ಸಾಮಾನ್ಯ ಪಾರಿಭಾಷಿಕ ಅರ್ಥ- ‘ಬಟ್ಟೆ, ಉಡುಪು’. ‘ಶಾಲೆಗೆ ತಡ ಆಯ್ತು, ಬೇಗ ಅಂಗಿ ಹಾಕ್ಕೊಂಡು ಹೊರಡಿ’ ಅಂತ ಅಮ್ಮ ಎಚ್ಚರಿಸುತ್ತಿದ್ದದ್ದು, ‘ಅಮ್ಮಾ, ನನ್ನ ಅಂಗಿ ಅವ್ಳು ಹಾಕ್ಕೊಂಡ್ಳು’ ಅಂತ ಅಕ್ಕ ದೂರುತ್ತಿದ್ದದ್ದು, ‘ಅಕ್ಕ, ನನ್ನ ಅಂಗಿಯ ಗುಬ್ಬಿ ಹಾಕು’ ಅಂತ ತಂಗಿ ಬೆನ್ನು ತೋರಿಸಿ ನಿಲ್ಲುತ್ತಿದ್ದದ್ದು, ‘ಅಣ್ಣ, ನಿನ್ನ ಈ ಅಂಗಿ ನಂಗೆ ಕೊಡು, ನಿಂಗೆ ಗಿಡ್ಡ ಆಗ್ತದಲ್ಲ; ನನ್ನ ಹೊಸ ಪೆನ್ಸಿಲ್ ನಿಂಗೆ’ ಅಂತ ತಮ್ಮ ವ್ಯವಹರಿಸುತ್ತಿದ್ದದ್ದು, ‘ಶಾಲೆಯಿಂದ ಬಂದು ಅಂಗಿ ಬದಲಾಯ್ಸಿಯೇ ಆಟಕ್ಕೆ ಹೋಗಿ ಮಕ್ಳೇ’ ಅಂತ ಅಜ್ಜಿ ಎಲ್ಲರಿಗೂ ವಾರ್ನಿಂಗ್ ಕೊಡ್ತಿದ್ದದ್ದು... ಇನ್ನೂ ಇಂಥ ಹಲವಾರು ಅಂಗಿಸಾದೃಶ್ಯಗಳೇ ಸಾಲಾಗಿ ಎದುರಾಗುತ್ತವೆ. ಇಲ್ಲೆಲ್ಲ ಅಂಗಿ ಅಂದ್ರೆ ಫ್ರಾಕ್ ಆಗಿರಬಹುದು, ಲಂಗ-ರವಿಕೆ ಇದ್ದಿರಬಹುದು, ಯೂನಿಫಾರ್ಮ್ ಕೂಡಾ ಇದ್ದೀತು, ಹುಡುಗರ ಮಾಮೂಲು ಶರಟು-ಚಡ್ಡಿ ಜೋಡಿಯೂ ಸರಿಯೇ. ಅಂಗಿ ಅನ್ನುವ ಒಂದೇ ಪದ ಇವೆಲ್ಲವನ್ನೂ ಒಳಗೊಂಡು ‘ಉಡುಪು, ಬಟ್ಟೆ-ಬರೆ, ದಿರಿಸು, ಡ್ರೆಸ್’ ಅನ್ನುವ ಪೂರ್ಣಾರ್ಥ ಪಡೆದಿತ್ತು. ಈಗಲೂ ಅದಕ್ಕೇ ಇರಬೇಕು, ಅಂಗಿ ಅಂದ್ರೆ ಕಂಪ್ಲೀಟ್ ಅನ್ನಿಸೋದು ನನ್ನ ಗೆಳತಿಗೆ.
ಒಂದರ್ಥದಲ್ಲಿ ಅದು ನಿಜವೂ ಕೂಡಾ. ಮಹಿಳೆಯರ ಬಟ್ಟೆಬರೆಯನ್ನೇ ಪರಿವೀಕ್ಷಿಸೋಣ. ಕೆಲವಾರು ಲಲನೆಯರ ಪ್ರೀತಿಯ ನೈಟಿಯನ್ನು ಕನ್ಸಿಡರಿಸಿದರೆ, ಅದು ಪೂರ್ಣ ಮೈ ಮುಚ್ಚುವ ನಿಲುವಂಗಿಯೇ ಹೌದು. ಉತ್ತರ ಭಾರತದಿಂದ ದಕ್ಷಿಣಕ್ಕೆ ಲಗ್ಗೆಯಿಟ್ಟು ಲಂಗ-ದಾವಣಿಯನ್ನು ಎತ್ತಂಗಡಿ ಮಾಡಿದ ಚೂಡಿದಾರ್, ಸಲ್ವಾರ್ ಕಮೀಜ್, ಸಲ್ವಾರ್-ಕುರ್ತಾಗಳೂ ಇದಕ್ಕೆ ಹೊರತಲ್ಲ. ಅರ್ಜೆಂಟಿಗಾಗುವ ಅಂಗಿಗಳು. ರಪ್ಪ ಸಿಕ್ಕಿಸಿಕೊಂಡು ಟಪ್ಪ ಹೊರಡಬಹುದು. ಇನ್ನೂ ಹೊಸ ಜಾಯಮಾನದ ಜೀನ್ಸ್-ಟೀಶರ್ಟ್, ಸ್ಕರ್ಟ್-ಬ್ಲೌಸ್, ಸೂಟ್ಸ್ ಎಲ್ಲವೂ ಹೊಸ ಹೆಸರಿನ ಲೇಬಲ್ ತೊಟ್ಟು ‘ಮೈಮರೆಸು’ವ ವೈಯ್ಯಾರದ ಅಂಗಿಗಳೇ ತಾನೇ? ಇವೆಲ್ಲವೂ ‘ಅಂಗಿ’ಯ ಪದರದೊಳಗೆ ಸೇರುವಾಗ ಸೀರೆ ಮಾತ್ರ ಬೇರೆಯೇ ನಿಲ್ಲುತ್ತದೆ! ಅದೇ ಅದರ ವೈಶಿಷ್ಟ್ಯವೂ ಕೂಡಾ.
ನನ್ನ ಗೆಳತಿಯ ಅಂಬೋಣದಂತೆಯೇ ಸರಿ; ಸೀರೆಗಾದರೆ ಸರಿಯಾದ ಒಳ-ಹೊರಗಿನ ಹೂರಣ ಓರಣಗಳು ಇಲ್ಲದೆ ಬಿನ್ನಾಣವಿಲ್ಲ. ಸೀರೆಗೆ ಒಪ್ಪುವ ಬಣ್ಣದ ಒಳಲಂಗ; ಹೊಂದಿಕೆಯಾಗುವ ಬಟ್ಟೆಯಿಂದ ಅಥವಾ ಅದೇ ಸೀರೆಯ ತುಣುಕಿಂದ ನಾಜೂಕಾಗಿ ಕತ್ತರಿಸಲ್ಪಟ್ಟು ಇನ್ನಷ್ಟು ಜೋಪಾನವಾಗಿ ಹೊಲಿಯಲ್ಪಟ್ಟಿರುವ ರವಿಕೆ; ಹಣೆಗೊಂದು ಸುಂದರ ತಿಲಕ ಯಾ ಕುಂಕುಮ ಯಾ ಬಿಂದಿ ಯಾ ಬೊಟ್ಟು; ಕಿವಿಗಳಲ್ಲಿ ಫಳಗುಟ್ಟುವ ಓಲೆಗಳು ಅಥವಾ ಜೋತಾಡುವ ಝುಮಕಿಗಳು; ಕತ್ತಿನ ಸುತ್ತ ವೈಯ್ಯಾರದ ಒಂದೆರಡೆಳೆ ಸರ; ಮುಡಿಯಲ್ಲಿ ಮೆಲ್ಲುಲಿವ ಮಲ್ಲಿಗೆ; ಮುಂಗೈಗಳಲ್ಲಿ ಘಲುಘಲಿಸುವ ಗಾಜಿನ ವಾ ಬಂಗಾರದ ಬಳೆಗಳು; ಅನುಕೂಲ ಮತ್ತು ಇಷ್ಟವಿದ್ದರೆ ಪಾದಮಣಿಕಟ್ಟಿನಲ್ಲಿ ಕುಲುಕುಲು ನಲಿಯುವ ಬೆಳ್ಳಿ ಗೆಜ್ಜೆ... ಇವಿಷ್ಟಿದ್ದರೆ ಅಂಥ ನಾರಿಗೆ, ಸೀರೆಗೆ ಸಿಗುವ ಮೆಚ್ಚುನೋಟಗಳಿಗೆ ಬೇರೆಲ್ಲಾ ಅಂಗಿಗಳು ಅಸೂಯೆಯಿಂದ ಉರಿಯಲೇಬೇಕು. ಹಾಗಂತ, ಇಷ್ಟೆಲ್ಲ ದಿನದಿನವೂ ಅಲಂಕರಿಸಿಕೊಳ್ಳುವುದು ಸುಲಭವೆ? ಅದಕ್ಕೇ ನಾವು, ನವನಾರೀಮಣಿಯರು ಅಂಗಿಗೆ ಅಡಿಯಾಳಾಗಿದ್ದು ಅಂತ ಗಾಢವಾಗಿ ಅನಿಸಹತ್ತಿತು.
ಆದರೂ, ನೆನಪಿನ ಖೋಲಿಯ ಬಾಗಿಲು ತೆರೆದಿದ್ದೇನಲ್ಲ, ಅದು ಸುಮ್ಮನಿರುತ್ತದೆಯೆ? ಒಂದೊಂದಾಗಿ ಸುಕ್ಕು ಕೊಡವಿಕೊಳ್ಳುತ್ತಾ ಎದ್ದೆದ್ದು ಬರುವ ಸೆರಗಿನಂಚುಗಳಿಗೆ ಚಾವಡಿಯಲ್ಲಿಯೇ ಚಾಪೆ ಹಾಸಿಕೊಟ್ಟೆ. ಅಜ್ಜನ ಮನೆಯ ತೋಟದ ಮೂಲೆಯ ತೋಡಿನಲ್ಲಿ ಆಟವಾಡಿ ಅಜ್ಜಿಯ ಸೆರಗಿನಲ್ಲಿ ಕೈಕಾಲು ಒರಸಿಕೊಂಡಲ್ಲಿಂದ ಶುರುವಾಗಿ ಮಾವನವರ ಭೀಮರಥ ಶಾಂತಿಯ ದಿನ ರೇಶ್ಮೆ ಸೀರೆ ಸೆರಗಿನಲ್ಲಿ ಹೋಮದ ಹೊಗೆಗೆ ಕರಗುತ್ತಿದ್ದ ಮಕ್ಕಳ ಮೂಗು ಒರಸಿದಲ್ಲಿಯವರೆಗೆ, ಅಮ್ಮನ ತುಂಡು ಸೀರೆಯನ್ನುಟ್ಟು ಓರಗೆಯವರ ಜೊತೆ ಅಟ್ಟದಲ್ಲಿ ಮನೆಯಾಟ ಆಡಿದಲ್ಲಿಂದ ಹಿಡಿದು ಲಕ್ಷಾನುಗಟ್ಟಲೆ ಬೆಲೆಯ ಸೆರಗುಗಳ ಅಮೋಘ ಜರಿ-ವಜ್ರ-ವಿನ್ಯಾಸಗಳನ್ನು ನೆಟ್ಟಲ್ಲಿ ನೋಟವಿಟ್ಟಲ್ಲಿಯ ತನಕ, ಸೀತಜ್ಜಿಯ ಕೆಂಪು ಮಡಿಸೀರೆಯನ್ನು ಮುಟ್ಟಿ ಏಟು ತಿಂದಲ್ಲಿಂದ ಆರಂಭಿಸಿ ನಾಜೂಕು ಎಂಬ್ರಾಯ್ಡರಿಯ ನವಿಲು ಸೆರಗಿನ ಮೇಲೆ ಕೈಯಾಡಿಸಿದಲ್ಲಿಯವರೆಗೆ ನೂರಾರು ಸಾವಿರಾರು ಹನಿಹನಿಹನಿಗಳು ಚಾಪೆಯಲ್ಲಿ ಒತ್ತಟ್ಟಾದವು. ಮನದಂಗಳದಲ್ಲಿ ಭಾವನೆರೆ ಉಕ್ಕಿತು. ಆ ಎಲ್ಲಾ ಹನಿಗಳಲ್ಲಿಯೂ ಅಜ್ಜಿಯಾಗಲಿ, ಅಮ್ಮನಾಗಲಿ, ದೊಡ್ಡಮ್ಮ- ಚಿಕ್ಕಮ್ಮ- ಅತ್ತೆಯರಾಗಲಿ, ಅಮೋಘ ಸೀರೆಯ ಬೆಡಗಿಯರಾಗಲಿ, ಮಡಿಸೀರೆಯ ಸೀತಜ್ಜಿಯಾಗಲಿ, ಅಥವಾ ನಾನೇ ಆಗಿದ್ದಿರಲಿ, ಅಂಗಿ ಹಾಕಿಕೊಂಡಿದ್ದಿದ್ದರೆ ಈ ಹನಿಹನಿ ಒರತೆಗೆ ಪುಟಿಯುವ ಉತ್ಸಾಹ ಇಷ್ಟೊಂದು ಇರುತ್ತಿತ್ತೇ? ಒರತೆಯಾಗಿದ್ದರೂ ನೆರೆಯಾಗುತ್ತಿತ್ತೇ? ಖಂಡಿತಾ ಇಲ್ಲವೆನಿಸಿತು. ಯಾವುದೇ ಅಂಗಿಚುಂಗಿನಿಂದ ಮಗುವಿನ ಕರಗುಮೂಗನ್ನು ಒರಸಲಾಗುತ್ತದೆಯೆ? ಅದಕ್ಕೆ ಮಮತೆಯ ಸೆರಗಿನಂಚೇ ಸೈ.
ಸೆರಗಿನಂಚು ಅಂದಾಕ್ಷಣ ಮತ್ತೆ ಮೆರವಣಿಗೆ ಶುರು. ದಸರಾ ರಜೆಯಲ್ಲಿ ನಮ್ಮನೆಯಿಂದ ಅಜ್ಜಿಯ ಜೊತೆ ಊರಿಗೆ ಹೋಗುವಾಗ ಗದ್ದೆಯ ಬದುವಿನಲ್ಲಿ ಎಚ್ಚರದ ಹೆಜ್ಜೆ ಇಡುತ್ತಲೇ ಆಯ ತಪ್ಪಿದ್ದು ನಾನೋ ನನ್ನ ಹೆಗಲಲ್ಲಿದ್ದ ಭಾರದ ಚೀಲವೋ? ಅಂದು ಮೈಗೆಲ್ಲ ಮೆತ್ತಿದ್ದ ಕೆಸರಿನಂಟು, ನೋವು ಅವಮಾನ ಸಮೇತ, ಅಜ್ಜಿಯ ಸೆರಗನ್ನು ಸೇರಿಕೊಂಡದ್ದು ಯಾವ ಮಾಯಕದಲ್ಲಿ? ಬೇಸಗೆಯ ರಜೆಯಲ್ಲಿ ಒಂದು ಸಂಜೆ ಆಳು ಲಚುಮಿಯ ಜೊತೆಗೆ ಕಾಡಂಚು ಸುತ್ತುವಾಗ ಸಿಕ್ಕಿದ್ದ ಕೆಂಪು ಕೆಂಪು ಚಂಪೆ ಹಣ್ಣುಗಳ ಗೊಂಚಲುಗಳು ಮನೆತನಕ ಜೋಪಾನವಾಗಿ ಬಂದದ್ದು ಲಚುಮಿಯ ಸೆರಗಿನೊಳಗಿನ ಜೋಳಿಗೆಯಲ್ಲೇ. ಮರದಡಿಯಲ್ಲಿ ತಿಂದಾಗ ಲಭಿಸಿದ ರುಚಿಗೂ ಮನೆಯಂಗಳದಲ್ಲಿ ಲಚುಮಿ ತುಸು ಉಪ್ಪು ನೀರಲ್ಲಿ ಒಂದೈದು ನಿಮಿಷ ಹಾಕಿಟ್ಟು ನಂತರ ತೊಳೆದು ಸೆರಗಿನಂಚಲ್ಲಿ ಒರಸಿ ಕೊಟ್ಟ ಚಂಪೆಯಲ್ಲಿ ದಕ್ಕಿದ ಸವಿಗೂ ವ್ಯತ್ಯಾಸವಿದ್ದದ್ದು ಸುಳ್ಳೇ? ಇನ್ನೊಮ್ಮೆ ಇದೇ ಲಚುಮಿ ಅವಳ ಮನೆಯಲ್ಲಿ ಮಾಡಿದ್ದ ಸಾಂತಾಣಿ (ರುಚಿಗಷ್ಟು ಉಪ್ಪು ಹಾಕಿ ಬೇಯಿಸಿ ಬಿಸಿಲಲ್ಲಿ ಚೆನ್ನಾಗಿ ಒಣಗಿಸಿದ ಹಲಸಿನ ಬೀಜ) ನಮಗೆಲ್ಲ ತಂದುಕೊಟ್ಟದ್ದು ನಮ್ಮನೆಯ ಹಿರಿಯರಿಗೆ ತಿಳಿಯದೇ ಹೋದದ್ದು ಅವಳ ಸೆರಗಿನ ಮಹಿಮೆಯಿಂದಲೇ.
ಒಮ್ಮೆಯಂತೂ ತೋಟದ ಕೆರೆಗೆ ಬಟ್ಟೆ ಒಗೆಯಲು ಹೋದ ಲಚುಮಿ ಮತ್ತು ನಾನು, ಅವಳುಟ್ಟಿದ್ದ ಸೀರೆಯ ಸೆರಗನ್ನೇ ನೀರಿನಲ್ಲಿ ಅರ್ಧ ಮುಳುಗಿಸಿ, ನೀರಿಗೆ ಸಣ್ಣದಾಗಿ ಎಂಜಲು ಉಗುಳಿ, ಏನೋ ತಿನ್ನಲಿದೆಯೆಂದು ಮೀನುಗಳು ಫಕ್ಕನೆ ಬಂದಾಗ ಮುಳುಗಿದ್ದ ಬಟ್ಟೆ ಛಕ್ಕನೆ ಎತ್ತಿಕೊಂಡು ಮೀನು ಹಿಡಿದು, ಬಟ್ಟೆಯಿಂದ ಸೋರುವ ನೀರಿನೊಳಗೆ ಮೀನುಗಳ ಖಾನೇಶ್ಮಾರಿ ತೆಗೆದು, ಅವುಗಳೆಲ್ಲ ವಿಲವಿಲ ಎನ್ನುವ ಮೊದಲೇ ಮತ್ತೆ ಸೆರಗನ್ನು ನೀರಿಗೇ ಇಳಿಸಿಕೊಂಡು... ಎಷ್ಟೋ ಹೊತ್ತು ತನ್ಮಯರಾಗಿದ್ದೆವು. ಕಳ್ಳರ ಹಾಗೆ ಸದ್ದು ಮಾಡದೆ ಬಂದ ಅತ್ತೆಯ ಛಡಿಕೋಲು ನನ್ನ ಬೆನ್ನನ್ನು ಚುರುಗುಟ್ಟಿಸಿದಾಗ ಮಮತಾಮಯಿ ಲಚುಮಿಯ ಒದ್ದೆ ಸೆರಗೇ ಮನೆಯಂಗಳದವರೆಗೆ ನನ್ನ ಬೆನ್ನಿಗೆ ಅಂಟಿದ್ದದ್ದು ಮನದಂಗಳದಲ್ಲಿ ಈಗಲೂ ತಂಪಾಗಿದೆ. ನನ್ನಂಗಿ ನನ್ನನ್ನು ಸಾಂತ್ವನಗೊಳಿಸಿರಲಿಲ್ಲ.
ಇಷ್ಟೇ ಅಲ್ಲ ಸೆರಗಿನ ಮಹಾತ್ಮೆ. ಈಗಷ್ಟೇ ಹುಟ್ಟಿದ ಹಸಿ(ಸು)ಗೂಸನ್ನು ಬೆಚ್ಚಗೆ ಹೊದೆಸಿ ಎದೆಗಪ್ಪಿಕೊಳ್ಳಲು ಪ್ರಶಸ್ತವಾದ ಮೃದುವಸ್ತ್ರಗಳು ಬೇಕಾದ ಬಣ್ಣ-ವಿನ್ಯಾಸಗಳಲ್ಲಿ ಈಗ ಮಾರುಕಟ್ಟೆಯಲ್ಲಿ ಲಭ್ಯ. ಆದರೂ, ಇವುಗಳೆಲ್ಲ ಬರುವ ಮೊದಲು, ನಮ್ಮನ್ನು ಬೆಳೆಸಿದ ಮೃದುತ್ವ ಬೇರೆಯೇ! ಅಮ್ಮ, ಅಜ್ಜಿಯರ ಮೈ ಸುತ್ತಿ ಸುತ್ತಿ ನುರಿಗೊಂಡು, ಒಗೆಯುವ ಕಲ್ಲಿನ ಮೇಲೆ ನರ್ತಿಸಿ ನಯಗೊಂಡು, ಹಗ್ಗದಲ್ಲಿ ಜೋತಾಡಿ ಬಿಸಿಲಿಗೆ ಹದಗೊಂಡ ಹತ್ತಿಮೆತ್ತೆ ಪದರಗಳೇ ನಮ್ಮನ್ನು ಬೆಚ್ಚಗಿರಿಸಿವೆ; ನಮ್ಮ ಎಷ್ಟೆಷ್ಟೋ ಒದ್ದೆಗಳನ್ನು ಹೀರಿಕೊಂಡಿವೆ. ಸೀರೆ ಮಾತ್ರ ಇಂಥ ಮಾರ್ದವತೆ ಬಿತ್ತರಿಸಬಲ್ಲದು, ಅದೂ ಹೃದಯಕ್ಕೆ ಹತ್ತಿರಾಗುವ ಹತ್ತಿಸೀರೆ (ಒಮ್ಮೊಮ್ಮೆ ವೇಷ್ಟಿ/ ‘ಗಂಡು ಸೀರೆ’). ಯಾವುದೇ ರೀತಿಯ ಅಂಗಿಗೆ ಇದು ಸಾಧ್ಯವೆ?
ಇನ್ನಷ್ಟು ಬೆಳೆದಾಗ, ಅಮ್ಮನ ಮಗ್ಗುಲಿಂದ ಗ್ರಾಜುವೇಟ್ ಆಗಿ ನಮ್ಮದೇ ಚಾಪೆ ಹಾಸಿಕೊಳ್ಳುವಾಗ, ನಮ್ಮನೆಯ ಎಲ್ಲ ಮಕ್ಕಳಿಗೆ ಹಾಸಿಗೆ, ಹೊದಿಕೆಯಾಗುತ್ತಿದ್ದದ್ದು ಹಳೇ ಕಾಟನ್ ಸೀರೆಗಳೇ. ಉಡಲಾಗದಷ್ಟು ಬಣ್ಣಗೆಟ್ಟರೂ ತೀರಾ ಹರಿದಿಲ್ಲದ ಸೀರೆ, ಜೊತೆಗೆ ಕೆಲವೊಮ್ಮೆ ಕಾಟನ್ ವೇಸ್ಟಿಗಳನ್ನೂ ಪದರು ಪದರಾಗಿ ಸೇರಿಸಿ, ಒಟ್ಟಾಗಿ ಹೊಲಿದು ‘ರಜಾಯಿ’ ಅಥವಾ ‘ಗೊದ್ದೊಡಿ’ ತಯಾರಿಸುತ್ತಿದ್ದರು, ಅಜ್ಜಿ ಮತ್ತು ಅಮ್ಮ. ಇಲ್ಲಿಯೂ, ಸಾಮಾನ್ಯವಾಗಿ ವೇಸ್ಟಿಗಳು ಒಳಪದರುಗಳಲ್ಲಿ ಬಿಳಿಯುಳಿಸಿಕೊಳ್ಳುತ್ತಿದ್ದರೆ ಇದ್ದುದರಲ್ಲಿ ಚಂದ ಬಣ್ಣದ ಸೀರೆಗಳು ಹೊರಪದರದಲ್ಲಿ ಕವಚವಾಗುತ್ತಿದ್ದವು. ಇವೇ ನಮ್ಮಗಳ ಹಾಸಿಗೆ (ಈಗಲೂ ನನ್ನ ಮನೆಯಲ್ಲಿ ಇಂಥ ಮೂರು ರಜಾಯಿಗಳಿವೆ). ಅದರ ಮೇಲೆ ಹಾಸಲು ಮತ್ತು ನಮ್ಮ ಮೇಲೆ ಹೊದೆಯಲೂ ಕೂಡಾ ಕೈಮಗ್ಗದ ಸೀರೆಯ ಪದರಗಳು. ಪುಟ್ಟ ಚಿಣ್ಣರಿಗೆ ಮೂರು ಮಡಿಕೆ, ತುಸು ದೊಡ್ಡವರಿಗೆ ಎರಡೇ ಮಡಿಕೆ. ಮಳೆಗಾಲ, ಛಳಿಗಾಲಗಳಲ್ಲಿ ಎರಡೆರಡು ಸೀರೆ (ಯಾ ವೇಸ್ಟಿ)ಗಳ ಲಕ್ಷುರಿ. ಈಗ ಎಂತೆಂಥ ದಪ್ಪನೆಯ ಮೆತ್ತನೆಯ ಬ್ಲ್ಯಾಂಕೆಟ್‌ಗಳು ಮಾರುಕಟ್ಟೆಯಲ್ಲಿ ದೊರಕಿದರೂ ಆ ಎರಡೆರಡು ಮಗ್ಗದ ಸೀರೆಗಳ ನಾಲ್ಕು ಪದರಗಳ ನಡುನಡುವೆ ಇಣುಕುತ್ತಿದ್ದ ಬಣ್ಣಬಣ್ಣದ ಕನಸುಗಳು ಕಾಣೆಯಾಗಿವೆ.
ಅಂಗಿಗಳ ಬೆಡಗು-ಬಿನ್ನಾಣ, ಒನಪು-ಓರಣ, ತರಾವರಿ ಲೋಕಪರಿಗಳನ್ನು ಗಮನಿಸಿದರೆ ಸೀರೆ ಸೀಮಿತವೇ ಸರಿ. ಏನಿದ್ದರೂ ಆರು ಮೀಟರ್ ಉದ್ದದ ಒಂದೂಕಾಲು ಮೀಟರ್ ಅಗಲದ ಬಟ್ಟೆ, ಅಷ್ಟೇ! ಆದರೂ ಅದರ ಕಾಂತತ್ವಕ್ಕೇನೂ ಕಡಿಮೆಯಿಲ್ಲ. ಭಾರತಕ್ಕೆ ಪ್ರವಾಸಿಗರಾಗಿ ಬರುವ ಎಷ್ಟೆಷ್ಟೋ ಪರದೇಶೀಯರಲ್ಲಿ ಕೆಲವರಾದರೂ ಸೀರೆಯ ವಿಧವಿಧ ವಿನ್ಯಾಸಗಳಿಗೆ ಮೆರುಗಿನ ಲಾವಣ್ಯಕ್ಕೆ ಮಾರುಹೋಗದೆ ಇಲ್ಲ. ಸೀರೆ ಕೊಂಡು, ಕುಪ್ಪಸ ಹೊಲಿಸಿಕೊಂಡು, ಸೀರೆ ಉಡುವುದನ್ನು ಕಲಿತು, ವೈಯಾರ ಮಾಡುವುದನ್ನೂ ಬೆಡಗಚ್ಚರಿಯಿಂದ ಖುಷಿ ಪಡುವುದನ್ನೂ ಕಂಡಿದ್ದೇನೆ. ಸೀರೆಯ ಖ್ಯಾತಿಗೆ ಇದೇ ಪುರಾವೆ. ನಾವುಗಳು ಪರದೇಶಕ್ಕೆ ಹೋದಾಗ ಅಲ್ಲಿನ ವಿಶೇಷ ಬಟ್ಟೆಯನ್ನು ಕೊಳ್ಳುವುದಿಲ್ಲವೆ? ಅಂತ ಕೇಳಬೇಡಿ. ಪ್ರವಾಸಾರ್ಥಿಯಾಗಿ ಜಪಾನಿಗೆ ಹೋಗಿ ಕಿಮೋನೋ ಕೊಂಡವರೆಷ್ಟು ಜನ? ಆರು ತಿಂಗಳ ವಿಸಿಟಿಂಗ್ ವೀಸಾದಲ್ಲಿ ಅಮೆರಿಕಕ್ಕೆ ಬಂದವರೆಷ್ಟು ಮಂದಿ ಅಲ್ಲಿನ ಸ್ಟೇಪಲ್ ಡ್ರೆಸ್- ೩-ಪೀಸ್-ಸೂಟ್ (ಸ್ಕರ್ಟ್ ಅಥವಾ ಪ್ಯಾಂಟ್ ಜೋಡಿ) ಕೊಂಡುಬಂದಿದ್ದಾರೆ? ಪರದೇಶದಲ್ಲೇ ಕೆಲವಾರು ಸಮಯ ಬಾಳುವ ಹಾಗಿದ್ದರೆ, ‘ಬಿ ಅ ರೋಮನ್ ವೆನ್ ಇನ್ ರೋಮ್’ ಅನ್ನುವ ಮಾತಿನಂತೆ ಅಲ್ಲಿಯ ರೀತಿನೀತಿಯ ಬಟ್ಟೆ ಧರಿಸುವತ್ತ ಮನಸು ಮಾಡುವುದೇನೂ ವಿಶೇಷವಲ್ಲ. ನಾವೆಲ್ಲರೂ ಅದನ್ನು ಮಾಡಿದವರೇ. ಆದರೂ, ನಮ್ಮೆಲ್ಲರ ಮನದೊಳಗೆ ಸೀರೆಗೊಂದು ಪ್ರತ್ಯೇಕ ಪೀಠ ಇದೆ ತಾನೆ? ‘ವೆರಿ ಸ್ಪೆಷಲ್ ಒಕೇಷನ್’ ಅಂತಂದಾಗ ಸೀರೆಯನ್ನೇ ಆಪ್ತವಾಗಿ ಎತ್ತಿಕೊಂಡು ಎದೆಗಪ್ಪಿಕೊಳ್ಳುವವರಲ್ಲವೆ ನಾವು? ಅಂಥ ವಿಶೇಷ ಸಿಂಹಾಸನ ಬೇರಾವುದೇ ‘ಅಂಗಿ’ಗೆ ಕೊಟ್ಟಿದ್ದೇವಾ? ಸಲ್ವಾರ್ ಅದರ ಹತ್ತಿರದಲ್ಲಿದ್ದರೂ ಸೀರೆಯ ಸ್ಥಾನ ಸೀರೆಯದ್ದೇ, ಹೌದಲ್ಲ!
