ಮಲಗು ಮಲಗು ಪುಟ್ಟ ಮಗು
ಮಲಗು ನನ್ನ ಮುದ್ದು ಮಗು
ಅಳದಿರು ನೀನು ಬಿಕ್ಕಳಿಸಿ
ಅಪ್ಪುವೆ ನಿನಗೊಂದು ಮುತ್ತಿರಿಸಿ
ಅತ್ತು ಸುತ್ತಿ ಹೊರಳದಿರು
ಅರಚಿ ಪರಚಿ ಕಿರುಚದಿರು
ನಿದಿರಾದೇವಿ ಬರುತಿಹಳು
ನಿನ್ನಯ ಕಣ್ಣಲೇ ಕೂರುವಳು
ಚಂದಿರ ಮಾಮ ಬಂದಿಳಿವ
ಚಂದದ ಊರಿಗೆ ಕರೆದೊಯ್ಯುವ
ತಾರೆಗಳೊಡನೆ ನೀ ಆಡು
ತಾರೆಯ ತೋಟದಿ ನಲಿದಾಡು
ನಿದಿರೆ ಮುಗಿಸಿ ಎದ್ದಾಗ
ನನ್ನಯ ಅರಸಿ ಬಂದಾಗ
ಚಿನ್ನಾರಿ ಚೆಲುವೆಗೆ ಹಾಲ್ಕೊಡುವೆ
ಚೆನ್ನಾದ ಆಟಿಕೆ ಕೈಲಿಡುವೆ
(ಜೂನ್ ೧೯೯೫)
(ತಂಟೆಕೋರಿ ಹಠಮಾರಿ ಮುದ್ದು ಪೋಕರಿಗೆಂದು ಬರೆದದ್ದು... ಇಂದು ನಂದಗೋಕುಲದಲಿ ನಲಿವ ವರುಷದ ಪೋರನಿಗೆ)
ಇನ್ನೊಂದು ಅಕ್ಷರಂಗಳ
"ಸುಪ್ತದೀಪ್ತಿ"ಯ ಕಿಟಕಿ->->->
Sunday 25 May, 2008
Subscribe to:
Post Comments (Atom)
4 comments:
ಅಕ್ಕಾ,
ಹಾಡುವ ಕವಿತೆ ಚೆನ್ನಾಗಿದೆ. ಪುಟ್ಟಿಗೆ ಹಾಡುವೆ. ನಂದಗೋಕುಲದ ಪೂರನಿಗೆ ನನ್ನ ಹಾರ್ದಿಕ ಶುಭಾಶಯಗಳು.
ತೇಜು, ಪ್ರತಿಕ್ರಿಯೆಗೆ ಧನ್ಯವಾದಗಳು.
ಪುಟ್ಟಿಗೆ ಈ ಹಾಡನ್ನು ಧಾರಾಳವಾಗಿ ಹಾಡು. ನಂದಗೋಕುಲದ ಪೋರನಿಗೆ ನಿನ್ನ ಶುಭಾಶಯಗಳನ್ನು ತಲುಪಿಸುವೆ.
ನನಗೆ ಜೋಗುಳಗಳೆಂದರೆ ಅದೇನೋ ವಿಶೇಷ ಪ್ರೀತಿ. ಇದೂ ತುಂಬ ಇಷ್ಟವಾಯಿತು. ಧನ್ಯವಾದ ಅಕ್ಕ :-)
ಧನ್ಯವಾದ ಶುಭದಾ. ಜೋಗುಳಗಳಿಗಿರುವ "ಸೂದಿಂಗ್" ಗುಣವೇ ಹಾಗಿರಬೇಕು, ಅಮ್ಮನ ಮಮತೆಯಂತೆ.
Post a Comment