"ಹಾಯ್ ಗೆಳತಿ, ಹೇಗಿದ್ದೀಯಾ? ಅಡುಗೆ ಏನಿವತ್ತು?"
ಹೀಗೇ ಶುರುವಾಗುವ ಮಾತು ಎತ್ತೆತ್ತಲೋ ಸಾಗುತ್ತಿತ್ತು
"ಅಮ್ಮಾ... ನಂಗೆ ನೀರು... ಕ್ಯಾಂಡಿ..." ನನ್ನ ಮರಿಯ ಗಲಿಬಿಲಿ
"ಅಮ್ಮಾ... ಬಾ... ಅಣ್ಣಾ... ಅಪ್ಪಾ..." ನಿನ್ನ ಸನಿಹ ಚಿಲಿಪಿಲಿ
ಕಂಡರಿಯದ ನಾಡಿನಲ್ಲಿ ಕನ್ನಡ ಮಾತಿನ ಗೆಳತಿ
ಕಹಿ-ಸಿಹಿ ಹಂಚಿಕೊಳಲು ಹುಮ್ಮನಸ್ಸಿನ ಕನ್ನಡತಿ
ಸಮಾನ ಲಕ್ಷ್ಯಗಳು, ರೇಖೆಗಳು, ನಿಲುವುಗಳು
ಸರಾಗವಾಗಿ ಮಾತು ಹರಿಯಲು ಬೇಕಷ್ಟು ವಿಷಯಗಳು
ಎಂದು, ಹೇಗೆ ಈ ಸಖ್ಯ, ಈ ನಂಟು ಬೆಳೆಯಿತು?
ಎಲ್ಲಿಂದ, ಎಲ್ಲಿ ಬಂದು, ಯಾವ ಕಡೆಗೆ ಎಳೆಯಿತು?
ಅರಿಯಲಾರೆ, ವಿಸ್ಮಯವೇ ನನ್ನ ಮನದ ತುಂಬ
ಅಗಲಿಕೆಯ ಸಹಿಸಲಾರೆ, ಇರಲಿ ಸ್ನೇಹ ಬಿಂಬ
ತವರನಗಲಿ ಹೊರಟಾಗಲೂ ಬಾರದ ಕಣ್ಣೀರು
ತಡೆದರೂ ಹಣಕುತ್ತಿದೆ, ಬದುಕು ನಿಲ್ಲದ ನೀರು
ಹರಿಯಬೇಕು, ಹಾಡಬೇಕು, ಹರಡಬೇಕು ಹೊನಲು
ಹತ್ತಿರವನು ದೂರದಿಂದ ಅಳೆಯುವಾಗ ಅಳಲು
ಸ್ವರ್ಗವಿದು, ನರಕವಿದು, ಪರಿಪೂರ್ಣವೆಂಬುದಿಲ್ಲ
ಸ್ವಂತಿಕೆಗೆ ನೆಲವು ಇದು, ಸ್ವಂತವು ಇದಲ್ಲ
ಮರಳಿ ಮನೆಗೆ ಮರಳುವ ಹಂಬಲವು ಬಹಳ
ಮತ್ತೆ ನೋಡುವೆ ನಿನ್ನೆಂಬ ಸಂಭವ ವಿರಳ.
(೦೧-ಅಕ್ಟೋಬರ್-೧೯೯೭)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Thursday 3 July, 2008
Subscribe to:
Post Comments (Atom)
4 comments:
ಕೊನೆಯ ಸಲ್ಲು ಬಹಳ ಹಿಡಿಸಿತು. ಅದ್ಭುತವಾಗಿ ಮೂಡಿ ಬಂದಿದೆ.
ಧನ್ಯವಾದಗಳು ಹರೀಶ್.
ಅಕ್ಕಾ...
ಮಿಸ್ ಯು...
ಶಾಂತಲಾ, ಜಾಸ್ತಿ ಮಿಸ್ ಮಾಡಿಕೋಬೇಡ... ಮರೆಯುವುದರೊಳಗೆ ಬಂದೇ ಬರುತ್ತೇನೆ....!!
Post a Comment