ಸೀರೆಯಲ್ಲದಿದ್ದರೆ ಕಳ್ಳ ಕೃಷ್ಣನೂ ಒಂದು ರೀತಿಯಲ್ಲಿ ಕಳ್ಳನೆನಿಸಿಕೊಳ್ಳುತ್ತಿರಲಿಲ್ಲ. ಸೀರೆಗಳ ಜೊತೆಗೆ ಹೃದಯಗಳನ್ನೂ ಕದಿಯುತ್ತಿರಲಿಲ್ಲ. ‘ನಾರಿಯಾ ಸೀರೆ ಕದ್ದ, ರಾಧೆಯಾ ಮನವಾ ಗೆದ್ದ, ಕಳ್ಳರ ಕಳ್ಳ ಕೃಷ್ಣನೂ ಬಂದಾ...’ ಅನ್ನುವ ಮೋಹಕ ಮೋಡಿಯ ಹಾಡೂ ಹುಟ್ಟುತ್ತಿರಲಿಲ್ಲ. ಸೀರೆಯಿಲ್ಲದಿರುತ್ತಿದ್ದರೆ ಮಹಾಭಾರತವೇ ಆಗುತ್ತಿರಲಿಲ್ಲ ಎನ್ನುತ್ತೇನೆ; ನಳ-ದಮಯಂತಿಯ ಕಥೆಗೂ ತಿರುವು ಇರುತ್ತಿರಲಿಲ್ಲ ಅಂತನೂ ಹೇಳಬಹುದು. ಅಂತಹ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದಕ್ಕಿದೆ. ಸೀರೆ ಉಡುವ ರೀತಿಗಳು ಕಾಲಾಂತರದಲ್ಲಿ ಬದಲಾಗಿದ್ದರೂ ವೇದಕಾಲದಿಂದಲೂ ಹಾಸಿ ಬಂದ ಸೀರೆ ಇಂದಿಗೂ ಸೀರೆಯಾಗಿಯೇ ಉಳಿದಿರುವುದು ಆ ಬಟ್ಟೆಯ ಪ್ರಾಮುಖ್ಯವನ್ನು ಸಾರುತ್ತದೆ. ಅದಕ್ಕೇ ನಾನನ್ನುವುದು, ಸೀರೆಯ ನೆರಿಗೆಗಳಲ್ಲಿ ನಮ್ಮ ಹೃದಯಗಳಿವೆ. ಸೆರಗಿನ ಬೀಸಾಟದಲ್ಲಿ ನೂರಾರು ಕಥೆಗಳಿವೆ. ಸೆರಗಿನ ಜೋಳಿಗೆಯಲ್ಲಿ ಸಾವಿರಾರು ಕನಸುಗಳಿವೆ. ಸೆರಗಿನ ಬೆಚ್ಚನೆಯಲ್ಲಿ ಅಸಂಖ್ಯ ಭಾವಗಳಿವೆ. ಸೀರೆ ಸೀರೆಯೇ.
ಇಷ್ಟೆಲ್ಲ ಹೇಳಿದ ಮೇಲೆ ನಾನು ಸೀರೆಯ ಪಕ್ಷಪಾತಿ ಅಂತ ನಿಮಗನ್ನಿಸಿದ್ದರೆ ಅದು ನಿಮ್ಮ ತಪ್ಪೇನಲ್ಲ, ಬಿಡಿ. ‘ಬೀಯಿಂಗ್ ಡೆವಿಲ್ಸ್ ಅಡ್ವೋಕೇಟ್’ ಅಂತ, ಇತ್ತ ಕಡೆಗೂ ಕೆಲವು ಮಾತು ಸೇರಿಸಲೇಬೇಕಾಗುತ್ತದೆ. ಮೊದಲನೇದಾಗಿ, ಇಪ್ಪತ್ತು ವರ್ಷಗಳ ಹಿಂದೆ, ನನ್ನ ಇನ್ನೊಬ್ಬ ಗೆಳತಿಯ ಎರಡು ವರ್ಷದ ಮಗ ಹೇಳಿದ ಮಾತೊಂದನ್ನು ಇಲ್ಲಿ ತಂದಿಡಬೇಕು. ಆದಿನ ಅವರೆಲ್ಲ, ಯಾವುದೋ ಸಮಾರಂಭಕ್ಕೆ ಹೊರಡಬೇಕಾಗಿತ್ತು. ಇವಳು ಪತಿದೇವರಲ್ಲಿ ಪ್ರಶ್ನೆಯಿಟ್ಟಳು: "ರೀ... ಆ ಪಾರ್ಟಿಗೆ ಹೋಗ್ಲಿಕ್ಕೆ ಸೀರೆ ಉಡ್ಬೇಕಾ, ಸಲ್ವಾರ್ ಹಾಕ್ಬೇಕಾ?"
ಅಲ್ಲೇ ಇದ್ದ ಮಗರಾಯ ತಕ್ಷಣ ಅವನದೇ ತೊದಲು ಮುದ್ದಿನಲ್ಲಿ ಹೇಳಿದನಂತೆ, "ಸೀರೆ ಬೇಡಮ್ಮ, ಹೊಟ್ಟೆ ಕಾಣ್ತದೆ. ಸಲ್ವಾರ್ ಹಾಕು."
ಆಕ್ಷಣದ ಬೆರಗನ್ನು ಇಪ್ಪತ್ತು ವರ್ಷಗಳಿಂದಲೂ ಹಾಗೇ ಉಳಿಸಿಕೊಂಡು ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವ ಅವಳಿಗೆ ಇತ್ತೀಚೆಗೆ ಹೇಳಿದ್ದೆ, "ಪರವಾಗಿಲ್ಲ ಬಿಡು, ಒಳ್ಳೇ ಸೆನ್ಸಿಬಲ್ ಮಗ. ಅವನ ಹೆಂಡತಿಯನ್ನು ತುಂಬಾ ತುಂಬಾ ಜೋಪಾನ ಮಾಡಿ ನೋಡ್ಕೊಳ್ತಾನೆ."
ಇನ್ನೊಮ್ಮೆ ದಂಗಾಗಿ ಉತ್ತರಿಸಿದ್ದಳು, "ಅಯ್ಯೋ! ಇದನ್ನು ನಾನು ಯೋಚಿಸಲಿಲ್ಲ ಅಂದ್ಕೊಂಡಿದ್ಯಾ? ಅಷ್ಟೆಲ್ಲ ಜೋಪಾನ ಮಾಡುವ ಸೆನ್ಸಿಬಿಲಿಟಿ ಬೇಡ. ಅವ್ನು ನಾರ್ಮಲ್ ಆಗಿದ್ದರೆ ಸಾಕು ಮಾರಾಯ್ತಿ."
"ಸೊಸೆಯ ಬಗ್ಗೆ ಈಗಲೇ ಜೆಲಸ್ಸಾ?"
"ಅಲ್ಲಪ್ಪಾ, ಅಲ್ಲ. ಇವ್ನು ಅಷ್ಟೊಂದು ಜೋಪಾನ ಮಾಡ್ತಾ ಇದ್ರೆ ಅವಳು ಇವನ ಜೊತೆ ಸಂಸಾರ ಮಾಡುವ ಬದಲು ಬಿಟ್ಟೇ ಹೋದಾಳು ಅನ್ನುವ ಭಯ." ಅಂದಳು.
ನಿಜ ತಾನೇ! ಸೋಲೊಪ್ಪಿಕೊಳ್ಳುವಂತೆ ಸುಮ್ಮನಾದೆ. ಸೀರೆಯ ಬಗ್ಗೆ ಆ ವಯಸ್ಸಲ್ಲಿ ಆ ಪುಟ್ರಾಯನ ವ್ಯೂವ್ ಮೆಚ್ಚುಗೆ ಆಯ್ತಾದರೂ ಬೆಳೆದು ನಿಂತ ಅವನನ್ನು ನಾನು ಈ ಬಗ್ಗೆ ಮಾತಾಡಿಸಿಲ್ಲ. ಈಗಂತೂ ಆಸ್ಟ್ರೇಲಿಯಾದಲ್ಲಿ ಎಂ.ಎಸ್. ಮಾಡುತ್ತಿರುವ ಹುಡುಗ, ಡೇಟಿಂಗ್ ಅಂತ ಹೊರಗೆ ಇಣುಕುತ್ತಿರುವ ಹುಡುಗ (ಹಾಗಂತ ಇವಳೇ ನನಗೆ ಹೇಳಿದ್ದು). ಸೀರೆಯ ನಾರಿಯನ್ನು ಮೆಚ್ಚುತ್ತಾನೋ ಅಂಗಿಯ ಬೆಡಗಿಯನ್ನು ಒಪ್ಪುತ್ತಾನೋ ಕಾದು ನೋಡಬೇಕು (ಆ ಕಾಂಗರೂ ನಾಡಲ್ಲಿ ಅವನ ಗ-ಮನ ಸೆಳೆಯುವಾಕೆ ಯಾರೋ!).
ಇನ್ನು ಎರಡನೇ ವಾದ, ಸೀರೆಯನ್ನು ಈಗೀಗ ನಮ್ಮ ಸಿನೆಮಾ ತಾರೆಯರು ಶೋಕೇಸಿಸುವ ರೀತಿ. ಇದು ಮಾತ್ರ ತೀರಾ ಖೇದದ ಸಂಗತಿ. ಗಾಂಭೀರ್ಯದೊಂದಿಗೆ ಗೌರವ ತರಬಲ್ಲ ಬಟ್ಟೆಯನ್ನು ವ್ಯತಿರಿಕ್ತವಾಗಿ ಬಿಂಬಿಸುವ ಅವರ ಫ್ಯಾಷನ್ ಸೆನ್ಸ್ ನನಗರ್ಥವಾಗದು. ಹಾಗೇನೇ, ಮೂರನೇ ಮಾತು ವಿಷಾದದ ವಿಷಯ; ಇಷ್ಟು ಆಪ್ತವಾಗುವ ಸೀರೆಯನ್ನೇ ಹಲವು ಹೆಣ್ಣುಮಕ್ಕಳು ಆತ್ಮಹತ್ಯೆಗೆ ಸಾಧನವಾಗಿ ಬಳಸಿಕೊಂಡಿರುವುದು. ಮಾನ ಮುಚ್ಚುವ ಬಟ್ಟೆ ಜೀವ ಹೀರುವ ದಾರಿಯಾಗುವುದು ಎಂಥ ವಿಪರ್ಯಾಸ! ಅವರೆಲ್ಲ ಸೀರೆಯಲ್ಲದೆ (ದುಪ್ಪಟ್ಟಾ ಅಥವಾ ಶಾಲ್ ಇಲ್ಲದ) ಬೇರಾವುದೇ ರೀತಿಯ ಅಂಗಿಯನ್ನು ತೊಟ್ಟಿದ್ದಿದ್ದರೆ ಅವರ ಆ ಅತ್ಯಂತ ದುರ್ಬಲ ಮನೋಸ್ಥಿತಿಯ ಕ್ಷಣದಲ್ಲಿ ಕೂಡಲೇ ಕೈಗೆ ಯಾವುದೂ ಸಿಗದೇ ಹೋಗಿ, ಅವರು (ಕೆಲವರಾದರೂ) ಬದುಕುಳಿಯುವ ಸಾಧ್ಯತೆ ಇತ್ತೆನ್ನುವುದು ಈಗ ತರ್ಕ ಮಾತ್ರ ಅಂತನ್ನಿಸಬಹುದು.
ಸೀರೆ-ಅಂಗಿ ವ್ಯಾಖ್ಯಾನದಲ್ಲಿ ಯಾವುದೇ ಒಂದು ಕಡೆಗೆ ವಾಲಿಕೊಳ್ಳುವುದು ಕಷ್ಟವೇ. ನಿಜ, ರಪ್ಪಂತ ಹೊರಟು ರೆಡಿಯಾಗಲು ಕೆಲವಾರು ಅಂಗಿಗಳೇ ಅನುಕೂಲವಾದರೂ, ವಿಶೇಷವಾಗಿ ಸಜ್ಜಾಗಲು ಸೀರೆಯೇ ಬೇಕು. ಪ್ರಯಾಣದ ಸಂದರ್ಭಗಳಿಗೆ ಜೀನ್ಸ್ ಟಾಪ್ ಸೂಟೆಬಲ್ ಆದರೆ, ಶುಭ ಸಮಾರಂಭಗಳಲ್ಲಿ ರೇಶ್ಮೆ ಸೀರೆಗಳ ಸರಭರ ಇಲ್ಲದಿದ್ದರೆ ಆದೀತೆ? ಅಮ್ಮನ ರೇಶ್ಮೆ ಸೀರೆಯ ಹೊಸ ರೂಪದಲ್ಲಿ ಗೊಂಬೆಯಾಗುವ ಪುಟ್ಟಮ್ಮನ ಪಟ್ಟೆಲಂಗದ ಸೊಬಗು ಎಂಥಾ ಶಿಫಾನ್ ಸ್ಯಾಟಿನ್ ಫ್ರಾಕಿಗೂ ಇರದು ಎಂದರೆ ನೀವೆಲ್ಲ ನನ್ನನ್ನು ಅಟ್ಟಿಸಿಕೊಂಡು ಬರೋದಿಲ್ಲವಲ್ಲ. ಇಗೋ, ನಾ ಹೊರಟೆ... ಹೊಸದೊಂದು ನೆಪದಲ್ಲಿ ಇನ್ನೊಂದು ಹೊಸದನ್ನು ಹುಡುಕಲು; ಸೀರೆಯೊಂದು ಬೇಕಾಗಿದೆ, ಮದುಮಗಳಿಗೆ ಉಡುಗೊರೆ ಕೊಡಲು.
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Showing posts with label ಕಥನಕಾರಣ. Show all posts

Saturday, 13 September 2014
Sunday, 11 May 2014
ಅಮ್ಮ ಸಂಕಟ
ಯಾರು ಮಂತ್ರ ಮಾಡಿದರೋ ರಂಗ ಅಳುತಿರುವ
ಯಾರ ಕಣ್ಣು ನಾಟಿದೆಯೋ ಕೃಷ್ಣ ಕನಲಿರುವ
ಯಾವ ಗಾಳಿ ಸೋಕಿತೇನೊ ಚೆನ್ನ ಬೆಂದಿರುವ
ಯಾಕೆ ಹೀಗೆ ಮನವ ಹಿಂಡಿ ಚೆಲುವ ನೊಂದಿರುವ
ಏನ ತಿನ್ನಲಿಕ್ಕಿದರೋ ಗೋಪಕನ್ನೆಯರು
ಎಲ್ಲಿ ಆಟಕೆಳೆದಿಹರೋ ಗೊಲ್ಲಬಾಲರು
ಎಂಥ ಮರದ ಕೆಳಗೆ ಓಡಿಯೋಡಿಬಂದನೋ
ಏಳಲೊಲ್ಲ ಮುದ್ದುಮಲ್ಲ, ನಲುಗಿ ಕೊರಗುವ
ಏನ ಕಂಡು ಬೆದರಿ ಬಂದು ನಡುಗುತಿರುವನೋ
ಎಲ್ಲಿ ನಗುವ ಕಳೆದುಕೊಂಡು ಮುದುರುತಿರುವನೋ
ಎಂಥ ಹೊಳೆಯ ಸುಳಿಯ ಒಳಗೆ ಸೆಳೆಗೆ ಸಿಲುಕಿದ
ಏರುತಿಹುದು ತಾಪ, ರವಿಯೆ ಹಣೆಯಲಿಳಿದನೋ
ಕಾಡಿಬೇಡಿ ಬೆಣ್ಣೆ ಮೊಸರು ಕೇಳುತಿದ್ದವ
ಕಾಣದಂತೆ ಕಣ್ಣ ಹಿಂದೆ ಕದ್ದು ಮೆದ್ದವ
ನೋಡು ಈಗ, ಬೇಡವೆಂದು ಮೊಗವ ತಿರುವಿದ
ನೋಟವೆಲ್ಲೊ, ಮುರಳಿಯೆಲ್ಲೊ, ಮನವ ಕಳೆದವ
ಅಣ್ಣರಾಮ ಹೇಳಿದಂಥ ಮಾತು ಸತ್ಯವೆ?
ಬಣ್ಣ ಎರಚಿ ಮಾಯಗಾತಿ ಮರುಳು ಗೈದಳೆ?
ಮೋಹನಾಂಗ ನನ್ನ ಕುವರ ಅವಳ ಒಲಿದನೆ?
ಮೋಹದಲ್ಲಿ ಮುಳುಗಿ ಮರೆತು ಮೋದ ತೊರೆದನೆ?
(೨೪-ಎಪ್ರಿಲ್-೨೦೧೪)
ಯಾರ ಕಣ್ಣು ನಾಟಿದೆಯೋ ಕೃಷ್ಣ ಕನಲಿರುವ
ಯಾವ ಗಾಳಿ ಸೋಕಿತೇನೊ ಚೆನ್ನ ಬೆಂದಿರುವ
ಯಾಕೆ ಹೀಗೆ ಮನವ ಹಿಂಡಿ ಚೆಲುವ ನೊಂದಿರುವ
ಏನ ತಿನ್ನಲಿಕ್ಕಿದರೋ ಗೋಪಕನ್ನೆಯರು
ಎಲ್ಲಿ ಆಟಕೆಳೆದಿಹರೋ ಗೊಲ್ಲಬಾಲರು
ಎಂಥ ಮರದ ಕೆಳಗೆ ಓಡಿಯೋಡಿಬಂದನೋ
ಏಳಲೊಲ್ಲ ಮುದ್ದುಮಲ್ಲ, ನಲುಗಿ ಕೊರಗುವ
ಏನ ಕಂಡು ಬೆದರಿ ಬಂದು ನಡುಗುತಿರುವನೋ
ಎಲ್ಲಿ ನಗುವ ಕಳೆದುಕೊಂಡು ಮುದುರುತಿರುವನೋ
ಎಂಥ ಹೊಳೆಯ ಸುಳಿಯ ಒಳಗೆ ಸೆಳೆಗೆ ಸಿಲುಕಿದ
ಏರುತಿಹುದು ತಾಪ, ರವಿಯೆ ಹಣೆಯಲಿಳಿದನೋ
ಕಾಡಿಬೇಡಿ ಬೆಣ್ಣೆ ಮೊಸರು ಕೇಳುತಿದ್ದವ
ಕಾಣದಂತೆ ಕಣ್ಣ ಹಿಂದೆ ಕದ್ದು ಮೆದ್ದವ
ನೋಡು ಈಗ, ಬೇಡವೆಂದು ಮೊಗವ ತಿರುವಿದ
ನೋಟವೆಲ್ಲೊ, ಮುರಳಿಯೆಲ್ಲೊ, ಮನವ ಕಳೆದವ
ಅಣ್ಣರಾಮ ಹೇಳಿದಂಥ ಮಾತು ಸತ್ಯವೆ?
ಬಣ್ಣ ಎರಚಿ ಮಾಯಗಾತಿ ಮರುಳು ಗೈದಳೆ?
ಮೋಹನಾಂಗ ನನ್ನ ಕುವರ ಅವಳ ಒಲಿದನೆ?
ಮೋಹದಲ್ಲಿ ಮುಳುಗಿ ಮರೆತು ಮೋದ ತೊರೆದನೆ?
(೨೪-ಎಪ್ರಿಲ್-೨೦೧೪)
Labels:
Poems,
ಕಥನಕಾರಣ,
ತುಂಟ-ತುಡುಗ-ತರಲೆ-ಮನ,
ಹೀಗೇ ಸಾಗಲಿ,
ಹೊಚ್ಚ ಹೊಸದು
Wednesday, 28 August 2013
ಬೆಣ್ಣೆ ಕಳ್ಳ
ನೆಲುವಿನಲ್ಲಿ ಹಾಲು ಮೊಸರು
ನೆಲದ ಮೇಲೆ ಗೊಲ್ಲ
ಮೆಲ್ಲಬೇಕು ಅಚ್ಚ ಬೆಣ್ಣೆ
ಕೈಗೆ ನಿಲುಕದಲ್ಲ
ಹಾರಿ ಕುಣಿದು ಕಪ್ಪೆ ಜಿಗಿದು
ತೂರಿ ನೋಟದೇಣಿ
ಭಾರಿ ಕಷ್ಟ ಪಟ್ಟರೇನು
ಕೈಗೆ ಸಿಗದು ಭರಣಿ
ಸುತ್ತ ಮುತ್ತ ಕಳ್ಳ ಚಿತ್ತ
ಇತ್ತ ಬಂದರಾರು?
ಮೆತ್ತಗೊಮ್ಮೆ ಇಣುಕಿ ನೋಡೆ
ಕೈಗೆ ಹೆಗಲ ಊರು
ಅಣ್ಣ ಬಂದ ಜೊತೆಗೆ ತಂದ
ತನ್ನ ಭಂಡ ಜೋಡಿ
ಬಣ್ಣವೇರಿ ಬಾನಿನತ್ತ
ಕೈಗೆ ಬಂತು ಜಾಡಿ
ಕಿಲಕಿಲಕಿಲ ಬಳೆಯ ಸದ್ದು
ಚಲನೆ ಪಡೆದ ಕೂಟ
ನೆಲದ ಮೇಲೆ ಹಾಲು ಮೊಸರು
ಕೈಗೆ ಬೆಣ್ಣೆಯೂಟ
(೦೨-ಆಗಸ್ಟ್-೨೦೧೩)
Labels:
Poems,
ಆತ್ಮ ಚಿಂತನ...,
ಕಥನಕಾರಣ,
ಚಿಂತನ-ಮಂಥನ,
ಹೀಗೇ ಸಾಗಲಿ,
ಹೊಚ್ಚ ಹೊಸದು
Monday, 18 March 2013
ಹೊಳೆಯೊಳಗೆ...
ತಲ್ಲೀನಳಾಗಿ ಬಟ್ಟೆ ಒಗೆಯುತ್ತಿದ್ದಳವಳು. ಹೊಳೆಯಲೆಗಳ ನಡುವೆ ಎಳೆಯೆಳೆ ಜಾಲಾಡುವಾಗ ಸೋಪಿನ ನೊರೆನೊರೆ ಜಾರುಗುಳ್ಳೆಗಳ ಜೊತೆಗೆ ಸುರುಳಿ ಬಿಚ್ಚಿಕೊಳ್ಳುತ್ತಾ ಹರಡಿಕೊಳ್ಳುತ್ತಾ ನೆನಪಿನಲೆಗಳೂ ಸೇರಿಕೊಂಡದ್ದು ಅವಳಿಗರಿವಾಗಲೇ ಇಲ್ಲ. ಮುಗ್ಧತೆಯ ಪದರದೊಳಗೆ ಎಲ್ಲವೂ ಸುಭದ್ರವೆಂಬ ಭರವಸೆ ಅವಳದು.
ಈಗವನಿಗೆ ಅವಳರಿಯದ ಬೇನೆ; ಡಿಮೆನ್ಶಿಯಾ.
(೧೬-ಡಿಸೆಂಬರ್-೨೦೧೨)
Labels:
ಕಥನಕಾರಣ,
ತುಂಟ-ತುಡುಗ-ತರಲೆ-ಮನ,
ಮಿನಿ-ಹನಿ,
ಹೊಚ್ಚ ಹೊಸದು
Thursday, 14 February 2013
ಒದ್ದೆಗೆನ್ನೆ
ಗಾಳಿಗುದುರೆಯಂಥಾ ಬೈಕ್ ಬೆನ್ನ ಮೇಲೇರಿ ಇವನ ಬೆನ್ನಿಗಂಟಿ ಕೂತು ಸಾಗುತ್ತಿದ್ದೆ. ಹೊರಗೂ ಒಳಗೂ ಮಬ್ಬು ಮಬ್ಬು. ಇದ್ದಕ್ಕಿದ್ದ ಹಾಗೆ ಬಾನು ಬಿರಿದು ಸುರಿಯಿತು. ನನ್ನ ಕೆನ್ನೆಗಳೂ ಒದ್ದೆ. ಹಳೇ ಬಸ್‌ಸ್ಟಾಪ್ ಹತ್ರ ಬೈಕ್ ನಿಲ್ಲಿಸಿದ, ಇಬ್ಬರೂ ಮಾಡಿನಡಿಗೆ ಓಡಿದೆವು. ಅಲ್ಲೊಂದು ಮೂಲೆಯ ಮಬ್ಬಿನಲ್ಲಿ ಮುದ್ದೆಯಾಗಿ ನಡುಗುತ್ತಾ ಒದ್ದೆಗೆನ್ನೆಗಳ ಅವನೂ ನಿಂತಿದ್ದ.
(೨೬-ಆಗಸ್ಟ್-೨೦೧೨)
Labels:
ಕಥನಕಾರಣ,
ತುಂಟ-ತುಡುಗ-ತರಲೆ-ಮನ,
ಮಿನಿ-ಹನಿ,
ಹೊಚ್ಚ ಹೊಸದು
Wednesday, 8 August 2012
ದಾರಿ
"ರಾಜಾ..." ಜಯರಾಮನ ಕರೆಗೆ ಓಡಿ ಬಂದಳು ರಾಜಶ್ರೀ. ನಲ್ವತ್ತೆರಡು ವರ್ಷಗಳ ಒಡನಾಟ ಬಿಟ್ಟೀತೆ?
"ಏನು ಬೇಕು, ದೊರೆ?"
"ಸ್ವಲ್ಪ ನೀರು..." ಸ್ವರ ಉಡುಗುತ್ತಿತ್ತು.
ಮಗ ಬೇಗ ಬರಬಾರದೆ? ಬರಬೇಕಾಗಿತ್ತು ಈ ಹೊತ್ತಿಗೆ. ಫ್ಲೈಟ್ ಲೇಟೋ ಏನೋ! ಹಂಬಲಿಸುತ್ತಲೇ ಜಯರಾಮನ ಒಣಗುತ್ತಿದ್ದ ತುಟಿಗಳ ನಡುವೆ ಒಂದೆರಡು ಗುಟುಕು ಎಳನೀರು ಹನಿಸಿದಳು. ನಿಧಾನವಾಗಿ ಸವಿದ. ಅಷ್ಟಕ್ಕೇ ಸುಸ್ತಾಗಿ ಹಾಗೇ ದಿಂಬಿಗೆ ಒರಗಿದ. ಒಡಲೆಲ್ಲ ಬಗೆದು ನೋಡಿದರೆ ಏನಿದ್ದೀತು ಒಳಗೆ? ಗೆದ್ದಲು ತಿಂದ ಮರದ ಹಾಗಿರಬಹುದಾ? ರಾಜಶ್ರೀ ಮುಂದೆ ಯೋಚಿಸದೆ ಅಡುಗೆ ಕೆಲಸ ಮುಗಿಸಲು ಹೋದಳು.
ಯೋಚನೆಗಳು ಬೆನ್ನು ಬಿಡವು. ಇರುವ ಒಬ್ಬನೇ ಮಗ ಸಂಸಾರ ಸಮೇತ ಆಸ್ಟ್ರೇಲಿಯಾದಲ್ಲಿ. ಈ ವರ್ಷ, ಮುಂದಿನ ವರ್ಷ ಅನ್ನುತ್ತಾ ಹತ್ತು ವರ್ಷಗಳೇ ಕಳೆದಾಗಿದೆ. ಇನ್ನೂ ಗಂಟು ಮೂಟೆ ಕಟ್ಟಿ ಊರಿಗೆ ಬಂದಿಲ್ಲ. ಇಲ್ಲಿ ಜಯರಾಮನ ಆರೋಗ್ಯ ಗಂಟು ಮೂಟೆ ಕಟ್ಟಲಿಕ್ಕೆ ಶುರು ಮಾಡಿದ್ದು ವರ್ಷದ ಹಿಂದೆ ಗೊತ್ತಾದಾಗ ಗಾಬರಿಯಾದದ್ದು ಅವನಿಗೇ, ಇವಳಿಗಲ್ಲ. ಇತ್ತೀಚೆಗೆ, ಜಯರಾಮ ದಿನಗಣನೆಯ ಮಟ್ಟ ಮುಟ್ಟಿದ ಅಂದಾಗ, ಫೋನಲ್ಲಿ ಹೇಳಿದ್ದ, "ಅಮ್ಮ, ನೀನು ಪಾಸ್‌ಪೋರ್ಟಿಗೆ ಅಪ್ಲೈ ಮಾಡು. ಮತ್ತೆ ಇಲ್ಲಿಗೇ ಬಂದುಬಿಡು..." ಸುಮ್ಮನೆ ಕರೆ ಕಟ್ ಮಾಡಿದ್ದಳು. ಅವನೇನೋ ಅಪ್ಪನ ಸಾವನ್ನು ಎದುರು ನೋಡುತ್ತಿರಬಹುದು, ಅವನಿಗೆ ಬದುಕು ಎದುರಾಗಿದೆ. ಜಯರಾಮನ ನಂತರ ತನ್ನ ದಾರಿ ಹೇಗೆ? ಪ್ರಶ್ನೆ ಭೂತಾಕಾರ ಮಾತ್ರವೇ ಆಗುತ್ತಿತ್ತು ರಾಜಶ್ರೀಯ ಮನದಲ್ಲಿ.
ಯಾವುದೇ ಘಳಿಗೆಯಲ್ಲಿ ಗಾಡಿ ಮನೆ ಮುಂದೆ ಬರಬಹುದು. ಮಗ, ಸೊಸೆ, ಮತ್ತು ಮೊಮ್ಮಗ ಬಂದುಬಿಡುತ್ತಾರೆ. ವಾರದಿಂದ ಕಾಯುತ್ತಿದ್ದಳವಳು. ಅಡುಗೆ ಮುಗಿಸಿ ಕಟ್ಟೆ ಒರಸಿ ಹಾಗೇ ಗೋಡೆಗೊರಗಿ ದೇವರ ಗೂಡು ನೋಡುತ್ತಾ ಕೂತವಳ ಕಣ್ಣುಗಳಲ್ಲಿ ಧಾರೆ.
"ಭಗವಂತಾ, ಈ ಎರಡು ಜೀವಗಳಿಗೆ ಇನ್ನೆಷ್ಟು ದಿನಗಳ ಯಾತನೆ? ಅವರ ಮೌನ ವೇದನೆ ಸಹಿಸೋದು ಹೇಗೆ ನಾನು? ಆ ನೋವು ನಂಗಾದರೂ ಕೊಡು." ಮನದೊಳಗಿನ ಪರಮಾತ್ಮನೊಡನೆ ಮಾತಾಡುತ್ತಾ ಗೂಡಿನ ಬಿಂಬ ಕಂಗಳಲ್ಲಿ ತುಂಬಿಕೊಂಡು ಕಳೆದುಹೋಗದಂತೆ ಕಣ್ಣು ಮುಚ್ಚಿದಳು. ಆ ಪರಮಾತ್ಮನ ಜೊತೆ ಮತ್ತಷ್ಟು ಮಾತಾಡಿದಳು. ಒಳಗೊಳಗೇ ಇನ್ನೂ ಇನ್ನೂ ಕೊಳೆತಂತೆ ಕರಗಿಕೊಳ್ಳುತ್ತಿರುವ ಜೀವಕೋಶಗಳ ಶಿಥಿಲ ದೇಹದಿಂದ ಆ ವ್ಯಾಧಿಕಣಗಳು ದೇವಕರುಣೆಯ ಶಕ್ತಿಧಾರೆಯಲ್ಲಿ ತೊಳೆದು ಹೋಗುವ ದೃಶ್ಯ ಕಲ್ಪಿಸಿಕೊಂಡಳು. ಅದೂ ಕೂಡಾ ಜಯರಾಮನಿಗೆ ನೋವೇ ಕೊಡಬಹುದಾ? ಉತ್ತರವಿರಲಿಲ್ಲ.
"ಬಿಡುಗಡೆ ಕೊಡು, ದೇವಾ... ಬಿಡುಗಡೆ ಕೊಡು" ಕಂಗೆಟ್ಟು ಮೊರೆಯಿಟ್ಟಳು.
ಗೇಟ್ ತೆರೆದು ಗಾಡಿ ಒಳ ಬಂದು, ಬಾಗಿಲುಗಳ ಸದ್ದಾಗಿ, ಚಪ್ಪಲಿಗಾಲುಗಳು ಮೆಟ್ಟಲೇರಿ ಮುಂಬಾಗಿಲು ದೂಡಿಕೊಂಡು ಒಳಬಂದ ದನಿಗಳಿಗೆ ಪ್ರತಿಯಾಗಿ ಜಯರಾಮ ಇಷ್ಟೇಇಷ್ಟು ಉತ್ಸಾಹ ಕೂಡಿಸಿಕೊಂಡು ಕೂಗಿ ಕರೆದ,
"ರಾಜಾ... ಬಾ... ಮಕ್ಕಳು ಬಂದ್ರು ನೋಡು. ರಾಜಾ..."
ಒಳಮನೆಯಲ್ಲಿ ಸದ್ದಿಲ್ಲ.
(೦೯-ಜುಲೈ-೨೦೧೨)

Thursday, 27 October 2011
ಪರಾಧೀನ-೦೪
ಮುಂದಿನ ನಿಗದಿತ ಭೇಟಿಯ ಸಮಯಕ್ಕೆ ಸರಿಯಾಗಿ ನಗುತ್ತಲೇ ಬಂದವರ ಮುಖದಲ್ಲಿ ಲವಲವಿಕೆಯಿತ್ತು, "ಆತಂಕ ಕಡಿಮೆಯಾದಂತಿದೆ" ಎಂದರು. ಈ ನಿರಾತಂಕವೇ ಚಿಕಿತ್ಸಕರಿಗೆ ಉತ್ತೇಜಕ. ರಿಲ್ಯಾಕ್ಸೇಷನ್ ಸುಲಭದಲ್ಲೇ ಸಾಧ್ಯವಾಗಿ ಟ್ರಾನ್ಸ್ ಸ್ಥಿತಿಗೆ ಕೆಲವೇ ನಿಮಿಷಗಳಲ್ಲಿ ಜಾರಿಕೊಂಡರು.
"...ತೆಂಕು (ದಕ್ಷಿಣ) ದಿಕ್ಕಿಗೆ ತಲೆ ಹಾಕಿ ಮಲಗಿಸಿದ ಮನುಷ್ಯ ದೇಹ, ಸಮುದ್ರ ತೀರದಲ್ಲಿ. ತಲೆ-ಮುಖ ಚಚ್ಚಿ ಹಾಕಿದೆ, ಗುರುತಾಗುತ್ತಿಲ್ಲ. ಸುತ್ತಲಿರುವ ಜನ ದೇಹವನ್ನು ತಿರುಗಿಸಲಿಕ್ಕೆ ನೋಡ್ತಿದ್ದಾರೆ, ಕಡಲಲ್ಲಿ ತೇಲಿ ಬಂದ ಶವ ಅಂತ ಮಾತಾಡ್ತಿದ್ದಾರೆ. ಸುಮಾರು ಇಪ್ಪತ್ತೆಂಟು ವರ್ಷದ ಯುವಕನ ಬಾಡಿ. ಏನೋ ಸೆಳೆತ, ಈ ದೇಹದ ಬಗ್ಗೆ. ಏನೋ ಶಕ್ತಿ ಎಳೀತಾ ಇದೆ ನನ್ನನ್ನು ಆ ಕಡೆಗೆ. ಮತ್ತೊಮ್ಮೆ ಬೆಳಕಿನ ಸುರಂಗ, ಅಲ್ಲಿಂದ ನನ್ನನ್ನು ರಿಲೀಸ್ ಮಾಡಲಾಗಿದೆ. ಮುದುಕಿಯೊಬ್ಬರು, ಕೃಷಿಕ ಹೆಂಗಸಿನ ವೇಷಭೂಷಣ... ಕೈಯಲ್ಲಿ ಕತ್ತಿ (ಕುಡುಗೋಲು) ಹಿಡಿದು ನಿಷ್ಠುರ ಕಣ್ಣುಗಳಿಂದ ನನ್ನನ್ನು ನೋಡ್ತಿದ್ದಾರೆ... ಆ ದೇಹದ ಕಡೆಗಿನ ಸೆಳೆತವನ್ನು ಅವರೇ ಕತ್ತರಿಸಿದ್ದಾರೆ. ಈಗ ತಿಳಿಯಿತು, ಅದು ನನ್ನ ದೇಹ. ಪುನಃ ಬೆಳಕಿನ ಸುರಂಗ. ಆಕಡೆಯಿಂದ ಬಾಗಿಲು ಹಾಕಿದೆ. ಅದನ್ನು ತೆರೆದು ಸುರಂಗದೊಳಗೆ ಕರೆದುಕೊಂಡು ಹೋದ್ರು, ಅಜ್ಜಿ. ಬಲಬದಿಗೆ ತಿರುಗಿ ಹಿಂದೆ ನನ್ನ ಕಡೆ ನೋಡಿದ್ರು. ನೋಟ ಭಯ ಹುಟ್ಟಿಸುತ್ತೆ. ಹಿಂಬಾಲಿಸುವಂತೆ ಸನ್ನೆ ಮಾಡಿದ್ರು, ಹಿಂಬಾಲಿಸಿದೆ.
ಸುರಂಗ ಮುಗಿದು ಹಸಿರು ತುಂಬಿದ ಮರಗಳ ಕಾಡು. ಪರಿಚಯ ಇಲ್ಲ. ಅರೆಗತ್ತಲೆ. ತುಂಬಾ ದೊಡ್ಡ ದೊಡ್ಡ ಮರಗಳು. ಒಂದು ಮರದ ಒಂದು ಕೊಂಬೆಗೆ ಯಾವುದೋ ದೇಹ ತೂಗಾಡಿಸಿದ್ದಾರೆ. ಆತ್ಮಹತ್ಯೆ ಅಲ್ಲ. ಕೊಲೆ ಮಾಡಿ ತೂಗಾಡಿಸಿದ್ದು. ದೇಹದ ಮುಖ ಕೆಳಮುಖವಾಗಿದೆ. ಹೆಣ್ಣು. ಸೀರೆಯಲ್ಲೇ ಕಟ್ಟಿದ್ದಾರೆ, ಸುಮಾರು ಇಪ್ಪತ್ತೆರಡು-ಇಪ್ಪತ್ಮೂರರ ಹುಡುಗಿ. ಕುತ್ತಿಗೆಯ ಹಿಂದಿನ ನರಗಳು, ಹಿಂದಲೆಯ ಕೆಳಗೆಲ್ಲ ಎದ್ದು ಕಾಣ್ತವೆ. ಅಜ್ಜಿಯ ಹಿಂದೆಯೇ ಹೋಗುವ ಪ್ರಯತ್ನ ಮಾಡಿದಾಗ ಆ ದೇಹ ವಿಕಾರ ಮುಖ ಮಾಡಿ ನನ್ನ ಕಡೆ ನೋಡಿ ಮಾತಾಡ್ತಾ ಉಂಟು... ನೀನೇ ಕೊಲೆ ಮಾಡಿದ್ದು, ಕುತ್ತಿಗೆ ಜಜ್ಜಿ ಕೊಂದಿದ್ದೀ, ಅದಕ್ಕೇ ನಿಂಗೆ ಅಲ್ಲೇ ನರಗಳ ದೌರ್ಬಲ್ಯ ಅಂತ ಹೇಳ್ತಾ ಉಂಟು. ಅಜ್ಜಿ ಬೇರೆ ಮರದ ಬುಡದಲ್ಲಿ ನಿಂತಿದ್ದಾರೆ. ನನ್ನ ದೇಹದ ಚೈತನ್ಯ ಆ ಶವಕ್ಕೆ ಸೇರ್ತಾ ಉಂಟು ನನ್ನಲ್ಲಿ ನಿಃಶಕ್ತಿ. ಮರದಿಂದ ಕಳಚಿಕೊಂಡು ಕೆಳಗೆ ಬಂತು. ಆ ವಿಕಾರ ಮುಖದ ಶವದ ತಲೆಗೆ ಈಗ ಹೆಣ್ಣು ಶಕ್ತಿದೈವದ ಥರ ಗರಿಯ ಕಿರೀಟ. ನನ್ನ ಕಡೆ ವೇಗವಾಗಿ ಬರ್ತಾ ಉಂಟು, ನನಗೆ ಹೊಡೀಲಿಕ್ಕೆ ಬರ್ತಾ ಉಂಟು. ಅಜ್ಜಿಯ ಕಡೆಯಿಂದ ಒಂದು ಮಿಂಚು, ಒಂದು ಬೆಳಕಿನ ಪುಂಜ, ಗದೆಯ ರೂಪಕ್ಕೆ ಬಂತು. ನನ್ನ ಮತ್ತು ಆ ದೇಹದ ನಡುವೆ ಬಂತು. ಆ ದೇಹದ ಎದೆಯ ಭಾಗಕ್ಕೇ ಒತ್ತಿಹಿಡೀತು, ತಳ್ಳಿಕೊಂಡೇ ಹಿಂದೆ ಹಿಂದೆ ಓಡಿಸಿ ಅಲ್ಲಿ ಪಶ್ಚಿಮಕ್ಕೆ ಹರೀತಾ ಇರುವ ನದಿ ನೀರಿಗೆ ದೂಡಿತು. ನೀರಿನೊಳಗೆ ಒತ್ತಿ ಹಿಡೀತು. ಹೆಣ್ಣುದೈವಶಕ್ತಿಯ ಕಿರೀಟ ಕರಗಿತು, ಅದರ ಶಕ್ತಿ ನಿಃಶಕ್ತಿಯಾಯ್ತು. ಅಜ್ಜಿಯ ಹಿಂದೆ ನಾನು ನಿಂತು ನೋಡ್ತಿದ್ದೇನೆ. ನೀರಿನಲ್ಲಿ ತೇಲುತ್ತಿರುವ ದೇಹದ ಮೇಲೆಯೇ ಬೆಳಕಿನ ಗದೆಯೂ ಗಾಳಿಯಲ್ಲಿ ತೇಲುತ್ತಾ ಮುಂದೆ ಸಾಗುತ್ತಾ ಹೋಯ್ತು. ಅಜ್ಜಿ ಮತ್ತು ನಾನು ಹಿಂಬಾಲಿಸಿದೆವು. ದೇಹ ಪೂರ್ತಿ ನೀರಲ್ಲಿ ಕರಗಿ ಹೋದಮೇಲೆ ಬೆಳಕು ಬಂದು ಅಜ್ಜಿಯನ್ನು ಸೇರಿತು. ನನ್ನ ಮೈಯಲ್ಲಿ ಕಂಪನ (ಹೊರ ಮೈಯಲ್ಲೂ ಹದವಾದ ನಡುಕ).
ನನ್ನ ಹಿಂದೆ ಉರಿ, ನಾ ನಿಂತಿದ್ದಲ್ಲಿ ಬೆಂಕಿ. ಅಜ್ಜಿ ನೋಡ್ತಾರೆ, ಹಸಿ ಮರಕ್ಕೆ ಬೆಂಕಿ. ಅಜ್ಜಿ ಅಲ್ಲಿ ಹೋದಾಗ ಬೆಂಕಿ ಶಾಂತವಾಯ್ತು. ಮರ ಸುಡ್ಲಿಲ್ಲ. ಅಜ್ಜಿ ಮುಂದೆ, ನಾನು ಅವರ ಹಿಂದೆ, ಪಶ್ಚಿಮಾಭಿಮುಖವಾಗಿ ಹೋಗ್ತಿದ್ದೇವೆ. ಈಗ ಅಜ್ಜಿ ಐಸ್ ಮೇಲೆ ನಡೀತಿದ್ದಾರೆ, ನಾನು ತೇಲಾಡ್ತಾ ಹೋಗ್ತಿದ್ದೇನೆ. ವಾಯುವ್ಯದ ಕಡೆಗೆ, ಸಿಮೆಂಟ್ ಸುರಂಗದ ಥರ. ಅಜ್ಜಿಯ ಕೈಯಲ್ಲಿ ಕತ್ತಿ ಇನ್ನೂ ಉಂಟು. ಸನ್ನೆ ಮಾಡಿ ಕರೆದು ಗುಡ್ಡದ ಬದಿಗೆ ಕರೆದುಕೊಂಡು ಹೋದ್ರು, ಸುರಂಗ ದಾಟಿ, ನೈಋತ್ಯದ ಕಡೆ ಸಾಗಿದ್ದೇವೆ. ಕಣಿವೆ ಒಂದು ಬದಿಯಲ್ಲಿ. ಆಳದಲ್ಲಿ ನೀರು, ಕೆಂಪು ಮಿಶ್ರಿತ ಮಣ್ಣು. ಕುರುಚಲು ಗುಡ್ಡಗಾಡು, ಕಡಿಮೆ ಮರಗಳು. ಈಗ ಸರಿಯಾದ ರಸ್ತೆಗೆ ಬಂದಿದ್ದೇವೆ. ಅಜ್ಜಿ ಬಲಗೈ ಎತ್ತಿ ಕತ್ತಿಯಿಂದ ದಾರಿ ತೋರಿಸ್ತಾ ಇದ್ದಾರೆ, ಪಶ್ಚಿಮಕ್ಕೆ. ಅವರು ನೈಋತ್ಯಕ್ಕೇ ಹೋದ್ರು. ನಾನು ಗುಡ್ಡದ ಮೇಲಿಂದ ತೇಲಿಕೊಂಡು ಬರ್ತಾ ಇದ್ದೇನೆ. ಆಚೆಕಡೆ ಅಜ್ಜಿ ಮಣ್ಣಿನ ಸುರಂಗದೊಳಗೆ ಸೇರಿಕೊಂಡರು, ಹಳದಿ ಬೆಳಕು ಸುರಂಗದಲ್ಲಿ. ನಾನು ಗುಡ್ಡದ ಮೇಲೆ ನಿಂತು ನೋಡ್ತಾ ಇದ್ದೇನೆ. ಅದರ ಕಿರಣಗಳು ಬಂದು ನನ್ನ ಹಣೆ ಸೋಕಿ, ದಾಟಿ ಹೋದವು. ನಾನು ಕೈಮುಗಿದು ನಿಂತಿದ್ದೇನೆ. ಮತ್ತೆ ಬೆಳಕು ಕಾಣದಾಯ್ತು. ಕಿರಣ ನಿಂತಿತು. ಸುರಂಗ ಕತ್ತಲಾಯ್ತು. ನಾನು ಪಶ್ಚಿಮಕ್ಕೆ ಸಾಗಿ ಸಂಜೆಯ ಅರೆಗತ್ತಲೆ ಹೊತ್ತಲ್ಲಿ ಸಮುದ್ರ ದಡಕ್ಕೆ ಬಂದೆ. ನನ್ನ ದೇಹ ಇದ್ದ ತೋಟದ ಪರಿಸರಕ್ಕೆ ಬಂದು, ದೇಹ ಸೇರಿಕೊಂಡೆ."
ಇದೆಂಥ ಕಥನ! ಯಾವುದೋ ಜನ್ಮದಲ್ಲಿ ಯಾವುದೋ ಪರಿಸರದಲ್ಲಿ ಯಾವುದೋ ಕಾರಣಕ್ಕಾಗಿ ಇಪ್ಪತ್ತೆರಡು-ಇಪ್ಪತ್ಮೂರರ ತರುಣಿಯನ್ನು ಹತ್ಯೆಗೈದು, ನಂತರ ತಾನೂ ಆತ್ಮಹತ್ಯೆಗೈದ ಇಪ್ಪತ್ತೆಂಟರ ತರುಣನೇ ತಾನು, ಆಕೆಯ ಆತ್ಮ ತನ್ನನ್ನು ಕಾಡುತ್ತಿತ್ತು, ತನ್ನ ಮನೆತನದ ಹಿರಿಯಳಂತೆ ಭಾಸವಾಗುತ್ತಿದ್ದ ಅಜ್ಜಿಯಿಂದ ರಕ್ಷಿಸಲ್ಪಟ್ಟೆ ಅನ್ನುವ ಒಂದು ಸಿನಿಮೀಯ ಘಟನಾವಳಿಗಳನ್ನು "ಕಂಡು-ಅನುಭವಿಸಿ" ಎದ್ದು ಬಂದ ಜಗನ್ ಅದ್ಯಾವುದೋ ಭ್ರಾಮಕ ಲೋಕದಲ್ಲಿದ್ದಂತೆಯೇ ಕಾಣುತ್ತಿದ್ದರು. ಈ ಎಲ್ಲ ಕಥನದ ವಿಶ್ಲೇಷಣೆ ಮಾತಿಗೆ ಮೀರಿದ ಅನುಭವ. ಇದರ ಸತ್ಯಾಸತ್ಯತೆಯ ಪರೀಕ್ಷೆ ಮಾಡುವ ಅವಕಾಶವೂ ಇರಲಿಲ್ಲ, ಕಾಲ-ದೇಶಗಳ ಗುರುತಿರಲಿಲ್ಲ. ಆ ಅಜ್ಜಿಯೂ ಜಗನ್‌ರ ಸ್ವಂತ ಅಜ್ಜಿಯಂದಿರಲ್ಲ. ಇಲ್ಲಿ ಜಗನ್ ತೊಂದರೆಯಿಂದ ಮುಕ್ತರಾದರೇ ಅನ್ನುವುದು ಮಾತ್ರವೇ ಮುಖ್ಯಪ್ರಶ್ನೆಯಾಗಿ ಉಳಿದಿತ್ತು. ಅವರ ಆತಂಕ ಉದ್ವೇಗಗಳಿಗೆಲ್ಲ ಒಂದು ಹೆಣ್ಣುದೈವಶಕ್ತಿಯ ಪ್ರಯೋಗವೇ ಕಾರಣವಾಗಿತ್ತೆಂದು ಜ್ಯೋತಿಷಿಗಳು ಹೇಳಿದ್ದ ಮಾತು ಜಗನ್ ಮನದಾಳದಲ್ಲಿ ಈ ಘಟನಾವಳಿಗಳನ್ನು ಪ್ರೇರೇಪಿಸಿತೆ? ಅಥವಾ ನಿಜವಾಗಿಯೂ ಈ ಹಿನ್ನೆಲೆಯನ್ನೇ ಜ್ಯೋತಿಷಿಗಳು ಕಂಡಿದ್ದರೆ? ಗೊತ್ತಿಲ್ಲ.
ಮುಂದಿನ ವಾರ ಮತ್ತೊಮ್ಮೆ ಬಂದ ಜಗನ್ ಮಾತ್ರ ತುಂಬಾ ಗೆಲುವಾಗಿದ್ದರು. "ಇಂದು ಥೆರಪಿ ಸೆಷನ್ ಬೇಡ. ಸುಮ್ನೆ ಮಾತಾಡಿ ಹೋಗ್ಲಿಕ್ಕೆ ಬಂದೆ. ಮೊನ್ನೆ ನಾನೊಬ್ಬನೇ ಗಿಜಿಗುಟ್ಟುವ ಊರ-ಪೇಟೆಯ ರಸ್ತೆಗಳಲ್ಲಿ ಆತಂಕವಿಲ್ಲದೆ ತಿರುಗಾಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೋಣೆಯಲ್ಲಿ ನಾನೊಬ್ಬನೇ ಮಲಗುತ್ತಿದ್ದೇನೆ. ಊಟ-ನಿದ್ದೆ ಎಲ್ಲ ಸರಿಯಾಗಿದೆ. ನಾಳೆ ಸಂಜೆ ಅಣ್ಣ-ಅತ್ತಿಗೆ, ಹೆಂಡತಿ ಎಲ್ಲರ ಒಟ್ಟಿಗೆ ಮೂವೀಗೆ ಹೋಗುವ ಯೋಚನೆ ಉಂಟು. ನಾಡಿದ್ದು ವಾಪಾಸ್ ಮುಂಬಯಿಗೆ." ಎಂದರು ಉತ್ಸಾಹದಲ್ಲಿ. ಅವರ ಆ ಉತ್ಸಾಹ ಹೀಗೇ ಅವರೊಂದಿಗಿರಲೆಂದು ಹಾರೈಸಿ ಬೀಳ್ಕೊಟ್ಟೆ.
(ಮುಗಿಯಿತು)

ನೀಳ್ಗತೆ,
ರಿಗ್ರೆಷನ್,
ಹೊಚ್ಚ ಹೊಸದು
Tuesday, 18 October 2011
ಎರಡು ಹನಿ-ಮಿನಿ
ಬಿಂಬ
ಅಗಾಧ ಕತ್ತಲಿನೊಳಗೆ ಒಬ್ಬಳೇ ಕೂತಿದ್ದೇನೆ.
ಬೆಂಕಿಕಡ್ಡಿ ಗೀರಿದ ಹೊಗೆ ವಾಸನೆ.
‘ಯಾರು?’ ಉತ್ತರವಿಲ್ಲ.
ಪಿಶಾಚಿಗಳು ಬಂದು ಹೋದವು.
ಅನಂತ ಮೌನದೊಳಗೆ ಒಬ್ಬಳೇ ಕೂತಿದ್ದೇನೆ.
ನನ್ನೆಲ್ಲ ನೋವಿನ ಮೊತ್ತ ನನ್ನೊಳಗೆ ಹುತ್ತವಾಗುತ್ತಿದೆ.
ನನ್ನನ್ನೇ ಕಳೆದುಕೊಂಡಿದ್ದೇನೆ, ಹುಡುಕಲಾರದಲ್ಲಿ.
******
(೨೩-ಸೆಪ್ಟೆಂಬರ್-೨೦೧೧)
****** ******
ನಾಳೆ
ಅದೊಂದು ಹುಣ್ಣಿಮೆ ಹಬ್ಬದ ದಿನ. ಹೆತ್ತವರೊಡನೆ ಕಿತ್ತಾಡಿ ಮನೆಯಿಂದ ಹೊರಬಂದಿದ್ದೆ. ಮತ್ತದೆಷ್ಟು ಹುಣ್ಣಿಮೆಗಳೂ ಅಮಾವಾಸ್ಯೆಗಳೂ ಕಾಲನುರುಳಿನೊಳಗೆ ಕಳೆದೇಹೋದವು. ಭೀಮನೂ ಸಿಕ್ಕಿಲ್ಲ, ಸೋಮನೂ ದಕ್ಕಿಲ್ಲ. ಕಾಮನೊಡನೆ ಕಾದಾಟವೇ ಬದುಕಾದವಳಿಗೆ ದಿಕ್ಕಾದರೂ ಇದೆಯೆ? ನಾಳೆ ಯಾಕಾಗುತ್ತೊ?
******
(೧೨-ಅಕ್ಟೋಬರ್-೨೦೧೧)
****** ******
Friday, 17 June 2011
ಪರಾಧೀನ-೦೩
ಮೊದಲೆರಡು ಸೆಶನ್‌ಗಳಲ್ಲಿ ಅಂಥ ಪರಿಣಾಮವೇನೂ ಕಾಣಲಿಲ್ಲ. ನಿರಾಳವಾಗುವುದಕ್ಕೇ ಜಗನ್‌ಗೆ ಸಮಯ ತಗಲುತ್ತಿತ್ತು. ಎರಡು ವಾರಗಳ ಭೇಟಿಯ ಕೊನೆಯಲ್ಲಿಯೂ ದಿನವೂ ರಿಲ್ಯಾಕ್ಸೇಷನ್ ಅಭ್ಯಾಸ ಮಾಡಿರೆಂದು ಹೇಳಿ ಕಳಿಸುತ್ತಿದ್ದೆ. ಬೆಳಗಿನ ಹೊತ್ತು ಪ್ರಾಣಾಯಾಮ ಮಾಡುತ್ತಿದ್ದವರು ಬಿಟ್ಟಿದ್ದಾರೆಂದು ತಿಳಿಸಿದ್ದರು ಮೊದಲದಿನ. ಅದನ್ನೂ ಮುಂದುವರಿಸಲು ಸೂಚನೆ ನೀಡುತ್ತಿದ್ದೆ. ಮೂರನೇ ಬಾರಿ ಬಂದಾಗ ತುಸು ಗೆಲುವಾಗಿದ್ದಂತೆ ಕಂಡರು. ಒಬ್ಬರೇ ಬಂದಿದ್ದರು, ನಗುತ್ತಾ, ‘ಅಷ್ಟು ಧೈರ್ಯ ಬಂದಿದೆ’ ಅಂದರು. ಆ ನಗುವೇ ಖುಷಿಕೊಟ್ಟಿತು. ಸಮ್ಮೋಹನಕ್ಕಾಗಿ ರಿಲ್ಯಾಕ್ಸೇಷನ್ ಮಾಡಿಸುತ್ತಿದ್ದಾಗ ಸುಲಭವಾಗಿ ಸ್ಮೃತಿವಲಯದ ಆಳಕ್ಕೆ ಜಾರಿಕೊಂಡರು. ಬೆಳಕಿನ ಸುರಂಗದೊಳಗಿಂದ ಹಾದು ಬರುವ ಪ್ರಕ್ರಿಯೆಯಲ್ಲೇ ನನ್ನ ಸೂಚನೆಯನ್ನು ಅನುಸರಿಸಿ ಯಾವುದೋ ಕಾಲ-ದೇಶದ ಪರಿಧಿಯೊಳಗಿಳಿದರು.
(ಜಗನ್ ಮಾತುಗಳನ್ನು ಸಂಕ್ಷಿಪ್ತಗೊಳಿಸಲಾಗಿದೆ)
"ಕೆಂಪು ಹೆಂಚಿನ ಮಾಡು, A ಟೈಪ್ ಮಾಡು, ಸಾಲಾಗಿ. ದೇವಸ್ಥಾನ ಅಥವಾ ಮನೆ.. ಮನೆಯೇ, ಹತ್ತಿರ ಹತ್ತಿರ ಸುಮಾರು ಮನೆಗಳು. ಮೇಲೆ ಬಂಗಾರ ಬಣ್ಣದ ಕಲಶಗಳು. ಗೋಡೆಗಳಿಗೆ ಕೇಸರಿ, ನೀಲಿ ಬಣ್ಣ. ಹಸುರು ಗುಡ್ಡದ ಬದಿಯಲ್ಲಿ ಮೂರು ಮಾಡುಗಳು, ಶೃಂಗದ ಹಾಗೆ, ಮೇಲೆ ಚೂಪು ಕೆಳಗೆ ಅಗಲ. ಛಳಿ ಉಂಟು (ಹದವಾಗಿ ನಡುಕ ಜಗನ್ ಮೈಯಲ್ಲಿ. ಹೊದಿಕೆ ಹೊದೆಸಿದೆ). ಹಸುರು ಹುಲ್ಲಿನ ಮೇಲೆ ಹನಿಹನಿ ನೀರುದನಗಳು ಹುಲ್ಲು ಮೇಯ್ತಾ ಇದ್ದಾವೆ, ಕಪ್ಪು-ಬಿಳಿ ಬಣ್ಣದ ದನಗಳು. ಸುಮಾರು ನಾಲ್ಕೂವರೆಯ ಹೊತ್ತು, ಸೂರ್ಯಾಸ್ತದ ಓರೆ ಕೇಸರಿ ಕಿರಣಗಳು ಹುಲ್ಲಿನ ಮೇಲೆ ಬೀಳ್ತದೆ. ನೇಪಾಳ ಅಥವಾ ಟಿಬೆಟ್ ಥರ ಕಾಣ್ತದೆ. ಮೈಮೇಲೆ ಅರ್ಧಕ್ಕೆ ಗುಲಾಬಿ ಬಣ್ಣದ ಬಟ್ಟೆ ಧರಿಸಿದ ಬೋಳುತಲೆಯ ಸನ್ಯಾಸಿ, ಎದೆಯ ಅರ್ಧಕ್ಕೆ ಶಾಲು ಹೊದ್ದಿದ್ದಾರೆ. ಅವರಿಗೆ ನಾನು ಕಾಣ್ತಾ ಇಲ್ಲ. ನಾನು ಈಶಾನ್ಯದಲ್ಲಿದ್ದೇನೆ, ಅವರು ಪೂರ್ವದಲ್ಲಿ. ನಾನು ಹಿಂದೆ ಸರೀತಿದ್ದೇನೆ, ಅವರು ಧಾಪುಗಾಲು ಹಾಕಿ ಬಂದು ನಾನಿರುವ ಕಡೆಗೆ ನೋಡಿ, ಸುತ್ತು ಹಾಕಿ ಮತ್ತೆ ಗುಡಿಯ ಕಡೆಗೆ ಹೋಗಿ ಅಲ್ಲಿ ಜಗಲಿಯಲ್ಲಿ ಕೂತರು. ಎಡಗೈಯಲ್ಲಿ ಗಲ್ಲ ಇಟ್ಟು ನೋಡ್ತಿದ್ದಾರೆ.
ನನ್ನ ಟ್ರಾನ್ಸ್‌ಪರೆಂಟ್ ಬಿಳಿ ಬಣ್ಣ ಕ್ರೀಮ್ ಆಯ್ತು... ಛಳಿ, ನಡುಕ... (ನಿಜವಾಗಿಯೂ ಮತ್ತಷ್ಟು ನಡುಗುತ್ತಿದ್ದರು. ಮತ್ತೊಂದು ಹೊದಿಕೆ ಹೊದೆಸಿದೆ). ಈಗ ನನ್ನ ಬಣ್ಣ ಮಾರ್ಬಲ್ ಥರ ಒಪೇಕ್ ವೈಟ್. ಛಳಿ ಜಾಸ್ತಿ ಆಗ್ತಿದೆ. ಆದ್ರೆ ನಂಗೆ ಇಲ್ಲಿಂದ ಆಚೀಚೆ ಹಂದಾಡ್ಲಿಕ್ಕೇ (ಕದಲೋದಿಕ್ಕೆ) ಆಗುದಿಲ್ಲ. ಆ ಸನ್ಯಾಸಿ ಈಗ ನಗಾಡ್ತಿದ್ದಾರೆ. ಯಾಕೆ ಹೀಗೆ? ನಾನು ಏನ್ ಮಾಡ್ಬೆಕು? ಕೇಳಿದೆ (ನನ್ನ ಸೂಚನೆಯ ಮೇರೆಗೆ). ಈಗ ಅಲ್ಲಿಂದ ಎದ್ದು ಮುಂದೆ ಬರ್ತಾರೆ. ನನ್ನ ಕಡೆಗೆ. ನಿಂತರು. ಅವರು ಕಾಣುದಿಲ್ಲ, ಆದ್ರೆ ಅದೇ ಜಾಗದಲ್ಲಿ ಉಂಗುರಕ್ಕೆ ಕಲ್ಲುಗಳನ್ನು ಸೆಟ್ ಮಾಡಿದ ಹಾಗೆ ಬೇರೆ ಬೇರೆ ಬಣ್ಣಗಳ ವಜ್ರಗಳ ಹಾಗೆ ಹೊಳೆಯುವ ಕಲ್ಲುಗಳು, ದೊಡ್ಡ ದೊಡ್ಡ ಕಲ್ಲುಗಳು. ಅವುಗಳಿಂದ ಪ್ರಕಾಶ, ಗೆರೆ-ಗೆರೆಯಾಗಿ ಕಿರಣಗಳ ಲೈನ್ಸ್ ನನ್ನ ಮೇಲೆ. ಛಳಿ ಹೋಗ್ತಾ ಉಂಟು. ಬೆಳಕಿಗೆ ಎದೆ ಕೊಟ್ಟು ನಿಂತಿದ್ದೇನೆ. ಸೂರ್ಯಾಸ್ತ ಆಗಿ ಮತ್ತೆ ಉದಯ ಆಯ್ತು. ಬೆಳಗಿನ ಸುಮಾರು ಒಂಭತ್ತು ಗಂಟೆ. ದೇವಸ್ಥಾನದ ಮುಂದುಗಡೆ ಕಲ್ಲಿನ ಮೇಲೆ ೧೯೪೨, ಸೆಪ್ಟೆಂಬರ್, ೧೫, ಕಾಣ್ತಾ ಉಂಟು. ಸರಿಯಾಗಿ ಬೆಳಕಿನ ಕಿರಣಗಳು. ಈಗ ಛಳಿ ಇಲ್ಲ (ನಿಧಾನವಾಗಿ ಒಂದು ಹೊದಿಕೆ ತೆಗೆದೆ). ನನ್ನ ಬಣ್ಣ ಬಿಳಿ, ಸ್ನೋ ಥರ ಬಿಳಿ. ಹಂದಾಡ್ಲಿಕ್ಕೆ ಕಷ್ಟ, ಬೆಳಕಿನ ಕಿರಣಗಳ ಲೈನಿನಲ್ಲಿ ಮಾತ್ರ ಸಾಗಬಹುದು, ಬೇರೆ ಕಡೆ ಇಲ್ಲ.
ಬಿಡುಗಡೆ ಕೇಳಿ ದೇವಸ್ಥಾನದ ಮುಂದೆ ನಿಂತಿದ್ದೇನೆ. ತುಂಬ ದುಬಾರಿ ಬಟ್ಟೆಯ ಚಾಮರ, ತೊಟ್ಟಿಲ ಬಟ್ಟೆ. ಕೇಸರಿ ಮತ್ತು ಗುಲಾಬಿ ಬಟ್ಟೆ ಧರಿಸಿದ ಸನ್ಯಾಸಿಗಳು ಓಡಾಡ್ತಿದ್ದಾರೆ. ಮತ್ತೆ ಅದೇ ಸನ್ಯಾಸಿಯೂ ಬಂದರು. ನಾನು ಬೆಳಕಿನ ರೂಪದಲ್ಲಿ ಸಣ್ಣಸಣ್ಣದಾಗಿ ಅವರ ಕಾಲ ಬುಡದಲ್ಲಿ ನಕ್ಷತ್ರದ ಥರ. ಅವರ ಕೈಯಲ್ಲಿ ತಂಬಿಗೆ, ಕೈಯಲ್ಲಿ ನೀರು ತಗೊಂಡು, ಆಕಾಶ ನೋಡಿ ಏನೋ ಹೇಳಿ ನನ್ನ ಮೇಲೆ- ಅವರ ಪಾದದ ಬುಡದಲ್ಲಿರುವ ಬೆಳಕಿನ ನಕ್ಷತ್ರದ ಮೇಲೆ- ನೀರು ಅಪ್ಪಳಿಸಿದರು (ಒಮ್ಮೆಲೇ ಬೆಚ್ಚಿಬಿದ್ದ ದೇಹ ಪ್ರತಿಕ್ರಿಯೆ). ಈಗ ಲ್ಲೊಂದು ಬಿಳಿ ಹೂ, ತಾವರೆ ಥರ. ಅರಳ್ತಾ ಉಂಟು. ಹೂವು ಪ್ರಣಾಮಮಾಡ್ತಾ ಉಂಟು. ಹರಸ್ತಿದ್ದಾರೆ. ಹೂ ಸರೆಂಡರ್ ಆದ ಹಾಗೆ, ಪಾದದಲ್ಲಿ. ಬಾಗಿ ಮುಟ್ಟಿದರು, ನನ್ನ ಬೆನ್ನನ್ನು ಮುಟ್ಟಿದರು. ಬಿಳಿ ರೂಪಕ್ಕೆ ಬಂದೆ. ಕಣ್ಣಲ್ಲಿ ನೀರು, ಮೈಯಲ್ಲಿ ಕಂಪನ (ನಿಜವಾಗಿಯೂ ಕಣ್ಣ ಕೊನೆಗಳಲ್ಲಿ ನೀರು ಹನಿಯುತ್ತಿತ್ತು, ಮೈ ನಡುಗುತ್ತಿತ್ತು).
ಭುಜ ಹಿಡಿದು ನಿಲ್ಲಿಸಿದ್ದಾರೆ, ನಗುತ್ತಿದ್ದಾರೆ. ಎಪ್ಪತ್ತು ವರ್ಷ ಇರಬಹುದು. ತುಂಬಾ ಒಳ್ಳೆಯ ಸನ್ಯಾಸಿ. ಸಮಾಧಾನ ಹೇಳ್ತಿದ್ದಾರೆ. ತಲೆ ಮೇಲೆ ಕೈಯಿಟ್ಟು, ‘ನೀನು ಹೋಗು, ಒಳ್ಳೇದಾಗ್ತದೆ’ ಅಂತ ಹೇಳ್ತಿದ್ದಾರೆ. ನಾನು ಉತ್ತರಿಸದೆ ಗದ್ಗದನಾಗಿ ನೋಡ್ತಿದ್ದೇನೆ (ಎರಡು ಕ್ಷಣ ಮೌನ. ನಂತರ ಗಾಂಟಲು ಸರಿಮಾಡಿಕೊಂಡು...), ಪಶ್ಚಿಮಾಭಿಮುಖವಾಗಿ ಹೊರಟಿದ್ದೇನೆ. ಬೆಟ್ಟಗಳ ಇಳಿಜಾರಿನಲ್ಲಿ ಭತ್ತ ಗದ್ದೆಗಳ ನಡುವೆ ಹಸುರು ತುಂಬಿದ ಪ್ರದೇಶ... ಎಲ್ಲ ದಾಟಿ ರಸ್ತೆ. ನನ್ನ ಬಿಳೀ ಶರೀರ ಆಕಾಶದಲ್ಲಿ, ನೀರು, ಬಯಲು, ಗುಡ್ಡ-ಬೆಟ್ಟ, ಸುಣ್ಣದ ಕಲ್ಲಿನಂಥ ಬಿಳಿ ಜಾಗ, ಎಲ್ಲ ದಾಟಿ ತುಂಬಾ ವೇಗವಾಗಿ ಬರ್ತಾ ಉಂಟು. ತುಂಬಾ ವೇಗ... ಊಹಿಸ್ಲಿಕ್ಕೂ ಆಗದ ವೇಗ. ಕೆಳಗೆ ಎಲ್ಲ ಕಾಣ್ತಾ ಉಂಟು... ಬೀಚ್ ಬದಿಯಲ್ಲಿ ಮಲಗಿದ್ದ ನನ್ನ ದೇಹ... ಅಲ್ಲೇ ಉಂಟು... ಈ ಬಿಳೀ ದೇಹ ಒಣಗಿದ ಹಾಗೆ ಮರಗಟ್ಟಿ ಮಲಗಿದ್ದ ನನ್ನ ನಿಜ ದೇಹವನ್ನು ಸೇರಿತು..."
ನನ್ನ ಸೂಚನೆಗಳನ್ನು ಅನುಸರಿಸಿ ಮುಂದಿನ ಎರಡು ಕ್ಷಣದಲ್ಲಿ ವಾಸ್ತವಕ್ಕೆ ಎಚ್ಚತ್ತುಕೊಂಡರು ಜಗನ್. ಬಹುಶಃ ಟಿಬೆಟ್ ಅಥವಾ ನೇಪಾಳ ಪ್ರದೇಶದಲ್ಲಿ, ಸಾಮಾನ್ಯನಾಗಿ ಹುಟ್ಟಿದ್ದರೇನೋ, ೧೯೪೨ರ ಸಮಯದಲ್ಲಿ ಪ್ರಾಯಃ ಸಾವನ್ನಪ್ಪಿದ್ದಿರಬೇಕು. ಅವರು ನಂಬಿದ್ದ ಬೌದ್ಧ ಸನ್ಯಾಸಿಯಿಂದ ಮತ್ತೆ ಆಶೀರ್ವಾದ ಪಡೆದು ಬಂದರೆಂದೇ ನಾವಿಬ್ಬರೂ ನಂಬಿದ್ದೇವೆ. ಆ ಆಶೀರ್ವಾದದಿಂದ ಅವರ ಆತ್ಮಸ್ಥೈರ್ಯ ಹೆಚ್ಚಬಹುದು ಎಂದು ನನ್ನ ನಿಲುವು. ಎಚ್ಚತ್ತ ಮೇಲೆ ತಾನು ಕಂಡ ದೃಶ್ಯಗಳು ಎಷ್ಟು ಸ್ಪಷ್ಟವಾಗಿದ್ದವು, ನಿಚ್ಚಳವಾಗಿದ್ದವು. ಛಳಿ, ಬೆಳಕು ಎಲ್ಲವೂ ಅನುಭವಕ್ಕೆ ಬರುತ್ತಿದ್ದವು ಎಂದರು. ಛಳಿಯಾಗುತ್ತಿದ್ದಾಗ ನಾನು ಹೊದಿಕೆ ಹೊದೆಸಿದ ಅರಿವಿದ್ದರೂ ಅದವರ ಮನೋಯಾನಕ್ಕೆ ಅಡ್ಡಿಯಾಗಿರಲಿಲ್ಲ. ಮಾನಸಿಕವಾಗಿಯೂ ಅನುಭವಿಸುತ್ತಿದ್ದ ಆ ಛಳಿ ಅವರ ಈ ಶರೀರದಲ್ಲಿ ಅದು ಹೇಗೆ ಪರಿಣಾಮ ಬೀರುತ್ತಿತ್ತು ಎನ್ನುವುದೇ ಅವರಿಗೆ ಅಚ್ಚರಿಯ ಸಂಗತಿಯಾಗಿತ್ತು. ಮನೋದೈಹಿಕ ಸಂಬಂಧವೇ ಅಂಥಾದ್ದು. ಸೂಕ್ಷ್ಮ ಶರೀರವಾದ ಸುಪ್ತಮನಸ್ಸು/ ಆತ್ಮ ಅನುಭವಿಸುವಂತದ್ದು ಸ್ಥೂಲಶರೀರವಾದ ದೇಹದ ಮೇಲೆ ನೇರ ಪರಿಣಾಮ ಉಂಟುಮಾಡಿಯೇ ತೀರುತ್ತದೆ. ಈ ಸಂಬಂಧದಿಂದಲೇ ಮನೋದೈಹಿಕ ಖಾಯಿಲೆಗಳೂ ತೊಂದರೆಗಳೂ ಕಾಣಿಸಿಕೊಳ್ಳುವುದೂ ಸಮ್ಮೋಹನದಿಂದ ನಿವಾರಣೆಯಾಗುವುದೂ ಸಾಧ್ಯ. ಇಷ್ಟೆಲ್ಲ ವಿವರಣೆಗಳ ಬಳಿಕ ಮುಂದಿನ ವಾರ ಬರುವುದಾಗಿ ಹೇಳಿ ಹೊರಟರು ಜಗನ್.

Thursday, 26 May 2011
ಪರಾಧೀನ-೦೨
ಯಾವತ್ತಿನ ರೊಟೀನ್ ಮತ್ತೆ ಮುಂದುವರಿಯಿತು. ಬೆಳಗ್ಗೆ ಒಂದು ಸುತ್ತು ಜಾಗಿಂಗ್. ಮನೆಗೆ ಬಂದು ಸ್ನಾನ, ಪ್ರಾರ್ಥನೆ. ತಿಂಡಿ ಮುಗಿಸಿ ಏಳು ಗಂಟೆಯ ಮೊದಲೇ ಹೊಟೇಲಲ್ಲಿ ಹಾಜರ್. ಎಲ್ಲವೂ ಸುಗಮ. ಒಂದಾರು ತಿಂಗಳು ಹೀಗೇ ಕಳೆಯಿತು. ಮಡದಿ ನಾಲ್ಕೂವರೆ ತಿಂಗಳ ಬಸುರಿ. ಖುಷಿ ತನ್ನ ನೆಲೆಯನ್ನು ಇವರಲ್ಲಿಗೇ ಬದಲಾಯಿಸಿಕೊಂಡಿತ್ತು. ಸೊಸೆಯನ್ನು ಮುದ್ದಾಗಿ ನೋಡಿಕೊಳ್ಳಲು ಅಮ್ಮನೇ ಬಂದಿದ್ದರು ಮುಂಬಯಿಗೆ. ಜೊತೆಗೇ ಮಗನಿಗೂ ಉಪಚಾರ ಸಾಂಗವಾಗಿ ಸಾಗುತ್ತಿತ್ತು. ಗಂಡ-ಹೆಂಡತಿ ಇಬ್ಬರೂ ಒಂದಿಷ್ಟು ಉರುಟಾಗುತ್ತಿದ್ದರು. ಜಾಗಿಂಗ್ ಜಾಸ್ತಿ ಮಾಡಬೇಕು, ತೂಕ ಹೆಚ್ಚಾಗುತ್ತಿದೆ ಅಂತ ಅಣ್ಣನ ಜೊತೆ ಮಾತಾಡಿ ರಾತ್ರಿ ಮಲಗುವ ಮುನ್ನ ವಾರ್ತೆಗಳಿಗಾಗಿ ಟಿ.ವಿ. ಹಾಕಿದರು ಜಗನ್. ಅದ್ಯಾರೋ ಕೊಲೆಯಾದ ಸುದ್ದಿ ಬಿತ್ತರವಾಗುತ್ತಿತ್ತು, ಎಲ್ಲ ವಿವರಗಳೊಂದಿಗೆ. ಅದ್ಯಾಕೋ ನೋಡಲಾಗದೆ ಟೆಲೆವಿಷನ್ ಆಫ಼್ ಮಾಡಿ ಮಲಗುವ ಕೋಣೆಗೆ ನಡೆದರು.
ಕೋಣೆಯ ಬಾಗಿಲಲ್ಲಿ ನಿಂತಂತೆಯೇ ಕೋಣೆಯಲ್ಲಿ ಯಾರೋ ಇದ್ದಾರೆನ್ನುವ ಯೋಚನೆ ತಲೆಗೆ ಹೊಕ್ಕಿತು. ಇದ್ದಕ್ಕಿದ್ದಂತೆ ಭಯ ಆವರಿಸಿಕೊಳ್ಳತೊಡಗಿತು. ಆತಂಕ ನೆತ್ತಿ ಮೇಲೆ ಕತ್ತಿ ತೂಗಿತು. ಹೆಜ್ಜೆ ಎತ್ತಿಡಲೂ ಆಗದಂಥ ಗಾಬರಿ ಮುತ್ತಿಕೊಂಡಿತು. ಬಾಗಿಲಲ್ಲೇ ಕುಸಿದುಬಿದ್ದರು. ಎದೆ ಒಂದೇ ಸವನೆ ಬಡಿದುಕೊಳ್ಳತೊಡಗಿತು. ಹಾರ್ಟ್ ಅಟ್ಯಾಕ್ ಆಗುತ್ತಿದೆ ಎಂದೆಣಿಸಿ ವೈದ್ಯರಿಗೆ ಕರೆ ಮಾಡಿದರು ಮಡದಿ. ತುರ್ತು ವಾಹನ ಬಂದು ಅವರನ್ನು ಆಸ್ಪತ್ರೆಗೆ ಕರೆದೊಯ್ದಿತು. ಎಲ್ಲ ತಪಾಸಣೆಗಳು ನೆರವೇರಿದವು. "ನಿಮ್ಮ ಹೃದಯ ಗಟ್ಟಿಯಾಗಿದೆ. ಅದಕ್ಕೇನೂ ಆಗ್ಲಿಲ್ಲ. ನಿಮ್ಮ ಮನಸ್ಸಿಗೇ ಏನೋ ಆಗಿದೆ. ಸುಮ್ಮನೇ ಗಾಬರಿಯಾಗಿದ್ದೀರಿ" ಎಂದ ವೈದ್ಯರು ಸಣ್ಣ ಪ್ರಮಾಣದ ಆತಂಕ ನಿವಾರಣಾ ಔಷಧಿ ಬರೆದುಕೊಟ್ಟರು. ಅದರ ಜೊತೆಗೆ ಮನೆಗೆ ಬಂದ ಜಗನ್‌ಗೆ ಸಣ್ಣ ಹುಳ ತಲೆಕೊರೆಯಲು ಶುರು ಮಾಡಿತು- ತನಗ್ಯಾಕೆ ಇಂಥ ಆತಂಕ/ ಗಾಬರಿ? ಏನಾಗ್ತಿದೆ?
ಇದೇ ಗುಂಗಿನ ಗುಂಗಿಹುಳ ತಲೆಯೊಳಗೆ ಕೊರೆಕೊರೆದು ನೂರಾರು ಹೊಸ ಟ್ರ್ಯಾಕ್ ಮಾಡಿದ್ದರ ಪರಿಣಾಮ- ಸಲೀಸಾಗಿ ಸಾಗುತ್ತಿದ್ದ ಜೀವನದಿ ಯದ್ವಾತದ್ವಾ ಹರಿಯತೊಡಗಿತು. ಮತ್ತೆ ಜ್ಯೋತಿಷಿಗಳ ಮನೆ-ಕಛೇರಿಗಳಿಗೆ ಭೇಟಿಕೊಟ್ಟರು ಮನೆಯ ಹಿರಿಯರು. ಅವರು ತಿಳಿಸಿದ ಶಾಂತಿಹೋಮಗಳನ್ನು, ಹೇಳಿದಂತೆಯೇ ಹೇಳಿದಲ್ಲಿಯೇ ಮಾಡಿಸಿದರು. ಸದಾ ಮುಂಬಯಿ ಹೊಟೇಲಿಗೇ ರಜೆ ಹಾಕಿ ಬರುವಂತಿರಲಿಲ್ಲ. ಪದೇ ಪದೇ ಊರಿಗೆ ಬರುವಾಗ ಹೊಟೇಲ್ ನೋಡಿಕೊಳ್ಳಲು ಅನಾನುಕೂಲವಾಗುತ್ತಿತ್ತು. ಆಗೆಲ್ಲ ಸಣ್ಣಣ್ಣ ಊರಿಂದ ಮುಂಬಯಿಗೆ, ಜಗನ್ ಮುಂಬಯಿಯಿಂದ ಊರಿಗೆ. ದೊಡ್ಡಣ್ಣನ ಮೇಲುಸ್ತುವಾರಿಯಲ್ಲಿ ಎಲ್ಲ ಪೂಜೆ-ಪುನಸ್ಕಾರಗಳನ್ನು ನಡೆಸಲಾಗುತ್ತಿತ್ತು. ಅವೆಲ್ಲ ನಡೆಯುವಾಗಲೂ ಏನೋ ಒಂಥರಾ ಗಲಿಬಿಲಿ, ಗೊಂದಲದ ಮನಃಸ್ಥಿತಿಯಲ್ಲಿರುತ್ತಿದ್ದರು ಜಗನ್. ಹೀಗೇ ಊರು-ಮುಂಬಯಿ ಊರು-ಮುಂಬಯಿ ತಿರುಗಾಟಗಳ ನಡುವೆ ಹುಟ್ಟಿದ ಮಗಳಿಗೆ ಎರಡು ವರ್ಷವೂ ದಾಟಿತು. ಜಗನ್ ಜೀವನದಲ್ಲಿ ಅಂಥ ವ್ಯತ್ಯಾಸ ಗೋಚರಿಸಲಿಲ್ಲ. ಕೆಲವೊಮ್ಮೆ ಮನೆಯಿಂದ ಹೊರಗೆ ಹೋಗಲೂ ಭಯವಾಗುವಷ್ಟು ಹಿಂಜರಿಕೆ ಅಳುಕಿನ ಗೋಜಲಿನಲ್ಲಿ ಸಿಲುಕಿರುತ್ತಿದ್ದರು. ಅಂಥದೊಂದು ದುಮ್ಮಾನದ ಸಂಜೆ ಅವರ ಹಳೇ ಗೆಳೆಯ, ಹಿಪ್ನೋಥೆರಪಿಯ ಬಗ್ಗೆ ತಿಳಿಸಿ ಅಲ್ಲಿಂದಲೇ ನನಗೆ ಕರೆ ಮಾಡಿದ್ದರು. ಅಲ್ಲಿಂದ ಹೊಸದೇ ಲೋಕವೊಂದು ತೆರೆದುಕೊಂಡಿತು.
ಸಮ್ಮೋಹನ ಚಿಕಿತ್ಸೆಯ ಒಂದು ಆಯಾಮ ಸುಪ್ತಮನಸ್ಸಿನ ಗಾಯಗಳನ್ನು ಗುಣಪಡಿಸಿ ಒಳಮನಸ್ಸನ್ನು ದೃಢಪಡಿಸುವುದು. ಅದರದೇ ವಿಸ್ತೃತ ರೂಪ ಹಿಂಚಲನೆ ಸಾಧಿಸಿ ಹಳೆಯ ನೆನಪುಗಳನ್ನು ನೋವುಗಳ ಕೊಂಡಿ ಕಳಚಿ ಬರಿಯ ನೆನಪಾಗಿಸಿ ನೋವಿನಿಂದ ಬಿಡುಗಡೆಗೊಳಿಸುವುದು. ಈ ಹಳೆಯ ನೆನಪು ಅನ್ನುವುದು ಇದೇ ಜನ್ಮದ ಅತ್ಯಂತ ಹಿಂದಿನ ನೆನಪಾಗಿರಬಹುದು. ಹಲವು ಸಾಧ್ಯತೆಗಳಲ್ಲಿ ಕಳೆದ ಯಾವುದೋ ಜನ್ಮದ ಗಾಯದ/ನೋವಿನ ನೆನಪೂ ಆಗಿರಬಹುದು. ಗುಣವಾಗುವ ಪ್ರಕ್ರಿಯೆ ಮುಖ್ಯವೇ ಹೊರತು ನೆನಪಿನ ಸ್ಪಷ್ಟೀಕರಣವಲ್ಲ, ಆದ್ದರಿಂದ ತಪಾಸಣೆ ಅಗತ್ಯವಾಗಿರುವುದಿಲ್ಲ. ಇದೊಂದು ಪ್ರಮುಖ ಚೌಕಟ್ಟನ್ನು ಇಟ್ಟುಕೊಂಡು ಜಗನ್ ಅವರನ್ನು ಸಮ್ಮೋಹನ ಚಿಕಿತ್ಸೆಗೆ ಒಳಪಡಿಸಲು ಪರಸ್ಪರ ಒಪ್ಪಂದ ಮಾಡಿಕೊಂಡೆವು.

Monday, 23 May 2011
ಪರಾಧೀನ-೦೧
ನವೆಂಬರ್ ತಿಂಗಳ ಮೊದಲ ವಾರ. ಸಮ್ಮೋಹನ ಚಿಕಿತ್ಸೆಗಾಗಿ ಬರುತ್ತಿದ್ದ ಕ್ಲಯಂಟ್ ಒಬ್ಬರ ಕರೆ ಬಂತು. ತಮ್ಮ ಸ್ನೇಹಿತರೊಬ್ಬರನ್ನು ಕರೆತರುತ್ತೇನೆ, ಭೇಟಿಗೆ ಸಮಯಾವಕಾಶ ಬೇಕೆಂದರು. ಅಂಥ ಬ್ಯುಸಿ ಏನೂ ಇರಲಿಲ್ಲ, ಸಮಯ ತಿಳಿಸಿದೆ. ನಿಗದಿಯಾದ ಸಮಯಕ್ಕೆ ಸರಿಯಾಗಿಯೇ ಇಬ್ಬರೂ ಬಂದರು. ಹೊಸಬರನ್ನು ಸಮಾಲೋಚನೆಯ ಕೊಠಡಿಗೆ ಬರಹೇಳಿದೆ. ಜೊತೆಗಾರ ವಾರಪತ್ರಿಕೆಯೊಂದನ್ನು ಎತ್ತಿಕೊಂಡು ಕೂತರು.
ಜಗನ್, ಸುಮಾರು ನಲ್ವತ್ತರ ವಯಸ್ಸಿನ ಹೊಟೇಲಿಯರ್. ಮುಂಬೈಯಲ್ಲಿ ವಾಸ. ಮೂರು ಜನ ಅಣ್ಣ-ತಮ್ಮಂದಿರಲ್ಲಿ ಕೊನೆಯವ. ಪದವೀಧರ. ಡ್ಯಾಷಿಂಗ್ ಡೇರ್ ಡೆವಿಲ್ ವ್ಯಕ್ತಿತ್ವ ತನ್ನದು ಎಂದರು. ಕಾಲೇಜಿನಲ್ಲಿ ಸ್ನೇಹಿತರೊಡನೆ ಪಂದ್ಯಕಟ್ಟಿ ಸಮುದ್ರದಲ್ಲಿ ಈಜುತ್ತಿದ್ದರಂತೆ. "ಈಗೆಲ್ಲವೂ ಬಂದಾಗಿದೆ" ಎಂದು ಮುಸಿಮುಸಿ ನಗುತ್ತಾರೆ. ಮದುವೆಯಾಗಿ ಐದು ವರ್ಷವಾಗಿದೆ. ತೃಪ್ತಿಯ ಸುಂದರ ಸಂಸಾರ. ಹೊರಗಿನಿಂದ ನೋಡುವವರಿಗೆ ಯಾವ ಕೊರತೆಯೂ ಇಲ್ಲದ ಜೀವನ.
ಸುಮಾರು ಮೂರು ವರ್ಷದ ಕೆಳಗೆ, ಜಗನ್ ಮಾಮೂಲಿನಂತೆ ಎರಡು ವಾರಗಳ ರಜೆಮಾಡಿ ಊರಿಗೆ ಬಂದಿದ್ದಾಗ ಬೆಳಗಿನ ಹೊತ್ತು ಬೀಚ್ ಬದಿಯಲ್ಲಿ ಜಾಗಿಂಗ್ ಹೋಗಿದ್ದವರು ಏನೋ ಕೆಂಪು-ಕೆಂಪು ಹರಡಿಕೊಂಡಿದ್ದ ಗೋಜಲನ್ನು ದಾಟಿ ಹೋಗಿದ್ದರು. ಅದೇ ಕ್ಷಣ ಯಾಕೋ ಎದೆ ಒಮ್ಮೆ ಸಣ್ಣಗೆ ನಡುಗಿತ್ತು. ತಿರುಗಿ ನೋಡಿ, ಕುಂಕುಮ-ಹೂಗಳ ರಾಶಿ ಅದೆಂದು ಗೊತ್ತಾಗಿ ಸಣ್ಣಗೆ ನಕ್ಕು, ಜಾಗಿಂಗ್ ಮುಗಿಸಿ ಮನೆಗೆ ಹಿಂದಿರುಗಿದ್ದರು. ಸ್ನಾನ ಮಾಡುತ್ತಿದ್ದಾಗ ಮತ್ತೊಮ್ಮೆ ಎದೆ ನಡುಕ. ಏನೋ ಅಳುಕು. ಅದ್ಯಾವ ಭಾವನೆಯೆಂದು ಅರಿವೇ ಇಲ್ಲದಿದ್ದ ಬಿಂದಾಸ್ ವ್ಯಕ್ತಿಗೆ ಇದೇನಾಗಿದೆ ಇವತ್ತು ಅಂದುಕೊಂಡೇ ನಿತ್ಯದ ಸ್ನಾನ, ಪ್ರಾರ್ಥನೆ, ಉಪಾಹಾರಗಳನ್ನು ಪೂರೈಸಿದರು. ಅಣ್ಣಂದಿರ ಹೊಟೆಲಿಗೆ ಭೇಟಿಕೊಡುತ್ತೇನೆಂದು ಇಬ್ಬರು ಅತ್ತಿಗೆಯರಿಗೂ ಹೇಳಿ ಮನೆಯಿಂದ ಹೊರಬಿದ್ದವರು ದಾರಿಯಲ್ಲಿ ಗೆಳೆಯನೊಬ್ಬನಿಗೆ ಕರೆ ಮಾಡಿ ಅವನನ್ನೂ ಕೂಡಿಕೊಂಡು ಹೊಟೇಲಿಗೆ ಹೋಗಿ, ಗೆಳೆಯನೊಂದಿಗೆ ತಿರುಗಾಡಿ, ರಾತ್ರೆಗೆ ಅಣ್ಣಂದಿರು ಮನೆ ಸೇರುವ ಹೊತ್ತಿಗೆ ತಾನೂ ಮನೆಗೆ ಬಂದಿಳಿದರು. ಬೆಳಗಿನ ಎದೆ ನಡುಕ ಪತ್ತೆಯಿಲ್ಲದೆ ಮರೆತೇಹೋಗಿತ್ತು.
ಮರುದಿನವೂ ಮತ್ತದೇ ಜಾಡಿನಲ್ಲಿ ಜಾಗಿಂಗ್. ಯಾವುದೇ ಏರುಪೇರಿಲ್ಲದೆ ಒಂದು ಸುತ್ತು ಹಾಕಿ ಬಂದವರೇ ಸ್ನಾನದ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಗಾಬರಿಗೊಂಡರು. ಕಾರಣವೇ ಇಲ್ಲ. ಮನೆಯೆಲ್ಲ ಮಾಮೂಲಾಗೇ ಇದೆ. ಎಲ್ಲೂ ಏನೂ ಏರುಪೇರಾಗಿಲ್ಲ. ಜಗನ್ ಮಾತ್ರ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋಗಲೂ ಗಾಬರಿಯಾಗುತ್ತಿದ್ದರು, ಭಯಪಡುತ್ತಿದ್ದರು. ಅದೇ ರಾತ್ರೆ ನಿದ್ರೆಯೂ ಬರಲಿಲ್ಲ. ಮರುದಿನದಿಂದ ಜಾಗಿಂಗ್ ಇಲ್ಲ. ಗೆಳೆಯರ ಸಹವಾಸ ಬೇಕಾಗಲಿಲ್ಲ. ನಿದ್ರೆ, ಹಸಿವಿನ ಪರಿವೆಯಿಲ್ಲ. ಮನಸ್ಸಿನ ನೆಮ್ಮದಿ ಕಳೆದುಕೊಂಡರು. ತೌರಿಂದ ಮಡದಿಯನ್ನು ಕರೆಸಲಾಯಿತು. ಮೊತ್ತಮೊದಲಾಗಿ ಎಲ್ಲರ ತಲೆಗೆ ಹೊಳೆದದ್ದು "ಸೋಂಕು ಆಗಿರಬೇಕು" ಎನ್ನುವ ವಿಚಾರ. ಅದಕ್ಕೆ ಸರಿಯಾಗಿ ದೇವಸ್ಥಾನಗಳಿಗೆ ಹರಕೆ ಹೇಳಿಕೊಂಡಾಯ್ತು. ಪ್ರತಿಷ್ಠಿತ ಜೋಯಿಸರಲ್ಲಿ ವಿಚಾರಿಸಲು ಹೋಗುವ ಬಗ್ಗೆ ಸಂಸಾರದಲ್ಲಿ ತೀರ್ಮಾನವಾಯ್ತು.
ಜೋಯಿಸರು, ಯಥಾಪ್ರಕಾರ ಅವರ ಶಂಖವನ್ನೇ ಊದಿದರು. ಅದವರ ವೃತ್ತಿ ಧರ್ಮ. ಅವರು ತಿಳಿಸಿದಂಥ ಎಲ್ಲ ಪರಿಹಾರ ಕಾರ್ಯಗಳನ್ನು ಮಾಡಿದ್ದಾಯ್ತು. ಹರಕೆ ಹೇಳಿಕೊಂಡಿದ್ದ ಎಲ್ಲ ದೇವಸ್ಥಾನಗಳಿಗೂ ಹೋಗಿ ಬಂದಾಯ್ತು. ಇಷ್ಟಾಗುವಾಗ ರಜೆ ಮುಗಿದೇ ಹೋಯ್ತು. ದಂಪತಿಗಳು ಮುಂಬೈಗೆ ಹೊರಟುನಿಂತರು, ಬಟ್ಟೆಬರೆಗಳ ಜೊತೆಗೆ ಒಂದು ದೊಡ್ಡ ಪ್ರಸಾದಗಳ ಕಟ್ಟಿನೊಂದಿಗೆ. ಎಲ್ಲ ಸರಿಯಾಯ್ತು ಎನ್ನುವ ನೆಮ್ಮದಿಯೊಂದಿಗೆ ತನ್ನ ಗೂಡು ಸೇರಿತು ಜೋಡಿ.

Friday, 20 May 2011
ಸಂಜ್ಞಾ - ೦೪
ಛಿದ್ರ ಚಿತ್ರಗಳ ನೆನಪು ತುಣುಕುಗಳ ನಡುವೆಯೇ ಎದೆಯ ಮೇಲೆ ಕೈಯಿಟ್ಟುಕೊಂಡು ನೋವು ಅನುಭವಿಸಿದ. ನೋವಿನ ಮೂಲವನ್ನು ಹುಡುಕು ಎಂದೆ. ಮತ್ತೊಂದು ಜನ್ಮದ ಹಂದರಕ್ಕೆ ಹಾರಿದ....
"ಕಾಡು... ಅದರ ನಡುವೆ ಒಂದು ದೊಡ್ಡ ವಿಶಾಲವಾದ ಮನೆ. ನನ್ನದೇ ಮನೆ. ಮನೆಯಲ್ಲಿ ನಾನೇ ಹಿರಿ ಮಗ. ಇನ್ನುಳಿದ ತಮ್ಮಂದಿರು ಮೂವರು ಎಲ್ಲರಿಗೂ ಮದುವೆಯಾಗಿದೆ. ನನಗಾಗ್ಲಿಲ್ಲ. ತಮ್ಮಂದಿರಿಗೆ ಅಪ್ಪನಾಗಿದ್ದೆ. ದೊಡ್ಡ ಆಸ್ತಿ. ಗದ್ದೆ, ತೋಟ, ಕಾಡು... ಅರ್ಧ ಊರು ನಮ್ಮದೇ. ಒಳಗಿನ ಕೋಣೆಯ ಖಜಾನೆಯ ತುಂಬಾ ಚಿನ್ನ, ಅಮ್ಮ-ಅಜ್ಜಿಯರದ್ದು. ತಮ್ಮಂದಿರಿಗೆ, ಅವರ ಹೆಂಡತಿಯರಿಗೆ ಅದರ ಮೇಲೆ ಕಣ್ಣು. ಈಗಲೇ ಪಾಲು ಮಾಡ್ಲಿಕ್ಕೆ ನಾನು ತಯಾರಿಲ್ಲ. ಅಪ್ಪ ಇದ್ದಿದ್ರೆ ಮಾಡ್ತಿರಲಿಲ್ಲ ಅಂತ ನನ್ನ ಅಭಿಪ್ರಾಯ. ಅಪ್ಪನನ್ನು ಅವರ ದಾಯಾದಿಗಳು ಆಸ್ತಿ ವ್ಯಾಜ್ಯದಲ್ಲಿ ಕೊಂದಿದ್ರು... ನನಗೀಗ ಐವತ್ತಾರು ವರ್ಷ. ಮಳೆಗಾಲದ ಒಂದು ರಾತ್ರೆ... ಕತ್ತಲೆ. ನನ್ನ ಕೋಣೆಯ ದೀಪ ಆರಿದೆ. ಎಣ್ಣೆ ತರಲಿಕ್ಕೆ ಆಳಿಗೆ ಹೇಳಿ ಕಳಿಸಿ ಒಬ್ಬನೇ ಕತ್ತಲೆಯಲ್ಲಿ ಕೂತಿದ್ದೇನೆ. ಯಾರೋ ಒಳಗೆ ಬಂದಹಾಗಾಯ್ತು. ಯಾರದು? ಉತ್ತರ ಇಲ್ಲ. ಮತ್ಯಾರೋ ಆಚೆ ಓಡಿದ ಹಾಗಾಯ್ತು... ಆಳುಗಳಿರಬಹುದು... ಅಥವಾ ನನ್ನ ನಾಯಿ...
ನನ್ನ ಹಿಂದೆಯೇ ಹೆಜ್ಜೆ ಶಬ್ದ. ನನ್ನ ಸೊಂಟದ ಕಿರುಗತ್ತಿ ಹಿರಿಯುವ ಹೊತ್ತಿಗೇ ನನ್ನ ಹಿಂದಿನಿಂದ ಹೃದಯಕ್ಕೇ ಚೂರಿ ಹಾಕಿದ್ದಾನೆ... ಎರಡನೇ ತಮ್ಮ. ಅವನ ಬದಿಯಲ್ಲೇ ಅವನ ಹೆಂಡತಿ- ಅವಳು ಈಗಿನ ಸುಜೇತಾ. ಅವಳೇ ನನ್ನ ಕೊಲೆಗೆ ಕಾರಣ. ಅದಕ್ಕೇ ಅವಳನ್ನು ಎದುರಿಸಲಿಕ್ಕೆ ಆಗದಷ್ಟು ಹಿಂಜರಿಕೆ ನನಗೆ. ಅವಳು ಕೊಲೆಪಾತಕಿ. ಆಗ ಚೂರಿ ಹಾಕಿಸಿ ಕೊಂದಳು; ಈಗ ಬೆಂಕಿ ಹಚ್ಚಿಸಿ ಕೊಲ್ತಿದ್ದಾಳೆ. ಕೊಲೆಪಾತಕಿ..."
ಕಿರುಚುತ್ತಿದ್ದವನನ್ನು ಸಮಾಧಾನಪಡಿಸಿ, ಸೂಕ್ತ ಸಲಹೆಗಳನ್ನು ನೀಡಿ ಎದೆ ನೋವಿನ ನಿವಾರಣೆಗೆ ಮಾರ್ಗದರ್ಶನ ಮಾಡಿ ಅಲ್ಲಿಂದ ವಾಸ್ತವಕ್ಕೆ ಕರೆತಂದೆ. ತುಂಬಾ ಬಳಲಿ ದಣಿದು ಎದ್ದು ಬಂದ. ಆದರೂ "ಇನ್ನು ಸುಜೇತಾಳನ್ನು ಎದುರಿಸಬಲ್ಲೆ" ಅಂದ. ನಮಗಷ್ಟೇ ಬೇಕಾಗಿತ್ತು. ಶುಭ ಹಾರೈಸಿ ಬೀಳ್ಕೊಟ್ಟೆ.
ಅದಾಗಿ ನಾಲ್ಕು ತಿಂಗಳು ಸಂದಿದೆ. ಒಂದೆರಡು ಬಾರಿ ಫೋನ್ ಮಾಡಲೇ ಅನ್ನಿಸಿದರೂ ಮಾಡಿಲ್ಲ. ತೊಂದರೆಯಿದ್ದಿದ್ದರೆ ಅವನೇ ಫೋನ್ ಮಾಡಿರುತ್ತಿದ್ದ. ಇನ್ನೊಂದು ಸೆಷನ್ ಬೇಕೆನ್ನುತ್ತಿದ್ದ. ನೋ ನ್ಯೂಸ್ ಈಸ್ ಗುಡ್ ನ್ಯೂಸ್ ಅಂತ ಸುಮ್ಮನಿದ್ದೇನೆ.
(ಹೆಸರು, ಸ್ಥಳ, ಉದ್ಯೋಗ, ವಯಸ್ಸು, ವಿದ್ಯೆ, ಸಂಬಂಧಗಳು- ಎಲ್ಲವನ್ನೂ ಕಾಲ್ಪನಿಕ ನೆಲೆಯಲ್ಲಿಟ್ಟ ವಾಸ್ತವದ ಕಥೆಯಿದು.)

Wednesday, 18 May 2011
ಸಂಜ್ಞಾ - ೦೩
ಅದೇ ಬೆಂಕಿ ಸುಂದರನನ್ನು ಎಲ್ಲದರಿಂದಲೂ ವಿಮುಖವಾಗಿಸತೊಡಗಿತು. ಓದಿನಲ್ಲೂ ಗಮನವಿಲ್ಲ. ಸ್ನೇಹಿತರ ಜೊತೆಗೂ ಒಡನಾಟ ಬೇಕಿಲ್ಲ. ಮೈಯೊಳಗಿನ ಬೆಂಕಿಯನ್ನು ಆರಿಸುವುದು ಹೇಗೆಂದೇ ಅವನ ಯೋಚನೆ. ಮನೆಯಲ್ಲೇ ಇದ್ದರೆ ಅವಳತ್ತಲೇ ಗಮನ ಹರಿಯುವುದೆಂಬ ಕಾರಣಕ್ಕೆ ಕೆಲವು ದಿನ ಊರಿನ ಅಜ್ಜನ ಮನೆಗೂ ಹೊರಟ. ಅಲ್ಲಿ ತೋಟದ ಕೆರೆಯಲ್ಲಿ ಒಂದು ಇಡೀ ಬೆಳಗಿನ ಹೊತ್ತು ಕುತ್ತಿಗೆ ವರೆಗಿನ ನೀರಿನಲ್ಲಿ ಕೂತಿದ್ದು ಏನೋ ಒಂದಿಷ್ಟು ಸಮಾಧಾನ ಅನುಭವಿಸಿದ. ಹೀಗೇ ಕೆಲವು ದಿನ ಮಾಡಿದರೆ ಈ ಬೆಂಕಿ ನೀರಿನೊಳಗೆ ತಣ್ಣಗಾಗಬಹುದೆಂಬ ಭರವಸೆಯಿಂದ ಮರುದಿನವೂ ಪುನರಾವರ್ತಿಸಿದ.
ಕೆಳಗಿನ ಮೆಟ್ಟಲಲ್ಲಿ ಕೂತು ಕುತ್ತಿಗೆ ಮಟ್ಟದ ನೀರಿನ ಆಹ್ಲಾದವನ್ನು ಅನುಭವಿಸುತ್ತಿದ್ದವನ ಇಂದ್ರಿಯಗಳು ಒಮ್ಮೆಲೇ ಧಿಗ್ಗನೆದ್ದ ರೀತಿಗೆ ಬೆಚ್ಚಿ ಕಣ್ತೆರೆದಾಗ ಕಂಡದ್ದು ಎದುರಿನ ದಂಡೆಯಲ್ಲಿ ನೀರಿಗೆ ಧುಮುಕಲು ತಯಾರಾಗಿ ನಿಂತವಳು. ಇವನ ನೋಟ ತನ್ನತ್ತ ಬಿದ್ದದ್ದೇ ನೆಪವೆಂಬ ರೀತಿಯಲ್ಲಿ ಕೆರೆಗೆ ಹಾರಿ ನಾಲ್ಕೈದು ಉದ್ದುದ್ದ ಬೀಸುಹೊಡೆತಗಳಲ್ಲಿ ಈ ಬದಿಗೆ ತಲುಪಿ, ನೀರೊಳಗೆ ಮುಳುಗು ಹಾಕಿ ಸುಂದರನ ಪಾದದಿಂದ ಮುತ್ತಿಡುತ್ತಾ ಸೊಂಟದತ್ತ ಏರಿದವಳನ್ನು ಮತ್ತೆ ನೀರಿಗೇ ನೂಕುವ ಯೋಚನೆ ಬಂದರೂ ಬುದ್ಧಿ ಬರಲಿಲ್ಲ. ಕೆರೆದಂಡೆ ಮತ್ತೊಂದು ಬೆಂಕಿಯಂಗಳವಾಯ್ತು.
ಇದರ ನಂತರ ಇಂತಹ ಇನ್ನೂ ಒಂದೆರಡು ಮುಖಾಮುಖಿ. ಸುಂದರನ ಪರಿಸ್ಥಿತಿ ಗಂಭೀರವಾಯ್ತು. ಊಟ ತಿಂಡಿಯ ಪರಿವೆಯಿಲ್ಲ. ಓದಿನ ಕಡೆ ಮೊದಲೇ ಗಮನವಿಲ್ಲ. ಚಾರ್ಟರ್ಡ್ ಅಕೌಂಟೆಂಟ್ ಆಫೀಸಿಗೆ ಹೋದರೂ ಅಲ್ಲಿ ಯಾವ ಹೆಣ್ಣಿನ ಮುಖ ನೋಡಿದರೂ ಅವರಲ್ಲೆಲ್ಲ ಸುಜೇತಾಳೇ ಕಾಣತೊಡಗಿದಳು. ಯಾವ ಹೆಣ್ಣಿನ ದನಿ ಕೇಳಿದರೂ ಅವನೊಳಗೆ ಉದ್ವೇಗದ ಉರಿ ಹತ್ತಿಕೊಳ್ಳುತ್ತಿತ್ತು. ಮೊದಲ ಸಂಯೋಗದ ನಂತರ ಆರು ತಿಂಗಳು ಕಳೆದಿತ್ತು. ಯಾರೊಂದಿಗೂ ಮುಖ ನೋಡಿ ಮಾತನಾಡಲಾರದ ದುಃಸ್ಥಿತಿಗೆ ತಲುಪಿದ್ದ. ಆಗಲೇ ಹಿಪ್ನೋಥೆರಪಿಯ ಬಗ್ಗೆ ಅವನ ಸ್ನೇಹಿತನಿಂದ ತಿಳಿದುಬಂತು. ಅತ್ಯಂತ ಸಂಕೋಚದಿಂದ ಮುಜುಗರ ಪಡುತ್ತಾ ನನ್ನನ್ನು ಭೇಟಿಯಾಗಲು ಕೇಳಿಕೊಂಡ. ಕಾರಣವೇನೆಂದು ಕೇಳಿದಾಗ, "ತುಂಬಾ ಟೆನ್ಶನ್ ಆಗ್ತದೆ. ಓದ್ಲಿಕ್ಕೆ ಆಗುದಿಲ್ಲ. ಯಾವುದ್ರಲ್ಲೂ ಗಮನ ಇಲ್ಲ" ಅಂದ. ಅಪಾಯಿಂಟ್‍ಮೆಂಟ್ ಕೊಟ್ಟೆ, ಸಮಯಕ್ಕೆ ಸರಿಯಾಗಿ ಬರಲು ಸೂಚಿಸಿದೆ.
ಮೊದಲ ಭೇಟಿಯಲ್ಲಿ ಒಂದೊಂದಾಗಿ ವಿವರಗಳನ್ನು ಕೇಳುತ್ತಾ ಹೋದಂತೆ ಕಂಗಾಲಾದ ಕಳೆಗುಂದಿದ ಕಣ್ಣುಗಳ ಹಿಂದಿನ ಅತಂತ್ರ ಸ್ಥಿತಿ ಗೋಚರವಾಯ್ತು. ಒಳಉರಿಯನ್ನು ತೃಪ್ತಿಪಡಿಸಲೂ ಆಗದೆ, ಆರಿಸಲೂ ಆಗದೆ ಒದ್ದಾಡುತ್ತಿದ್ದ. ಸಮ್ಮೋಹನಕ್ಕೆ ಒಳಪಟ್ಟಾಗಲೂ ಉದ್ವೇಗ, ಆತಂಕ. ನಿರಾಳವಾಗುವ ಪರಿಯೇ ಆತನಿಗೆ ಅಸಾಧ್ಯ. ಉಸಿರಾಟದಲ್ಲಿ ತಲ್ಲೀನತೆಯಿಲ್ಲ, ಏಕಾಗ್ರತೆಯಿಲ್ಲ. ಎಲ್ಲವೂ ಏರುಪೇರು. ಏಕತಾನದ ಉಸಿರಾಟವನ್ನು ಅಭ್ಯಸಿಸಲು ತಿಳಿಸಿ ಕಳುಹಿಸಿಕೊಟ್ಟೆ.
ಎರಡನೇ ಮತ್ತು ಮೂರನೇ ಭೇಟಿಗಳಲ್ಲಿ ಆತನಿಗೆ ಪುನಃಪುನಹ ಉಸಿರಾಟದ ಏಕತಾನತೆಯನ್ನೂ ಏಕಾಗ್ರತೆಯನ್ನೂ ಅಭ್ಯಾಸ ಮಾಡಿಸಿ, ನಿರಾಳವಾಗುವುದನ್ನೇ ಹೇಳಿಕೊಡಬೇಕಾಯಿತು. ಆತನ ಮನಸ್ಸು ಸದಾ ಗೊಂದಲಭರಿತ. ತನ್ನ ಹೊರತಾಗಿ ಬೇರೆ ಯಾರಿಗೂ ಗೊತ್ತಿಲ್ಲದ ವಿಷಯ ವಿವರಗಳನ್ನೆಲ್ಲ ಹಂಚಿಕೊಳ್ಳುವಾಗಿನ ಆತಂಕ. ಚಿಕಿತ್ಸಕಿಯಾಗಿ ನನ್ನನ್ನು ಒಪ್ಪಿಕೊಳ್ಳುವಲ್ಲಿ ಸಣ್ಣ ಸಂದೇಹ. ಇವೆಲ್ಲ ಅಡೆತಡೆಗಳನ್ನು ದಾಟಿ ಮುಂದಿನ ಭೇಟಿಗೆ ಬಂದಾಗ ನಿರಾಳವಾಗಿ ಸಮ್ಮೋಹನಕ್ಕೆ ಒಳಗಾಗಿ ಯಾವುದೋ ಜನ್ಮದ ತುಣುಕನ್ನು ಎಳೆದೆಳೆದು ತಂದ.

Monday, 16 May 2011
ಸಂಜ್ಞಾ - ೦೨
ರಾತ್ರೆ ಹತ್ತೂವರೆ ಕಳೆದಿತ್ತು. ಸುಂದರ್ ಅಮ್ಮನೇ ಬಂದಿರಬೇಕೆಂದು ಓದುತ್ತಿದ್ದ ಕಾದಂಬರಿಯನ್ನು ಬದಿಗಿರಿಸಿ ಬಾಗಿಲು ತೆರೆದ.
"ಒಳಗೆ ಬರಬಹುದಾ?" ಕೇಳಿದವಳು ಸುಜೇತಾ.
ಸುಮ್ಮನೇ ಬದಿಗೆ ಸರಿದು ನಿಂತವನನ್ನು ದಾಟಿ ಹೋಗಿ ಕುರ್ಚಿಯಲ್ಲಿ ಕೂತಳು. ಉಪಾಯವಿಲ್ಲದೆ ಮಂಚದ ಮೇಲೆ ಕೂತ ಸುಂದರ್. "ಏನತ್ತಿಗೆ ಈ ಹೊತ್ತಿಗೆ ಬಂದ್ರಿ?"
"ಬರಬಾರ್ದಾ?... ಏನ್ ಓದ್ತಿದ್ದೆ?..."
"ಸಿಡ್ನಿ ಷೆಲ್ಡನ್ ನಾವೆಲ್"
"ಹ್ಮ್. ಅವ್ನ ನಾವೆಲ್ಲಲ್ಲಿ ರೊಮ್ಯಾನ್ಸ್ ಎಷ್ಟು ಚಂದ, ಅಲ್ವಾ?"
"..."
"ಯಾಕೆ ಮಾರಾಯ ನಾಚಿಕೆ? ನಾನೇನು ಹೊರಗಿನವಳಾ? ಹೇಳು, ಚಂದ ಇರ್ತದಲ್ವಾ?"
"ಹ್ಮ್..."
ಅಷ್ಟರಲ್ಲೇ ಕೆಳಗಿನಿಂದ ಅಮ್ಮ ಸುಂದರನನ್ನು ಕರೆದರೆಂದು ಸಿಕ್ಕಿದ ಅವಕಾಶ ಉಪಯೋಗಿಸಿ ಎದ್ದು ಹೋದ. ಮತ್ತೆ ಬಂದಾಗ ಸುಜೇತಾ ಅಲ್ಲಿರಲಿಲ್ಲ. ಓದುತ್ತಿದ್ದ ಕಾದಂಬರಿಯೂ ಇರಲಿಲ್ಲ.
ಮತ್ತೊಂದೆರಡು ದಿನಗಳ ನಂತರ ಇಂಥದೇ ಇನ್ನೊಂದು ಮುಖಾಮುಖಿ. ಅಂದು ಸುಮ್ಮನೇ ಏನೋ ಕಾರಣ ಹುಡುಕಿ ಕೆಳಗೆ ಬಂದಿದ್ದ ಸುಂದರ್. ಹಿಂದಿರುಗಿದಾಗ ಕೋಣೆ ಖಾಲಿ. ಈ ಹೊಸ ಅತ್ತಿಗೆಯ ಈ ವರಸೆ ಆತನಿಗೆ ಒಗಟಾಗಿತ್ತು. ಯಾರಲ್ಲೂ ಹೇಳುವಂತಿರಲಿಲ್ಲ. ಹೀಗೇ ಒಂದೆರಡು ತಿಂಗಳೇ ಕಳೆಯಿತು. ಊಟದ ಮೇಜಿನ ಮುಂದೆಯೂ ಸುಜೇತಾ ಸಿಕ್ಕರೆ ಅವಳ ನೋಟ ತಪ್ಪಿಸುವಂತಾಗುತ್ತಿತ್ತು. ಅದ್ಯಾವುದೋ ಅರಿಯದ ಸೆಳೆತ ಅವಳ ಕಣ್ಣಲ್ಲಿ. ಆತ್ಮೀಯ ಗೆಳೆಯನಲ್ಲಿ ಹೇಳಿಕೊಂಡ. ಅವನೋ, ಸಾರಾಸಗಟಾಗಿ ತೀರ್ಪು ಕೊಟ್ಟ- ಅವಳು ನಿನ್ನನ್ನು ಮೋಹಿಸುತ್ತಿದ್ದಾಳೆ. ಬೇಕಾದರೆ ಉಪಯೋಗಿಸ್ಕೋ. ಇಲ್ಲವಾದ್ರೆ ದೂರಾಗು.
ಏನೇನೋ ಸಬೂಬು ಹೇಳಿ, ಸಿ.ಎ. ಸೇರಲೆಂದು ಬೆಂಗಳೂರಿಗೆ ಹೊರಟವನನ್ನು ಅಪ್ಪ ತಡೆದು ತನ್ನೂರಲ್ಲೇ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಬಳಿ ಆರ್ಟಿಕಲ್‍ಷಿಪ್ಪಿಗೆ ಸೇರಿಸಿದಾಗ ಪೆಚ್ಚಾದವನು ಸುಂದರ್ ಮಾತ್ರ. ಸುಜೇತಾ ಎನ್ನುವ ಮೋಹಿನಿಯಿಂದ ದೂರ ಹೋಗುವ ಪ್ರಯತ್ನ ವಿಫಲವಾಯ್ತು. ಇನ್ನು ಗೆಳೆಯ ಹೇಳಿದಂತೆ ಅದರ ಪ್ರಯೋಜನ ಪಡೆಯಲೆ? ಮನಸ್ಸು ಒಪ್ಪಲೇ ಇಲ್ಲ. ನಿದ್ದೆ ದೂರಾಗಹತ್ತಿತು. ಇಷ್ಟೆಲ್ಲ ಆಗುವಷ್ಟರಲ್ಲಿ ಭಾಸ್ಕರ್ ಸುಜೇತಾ ಈ ಮನೆ ಸೇರಿ ಆರೇಳು ತಿಂಗಳು ಕಳಯಿತು. ಮನೆಯವರೆಲ್ಲ ಚೆನ್ನಾಗಿಯೇ ಹೊಂದಿಕೊಂಡಿದ್ದರು. ಶಂಕರ್ ವ್ಯವಹಾರ ವಿಸ್ತಾರಗೊಳ್ಳುತ್ತಿತ್ತು. ಹೆಸರೂ ಹರಡುತ್ತಿತ್ತು. ಒಂಟಿಯಾಗಿ ಒಳಗೊಳಗೇ ಕೊರಗುತ್ತಿದ್ದವ ಸುಂದರ್ ಮಾತ್ರ.
ಅದೊಂದು ದಿನ ಮಧ್ಯರಾತ್ರೆ, ಮನೆಯೆಲ್ಲ ಮೌನದಲ್ಲಿ ಅದ್ದಿದ್ದ ಒಂದೂವರೆ-ಒಂದೂ ಮುಕ್ಕಾಲರ ಹೊತ್ತು. ಅಕೌಂಟಿಂಗ್ ಪುಸ್ತಕದಲ್ಲಿ ಮುಳುಗಿದ್ದ ಸುಂದರ್ ಬೆನ್ನಮೇಲೆ ಮೃದುವಾಗಿ ಬೆಚ್ಚಗಿನದೇನೋ ಸೋಕಿದಾಗ ಬೆನ್ನಹುರಿಯಲ್ಲೇ ಝುಮ್ಮೆಂದು ನೇರವಾದ. ತಕ್ಷಣವೇ ಆತನ ಕಣ್ಣಮೇಲೆ ಬೆರಳುಗಳು ಆವರಿಸಿಕೊಂಡವು.
"ಸುಜೇತಾ..." ಮನಸ್ಸು ಇಂದ್ರಿಯಗಳೆಲ್ಲ ಕೂಗಿಕೊಂಡವು, ನಾಲಿಗೆಯ ಹೊರತಾಗಿ.
ಮುಂದೆ ನಡೆದುದಕ್ಕೆ ಆತನಲ್ಲಿ ಯಾವುದೇ ಕಾರಣವಿಲ್ಲ, ತರ್ಕವಿಲ್ಲ, ಜಿಗುಪ್ಸೆಯಿಲ್ಲ, ಬೇಸರವೂ ಇಲ್ಲ.
ಇನ್ನಷ್ಟು ಬೇಕೆಂಬ ಆಸೆಯ ಬೆಂಕಿ ಮಾತ್ರ.

Monday, 9 May 2011
ಸಂಜ್ಞಾ - ೦೧
"ಮೇಡಮ್, ನಿಮ್ಮತ್ರ ಅರ್ಜೆಂಟ್ ಮಾತಾಡ್ಬೇಕು. ಪುರುಸೊತ್ತು ಉಂಟಾ? ಕಾಲ್ ಮಾಡ್ಲಾ?"
ಅವನ ಮೆಸೇಜ್ ಬಂದಾಗ ಮಧ್ಯಾಹ್ನದ ಊಟ, ನಂತರದ ಕೆಲಸಗಳನ್ನು ಮುಗಿಸಿ ಮಲಗಲೋ ಓದಲೋ ಅನ್ನುವ ಗೊಂದಲದಲ್ಲಿದ್ದೆ. ಎರಡನ್ನೂ ಬದಿಗಿಟ್ಟು "ಕಾಲ್ ಮಾಡು" ಉತ್ತರ ಕಳಿಸಿದೆ.
ಅವನು ನನ್ನ ಕ್ಲಯಂಟ್. ಇದಕ್ಕೆ ಮೊದಲು ಎರಡು ಬಾರಿ ಸಮ್ಮೋಹನ ಚಿಕಿತ್ಸೆಗಾಗಿ ಬಂದಿದ್ದ. ಎರಡೂ ಸಲವೂ ಹದವಾದ ಟ್ರಾನ್ಸ್ ಸ್ಟೇಜ್ ತಲುಪಿದ್ದ. ರಿಲ್ಯಾಕ್ಸ್ ಆಗುವುದಕ್ಕೇ ಹಿಂಜರಿಕೆ ಆತನಿಗೆ. ಏನೋ ಬಿಗು, ಎಂಥದೋ ಆತಂಕ. ಮೂರನೇ ವಾರಕ್ಕೆ ಭೇಟಿ ನಿಗದಿಪಡಿಸಿಯೇ ಹೋಗಿದ್ದ. ಇನ್ನೆರಡು ದಿನಕ್ಕೆ ನಮ್ಮ ನಿಗದಿತ ಭೇಟಿ. ಇಂದೇನು ಅರ್ಜೆಂಟ್? ನನ್ನ ಯೋಚನಾ ಸರಣಿ ಅವನ ಕರೆಯಿಂದ ಕತ್ತರಿಸಲ್ಪಟ್ಟಿತು.
"ಹಲೋ, ನಮಸ್ತೆ ಸುಂದರ್. ಹೇಳಿ. ಹೇಗಿದ್ದೀರಿ?"
"ನಾನು... ನಾನು... ತುಂಬಾ ಟೆನ್ಶನ್ ಆಗ್ತದೆ ಮೇಡಮ್. ನಿದ್ದೆಯೇ ಬರುದಿಲ್ಲ. ರಾತ್ರೆ ಎರಡು ಮೂರು ಗಂಟೆಗೆಲ್ಲ ಕಾರ್ ತಗೊಂಡು ಡ್ರೈವ್ ಹೋಗ್ತೇನೆ, ಟೆನ್ಶನ್ ತಡಿಲಿಕ್ಕೆ. ಆದ್ರೂ ಸರಿಯಾಗುದಿಲ್ಲ. ನಿದ್ದೆಯೇ ಬರುದಿಲ್ಲ. ಟೆನ್ಶನ್... ನಾನು ಸರಿಯಾಗ್ತೆನಾ ಮೇಡಮ್?"
"ಸುಂದರ್, ನೀವು ಖಂಡಿತಾ ಸರಿಯಾಗ್ತೀರಿ. ನಾನು ಹೇಳಿದ ಹಾಗೆ ಕೇಳ್ಬೇಕು, ಅಷ್ಟೇ. ಕೇಳ್ತೀರಾ?"
"ಹ್ಮ್..."
"ನಾನು ಹೇಳಿದ ಹಾಗೆ ಪ್ರತಿದಿನ ರಿಲ್ಯಾಕ್ಸೇಷನ್ ಅಭ್ಯಾಸ ಮಾಡ್ತಿದ್ದೀರಾ? ಬೆಳಗ್ಗೆ ಮೆಡಿಟೇಶನ್ ಮಾಡ್ತಿದ್ದೀರ? ಯೋಗಾಬ್ಯಾಸ ಪುನಃ ಶುರು ಮಾಡಿದ್ದೀರಾ?"
"ಇಲ್ಲ ಮೇಡಮ್, ಯಾವುದೂ ಆಗುದಿಲ್ಲ. ಸುಮ್ಮನೇ ಕೂತ್ಕೊಳ್ಳಿಕ್ಕೇ ಆಗುದಿಲ್ಲ. ಟೆನ್ಶನ್..."
"ನಿಮ್ಮ ಇಷ್ಟದ ಮ್ಯೂಸಿಕ್... ಅದನ್ನು ಕೇಳ್ತಿದ್ದೀರ?"
"ಹೌದು, ಅದು ಯಾವಾಗ್ಲೂ ಕೇಳ್ತೇನೆ."
"ಗುಡ್. ಅದನ್ನೇ ಕೇಳಿಕೊಂಡು ಹಾಗೇ ಕಣ್ಣುಮುಚ್ಚಿ ರಿಲ್ಯಾಕ್ಸ್ ಆಗಿ. ಇನ್ನೆರಡು ದಿನ ಅದನ್ನು ಮಾಡ್ತೀರಾ?"
"ಹ್ಮ್, ಮಾಡ್ತೇನೆ ಮೇಡಮ್..."
"ಸರಿ ಹಾಗಾದ್ರೆ. ಎರಡು ದಿನದ ಮೇಲೆ ನೋಡುವಾ. ನಿಮ್ಮ ಸಮಯಕ್ಕೆ ಸರಿಯಾಗಿ ಬನ್ನಿ, ಆಯ್ತಾ?"
"ಬರ್ತೇನೆ ಮೇಡಮ್. ನಾನು ಸರಿಯಾಗ್ತೇನಾ?"
"ಹೌದು, ಸುಂದರ್. ಖಂಡಿತಾ ಸರಿಯಾಗ್ತೀರಿ. ಗುರುವಾರ ನೋಡುವಾ. ಬೈ ಬೈ. ಟೇಕ್ ಕೇರ್."
"ಹ್ಮ್..."
***
ಸುಂದರ್ ಹೆಸರು ಅನ್ವರ್ಥ. ಸ್ಫುರದ್ರೂಪಿ ತರುಣ. ಇಪ್ಪತ್ತಾರರ ಹರೆಯ. ಎತ್ತರದ ದೃಢಕಾಯ. ಗುಂಗುರುಂಗುರು ತಲೆಗೂದಲು. ಅಗಲ ಮುಖದಲ್ಲಿ ಕಳೆಗುಂದಿದ ಕಂಗಾಲಾದ ಅಗಲಗಲ ಕಣ್ಣುಗಳು. ಬೇಕಾದಷ್ಟು ಆಸ್ತಿ ಮಾಡಿಟ್ಟಿರುವ ಸಿವಿಲ್ ಕಾಂಟ್ರ್ಯಾಕ್ಟರ್ ಅಪ್ಪನ ಏಕಮಾತ್ರಪುತ್ರ. ಬಿ.ಕಾಂ. ಪದವೀಧರ. ಸಿ.ಎ. ಮಾಡುವ ಕನಸು ಹೊತ್ತಾಗಲೇ ಕಣ್ಣಿಗೆ ಬಿದ್ದವಳು ದೊಡ್ಡಪ್ಪನ ಮಗನ ಹೆಂಡತಿ- ಸುಜೇತಾ. ಚಿಕ್ಕಪ್ಪನ ಜೊತೆಗೇ ಕಟ್ಟಡ ಕಾಮಗಾರಿ ಕೆಲಸಗಳ ಉಸ್ತುವಾರಿ ನೋಡಿಕೊಂಡು ತನ್ನ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದ ಭಾಸ್ಕರ್ ಇವರ ಮನೆಗೇ ಬಂದು ನೆಲೆಸಿದ ಪತ್ನೀಸಹಿತ.
ಸುಂದರನ ಅಪ್ಪ ಶಂಕರ್ ನಗರದಲ್ಲೆಲ್ಲ ಸುಪ್ರಸಿದ್ಧರು. ಕೈತುಂಬಾ ಕೆಲಸವಿದ್ದು ಎಲ್ಲವನ್ನೂ ಸರಿದೂಗಿಸಿಕೊಳ್ಳಲು ಹೆಣಗುತ್ತಿದ್ದ ಹೊತ್ತಿನಲ್ಲೇ ಭಾಸ್ಕರ್ ಜೊತೆಗೂಡಿದಾಗ ರೆಕ್ಕೆ ಬಂದಂತಾಗಿತ್ತು. ಅಣ್ಣನ ಮಗನನ್ನೂ ಮನೆಯಲ್ಲೇ ಇರಿಸಿಕೊಂಡು ಕೆಲಸ ಕಾರ್ಯಗಳ ರಾಜ್ಯಭಾರವನ್ನು ಅವನಿಗೂ ಕಲಿಸುತ್ತಾ ತಾವು ಬೆಳೆಯುವ ಲೆಕ್ಕ ಹಾಕಿದರು. ಮನೆಯಾಕೆಗೂ ಮಗಳಂತಹ ಸೊಸೆ ಸುಜೇತಾಳಲ್ಲಿ ಮಮತೆಯೇ. ಎಲ್ಲವೂ ಚಂದವಾಗಿಯೇ ಇತ್ತು- ಅದೊಂದು ದಿನ ರಾತ್ರೆ ಆ ಕೋಣೆಯ ಬಾಗಿಲು ಟಕಟಕಿಸುವ ತನಕ.

Monday, 2 May 2011
ಸುಮ್ಮನೆ ನೋಡಿದಾಗ...೨೪
‘ನೀವು ನನ್ನನ್ನು ಇಷ್ಟ ಪಟ್ಟಿದ್ದೀರಿ ಅಂತ ನೇಹಾ ಹೇಳಿದ್ದಾಳೆ ಅಂತಂದ ಹರ್ಷ. ನಿಜವಾ?’
‘...’
‘ನಿಮ್ಮನ್ನು ನೋಡಿದ ಮೊದಲ ಸಲವೇ ನಾನು ಮೆಚ್ಚಿಕೊಂಡಿದ್ದೆ ನಿಮ್ಮನ್ನು. ನನ್ನ ಕಸಿನ್ ಶರತ್ ನಿಮ್ಮ ಕ್ಲಾಸ್‍ಮೇಟ್ ಅಲ್ವಾ? ಶರತ್ ಹೇಳ್ತಿದ್ದ ನೀವು ಎಂ.ಎಸ್ಸಿ. ಮಾಡುವ ಯೋಚನೆಯಲ್ಲಿದ್ದೀರಿ ಅಂತ. ಹೌದಾ?’
‘ಹ್ಮ್! ಜುಲೈ ಹದ್ನೆಂಟು ಕ್ಯಾಂಪಸ್ಸಿಗೆ ಹೋಗ್ತಿದ್ದೇನೆ.’ ಅಂತೂ ಒಂದು ಅರ್ಥಪೂರ್ಣ ವಾಕ್ಯ ಮಾತಾಡಿದೆ!
‘ಯಾವ ವಿಷಯದಲ್ಲಿ ಎಂ.ಎಸ್ಸಿ?’
‘ಪ್ರಾಣಿಶಾಸ್ತ್ರ ವಿಭಾಗದಲ್ಲಿ. ಕೆಮಿಸ್ಟ್ರಿ ನಂಗಿಷ್ಟ ಇಲ್ಲ...’ ಬೇಕಂತಲೇ ಎರಡನೆಯ ಮಾತು ಸೇರಿಸಿದ್ದೆ.
‘ನಿಮ್ ಇಷ್ಟ ನಿಮ್ಮದೇ. ಅದ್ರಲ್ಲೇನು ತೊಂದರೆ?’
‘...’
ಸಣ್ಣದೊಂದು ಮಿಂಚು ಸುಳಿದು ಗುಡುಗು ಮೊಳಗಿ ಮಳೆಹನಿ ಇಳಿಯತೊಡಗಿದ್ದೇ ನೆಪವಾಗಿ ಆಕಾಶ ನೋಡಿದೆ.
‘ಮನೆಒಳಗೆ ಹೋಗುವ, ಬನ್ನಿ...’ ತಾನೇ ಮುಂದಾಗಿ ಹೊರಟವನ ಹಿಂದೆ ಎದ್ದು ನಿಂತಾಗ ಅಂಗಳದಲ್ಲಿ ನಿಂತಿದ್ದ ನೀರಿನಲ್ಲಿ ಮತ್ತೊಂದು ಸುಳಿಮಿಂಚು ಪ್ರತಿಫಲಿಸಿತು. ಗುಡುಗಿನ ಸ್ವರದೊಡನೆಯೇ ಗುಡುಗುಡು ಓಡಿ ನೇಹಾಳ ಕೋಣೆಯನ್ನು ಸೇರಿಕೊಂಡು ಬಾಗಿಲು ಮುಂದೆ ಮಾಡಿ ಅವಳೆರಡೂ ಕೆನ್ನೆಗಳನ್ನು ಹಿಂಡುತ್ತಾ ಕೇಳಿದೆ, ‘ಯಾಕೆ ಇದೆಲ್ಲಾ ಕಿತಾಪತಿ ಮಾಡಿದ್ದು? ಯಾಕೆ ಹರ್ಷಣ್ಣನಿಗೆ ಹೇಳಿದ್ದು? ಮತ್ತಿನ್ಯಾರಿಗೆಲ್ಲ ಗೊತ್ತುಂಟು ಈ ವಿಷ್ಯ? ಯಾಕೆ?’
‘ಹೇಳದೇ ಇದ್ದಿದ್ರೆ ನಿನ್ನ ಪ್ರೀತಿ ನಿನ್ನ ಹೃದಯದಲ್ಲೇ ಹುದುಗಿ ಒಣಗಿ ಹೋಗ್ತಿತ್ತೇನೋ... ಅದಕ್ಕೇ ಹರ್ಷನಿಗೆ ಹೇಳಿದ್ದು. ಅವ್ರಿಗಂತೂ ಖಷಿಯೋ ಖುಷಿ. ‘ತುಂಬಾ ಒಳ್ಳೇ ಹುಡುಗ ವಸಂತ್. ಅವ್ನನ್ನು ಮೆಚ್ಚಿದ್ದಾಳಾ ಶಿಶಿರಾ? ನನ್ ತಂಗಿ ಆಯ್ಕೆ ಪರ್ಫ಼ೆಕ್ಟ್, ನನ್ನ ಆಯ್ಕೆ ಹಾಗೇ...’ ಅಂತೆಲ್ಲಾ ಹಾರಾಡಿದ್ದೇ ಹಾರಾಡಿದ್ದು. ನಿನ್ನೆ ಸಂಜೆ ಅವ್ರು ಬಂದಾಗ ಹೇಳಿದೆ. ಇವತ್ತು ಈ ಕತೆ. ಇದೆಲ್ಲ ನಂಗೇನೂ ಗೊತ್ತಿರ್ಲಿಲ್ಲ ಮಾರಾಯ್ತಿ. ಎಲ್ಲ ಅವ್ರದ್ದೇ ಕಿತಾಪತಿ. ಅವ್ರನ್ನೆಲ್ಲ ಇಲ್ಲಿಗೆ ನಮ್ಮನೆಗೆ ಅಂತ ಕರ್ಕೊಂಬಂದು, ಮೆಲ್ಲ ಪಪ್ಪನತ್ರ ಹೇಳಿ, ನನ್ನ ಮೂಲಕ ನಿಂಗೆ ಫ಼ೋನ್ ಮಾಡ್ಸಿದ್ದಾರೆ. ಆಮೇಲಿದ್ದು ನಿಂಗೇ ಗೊತ್ತುಂಟಲ್ಲಾ. ನನ್ನನ್ನು ಆಟ ಆಡ್ಸಿದ್ರು ಪಪ್ಪ, ಹರ್ಷ ಸೇರಿ. ಪ್ಲೀಸ್ ಮಾರಾಯ್ತಿ, ನಂಬು ನನ್ನನ್ನು...’ ನನ್ನ ಪ್ರಶ್ನಾರ್ಥಕ ನೋಟಕ್ಕೆ ಉತ್ತರ ಕೊಡುತ್ತಾ ನಿಂತವಳ ಕೆನ್ನೆಗಳೂ ಕೆಂಪಾಗಿದ್ದವು.
ನಮ್ಮಿಬ್ಬರ ಮೌನಹರಟೆಯ ನಡುವೆ ನಡುಮನೆಯಿಂದ ಅಂಕಲ್ ಅಮ್ಮನಿಗೆ ಫೋನ್ ಮಾಡುತ್ತಿದ್ದದ್ದು ಕೇಳುತ್ತಿತ್ತು. ಮಧ್ಯಾಹ್ನದೂಟಕ್ಕೆ ಇಲ್ಲೇ ಬರುವಂತೆ ಹೇಳುತ್ತಿದ್ದರು ಅಂಕಲ್. ‘ಏನೋ ವಿಶೇಷ ಉಂಟು. ಬನ್ನಿ, ಗೊತ್ತಾಗ್ತದೆ’ ಅನ್ನುತ್ತಿದ್ದರು. ಅಲ್ಲಿಂದೇನು ಉತ್ತರ ಬಂತೋ ಗೊತ್ತಿಲ್ಲ.
ಕೋಣೆಯ ಬಾಗಿಲ ಮೇಲೆ ಎಂದಿನ ಹಾಗೆ ಬೆರಳುಗಳ ನರ್ತನ ಶುರುವಾದಾಗ ಬಾಗಿಲು ತೆರೆದೆವು. ಒಳಗೆ ಬಂದ ಅಂಕಲ್ ನಮ್ಮಿಬ್ಬರನ್ನೂ ತಬ್ಬಿಕೊಂಡು ಸುಮ್ಮನೇ ನಿಂತರು. ಅವರ ಎರಡೂ ಭುಜಗಳಲ್ಲಿ ಒಂದೊಂದು ಹೂಗಳು; ಆಗಷ್ಟೇ ಸುರಿದ ಮಳೆಯಲ್ಲಿ ಮಿಂದಂತೆ ಪುಳಕಿತ ಹೂಗಳು. ಮತ್ತೊಂದು ಮಿಂಚು ಬೆಳಗಿತೆಂದು ತಲೆಯೆತ್ತಿದಾಗ ಕಂಡದ್ದು ಕ್ಯಾಮೆರಾ ಹಿಂದೆ ನಗುತ್ತಿದ್ದ ಹರ್ಷಣ್ಣ. ಅವನ ಹಿಂದೆ ಕಾತರದ ಕಣ್ಣುಗಳ ವಸಂತ್. ಅವನಿಗಿನ್ನೂ ನನ್ನ ಉತ್ತರ ಕೊಟ್ಟಿರಲಿಲ್ಲ. ಕೊಡಬೇಕೇ? ಯಾಕೆ? ನಾಲಿಗೆ ಚಾಚಿ ಹರ್ಷಣ್ಣನನ್ನು ಅಣಕಿಸಿ ಅಂಕಲ್ ತೋಳಿಗೆ ಕೆನ್ನೆಯೊತ್ತಿದೆ. ಅಡುಗೆಮನೆಯಿಂದ ನಳಿನಿ ಆಂಟಿ ತುಪ್ಪದಲ್ಲಿ ದ್ರಾಕ್ಷಿ ಗೇರುಬೀಜ ಹುರಿಯುತ್ತಿದ್ದ ಘಮ ಮನೆಯೆಲ್ಲ ತುಂಬಿಕೊಂಡಿತು, ಮನವನ್ನೂ.
{ಸಹೃದಯ ಓದುಗರೇ, ನಿಮ್ಮೆಲ್ಲರ ಆಶೀರ್ವಾದ ಕೋರುತ್ತಾ, ನೇಹಾ-ಹರ್ಷ, ಶಿಶಿರಾ-ವಸಂತ್ ನಿಮ್ಮನ್ನು ಬೀಳ್ಕೊಡುತ್ತಾರೆ. ಹರಸಿರಿ.}

ರಮ್ಯಗಾನ...
Tuesday, 26 April 2011
ಸುಮ್ಮನೆ ನೋಡಿದಾಗ...೨೩
ಗೇಟಿನ ಬಳಿ ನಾನು ನಿಂತದ್ದನ್ನು ನೋಡಿದ ನೇಹಾ ಓಡಿ ಬಂದು ನನ್ನನ್ನು ಅಲ್ಲಿಗೇ ಎಳೆದೊಯ್ದಳು. ಸುಮುಖ್ ಅಂಕಲ್ ಹರ್ಷಣ್ಣನ ಜೊತೆ ಮಾತಾಡುತ್ತಿದ್ದರು. ನಳಿನಿ ಅಂಟಿ ಹೊಸದೊಂದು ಮಹಿಳೆಯ ಜೊತೆ ಮಾತಾಡುತ್ತಿದ್ದರು. ಜಾಜಿಪೊದೆಯ ನಡುವಿನ ಗುಬ್ಬಚ್ಚಿ ಗೂಡನ್ನು ದಿಟ್ಟಿಸುತ್ತಾ ನಿಂತಿದ್ದವರ ಬೆನ್ನು ಮಾತ್ರ ಕಾಣುತ್ತಿತ್ತು. ನನ್ನೊಳಗೆ ಯಾಕೋ ಯಾವುದೋ ಅರಿಯದ ಉದ್ವೇಗ ತುಂಬಿಕೊಳ್ಳತೊಡಗಿತು.
ನಮ್ಮಿಬ್ಬರನ್ನು ಕಂಡವನೇ ಹರ್ಷಣ್ಣ ಹತ್ತಿರ ಬಂದು ಜೋರಾಗಿಯೇ ತಲೆಯ ಮೇಲೆ ಮೊಟಕಿದ. ‘ಆಆಆಆಯ್’ ಸ್ವರ ಕರೆಯದೆಯೇ ಹೊರಬಂತು. ಗುಬ್ಬಚ್ಚಿ ಗೂಡನ್ನು ನೋಡುತ್ತಿದ್ದ ವ್ಯಕ್ತಿ ಇತ್ತ ತಿರುಗಿತು. ನನ್ನ ಸ್ವರ ಮತ್ತೆ ಗಂಟಲಲ್ಲೇ ಹುದುಗಿತು. ಹೃದಯದ ತಾಳ ಏರುಪೇರಾಯಿತು. ಮುಖ ಕೆಂಪಾಯಿತೇ? ಆಕಾಶವೇ ಕೆಳಗಿಳಿಯಿತೆ? ನೆಲ ನೆಲೆ ತಪ್ಪಿತೆ? ಕಣ್ಣು ಕತ್ತಲಿಟ್ಟು ಬೀಳುವ ಮೊದಲೇ ನೇಹಾಳನ್ನು ಆದರಿಸಿಕೊಂಡೆ. ಇನ್ನೊಂದು ಬದಿಯಿಂದ ಹರ್ಷಣ್ಣನ ಆಸರೆ. ನಳಿನಿ ಆಂಟಿಯ ಜೊತೆ ಮಾತಾಡುತ್ತಿದ್ದ ಮಹಿಳೆಯೂ ಇತ್ತ ತಿರುಗಿದರು. ಎಂಥ ಸುಂದರಿ, ಈ ವಯಸ್ಸಲ್ಲೂ. ಅವನ ಅಮ್ಮನೇ ಇರಬೇಕು, ಅದೇ ಕಣ್ಣು-ಮೂಗು. ಲಕ್ಷಣಕ್ಕೇ ಲಕ್ಷಣವ್ಯಾಖ್ಯೆ ಇವರು.
ನಾನು ಸುಧಾರಿಸಿಕೊಂಡದ್ದನ್ನು ನೋಡಿದ ಹರ್ಷಣ್ಣ ಮತ್ತೊಮ್ಮೆ ತಲೆಗೆ ಮೊಟಕಿದ, ಈ ಸಲ ಹದವಾಗಿಯೇ. ಕಣ್ಣು ನೆಲ ನೋಡಿತಷ್ಟೇ. ಅದ್ಯಾವ ಘಳಿಗೆಯಲ್ಲೋ ಒಳಗೆ ಹೋಗಿದ್ದ ನಳಿನಿ ಆಂಟಿ ಟೀ ಲೋಟ ಹಿಡಿದು ಬಂದರು. ಆಗಲೇ ಧಾರಾಳವಾಗಿ ಕಪ್ಪಿಟ್ಟಿದ್ದ ಆಗಸ ಈಗಲೋ ಮತ್ಯಾವಾಗಲೋ ಸುರಿಯುವಂತೆ ತುಂಬು ಮೋಡಗಳಿಂದ ಉಯ್ಯಾಲೆಯಾಡುತ್ತಿತ್ತು. ಹಿತವಾದ ಗಾಳಿ ಬೀಸುತ್ತಿತ್ತು. ಟೀ ಮುದ ಕೊಟ್ಟಿತು. ಗುಬ್ಬಚ್ಚಿಗಳು ಕಿಚಪಿಚವೆಂದಾಗ ಅಕಸ್ಮಾತ್ ತಲೆಯೆತ್ತಿದೆ. ಅವನ ನೋಟ ಅದ್ಯಾಕೆ ನನ್ನತ್ತಲೇ ಇತ್ತು? ಗುಬ್ಬಚ್ಚಿ ಕಾಣಲೇ ಇಲ್ಲ, ನೆಲ ಕಂಡಿತು. ಮತ್ತೆರಡು ಯುಗಗಳ ನಂತರ ತಲೆಯೆತ್ತಿದಾಗ ನಮ್ಮಿಬ್ಬರ ಹೊರತು ಜಾಜಿ ಮಂಟಪ ಬರಿದಾಗಿತ್ತು. ಅವನ್ಯಾಕೆ ಇಲ್ಲಿ ಬಂದ? ಯಾರು ಕರೆದರು? ಯಾಕೆ? ಉತ್ತರಗಳು ನನ್ನೊಳಗಿರಲಿಲ್ಲ. ಅವನಲ್ಲಿರಬಹುದೆ? ಗೊತ್ತಿಲ್ಲ. ಹೇಗೆ ಕೇಳಲಿ? ಛೇ! ಕಾಲೇಜಿನ ಬೋಲ್ಡ್ ಶಿಶಿರ ನಾನೇನಾ? ಇದ್ಯಾಕೆ ಹೀಗೆ ಕೋಲ್ಡ್ ಆಗಿಬಿಟ್ಟೆ?
‘ಯಾಕೆ ಶಿಶಿರಾ ಏನೂ ಮಾತಾಡುದಿಲ್ಲ? ಹೆದ್ರಿಕೆ, ಗಾಬರಿ ಆಗುವಂಥಾದ್ದು ಏನೂ ಇಲ್ಲವಲ್ಲ ಇಲ್ಲಿ...’ ಈ ಸ್ವರ ನನಗೇನೂ ಹೊಸದಲ್ಲ, ಕಾಲೇಜಲ್ಲಿ ಕೇಳಿದ್ದೇ. ಆದರೆ ಇದನ್ನು ಜೇನಲ್ಲಿಟ್ಟು ತೆಗೆದವರು ಯಾರು? ಹೇಗೆ?
‘ನಾನಿಲ್ಲಿಗೆ ಹೇಗೆ, ಯಾಕೆ ಬಂದೆ ಅಂತ ಯೋಚನೆ ನಿಮಗೆ, ಅಲ್ವಾ?’ ತಟ್ಟನೆ ಅವನ ಮುಖ ನೋಡಿದೆ. ಇವನಿಗೇನು ಅಂಜನವಿದ್ಯೆ ಗೊತ್ತುಂಟಾ?
‘ಹರ್ಷ ನನ್ನ ಕ್ಲಾಸ್‍ಮೇಟ್. ಅವನೇ ನಮ್ಮನ್ನು ಕರ್ದದ್ದು ಇವತ್ತು. ಹೀಗೇ ಮಾತಾಡುವಾಗ ಅಮ್ಮನೂ ನಳಿನಿಯವರೂ ಹೇಗೋ ನೆಂಟರು ಅಂತಲೂ ಗೊತ್ತಾಯ್ತು. ಹಾಗೆ ಇಲ್ಲಿಯೇ ಮಾತಾಡ್ತಾ ನಿಂತೆವು. ನಿಮ್ಮನ್ನು ಇಲ್ಲಿಗೆ ಬರ್ಲಿಕ್ಕೆ ಹೇಳಿದ್ದೂ ಹರ್ಷನೇ. ಸಮಾಧಾನ ಆಯ್ತಾ? ಹೆದ್ರಿಕೆ ಹೋಯ್ತಾ? ಇನ್ನಾದ್ರೂ ಮಾತಾಡ್ಬಹುದಾ? ಒಬ್ಬನೇ ಮಾತಾಡ್ತಿದ್ದೇನೆ, ನನ್ನಷ್ಟಕ್ಕೇ... ತಲೆ ಕೆಟ್ಟಿದೆ ಅಂದ್ಕೊಳ್ತಾರೆ ನೋಡಿದವರು! ಮಾತಾಡಿ...’
‘ಏನು ಮಾತಾಡ್ಲಿ?’

Monday, 18 April 2011
ಸುಮ್ಮನೆ ನೋಡಿದಾಗ...೨೨
ಹಗಲು ಹೇಗೆ ಓಡಿತೋ ಸಂಜೆ ಹೇಗಾಯ್ತೋ ಗೊತ್ತಾಗಲೇ ಇಲ್ಲ.
ಶ್ರಿಯಾಲಂಕಾರ್- ನಮ್ಮೂರಿನ ದೊಡ್ಡ ಬಟ್ಟೆಯಂಗಡಿ. ಎಷ್ಟೋ ಕಾಲದಿಂದಲೂ ಇದ್ದ ಈ ಅಂಗಡಿಯಲ್ಲೇ ಸರೋಜಾ ಆಂಟಿ, ನಳಿನಿ ಆಂಟಿ, ಸುಮುಖ್ ಅಂಕಲ್ ಯಾವಾಗಲೂ ವ್ಯವಹಾರ ಮಾಡುತ್ತಿದ್ದ ಕಾರಣ ನಮಗೆಲ್ಲ ಭಾರೀ ಸ್ವಾಗತವೇ ಸಿಕ್ಕಿತು. ಹರ್ಷಣ್ಣ ಮತ್ತು ಸುಮುಖ್ ಅಂಕಲ್ ಜೊತೆಯಲ್ಲಿ ನಾವೈದು ಹೆಂಗಸರು. ಅಂಗಡಿ ತುಂಬಾ ನಮ್ಮದೇ ಗೌಜಿ-ಗಲಾಟೆ. ಎಲ್ಲರಿಗೂ ಪರಿಚಯವಿರುವ ಉತ್ಸಾಹ ಸಲುಗೆ ಮಾತುಕತೆಯಲ್ಲಿ ಎದ್ದು ಕಾಣುತ್ತಿತ್ತು. ಅಂಗಡಿ ಮಾಲೀಕ ಸ್ವತಃ ನಮ್ಮ ಮುಂದೆ ನಿಂತಿದ್ದರು, ಸೀರೆಗಳನ್ನು ಬಿಡಿಸಿ ತೋರಿಸಿ ವೈವಿಧ್ಯ ವೈಶಿಷ್ಠ್ಯಗಳನ್ನು ವಿವರಿಸಲು.
ನೇಹಾ ತನಗಾಗಿ ಮೂರು-ನಾಲ್ಕು ಸೀರೆಗಳನ್ನು ಆರಿಸಿಕೊಳ್ಳಬೇಕಾಗಿತ್ತು. ಅವಳಿಗೆ ಮೆಚ್ಚಾದದ್ದು ಅಂಕಲ್ ಮತ್ತು ಹರ್ಷಣ್ಣನನ್ನು ಪೆಚ್ಚಾಗಿಸುತ್ತಿತ್ತು. ಅವರ ಇಷ್ಟ ಇವಳಿಗೆ ಕಷ್ಟವಾಗುತ್ತಿತ್ತು. ಇದೇ ಜಟಾಪಟಿ ನಡೀತಿರುವಾಗ ಅಮ್ಮ ಮತ್ತು ನಳಿನಿ ಆಂಟಿ ತಮ್ಮ ತಮ್ಮ ಕಣ್ಣು ಒಪ್ಪಿದ ಸೀರೆಗಳನ್ನು ಹೆಕ್ಕಿಕೊಂಡು ಸರೋಜ ಆಂಟಿಯ ಸಹಾಯಕ್ಕೆ ನಿಂತಿದ್ದರು. ನಾವಿಬ್ಬರೂ ಸೀರೆಗಳ ಅಟ್ಟಿಗಳ ನಡುವೆ ತಲೆಕೆರೆಯುತ್ತಾ ಪಿಳಿಪಿಳಿ ಮಾಡುತ್ತಾ ಕೂತಿದ್ದಾಗ ಅಂಕಲ್ ಮತ್ತು ಹರ್ಷಣ್ಣ ಒಟ್ಟಾಗಿ ನಾಲ್ಕು ಸೀರೆಗಳನ್ನು ತಂದು ನಮ್ಮ ಮುಂದೆ ಇಟ್ಟರು.
‘ನೇಹಾ, ಇದು ನಿಶ್ಚಿತಾರ್ಥಕ್ಕೆ, ಇದು ಧಾರೆಗೆ, ಇದು ಔತಣಕ್ಕೆ, ಇದು ಶಿಶಿರನಿಗೆ...’ ಅಂಕಲ್ ಕೊನೆಯ ಮಾತೆಂಬಂತೆ ಹೇಳಿದಾಗ ಅವರ ಆಯ್ಕೆಗಳನ್ನು ಮರುಮಾತಿಲ್ಲದೆ ನೇವರಿಸಿದೆವು.
‘ಇಷ್ಟು ಹೊತ್ತು ಈ ಸೀರೆಗಳು ಎಲ್ಲಿ ಅಡಗಿದ್ದವು? ಇವುಗಳನ್ನು ನಮಗೆ ಯಾಕೆ ತೋರಿಸ್ಲಿಲ್ಲ ನೀವು?’ ನೇಹಾ ಅಂಗಡಿ ಹುಡುಗರನ್ನೇ ತರಾಟೆಗೆಳೆದಳು. ಅವರೆಲ್ಲ ಸುಮ್ಮನೇ ಮುಖಮುಖ ನೋಡುವಾಗ, ‘ಇಷ್ಟ ಆಗದಿದ್ರೆ ಬದಲಾಯಿಸುವಾ. ಒತ್ತಾಯ ಏನಿಲ್ಲ’ ಎಂದ ಹರ್ಷಣ್ಣ. ನೇಹಾ ಸುಮ್ಮನೇ ತಲೆಯಾಡಿಸಿ ಸೀರೆಗಳನ್ನು ಮಡಿಲಲ್ಲಿರಿಸಿಕೊಂಡಾಗ, ‘ಬಿಲ್ ಮಾಡಿ ಪ್ಯಾಕ್ ಮಾಡಿ ಕೊಡ್ತೇವಮ್ಮಾ, ಇಲ್ಲಿ ಕೊಡಿ’ ಅಂತ ಕೈ ನೀಡಿದರು ಅಂಗಡಿ ಯಜಮಾನರು. ಕೆನ್ನೆಗಳು ಇನ್ನಷ್ಟು ಕೆಂಪಾದವು.
ಜೂನ್ ಮೂವತ್ತರಂದು ಮದುವೆಯೆಂದು ನಿಶ್ಚಯವಾಯ್ತು. ಔಪಚಾರಿಕವಾಗಿ ನಿಶ್ಚಿತಾರ್ಥವೂ ನಡೆಯಿತು. ಇವೆಲ್ಲದರ ನಡುವೆ ಅಮ್ಮನ ವಿರೋಧವನ್ನೂ ಲೆಕ್ಕಿಸದೆ ಎಮ್.ಎಸ್ಸಿ.ಗೆ ಅರ್ಜಿ ಹಾಕಿದೆ. ಜುಲೈ ಹದಿನೆಂಟರಂದು ವಿ.ವಿ. ಕ್ಯಾಂಪಸ್ಸಿನಲ್ಲಿ ಹಾಜರಾಗಬೇಕೆನ್ನುವ ಆಜ್ಞಾಪತ್ರವೂ ಬಂತು. ಅಮ್ಮನ ರಾಗ ಏರುತ್ತಿತ್ತು. ನೇಹಾಳ ಮದುವೆ ನೆಪದಲ್ಲಿ ಹೆಚ್ಚಾಗಿ ಅಲ್ಲೇ ಇರುವ ಅವಕಾಶ ಹುಡುಕುತ್ತಿದ್ದೆ ನಾನು. ನಮ್ಮ ಮಾತಿನ ನಡುವೆ ಆಗೊಮ್ಮೆ ಈಗೊಮ್ಮೆ ವಸಂತ್ ನುಸುಳುತ್ತಿದ್ದ. ಬಲವಂತವಾಗಿ ನೇಹಾಳ ಬಾಯಿ ಮುಚ್ಚಿಸುವುದಾಗಿತ್ತು. ಸುಮುಖ್ ಅಂಕಲ್ ಅಥವಾ ನಳಿನಿ ಆಂಟಿಯಿಂದ ಈ ಬಗ್ಗೆ ಯಾವುದೇ ಪ್ರಶ್ನೆಗಳು ನೋಟಗಳು ನನ್ನನ್ನು ಎದುರುಗೊಂಡಿಲ್ಲವಾದ್ದರಿಂದ ವಸಂತ್ ವಿಷಯ ಅವರ ಕಿವಿ ಮುಟ್ಟಲಿಲ್ಲವೆನ್ನುವ ಸಮಾಧಾನ ನನಗಿತ್ತು.
ಜೂನ್ ಹನ್ನೆರಡರ ಬೆಳಗ್ಗೆ ನೇಹಾ ಫೋನ್ ಮಾಡಿ ಆದಷ್ಟು ಬೇಗ ಬಾರೆಂದು ಕರೆದಾಗ ಅವಳ ಸ್ವರದಲ್ಲಿ ಯಾವುದೇ ಆತಂಕವಿಲ್ಲದಿದ್ದರೂ ನನ್ನ ಎದೆಬಡಿತ ಮಾತ್ರ ತಾಳ ತಪ್ಪಿ ಏರುಪೇರಾಯ್ತು. ಅವಸರವಸರವಾಗಿ ಹೇಗ್ಹೇಗೋ ತಯಾರಾಗಿ ಅವರ ಮನೆಯ ಮುಂದೆ ಬಂದಾಗ ಜಾಜಿ ಮಂಟಪದಲ್ಲೇ ಐದಾರು ಜನ ನಿಂತಿದ್ದರು. ಗೇಟಿನಿಂದ ಹೆಜ್ಜೆ ಮುಂದೆ ಎತ್ತಿಡುವುದೇ ಕಷ್ಟವೆನಿಸಿ ಅಲ್ಲೇ ನಿಂತೆ, ಜಾಜಿ ಮಂಟಪ ದಿಟ್ಟಿಸುತ್ತಾ.

ಹೀಗೇ ಸಾಗಲಿ
Monday, 11 April 2011
ಸುಮ್ಮನೆ ನೋಡಿದಾಗ...೨೧
ಸಹೃದಯರಿಗೆಲ್ಲ ಸೌರ ಯುಗಾದಿಯ (ವಿಷುವಿನ) ಸಂದರ್ಭದಲ್ಲಿ ಶುಭ ಹಾರೈಕೆಗಳು.
ಜೀವನ ಸುಂದರವಾಗಿರಲಿ, ಸುಖಮಯವಾಗಿರಲಿ, ಸಮೃದ್ಧಿಯಿಂದಿರಲಿ.

ಸರೋಜಾ ಆಂಟಿ ಅದೆಷ್ಟು ಹೊತ್ತಿಗೆ ತಮ್ಮ ಮನೆಗೆ ಹೊರಟಿದ್ದರೋ ಅದ್ಯಾವಾಗ ಸುಮುಖ್ ಅಂಕಲ್ ನಮ್ಮ ಹಿಂದೆ ಬಂದು ನಿಂತರೋ ಅರಿವಿರಲಿಲ್ಲ ನಮಗೆ. ನಳಿನಿ ಆಂಟಿಯ ವಕಾಲತ್ತಿನ ಮೇಲೆ ಅಂದು ರಾತ್ರಿ ನಾನು ಅಲ್ಲಿಯೇ ಉಳಿದೆ. ಮರುದಿನ ಬೆಳಿಗ್ಗೆಯೇ ಅಮ್ಮನೂ ಇಲ್ಲಿಗೇ ಬರುವ ಮಾತಾಯ್ತು ಹಿರಿಯ ಗೆಳತಿಯರಲ್ಲಿ. ನಳಿನಿ ಆಂಟಿಗೆ ಇಂದು ನಿದ್ದೆಯೇ ಬಾರದೇನೋ ಅನ್ನಿಸಿತು ನನಗೆ, ಅವರ ಸಂಭ್ರಮ ನೋಡಿ.
ಮಧ್ಯರಾತ್ರಿಯ ಎರಡು ಗಂಟೆಗೆ ನೇಹಾ ನನ್ನನು ಕುಲುಕಿ ಎಚ್ಚರಿಸಿದಳು, ಮುಖ ತುಂಬಾ ತುಂಟ ನಗು ಹೊತ್ತು.
‘ಏನಾಯ್ತು? ಯಾಕೆ ಎಬ್ಸಿದ್ದು ನನ್ನನ್ನು?’
‘ಯಾರು ವಸಂತ್? ಯಾಕವನು ಇಲ್ಲಿಗೆ ಬರ್ಬೇಕು? ಹೇಳು ಈಗ್ಲೇ’
‘ಯಾರು? ಯಾವ ವಸಂತ್? ಎಂತ ಮಾತಾಡ್ತಿದ್ದೀ ನೀನು? ಕನಸು ಬಿತ್ತಾ ನಿಂಗೆ?’
‘ಕನಸು ಬಿದ್ದದ್ದು ನಂಗಲ್ಲ ಮಾರಾಣಿ, ನಿಂಗೆ. ‘ವಸಂತ್, ಬನ್ನೀ...’ ಅಂತ ಕನವರಿಸಿದವಳು ನೀನು. ನಂಗೀಗ ಹೇಳುದಿಲ್ಲ ಅಂತಾದ್ರೆ ಬೆಳಗಾದ್ಮೇಲೆ ಪಪ್ಪನತ್ರ ಕೇಳಿಸ್ತೇನೆ, ಅಷ್ಟೇ...’
‘....’ ಹೇಗೆ ಎಲ್ಲಿಂದ ಇವಳಿಗೆ ಹೇಳುವುದೆನ್ನುವ ತರ್ಕದಲ್ಲಿ ಮುಳುಗಿದೆ.
‘ಏನು ಲೆಕ್ಕಾಚಾರ ಹಾಕ್ತಾ ಇದ್ದೀ? ನೀನು ಹೇಳದಿದ್ರೆ ಬಿಡುದಿಲ್ಲ ನಾನು. ಹೇಗೆ ನಿನ್ನ ಬಾಯಿ ಬಿಡಿಸ್ಬೇಕು ಅಂತ ನಂಗೊತ್ತುಂಟು. ಬೇಡ ಬಿಡು. ಬೆಳಿಗ್ಗೆ ನೋಡ್ಕೊಳ್ತೇನೆ...’
‘....’ ಹೇಳದಿದ್ರೆ ಬಿಡುವವಳಲ್ಲ. ಹಾಗಂತ ಅಂಕಲ್ ವರೆಗೆ ವಿಷಯ ಹೋದರೆ... ಒಳ್ಳೆಯದೆ? ಕೆಟ್ಟದ್ದೆ? ನಿಜವಾಗಲೂ ಲೆಕ್ಕಾಚಾರದಲ್ಲಿ ಬಿದ್ದೆ. ಬಾಯಿ ಬಿಡಲಿಲ್ಲ.
ಮುಖ ದಪ್ಪ ಮಾಡಿಕೊಂಡು ನನಗೆ ಬೆನ್ನುಹಾಕಿ ಮುಸಕೆಳೆದ ನೇಹಾಳ ಹುಸಿಕೋಪಕ್ಕೆ ನಗುವೇ ಬಂತು. ಕಿಸಕ್ಕನೆ ಹೊರಜಾರಿತು, ತಡೆಯಲಿಲ್ಲ. ಅವಳ ಕೋಪವೂ ಇಳಿಯಲಿಲ್ಲ. ನನ್ನ ಬೆನ್ನಿಗೊಂದು ಗುದ್ದಿದಳು. ನಡುಮನೆಯಲ್ಲಿ ಆಗಲೇ ದೀಪ ಉರಿಯಿತು. ನಳಿನಿ ಆಂಟಿಯ ಹೆಜ್ಜೆ ನಮ್ಮ ಕೋಣೆಯ ಬಾಗಿಲತ್ತ ಬಂತು. ಬಾಯ್ತೆರೆದವಳ ಸ್ವರ ಹೊರಗೆ ಬಾರದ ಹಾಗೆ ಕೈ ಅಡ್ಡ ಹಿಡಿದೆ. ಕೋಣೆಯೊಳಗಿನ ಮೌನ ಆಂಟಿಯನ್ನು ಹಿಂದಕ್ಕೆ ಕಳಿಸಿತು. ಒಂದ್ಹತ್ತು ನಿಮಿಷಗಳಲ್ಲಿ ಮೌನದ ಪದರ ಗಾಢವಾಗಿ ಮತ್ತೊಂದು ಕಿಸಕಿಸದೊಡನೆ ಒಡೆದುಕೊಂಡಿತು. ಇನ್ನೊಮ್ಮೆ ನೇಹಾಳ ಮುಖ ದಪ್ಪವಾಯ್ತು, ಹುಸಿಗೋಪದಲ್ಲಿ,
‘ಹೇಳ್ತೀಯಾ ಇಲ್ವಾ?’
‘ಹೇಳ್ತೇನೆ ಮಾರಾಯ್ತಿ. ನಿಂಗಲ್ದೆ ಇನ್ಯಾರಿಗೆ ಹೇಳುದು ನಾನು? ಎಲ್ಲ ಕೇಳಿದ ಮೇಲೆ ಬೈಬಾರ್ದು ನೀನು, ಅಷ್ಟೇ. ಅದೊಂದು ಪ್ರಾಮಿಸ್ ಮಾಡು.’
‘ಆಣೆ-ಪ್ರಾಮಿಸ್ ಎಲ್ಲ ನಮ್ಮ ನಡುವೆ ಬೇಡ ಅಂತ ಹೇಳಿದವಳೇ ನೀನು. ಈಗ ಪ್ರಾಮಿಸ್ ಮಾಡ್ಬೇಕಾ? ಅಂದ್ರೆ ಏನೋ ಗಾಢ-ಗೂಢ ಕಥೆಯೇ ಉಂಟು. ಹೇಳು, ಪ್ಲೀಸ್...’ ಗೋಗರೆಯುವ ನಾಟಕ ಮಾಡಿದಳು ಜೀವದ ಗೆಳತಿ.
ಮೊದಲ ಕಥೆ ಬರೆದ ಹಿನ್ನೆಲೆಯಿಂದ ಹಿಡಿದು ಸದ್ದಿಲ್ಲದೆ ವಸಂತ್ ನನ್ನೊಳಗೆ ಮನೆ ಮಾಡಿ ಕಾಡುತ್ತಿರುವ ಎಲ್ಲವನ್ನೂ ಕನವರಿಕೆಯಂತೆಯೇ ಉಸುರುತ್ತಾ ಮುಗಿಸಿದಾಗ ಬೆಳಗಿನ ಜಾವ ಐದರ ನಸುಕು. ಹೊರಗೆ ಬೇಕೋಬೇಡವೋ ಇಣುಕುತ್ತಿದ್ದ ಮಂದ ಬೆಳಕಿನಲ್ಲಿ ಕೆಲವಾರು ಹಕ್ಕಿಗಳ ಉಲಿ ವಾತಾವರಣವನ್ನು ಮತ್ತಷ್ಟು ಆಪ್ತವಾಗಿಸುತ್ತಿತ್ತು. ಹಾಸಿಗೆಯ ಮೇಲೆ ಸುಖಾಸನದಲ್ಲಿ ಕೂತು ಮಡಿಲಲ್ಲಿ ದಿಂಬು ಏರಿಸಿ, ಅದರಲ್ಲೆರಡೂ ಮೊಣಕೈಯೂರಿ, ಎರಡೂ ಅಂಗೈಗಳ ಆಧಾರದಲ್ಲಿ ಗಲ್ಲವನ್ನಿಟ್ಟು ತುಟಿ ಚೂಪು ಮಾಡಿ, ಹ್ಙೂಗುಟ್ಟುತ್ತಾ ಕೇಳಿಸಿಕೊಳ್ಳುತ್ತಿದ್ದವಳು, ನಾನು ನಿಟ್ಟುಸಿರು ಬಿಟ್ಟು ಹಗುರಾದಾಗ ಮತ್ತೊಮ್ಮೆ ನನ್ನ ಬೆನ್ನಿಗೆ ಗುದ್ದಿದಳು.
‘...ಯಾಕೆ?’
‘ಇಷ್ಟು ದಿನ ಇದನ್ನೆಲ್ಲ ನನ್ನಿಂದ ಮುಚ್ಚಿಟ್ಟದ್ದಕ್ಕೆ...’
‘ಇನ್ನೂ ಏನೂ ಆಗಿಲ್ಲದ ಈ ವಿಷಯವನ್ನು ನಿಂಗೆ ಹೇಳುವಂಥ ವಿಶೇಷ ನಂಗೆ ಕಂಡಿರಲಿಲ್ಲ. ಅದ್ಕೇ ಹೇಳಿರಲಿಲ್ಲ. ಇದೊಂಥರಾ ಇನ್ಫ಼ಾಚುವೇಷನ್ ಅಂತ ನಿಂಗನಿಸುದಿಲ್ವಾ? ಇದ್ರಲ್ಲೇನೂ ಹುರುಳಿಲ್ಲ ಅಂತ ಅನ್ನಿಸುದಿಲ್ವಾ? ವನ್ ವೇ ಟ್ರಾಫಿಕ್ ಅಲ್ವಾ ಇದು?’
‘ಇದನ್ನು ಟೂ ವೇ ಟ್ರಾಫಿಕ್ ಮಾಡ್ಲಿಕ್ಕೆ ಏನಾದ್ರೂ ಪ್ರಯತ್ನ ಮಾಡ್ಬೇಕಲ್ವ, ಮಾಡಿದ್ದೀಯ? ಆಚೆ ಕಡೆಯ ಟ್ರಾಫಿಕ್ಕಿಗೆ ಗ್ರೀನ್ ಸಿಗ್ನಲ್ ತೋರಿಸ್ಬೇಕಲ್ವ? ತೋರ್ಸಿದ್ದೀಯ? ಅದೇನೂ ಮಾಡದೆ, ಸುಮ್ನೆ ಕನವರಿಸ್ಕೊಂಡು ‘ವಸಂತ್ ಬನ್ನೀ...’ ಅಂತಂದ್ರೆ ಎಲ್ಲಿಂದ ಬರ್ತಾರೆ?. ನಂಗೀಗ ಎಲ್ಲ ಅರ್ಥ ಆಗ್ತಾ ಉಂಟು,ಶಿಶಿರಾ. ಶರತನ್ನು ನೋಡಿದ್ರೆ ಯಾಕೆ ತಪ್ಪಿಸ್ತಿದ್ದಿ, ವಸಂತ್ ಕಾಲೇಜಲ್ಲಿ ಕಂಡಾಗ ಬೇರೆ ಕಾರಿಡಾರಿಗೆ ನನ್ನನ್ನು ಯಾಕೆ ಎಳ್ದಿದ್ದಿ, ನಿಂಗೆ ಇಷ್ಟು ವರ್ಷಗಳಲ್ಲಿ ಇಲ್ಲದ ಒಂಥರಾ ಗೊಂದಲ, ಗಾಬರಿ ಪರೀಕ್ಷೆಯ ಸಮಯದಲ್ಲಿ ಈ ವರ್ಷ ಯಾಕಿತ್ತು... ಎಲ್ಲ ಅರ್ಥ ಆಗ್ತಾ ಉಂಟು. ನಾಳೆನೇ ನಾನು ಶರತ್ ಹತ್ರ ವಸಂತ್ ನಂಬರ್ ತಗೊಂಡು ಮಾತಾಡ್ತೇನೆ. ಅಂತೂ ಒಳ್ಳೇ ಸೆಲೆಕ್ಷನ್ ಬಿಡು. ಆದ್ರೆ, ಅವ್ರ ಸಬ್ಜೆಕ್ಟ್ ಮಾತ್ರ ನಿನ್ನಿಷ್ಟದ್ದು ಅಲ್ವಲ್ಲ... ಪ್ಚ್...ಪ್ಚ್... ಸ್ಸಾರೀ ಮಾರಾಯ್ತಿ...’ ನಾಟಕೀಯವಾಗಿ ತಲೆಯಾಡಿಸಿದವಳ ಮೇಲೆ ಕೋಪಗೊಳ್ಳುವುದೋ ಪ್ರೀತಿ ಹರಿಸುವುದೋ ತಿಳಿಯದೆ ಸುಮ್ಮನೇ ಕೂತಿದ್ದೆ.
ನಳಿನಿ ಆಂಟಿ ಎದ್ದು ಬಂದ ಶಬ್ದವಾದಾಗ ಒಂದು ಗಂಟೆಯಾದರೂ ಮಲಗೋಣವೆಂದು ಮತ್ತೊಮ್ಮೆ ಮುಸುಕೆಳೆದೆವು. ಮುಂಜಾವು ತನ್ನ ಪಾಡಿಗೆ ತಾನು ಬೆಳಕಾಗುತ್ತಿತ್ತು. ಸಂಜೆ ಸೀರೆಯಂಗಡಿಯಲ್ಲಿ ಯಾವುದೆಲ್ಲ ಬಣ್ಣಗಳನ್ನು ಯಾರ್ಯಾರಿಗ ಆರಿಸಬಹುದೆನ್ನುವ ಕಲ್ಪನೆಯೊಳಗೆ ಸೇರಿಹೋದವಳನ್ನು ನಿದ್ರೆಯೆಂಬ ಮಾಯೆ ಆವರಿಸಿಕೊಂಡಳು. ಎಚ್ಚರಾದಾಗ ಏಳೂವರೆಯ ಮೇಲಾಗಿತ್ತು. ಮುಖದ ಮೇಲೆ ಸುಂದರ ಮಂದಹಾಸ ಹರಿಬಿಟ್ಟ ನೇಹಾ ಇನ್ನೂ ಮಲಗೇ ಇದ್ದಳು. ನಡುಮನೆಗೆ ಬಂದಾಗ ಅಲ್ಲಾಗಲೇ ಹರ್ಷಣ್ಣ ನಗುತ್ತಿದ್ದ.
‘ಗುಡ್ ಮಾರ್ನಿಂಗ್ ಗೊಂಬೇ’ ಅಂದ.
‘ನಿನ್ನ ನಿಜವಾದ ಗೊಂಬೆ ಇನ್ನೂ ಮಲ್ಕೊಂಡೇ ಉಂಟು ಮಾರಾಯ. ಎಬ್ಬಿಸ್ಬೇಕಾ?’
‘ಬೇಡ, ನಿಮಗಿಬ್ಬರಿಗೂ ನಿಮ್ಮ ಜನ್ಮದಿನದ ಶುಭಾಶಯಗಳನ್ನು ಖುದ್ದಾಗಿ ಹೇಳುವಾಂತ ಬಾಂಬೆಯಿಂದ ಬಂದೆ. ಇಬ್ಬರೂ ಇಲ್ಲೇ ಸಿಕ್ಕಿದ್ದು ಫ಼ಸ್ಟ್ ಕ್ಲಾಸ್ ಆಯ್ತು. ಹ್ಯಾಪ್ಪಿ ಬರ್ತ್ ಡೇ ಮೈ ಡಿಯರ್.’
‘....’ ನನಗೆ ನೆನಪಿರುವ ಇಷ್ಟು ವರ್ಷಗಳಲ್ಲಿ ಇದೇ ಮೊದಲ ಸಲ ನಮ್ಮ ಜನ್ಮದಿನ ನಮ್ಮ ನೆನಪಿಂದ ಮರೆಯಾಗಿತ್ತು. ಪ್ರೇಮದ ಪರಿ ಹೀಗೇ ಏನು? ಸುಮ್ಮನೆ ಪೆಚ್ಚುಪೆಚ್ಚಾಗಿ ನಕ್ಕು ಬಚ್ಚಲುಮನೆಗೆ ಸಾಗಿ ಮುಖ ತೊಳೆದು ಬಂದೆ. ನಳಿನಿ ಆಂಟಿ ಹರ್ಷಣ್ಣ, ಸುಮುಖ್ ಅಂಕಲ್, ಮತ್ತು ನನಗೆ ಕಾಫಿ ತಂದಿತ್ತರು. ರಾಜಕುಮಾರಿಯ ಮುಖದರ್ಶನವಾಗಿರಲಿಲ್ಲ ಇನ್ನೂ.
Labels:
ಕಥನಕಾರಣ,
ತುಂಟ-ತುಡುಗ-ತರಲೆ-ಮನ,
ನೀಳ್ಗತೆ
Monday, 4 April 2011
ಸುಮ್ಮನೆ ನೋಡಿದಾಗ...೨೦
“ಸಹೃದಯರಿಗೆಲ್ಲ ಚಾಂದ್ರ ಯುಗಾದಿಯ ಸಂದರ್ಭದಲ್ಲಿ ಶುಭ ಹಾರೈಕೆಗಳು. ಜೀವನ ಸುಂದರವಾಗಿರಲಿ”
‘ಅಮ್ಮ, ನೀವು ಸಸ್ಪೆನ್ಸ್ ಶುರು ಮಾಡುದೇನೂ ಬೇಡ. ಶಿಶಿರಾ ನನ್ನ ತಂಗಿಯ ಹಾಗೆ. ಚಿಕ್ಕತ್ತೆ ಅಂತ ಅವಳಮ್ಮನನ್ನು ಕರೀತಿದ್ರೂ ಶಿಶಿರಾನ್ನು ಆ ದೃಷ್ಟಿಯಿಂದ ನೋಡಿದ್ದೇ ಇಲ್ಲ ನಾನು. ಆದ್ದರಿಂದ ಯಾವುದೇ ಗೊಂದಲ ಬೇಡ. ಇನ್ನು, ನೇಹಾ ಇದಕ್ಕೆ ಸಂಪೂರ್ಣ ಒಪ್ಪಿಗೆ ಕೊಡ್ತಾಳಾ ಕೇಳ್ಬೇಕು. ಬೇರೆಯವರಿಗೋಸ್ಕರ ಅವಳು ಒಪ್ಪುದೇನೂ ಬೇಡ. ಏನ್ ಹೇಳ್ತೀರಿ ಅಂಕಲ್?’ ಹರ್ಷಣ್ಣ ಖಡಾಖಂಡಿತವಾಗಿ ಹೇಳಿದಾಗ ಅಡುಗೆಮನೆಯಲ್ಲೇ ಕೆಂಪಾದ ನೇಹಾಳ ಕೆನ್ನೆಯನ್ನು ಸವರಿದೆ. ಸುಮ್ಮನೇ ನನ್ನ ಕೈ ಗಟ್ಟಿಯಾಗಿ ಹಿಡಿದು ನಿಂತವಳ ಹಿಂದೆ ಸುಮುಖ್ ಅಂಕಲ್ ನೆರಳಾದರು. ಅವರ ಕಣ್ಣುಗಳ ಪ್ರಶ್ನೆಗೆ ನೇಹಾ, ‘ಯೆಸ್ ಪಪ್ಪಾ’ ಎಂದಷ್ಟೇ ಉಸುರಿದಳು. ನಡುಮನೆಯಲ್ಲಿ ನಗೆ ಹೊನಲಾಯಿತು. ಎರಡು ಹೃದಯಗಳ ಹಾಡುಗಳು ಲಯಗತಿಯ ತಾದಾತ್ಮ್ಯ ಪಡೆದವು.
ಫೆಬ್ರವರಿ, ಮಾರ್ಚ್ ಹೇಗೋ ಕಳೆದವು. ಏಪ್ರಿಲಿನ ದಿನಗಳಲ್ಲಿ ಪರೀಕ್ಷೆಯ ನೆಪದಲ್ಲಿ ಎಲ್ಲವನ್ನೂ ಮರೆತಂತೆ ನಾವಿದ್ದರೂ ನಮ್ಮೊಳಗೆ ಇನ್ನೊಂದೊಂದು ಮೆಲ್ಲುಸಿರು ಸುಳಿಯುತ್ತಿದ್ದುದು ನಮನಮಗೇ ಗೊತ್ತು. ನೇಹಾಳಿಗಿನ್ನೂ ನನ್ನ ಹೃದಯದೊಳಗಿನ ಕಳ್ಳನ ಪತ್ತೆಯಾಗಿರಲಿಲ್ಲ. ಲ್ಯಾಬ್ ಪರೀಕ್ಷೆಗಳು ಹತ್ತಿರಾದಾಗ ಒಂದು ರಾತ್ರಿ ಇದ್ದಕ್ಕಿದ್ದಂತೆ ನಮ್ಮ ಕೆಮಿಸ್ಟ್ರಿ ಲ್ಯಾಬಿಗೆ ವಸಂತ್ ಹೊರ ಪರೀಕ್ಷಕರಾಗಿ ಬಂದರೆಂದು ಕನಸು ಬಿದ್ದು ಗಾಬರಿಯಿಂದ ಎದ್ದು ಕುಳಿತಿದ್ದೆ. ಲ್ಯಾಬ್ ಪರೀಕ್ಷೆಗಳಿಗೆ ಇನ್ನೊಂದು ವಾರವಿದೆ ಅನ್ನುವಾಗ ನನ್ನ ದಿಗಿಲು ನೇಹಾಳ ಕಣ್ಣುಗಳಿಗೆ ಬಿತ್ತು. ಎಂದೂ ಪರೀಕ್ಷೆಯ ಬಗ್ಗೆ ತಲೆಕೆಡಿಸಿಕೊಂಡಿರದ ನನ್ನ ಆತಂಕ ಅವಳಿಗೆ ಅಚ್ಚರಿ ಮೂಡಿಸಿತು. ನನ್ನೊಳಗನ್ನು ಈಗಲೇ ಬಿಚ್ಚಿಡಲು ನಾನೇನೂ ತಯಾರಿರಲಿಲ್ಲ. ಎಮ್.ಎಸ್ಸಿ. ಮಾಡಬೇಕಿತ್ತು. ಕೆಲಸಕ್ಕೆ ಸೇರಬೇಕಿತ್ತು. ನನ್ನ ನೆಲೆ ನಾನು ಕಂಡುಕೊಳ್ಳಬೇಕಿತ್ತು. ಅದಕ್ಕೆ ಮೊದಲೇ ಇನ್ನೊಂದು ದೋಣಿಯೊಳಗೆ ಹೆಜ್ಜೆಯಿಟ್ಟು ಅಮ್ಮನ ದೃಷ್ಟಿಯಲ್ಲಿ ಕೀಳಾಗಲು ಸಾಧ್ಯವಿರಲಿಲ್ಲ.
ಮನೆಯಲ್ಲಿ ಅಮ್ಮನ ಅವ್ಯಾಹತ ಕಿರಿಕಿರಿ ನಿರಂಕುಶವಾಗಿ ಸಾಗುತ್ತಿತ್ತು. ಕೇಳಿಯೂ ಕೇಳಿಸಿಕೊಳ್ಳದ ದಪ್ಪ ಚರ್ಮ ಕಷ್ಟಪಟ್ಟು ಬೆಳೆಸಿಕೊಂಡಿದ್ದೆ. ಆದರೂ ಒಂದೊಂದು ಬೆಳಗು ಯಾಕಾದರೂ ಏಳಬೇಕೋ ಅನಿಸುವಂತಿರುತ್ತಿತ್ತು. ಈಗ ಅಮ್ಮನ ರಾಗ ನನ್ನ ಮದುವೆಯ ಸುತ್ತಲೇ ಗಾಣಹಾಕುತ್ತಿತ್ತು. ಹರ್ಷನಂಥ ಅತ್ಯುತ್ತಮ ಹುಡುಗನನ್ನು ನಾನೇ ನೇಹಾಳಿಗೆ ಬಿಟ್ಟುಕೊಟ್ಟೆ ಅನ್ನುವ ರೀತಿಯಲ್ಲಿ ಮಾತಾಡುತ್ತಿದ್ದರು. ನೇಹಾಳೂ ತನ್ನ ಮಗಳೇ ಅನ್ನುವುದನ್ನು ಈ ತಾಯಿ ಅದು ಹೇಗೆ ಮರೆತಳು? ನನಗರ್ಥವಾಗಲಿಲ್ಲ.
ಲ್ಯಾಬ್ ಪರೀಕ್ಷೆಗಳಲ್ಲಿ ನಾವಿಬ್ಬರೂ ಚೆನ್ನಾಗೇ ಮಾಡಿದೆವು. ವಸಂತ್ ನಮ್ಮ ಕಾಲೇಜಿಗೆ ಬಂದಿದ್ದರಾದರೂ ನಮ್ಮ ಗುಂಪಿಗೆ ಪರೀಕ್ಷಕರಾಗಲಿಲ್ಲ, ಅವರ ಕಸಿನ್ ಶರತ್ ನಮ್ಮ ಗುಂಪಿನಲ್ಲಿದ್ದ ಅನ್ನುವ ಕಾರಣಕ್ಕೆ ಅವರನ್ನು ನಮ್ಮ ಗುಂಪಿನಿಂದ ದೂರವಿಟ್ಟಿದ್ದರು. ನನಗದು ವರವೇ ಆಯ್ತು.
ಎಲ್ಲ ಪರೀಕ್ಷೆಗಳೂ ಮುಗಿದು ಮೇ ತಿಂಗಳ ಮಧ್ಯಭಾಗದಲ್ಲಿ ಆಕಾಶ ಕಪ್ಪಿಡದೇ ಗುಡುಗಿದ ಒಂದು ಸಂಜೆ, ಸರೋಜಾ ಆಂಟಿ ನಮ್ಮನೆಗೆ ಬಂದರು. ಅವರಿಲ್ಲಿಗೆ ಬರುತ್ತಿದ್ದುದೆ ಅಪರೂಪ.
ನೇರವಾಗಿ ನನ್ನ ಕಡೆಗೇ ನೋಡುತ್ತಾ, ‘ನಾಳೆ ಸಂಜೆ ಸೀರೆ ತೆಗೊಳ್ಳಿಕ್ಕೆ ಹೋಗ್ಬೇಕು. ಶಿಶಿರಾ, ನೀನೂ ಬರ್ಬೇಕು ನಮ್ಮೊಟ್ಟಿಗೆ. ನೇಹಾ ಬರ್ತಾಳೆ. ಹಾಗೇ ಹರಿಣಿ, ನಳಿನಿ ಕೂಡಾ. ನಾವು ಐದು ಜನ ಹೋಗಿ ಬರುವಾ. ಶ್ರಿಯಾಲಂಕಾರ್ ದೊಡ್ಡ ಅಂಗಡಿಯಲ್ವ. ಅಲ್ಲಿಗೇ ಹೋಗುವಾ. ಸಂಜೆ ನಾಲ್ಕು ಗಂಟೆಗೆ ನಳಿನಿ ಮನೆ ಹತ್ರ ಸೇರುವಾ. ಹ್ಙಾ ಹ್ಙೂ ಏನೂ ಹೇಳ್ಳಿಕ್ಕಿಲ್ಲ. ಸುಮ್ಮನೇ ಬರ್ಬೇಕು, ಅಷ್ಟೇ’ ಅಂದರು.
ನಾನು ಅಮ್ಮನ ಮುಖ ನೋಡಿದೆ. ‘ಬರ್ತೇವೆ ಅತ್ತಿಗೆ’ ಅಂದರು ಅಮ್ಮ, ಇವರು ಹೊರಟು ನಿಂತರು. ಅವರ ಜೊತೆಗೇ ನಾನೂ ಹೊರಟೆ, ನೇಹಾ ಮನೆತನಕ ಹೋಗುವ ನೆಪದಲ್ಲಿ.
ದಾರಿಯಲ್ಲಿ ಸರೋಜ ಆಂಟಿ ಅಚಾನಕ್ ಕೇಳಿದರು, ‘ಈಗೀಗ ಅಮ್ಮನ ಮೂಡ್ ಹೇಗುಂಟಾ?’
‘ಯಾವಾಗಿನ ಹಾಗೇ. ವ್ಯತ್ಯಾಸ ಏನಿಲ್ಲ. ಯಾಕೆ ಆಂಟಿ?’
‘ಹ್ಮ್, ಕೇಳಿದೆ, ಸುಮ್ನೆ...’
‘....’
‘ಅವಳು ಯಾಕೆ ಯಾವಾಗ ಅಷ್ಟು ಸಿಡುಕಿಯಾಗಿದ್ದು ಗೊತ್ತುಂಟಾ ನಿಂಗೆ?’
‘ಇಲ್ಲ’ ನನ್ನ ಕೊರೆಯುತ್ತಿದ್ದ ಪ್ರಶ್ನೆಗೆ ಇವತ್ತು ಉತ್ತರ ಸಿಕ್ಕೀತಾ?
‘ತಿಳ್ಕೊಳ್ಬೇಕಾ ನಿಂಗೆ?’
‘ಹೌದು’
‘ವಿನ್ಯಾಸ್ ಅದ್ಕೆ ಕಾರಣ ಅಂದ್ರೆ ನಂಬ್ತೀಯಾ?’
‘ಹ್ಮ್...’ ನನ್ನ ಊಹೆ ಸರಿಯಾಗಿಯೇ ಇತ್ತು. ನಳಿನಿ ಆಂಟಿ ಅಮ್ಮನ ಕಥೆ ಹೇಳಿದ ಮೇಲೆ ಅದನ್ನೇ ಊಹಿಸಿದ್ದೆ.
‘ನಮ್ಮ ಅಕಳಂಕ ಮನೆಯ ಔಟ್ ಹೌಸಿನಲ್ಲಿ ಬಾಡಿಗೆಗೆ ಅಂತ ಅಮ್ಮ ನಿನ್ನನ್ನು ಎತ್ತಿಕೊಂಡು ಲಚ್ಚಮ್ಮನ ಒಟ್ಟಿಗೆ ಬಂದಾಗ ನಿನ್ನಮ್ಮನ ಕಥೆ ಹಿನ್ನೆಲೆ ಗೊತ್ತಿರ್ಲಿಲ್ಲ. ಆದ್ರೆ ನನ್ನಮ್ಮ ಆಗಾಗ ವಿನ್ಯಾಸ್ ಯಾರೋ ಹುಡುಗಿಗೆ ಮೋಸ ಮಾಡಿದ ಅಂತ ಹೇಳ್ತಿದ್ದಳು. ಅದು ಹೇಗೋ ನೀವು ನಮ್ಮಲ್ಲಿ ಬಾಡಿಗೆಗೆ ಇದ್ದ ವಿಷಯ ಅವನಿಗೆ ಗೊತ್ತಾಗಿ ಪದೇ ಪದೇ ಕಾಗದ ಬರೀಲಿಕ್ಕೆ ಶುರುಮಾಡಿದ. ಮನೆಗೆ ಬರ್ಲಿಕ್ಕೆ ಅವ್ನಿಗೆ ಧೈರ್ಯ ಇರ್ಲಿಲ್ಲ. ನನ್ನ ಗಂಡನಿಗೆ ಹೆದರ್ತಿದ್ದ. ಒಮ್ಮೆ ಅವಳು ಕೆಲ್ಸ ಮಾಡ್ತಿದ್ದ ಶಾಲೆಗೂ ಹೋಗಿ ಅಲ್ಲಿ ಗಲಾಟೆ ಮಾಡಿದ್ನಂತೆ, ಮಕ್ಕಳನ್ನು ಕೊಡು ಅಂತ. ಈ ನಿನ್ನಮ್ಮ ಗಟ್ಟಿಗಳು. ಕೊಡುದಿಲ್ಲ ಅಂದಿದ್ದಾಳೆ. ಅಷ್ಟಕ್ಕೇ ಅವ್ನು ಊರೆಲ್ಲ ಕಥೆ ಹಬ್ಬಿಸಿದ್ದಾನೆ, ನಿನ್ನಮ್ಮ ಸೂಳೆ. ಯಾರಿಗೋ ಹುಟ್ಟಿದ ಮಕ್ಕಳನ್ನು ತನ್ನ ತಲೆಗೆ ಕಟ್ಲಿಕ್ಕೆ ನೋಡಿದ್ದಾಳೆ ಅಂತೆಲ್ಲ ಸಾರಿದ. ಆಗಲೇ ಲಚ್ಚಮ್ಮನೂ ಯಾವುದೋ ತಿಳಿಯದ ಕಾಯಿಲೆ ಬಂದು ತೀರಿಕೊಂಡ್ರು. ಊರಲ್ಲಿ ನಿನ್ನಜ್ಜಿಯೂ ತೀರಿದರು. ಎಲ್ಲ ಒಂದರ ಮೇಲೆ ಒಂದು ಪೆಟ್ಟು ಬಿದ್ದಾಗ ಹರಿಣಿ ಕಂಗಾಲಾದ್ಲು. ಆಗ ನಿಂಗೆ ಒಂದೂವರೆ ವರ್ಷ. ಆಗಲೇ ಅವ್ಳು ಒಂಥರಾ ಬಿಸಿ ಮಾತಾಡ್ಲಿಕ್ಕೆ ಶುರು ಮಾಡಿದ್ದು. ಅಷ್ಟಕ್ಕೇ ಅವ್ಳನ್ನು ಶಾಲೆಯ ಕೆಲಸದಿಂದಲೂ ತೆಗೆದುಹಾಕಿದ್ರು. ಮತ್ತಷ್ಟು ತಲೆಕೆಟ್ಟಿತು.
ಆಗೆಲ್ಲ ನಿನ್ನನ್ನು ನಾನೇ ನೋಡಿಕೊಂಡಿದ್ದೆ. ಅಮ್ಮನನ್ನು ನಳಿನಿ ಮತ್ತು ಸುಮುಖ್ ಜೋಪಾನ ಮಾಡಿದ್ರು. ಅವಳಿಗೇನಾದ್ರೂ ಆದ್ರೆ ನಿನ್ನನ್ನು ನಾನೇ ಸಾಕಬೇಕೂಂತಲೂ ಇದ್ದೆ ಮಾರಾಯ್ತಿ. ಅಷ್ಟರಲ್ಲೇ, ನಿಂಗೆ ನಾಲ್ಕು ವರ್ಷ ಆಗುವ ಹೊತ್ತಿಗೆ ಹರಿಣಿ ಉಷಾರಾದ್ಲು. ಬೇರೆ ಊರಿಗೆ ಹೊರಟೇಹೋದ್ಲು. ಎಲ್ಲಿ ಏನು ಅಂತ ನಂಗೆ ಗೊತ್ತಾಗ್ಲೇ ಇಲ್ಲ. ಮತ್ತೆ ನೀವು ಇಲ್ಲಿಗೆ ಬಂದದ್ದು ನೀನು ಬಿ.ಎಸ್ಸಿ. ಸೇರಿದಾಗ. ನಡುವೆ ಕೆಲವಾರು ವರ್ಷ ನಳಿನಿ ನೇಹಾಳನ್ನು ಕಟ್ಟಿಕೊಂಡು ನಿಮ್ಮೊಟ್ಟಿಗೇ ಇದ್ಲಲ್ಲ. ಅದು ನಿಮ್ಮಿಬ್ರ ಅದೃಷ್ಟ. ನೀನು ಮತ್ತು ನೇಹಾ ಇಷ್ಟು ಗಾಢ ಸ್ನೇಹಿತೆಯರಾಗ್ಲಿಕ್ಕೆ ನಳಿನಿಯೇ ಕಾರಣ. ನಳಿನಿ ಸುಮುಖ್ ದಂಪತಿ ದೇವತೆಗಳ ಹಾಗೆ, ಏನಂತೀ?’
‘ಹ್ಮ್’ಗುಟ್ಟುತ್ತಾ ನಳಿನಿ ಆಂಟಿಯ ಗೇಟಿನ ಮುಂದೆ ನಿಂತೆ. ಜಾಜಿ ಚಪ್ಪರದಡಿಯಲ್ಲಿ ಹೊಂಗನಸು ಹೆಣೆಯುತ್ತಲೋ ಹೆಕ್ಕುತ್ತಲೋ ಸುಳಿದಾಡುತ್ತಿದ್ದ ನೇಹಾ ಗೇಟಿಗೆ ಓಡಿ ಬಂದವಳು ಸರೋಜಾಂಟಿಯನ್ನು ಕಂಡು ಗೇಟಿನಾಚೆಯೇ ನಿಂತಳು. ಸರೋಜಾಂಟಿ ಗೇಟ್ ದೂಡಿ ಒಳಹೋದರು, ನಳಿನಿ ಆಂಟಿಗೆ ನಾಳೆ ಸಂಜೆಯ ಕಾರ್ಯಕ್ರಮದ ವಿವರ ಒಪ್ಪಿಸಲು. ನೇಹಾಳಿಗೆ ನನ್ನ ಕಥನ ಕತ್ತಲಾಗುವವರೆಗೂ ಸಾಗಿತು ಜಾಜಿ ಚಪ್ಪರದೊಳಗೆ.
Labels:
ಕಥನಕಾರಣ,
ತುಂಟ-ತುಡುಗ-ತರಲೆ-ಮನ,
ನೀಳ್ಗತೆ
Subscribe to:
Posts (Atom)